ಡಾ.ಪುನೀತ್ ರಾಜಕುಮಾರ್ ಅವರಿಗೆ ಪುಷ್ಪ ನಮನ! ಮೂಡಲಗಿಯಲ್ಲಿ ಡಾ. ಪುನೀತ್ ರಾಜ್‌ಕುಮಾರ್ 5ನೇ ಪುಣ್ಯಸ್ಮರಣೆ ಆಚರಣೆ!
ಕರುನಾಡ ಜನತೆಯ ಹೃದಯದಲ್ಲಿ ಅಜರಾಮರರಾಗಿ ಉಳಿದಿರುವ ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್(Dr Puneeth Rajkumar) ಅವರ 5ನೇ ವರ್ಷದ ಪುಣ್ಯಸ್ಮರಣೆ ದಿನವನ್ನು ಮೂಡಲಗಿ ಪಟ್ಟಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಹತ್ತಿರವಿರುವ ಡಾ.ಪುನೀತ್ ರಾಜ್‌ಕುಮಾರ್ ಬಸ್ ತಂಗುದಾಣದಲ್ಲಿ ಪಟ್ಟಣದ ನಿಸರ್ಗ ಫೌಂಡೇಶನ್ ವತಿಯಿಂದ ಅಗಲಿದ ಅಪ್ಪು ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಲಾಯಿತು.
-
ಮೂಡಲಗಿ: ಕರುನಾಡ ಜನತೆಯ ಹೃದಯದಲ್ಲಿ ಅಜರಾಮರರಾಗಿ ಉಳಿದಿರುವ ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್(Dr Puneeth Rajkumar) ಅವರ 5ನೇ ವರ್ಷದ ಪುಣ್ಯಸ್ಮರಣೆ ದಿನವನ್ನು ಮೂಡಲಗಿ ಪಟ್ಟಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಹತ್ತಿರವಿರುವ ಡಾ.ಪುನೀತ್ ರಾಜ್‌ಕುಮಾರ್ ಬಸ್ ತಂಗುದಾಣದಲ್ಲಿ ಪಟ್ಟಣದ ನಿಸರ್ಗ ಫೌಂಡೇಶನ್ ವತಿಯಿಂದ ಅಗಲಿದ ಅಪ್ಪು ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಲಾಯಿತು.
ಈ ವೇಳೆ ನಿಸರ್ಗ ಫೌಂಡೇಶನ್ ಅಧ್ಯಕ್ಷ ಈರಪ್ಪಾ ಢವಳೇಶ್ವರ ಅವರು ಮಾತನಾಡಿ ಡಾ.ಪುನೀತ್ ರಾಜಕುಮಾರ್ ಅವರು ಮಾಡಿದ ಸಮಾಜ ಸೇವೆ, ಅವರ ಮಾನವೀಯತೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ನಿಸರ್ಗ ಫೌಂಡೇಶನ್ ಉಪಾಧ್ಯಕ್ಷ ಮಲ್ಲು ಬೋಳನವರ, ಸಕಲ ಕಲಾವಲ್ಲಭ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಓಂ ಸಂತಾ, ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಭಾರತಿ ಕೋಣಿ, ಮರೇಪ್ಪ ಮರೇಪ್ಪಗೋಳ, ಡಾ. ಎಸ್ ಎಸ್ ಪಾಟೀಲ, ಶಿವಬಸು ಹಂದಿಗುಂದ, ಹಣಮಂತ ಸತರಡ್ಡಿ, ಚೇತನ ನಿಶಾನಿಮಠ, ಆನಂದ ಟಪ್ಪಾಲ, ಭಗವಂತ ಉಪ್ಪಾರ, ಸುಭಾಷ ಗೋಡ್ಯಾಗೋಳ ಸೇರಿದಂತೆ ವಿದ್ಯಾರ್ಥಿಗಳು, ಸಾರ್ವ ಜನಿಕರು, ಅಪ್ಪು ಅಭಿಮಾನಿಗಳು, ಹಿರಿಯರು, ಮುಖಂಡರು ಉಪಸ್ಥಿತರಿದ್ದರು.