ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming: ಬೇರೊಬ್ಬರ ಜತೆ ಮದುವೆ ನಿಶ್ಚಯ; ಆಟೋದಲ್ಲಿ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ!

Self Harming: ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದ ಹೊರ ವಲಯದಲ್ಲಿ ಘಟನೆ ನಡೆದಿದೆ. ಹದಿನೈದು ದಿನದ ಹಿಂದೆ ಯುವತಿಗೆ ನಿಶ್ಚಿತಾರ್ಥವಾಗಿತ್ತು. ಮನೆಯಲ್ಲಿ ಬೇರೊಬ್ಬ ಯುವಕನೊಟ್ಟಿಗೆ ಮದುವೆ ನಿಶ್ಚಯ ಮಾಡಿದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಆಟೋದಲ್ಲಿ ಪ್ರಿಯಕರನ ಜತೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆಟೋದಲ್ಲಿ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ!

Profile Prabhakara R Jul 1, 2025 2:28 PM

ಬೆಳಗಾವಿ: ಆಟೋದಲ್ಲೇ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಯುವತಿಗೆ ಬೇರೆ ಯುವಕನ ಜತೆ ಮದುವೆ ನಿಶ್ಚಯ ಮಾಡಿದ ಹಿನ್ನೆಲೆಯಲ್ಲಿ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ ರಾಘವೇಂದ್ರ ಜಾಧವ್(28), ರಂಜಿತಾ ಚೋಬರಿ(26) ಮೃತರು.

ತಾನು ಓಡಿಸುತ್ತಿದ್ದ ಆಟೋದಲ್ಲೇ ಪ್ರಿಯತಮೆ ಜತೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇವರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಹದಿನೈದು ದಿನದ ಹಿಂದೆ ರಂಜಿತಾಗೆ ನಿಶ್ಚಿತಾರ್ಥವಾಗಿತ್ತು. ಮನೆಯಲ್ಲಿ ಬೇರೊಬ್ಬ ಯುವಕನೊಟ್ಟಿಗೆ ಮದುವೆ ನಿಶ್ಚಯ ಮಾಡಿದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಆಟೋದಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿರ್ಜನ ಪ್ರದೇಶಕ್ಕೆ ತೆರಳಿ ಆಟೋದಲ್ಲೇ ನೇಣು ಬಿಗಿದುಕೊಂಡು ಜೋಡಿ ಆತ್ಮಹತ್ಯೆಗೆ ಶರಣಾಗಿದೆ. ಸ್ಥಳಕ್ಕೆ ಗೋಕಾಕ್ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | Nandini Milk Parlour: ನಂದಿನಿ ಮಿಲ್ಕ್‌ ಪಾರ್ಲರ್‌ನಲ್ಲಿ ಹಾಲಿನ ಜತೆ ಆಲ್ಕೋಹಾಲ್‌ ಮಾರಾಟ!; ಕ್ರಮಕ್ಕೆ ಆಗ್ರಹ

ದಾವಣಗೆರೆಯಲ್ಲಿ ಯುಪಿಎಸ್‌ ಸ್ಫೋಟಗೊಂಡು ಇಬ್ಬರು ಸಾವು

ದಾವಣಗೆರೆ: ದಾವಣಗೆರೆಯ (Davanagere news) ಮನೆಯೊಂದರಲ್ಲಿದ್ದ ಯುಪಿಎಸ್ ಸ್ಪೋಟಗೊಂಡು (UPS blast) ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ದಾವಣಗೆರೆಯ ಕಾಯಿಪೇಟೆಯಲ್ಲಿ ಯುಪಿಎಸ್ ಸ್ಪೋಟಗೊಂಡ ಪರಿಣಾಮ ಅಗ್ನಿ ಅವಘಡ (fire accident) ಸಂಭವಿಸಿದ್ದು, ಈ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ವಿಮಾ ಮತ್ತು ಕುಮಾರ್ ಎಂದು ಗುರುತಿಸಲಾಗಿದೆ. ಬಿಜೆಪಿ ಮುಖಂಡ ರುದ್ರಮುನಿಸ್ವಾಮಿ ಹಿರೇಮಠ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ವಿಕ್ಟೋರಿಯಾ ಆಸ್ಪತ್ರೆಯ ವಾರ್ಡ್‌ನಲ್ಲಿ ಬೆಂಕಿ ಆಕಸ್ಮಿಕ, ರೋಗಿಗಳು ಪಾರು

ಬೆಂಗಳೂರು: ರಾಜಧಾನಿಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ (Victoria Hospital) ಅಗ್ನಿ ಅವಘಡ (Fire accident) ಸಂಭವಿಸಿದ್ದು, ಒಟ್ಟು 26 ರೋಗಿಗಳು ಇದ್ದ ವಾರ್ಡ್​​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹಾಗೂ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತ ವೈದ್ಯರು ಹಾಗೂ ಸಿಬ್ಬಂದಿ ದಿಢೀರ್ ಕಾರ್ಯಾಚರಣೆ ನಡೆಸಿ ಎಲ್ಲಾ ರೋಗಿಗಳನ್ನು ಬೇರೆ ಬ್ಲಾಕ್​ಗೆ ಶಿಫ್ಟ್ ಮಾಡಿದ್ದಾರೆ. ಅಗ್ನಿ ಅವಘಡದಿಂದ ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವರದಿ ಆಗಿದೆ.

ವಿಕ್ಟೋರಿಯಾ ಆಸ್ಪತ್ರೆಯ ಸ್ವಿಚ್ ಬೋರ್ಡ್​​ನಲ್ಲಿ ಶಾರ್ಟ್ ಸರ್ಕ್ಯೂಟ್​​ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. ಬರ್ನ್ ವಾರ್ಡ್​​ನ ಸೆಮಿನಾರ್ ಕೋಣೆಯಲ್ಲಿ ಬೆಂಕಿ ಹತ್ತಿಕೊಂಡಿತ್ತು. ಈ ವಾರ್ಡ್​​​ನಲ್ಲಿ ಒಟ್ಟು 26 ರೋಗಿಗಳಿದ್ದರು. 14 ಪುರುಷರು, 5 ಮಹಿಳೆಯರು, 7 ಮಕ್ಕಳಿಗೆ ಪಕ್ಕದ ವಾರ್ಡ್​​ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬರ್ನ್ಸ್ ವಾರ್ಡ್ ಮೊದಲ ಮಹಡಿಯಲ್ಲಿದ್ದ ಸೆಮಿನಾರ್ ಹಾಲ್​ನಲ್ಲಿ ಬೆಂಕಿ ಹೊತ್ತಿಕೊಂಡ ವೇಳೆ ಪಕ್ಕದಲ್ಲೇ ಐದು ಮಂದಿ ಐಸಿಯುನಲ್ಲಿದ್ದರು. ಬೆಂಕಿ ಮತ್ತು ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತ ವೈದ್ಯರು ಕೂಡಲೇ ಎಲ್ಲಾ ರೋಗಿಗಳನ್ನು ಹೆಚ್ ಬ್ಲಾಕ್‌ಗೆ ಶಿಫ್ಟ್ ಮಾಡಿದ್ದಾರೆ. ಕೋಡ್ ರೆಡ್ ಹೆಸರಲ್ಲಿ ದಿಢೀರ್​ ರಕ್ಷಣಾ ಕಾರ್ಯ ನಡೆಸಲಾಗಿದೆ.

ಬರ್ನ್ಸ್ ವಾರ್ಡ್ ಅಧೀಕ್ಷಕರು, ವೈದ್ಯರು, ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿಕೊಂಡಿದ್ದ ಬೆಂಕಿ ನಂದಿಸುವ ಕಾರ್ಯ ಕೂಡ ನಡೆದಿದೆ. ರೋಗಿಗಳನ್ನು ಬೇರೆ ಬ್ಲಾಕ್​ಗೆ ಶಿಫ್ಟ್ ಮಾಡಲಾಗಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Viral Video: ವಿಚ್ಛೇದನದಿಂದ ಬೇಸರಗೊಂಡು ರೈಲಿಗೆ ಬೆಂಕಿ ಹಚ್ಚಿದ ಭೂಪ