ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಪತ್ನಿಯ ಕೈಯಲ್ಲೇ ಕೊಲೆಯಾದ ಕುಡುಕ ಶ್ರೀಮಂತ; ಶವ ಪೀಸ್‌ ಪೀಸ್‌ ಮಾಡಿ ಕಾಡಿಗೆಸೆದ ಪತ್ನಿ!

Murder Case: ಪತ್ನಿಯ ಕೈಯಲ್ಲೇ ಕೊಲೆಯಾದ ಕುಡುಕ ಶ್ರೀಮಂತ; ಶವ ಪೀಸ್‌ ಪೀಸ್‌ ಮಾಡಿ ಕಾಡಿಗೆಸೆದ ಪತ್ನಿ!

Murder Case: ಪತ್ನಿಯ ಕೈಯಲ್ಲೇ ಕೊಲೆಯಾದ ಕುಡುಕ ಶ್ರೀಮಂತ; ಶವ ಪೀಸ್‌ ಪೀಸ್‌ ಮಾಡಿ ಕಾಡಿಗೆಸೆದ ಪತ್ನಿ!

ಹರೀಶ್‌ ಕೇರ ಹರೀಶ್‌ ಕೇರ Jan 3, 2025 11:43 AM
ಬೆಳಗಾವಿ: ಕುಡಿದು ಬಂದು ಸತಾಯಿಸುತ್ತಿದ್ದ ಹಾಗೂ ಹಣಕ್ಕಾಗಿ ಪೀಡಿಸುತ್ತಿದ್ದ ಗಂಡನನ್ನು ಆತನ ಪತ್ನಿಯೇ ಉಸಿರುಗಟ್ಟಿಸಿ ಜಜ್ಜಿ (Murder Case) ಕೊಂದುಹಾಕಿದ್ದಾಳೆ. ಜೊತೆಗೆ ಶವವನ್ನು ತುಂಡು ಮಾಡಿ (wife killed husband) ಕಾಡಿಗೆಸೆದಿದ್ದಾಳೆ. ಈ ಬರ್ಬರ ಘಟನೆ ಬೆಳಗಾವಿ (Belagavi news) ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ವರದಿಯಾಗಿದೆ.
ಕೊಲೆಯಾದ ಗಂಡನ ಹೆಸರು ಶ್ರೀಮಂತ ಇಟ್ನಾಳೆ (50). ಕೊಲೆ ಎಸಗಿದ ಪತ್ನಿ ಸಾವಿತ್ರಿ ಇಟ್ನಾಳೆ (30). ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಕೆ ಪತಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿ, ನಂತರ ಕಲ್ಲಿನಿಂದ ಜಜ್ಜಿ ಶವವನ್ನು ತುಂಡು ಮಾಡಿ ಚಿಕ್ಕ ಬ್ಯಾರೆಲ್‌ನಲ್ಲಿ ಹಾಕಿಕೊಂಡು ಬಂದು ಹೊಲದ ಪಕ್ಕದ ಕಾಡಿನಲ್ಲಿ ಎಸೆದಿದ್ದಾಳೆ.
ಪತಿಯನ್ನು ತಾನೇ ಹತ್ಯೆ ಮಾಡಿರುವುದಾಗಿ ಆರೋಪಿ ಸಾವಿತ್ರಿ ಒಪ್ಪಿಕೊಂಡಿದ್ದಾಳೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಹೇಳಿದ್ದಾರೆ. ಶ್ರೀಮಂತ ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಕುಡಿಯಲು ಹಣ ನೀಡುವಂತೆ ಪತ್ನಿಯನ್ನು ಪೀಡಿಸುತ್ತಿದ್ದ. ಅದರಂತೆ ಡಿ.8ರಂದು ಹಣ ನೀಡುವಂತೆ ಪೀಡಿಸಿದ್ದಾನೆ. ಇದರಿಂದ ಬೇಸತ್ತ ಸಾವಿತ್ರಿ ಮನೆ ಹೊರಗೆ ಕುಡಿದು ಮಲಗಿದ್ದ ಪತಿಯನ್ನು ಒಳಗೆ ಕರೆದುಕೊಂಡು ಹೋಗಿ, ಕತ್ತು ಹಿಸುಕಿ ಹತ್ಯೆ ಮಾಡಿದ್ದಾಳೆ. ನಂತರ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾಳೆ. ಮೀನು ಕುಯ್ಯಲು ಬಳಸುವ ಚೂರಿಯಿಂದ ದೇಹವನ್ನು 2 ತುಂಡು ಮಾಡಿದ್ದಾಳೆ.
ನಂತರ ದೇಹದ ತುಂಡುಗಳನ್ನು ಚಿಕ್ಕ ಬ್ಯಾರೆಲ್‌ನಲ್ಲಿ ಹಾಕಿಕೊಂಡು ಮನೆಯಿಂದ 200 ಮೀ. ದೂರದಲ್ಲಿರುವ ಗದ್ದೆಯ ಬಳಿ ಎಸೆದಿದ್ದಳು. ಕೃತ್ಯಕ್ಕೆ ಬಳಸಿದ ಬ್ಯಾರೆಲ್ ಅನ್ನು ತೊಳೆದು ಬಾವಿಗೆ ಎಸೆದಿದ್ದಳು. ಚೂರಿ, ರಕ್ತಸಿಕ್ತವಾದ ಹಾಸಿಗೆ, ಬಟ್ಟೆಯನ್ನು ಚೀಲದಲ್ಲಿ ಹಾಕಿ ಪ್ಯಾಕ್ ಮಾಡಿ, ಅದಕ್ಕೆ ಕಲ್ಲು ಕಟ್ಟಿ ಬಾವಿಗೆ ಎಸೆದಿದ್ದಳು.
ಗದ್ದೆಯಲ್ಲಿದ್ದ ಶವ ನೋಡಿ ಗ್ರಾಮಸ್ಥರು ಚಿಕ್ಕೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಪ್ರಕರಣದ ಕುರಿತು ಹಲವಾರು ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದರು. ಕೊನೆಗೆ ಶ್ರೀಮಂತನ ಪತ್ನಿಯ ಮೇಲೇ ಅನುಮಾನ ಬಂದು ಆಕೆಯನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ತಾನೇ ಹತ್ಯೆ ಮಾಡಿರುವುದಾಗಿ ಸಾವಿತ್ರಿ ಒಪ್ಪಿಕೊಂಡಿದ್ದಾಳೆ. ಗಂಡನಿಂದ ನಿರಂತರ ಕಿರುಕುಳ, ಪರಪುರುಷರ ಜೊತೆಗೆ ಮಲಗುವಂತೆ ಪೀಡನೆ, ಮದ್ಯ ಸೇವನೆಗೆ ಹಣ ನೀಡುವಂತೆ, ಸೈಟ್ ಮಾರಿ ಬೈಕ್ ಕೊಡಿಸುವಂತೆ ನಿತ್ಯ ಕಿರುಕುಳ ನೀಡುತ್ತಿದ್ದುದನ್ನು ಬಹಿರಂಗಪಡಿಸಿದ್ದಾಳೆ.
ಇದನ್ನೂ ಓದಿ: Road Accident: ದೇವರ ದರ್ಶನಕ್ಕೆ ಹೊರಟವರ ಕಾರು ಕೆರೆಗೆ ಪಲ್ಟಿ, ಇಬ್ಬರು ಸಾವು