ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

DC vs GT: ಇಂದಿನ ಐಪಿಎಲ್‌ ಪಂದ್ಯಕ್ಕೂ ಮಳೆ ಅಡ್ಡಿ ಸಾಧ್ಯತೆ

New Delhi weather today: ಅಕ್ಯೂವೆದರ್ ಪ್ರಕಾರ, ಬೆಳಿಗ್ಗೆ ಹವಾಮಾನ ಸ್ಪಷ್ಟವಾಗಿದ್ದು, ಮಧ್ಯಾಹ್ನ ಮೋಡ ಕವಿದ ವಾತಾವರಣ ಇರಲಿದೆ. ಆದಾಗ್ಯೂ, ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, 51% ರಷ್ಟು ಭಾರಿ ಮಳೆಯಾಗುವ ಸಾಧ್ಯತೆ ಇದೆ. ಪಂದ್ಯದ ವೇಳೆ ಮಳೆ ಭೀತಿ ಇಲ್ಲವಾದರೂ ಮಧ್ಯಾಹ್ನದ ಮಳೆಯು ಮೈದಾನಕ್ಕೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆಯೇ ಎಂದು ಕಾದು ನೋಡಬೇಕಾಗಿದೆ.

ಇಂದಿನ ಐಪಿಎಲ್‌ ಪಂದ್ಯಕ್ಕೂ ಮಳೆ ಅಡ್ಡಿ ಸಾಧ್ಯತೆ

New Delhi weather today for DC vs GT IPL 2026 clash -

Abhilash BC
Abhilash BC Apr 8, 2026 10:01 AM

ನವದೆಹಲಿ, ಎ. 8: ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಮಳೆಯಾಗುತ್ತಿರುವ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಗೆ ಭಾರೀ ಹಿನ್ನಡೆಯಾಗಿದೆ. ಕಳೆದ ಎರಡು ಪಂದ್ಯಗಳು ಮಳೆಯಿಂದ ಅಡಚಣೆಯಾಗಿತ್ತು. ಇದೀಗ ಬುಧವಾರ ನಡೆಯುವ ಡೆಲ್ಲಿ ಕ್ಯಾಪಿಟಲ್ಸ್‌(DC vs GT) ಮತ್ತು ಗುಜರಾತ್‌ ಟೈಟಾನ್ಸ್‌ ನುಡುವಣ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಹವಾವಾನ ಇಲಾಖೆ ಈಗಾಗಲೇ ದೆಹಲಿಯಲ್ಲಿ ಈಗಾಗಲೇ ಆರೆಂಜ್‌ ಅಲರ್ಟ್‌ ನೀಡಿದೆ. ಮಂಗಳವಾರ ಭಾರೀ ಮಳೆಯಿಂದ ಪ್ರತಿಷ್ಠಿತ ಬಿಲ್ಲೀ ಜೀನ್‌ ಕಿಂಗ್‌ ಕಪ್‌-2026ರ ಏಷ್ಯಾ-ಏಷ್ಯಾನಿಯಾ ಗ್ರೂಪ್‌-1ರ ಪಂದ್ಯಗಳಗೆ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯವನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಗಿತ್ತು.

ಅಕ್ಯೂವೆದರ್ ಪ್ರಕಾರ, ಬೆಳಿಗ್ಗೆ ಹವಾಮಾನ ಸ್ಪಷ್ಟವಾಗಿದ್ದು, ಮಧ್ಯಾಹ್ನ ಮೋಡ ಕವಿದ ವಾತಾವರಣ ಇರಲಿದೆ. ಆದಾಗ್ಯೂ, ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, 51% ರಷ್ಟು ಭಾರಿ ಮಳೆಯಾಗುವ ಸಾಧ್ಯತೆ ಇದೆ. ಪಂದ್ಯದ ವೇಳೆ ಮಳೆ ಭೀತಿ ಇಲ್ಲವಾದರೂ ಮಧ್ಯಾಹ್ನದ ಮಳೆಯು ಮೈದಾನಕ್ಕೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆಯೇ ಎಂದು ಕಾದು ನೋಡಬೇಕಾಗಿದೆ.

ಸೋಮವಾರ ಕೋಲ್ಕತ್ತಾದಲ್ಲಿ ನಡೆದ ಕೆಕೆಆರ್ ಮತ್ತು ಪಂಜಾಬ್‌ ನಡುವಿನ ಪಂದ್ಯ ರದ್ದಾಗಿತ್ತು. ಮಂಗಳವಾರದ ರಾಜಸ್ಥಾನ್‌ ಮತ್ತು ಮುಂಬೈ ನಡುವಿನ ಪಂದ್ಯ ಮಳೆಯಿಂದ 11 ಓವರ್‌ಗಳಿಗೆ ಇಳಿಸಬೇಕಾಯಿತು.

MI vs RR: ಯಶಸ್ವಿ ಜೈಸ್ವಾಲ್‌ ಅಬ್ಬರ, ಮುಂಬೈ ಇಂಡಿಯನ್ಸ್‌ಗೆ ಶಾಕ್‌ ನೀಡಿದ ರಾಜಸ್ಥಾನ್‌ ರಾಯಲ್ಸ್‌!

ಹವಾಮಾನದ ಅನಿಶ್ಚಿತತೆಯ ನಡುವೆಯೂ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಡೆಯುತ್ತಿರುವ ಐಪಿಎಲ್ 2026 ರಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಗುರಿಯನ್ನು ಹೊಂದಿದೆ. ಈ ಋತುವಿನಲ್ಲಿ ಇದುವರೆಗೆ ಒಂದೇ ಒಂದು ಪಂದ್ಯವನ್ನು ಸೋತಿಲ್ಲದ ನಾಲ್ಕು ತಂಡಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಒಂದಾಗಿದೆ. ಇಂದಿನ ಗೆಲುವು ಕನಿಷ್ಠ ಪಕ್ಷ ಅವರನ್ನು ಪಾಯಿಂಟ್ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಕೊಂಡೊಯ್ಯಲಿದೆ. ಮತ್ತೊಂದೆಡೆ, ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಆಡಿದ ಎರಡೂ ಪಂದ್ಯಗಳಲ್ಲಿ ಸೋತು ಸಂಕಷ್ಟದಲ್ಲಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.

ಸಂಭಾವ್ಯ ಆಡುವ ಬಳಗ

ಡೆಲ್ಲಿ ಕ್ಯಾಪಿಟಲ್ಸ್‌: ಕೆಎಲ್ ರಾಹುಲ್ (ವಿ.ಕೀ.), ಪಾತುಮ್ ನಿಸ್ಸಾಂಕ, ನಿತೀಶ್ ರಾಣಾ, ಅಕ್ಸರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ವಿಪ್ರಜ್ ನಿಗಮ್, ಲುಂಗಿ ಎನ್‌ಗಿಡಿ, ಕುಲದೀಪ್ ಯಾದವ್, ಟಿ ನಟರಾಜನ್, ಮುಖೇಶ್ ಕುಮಾರ್.

ಗುಜರಾತ್‌ ಟೈಟಾನ್ಸ್: ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿ.ಕೀ.), ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಕಗಿಸೊ ರಬಾಡ, ಅಶೋಕ್ ಶರ್ಮಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.