ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಪುಸ್ತಕಕ್ಕೆ ಚಿಂತನೆ ಬದಲಿಸುವ ಶಕ್ತಿ ಇದೆ

ಪುಸ್ತಕಕ್ಕೆ ಚಿಂತನೆ ಬದಲಿಸುವ ಶಕ್ತಿ ಇದೆ

ಹಸಿವಾದಾಗ ಊಟ ಮಾಡುವುದು, ದೇಹಕ್ಕೆ ಅಗತ್ಯವಾದ ವಿಶ್ರಾಂತಿ ಪಡೆಯುವುದು ಹಾಗೂ ಉತ್ತಮ ನಿದ್ರೆಗೆ ಆದ್ಯತೆ ನೀಡುವುದು ಸೇರಿದಂತೆ ದೇಹದ ಸಹಜ ಸಂಕೇತಗಳನ್ನು ಅರಿತು ಬದುಕುವ ಅಗತ್ಯವಿದೆ ಎಂದರು. ಗಣಿತದ ಗಮ್ಮತ್ತು ಕೃತಿ ಗಣಿತವನ್ನು ಕೇವಲ ಕಠಿಣ ವಿಷಯವಾಗಿ ನೋಡುವ ಬದಲು ಅದರಲ್ಲಿರುವ ಕುತೂಹಲ, ಪದಗಳ ಆಟ ಹಾಗೂ ಮನರಂಜನೆ ಅರಿಯುವಂತೆ ಮಾಡುವ ಕೃತಿ ಇದಾಗಿದೆ. ಗಣಿತ ಒಮ್ಮೆ ನಮ್ಮದಾದರೆ ಅದು ಸುಲಭವಾಗುತ್ತದೆ, ಇಲ್ಲದಿದ್ದರೆ ಕಷ್ಟವಾಗುತ್ತದೆ.

ಕಾವೇರಿ ನೀರು ಹಂಚಿಕೆ ವಿವಾದ; ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

ಕಾವೇರಿ ನೀರು ಹಂಚಿಕೆ ವಿವಾದ; ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

Supreme Court: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಇಂದು ಮಹತ್ವದ ವಿಚಾರಣೆ ನಡೆಯಲಿದೆ. ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ವಿಕ್ರಮನಾಥ್ ನೇತೃತ್ವದ ದ್ವಿಸದಸ್ಯ ಪೀಠ ನಡೆಸಲಿದೆ.

ಹೈಕೋರ್ಟ್ ಹೇಳಿದೆ ಜಾಹೀರಾತಲ್ಲಿದೆ: ಎಚ್.ಡಿ.ಕುಮಾರಸ್ವಾಮಿ ನೈಸ್‌ ಉವಾಚ

ಹೈಕೋರ್ಟ್ ಹೇಳಿದೆ ಜಾಹೀರಾತಲ್ಲಿದೆ: ಎಚ್.ಡಿ.ಕುಮಾರಸ್ವಾಮಿ ನೈಸ್‌ ಉವಾಚ

ಮಂಡ್ಯದ ಮೇಲುಕೋಟೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಾಹೀರಾತನ್ನು ಯಾರು ಕೂಡ ಕಲ್ಪನೆ ಮಾಡಿ ಕೊಟ್ಟಿಲ್ಲ. ಇತ್ತೀಚೆಗೆ ಹೈಕೋರ್ಟ್‌ʼನ ದ್ವಿಸದಸ್ಯ ಪೀಠ ನೈಸ್ ಯೋಜನೆ ಬಗ್ಗೆ ಕಟುವಾದ ಅಭಿಪ್ರಾಯಗಳನ್ನು ದಾಖಲಿಸಿದೆ. ಅದೇ ಇವತ್ತು ಜಾಹೀರಾತು ರೂಪದಲ್ಲಿ ಪ್ರಕಟವಾಗಿದೆ. ಈ ಸರಕಾರ ನೈಸ್ ಯೋಜನೆಯ ಹೆಸರಿನಲ್ಲಿ ಆ ಕಂಪನಿ ಜತೆ ಶಾಮೀಲಾಗಿದೆ ಎಂದಿದ್ದಾರೆ.

ನಾಗೇಂದ್ರ ತಲೆದಂಡಕ್ಕೆ ದೋಸ್ತಿ ಪಟ್ಟು; ಇಂದು ಚಲೋ ʼಸಮರʼ

ನಾಗೇಂದ್ರ ತಲೆದಂಡಕ್ಕೆ ದೋಸ್ತಿ ಪಟ್ಟು; ಇಂದು ಚಲೋ ʼಸಮರʼ

ಆರಂಭದಲ್ಲಿ ಸೋಮವಾರದಿಂದ ಬರ, ನೈಸ್, ಬಿಡದಿ ವಿಷಯಗಳ ಚರ್ಚೆ ಕೈಗೆತ್ತಿಕೊಳ್ಳಲಾಗುತ್ತದೆ. ಆದ್ದರಿಂದ ನಾಗೇಂದ್ರ ರಾಜೀನಾಮೆ ವಿಷಯವನ್ನು ಕೈಬಿಡುವ ಸಾಧ್ಯತೆಯಿದೆ ಎನ್ನಲಾಗಿತ್ತು. ಆದರೆ ಒಂದು ವಾರದ ಹೋರಾಟದ ಬಳಿಕ ಯಾವುದೇ ತಾರ್ತಿಕ ಅಂತ್ಯವಿಲ್ಲದೇ ಹೋರಾಟ ಕೈಬಿಟ್ಟರೆ ಅದು ಇನ್ನೊಂದು ಸಂದೇಶವನ್ನು ರವಾನಿಸು ತ್ತದೆ ಎನ್ನುವ ಆತಂಕ ಬಿಜೆಪಿ ನಾಯಕ ರಲ್ಲಿದೆ. ಆದ್ದರಿಂದ ಇದೇ ವಿಷಯವನ್ನು ಮುಂದಿಟ್ಟುಕೊಂಡು ಹೋರಾಟ ಮುಂದುವರಿಸಲು ತೀರ್ಮಾನಿಸಿದ್ದಾರೆ

ʼಸುಡುತ್ತಿದೆ ಕೆಪಿಎಸ್‌ಸಿ ಅಕ್ರಮʼ: ಮೊದಲ ಬಾರಿ ಇಡಿ ನೇರ ದಾಳಿ

ʼಸುಡುತ್ತಿದೆ ಕೆಪಿಎಸ್‌ಸಿ ಅಕ್ರಮʼ: ಮೊದಲ ಬಾರಿ ಇಡಿ ನೇರ ದಾಳಿ

ಜ್ಞಾನೇಂದ್ರ ಅವರ ಫ್ಲ್ಯಾಟ್‌ಗೆ ಬೀಗ ಹಾಕಲ್ಪಟ್ಟಿದ್ದರಿಂದ ಕೀ ಮೇಕರ್ ಅನ್ನು ಸ್ಥಳಕ್ಕೆ ಕರೆಸಲಾಯಿತು. ಕೀ ಮೇಕರ್ ಸಮ್ಮುಖದ ನಕಲಿ ಕೀ ತಯಾರಿಸಿ, ಫ್ಲ್ಯಾಟ್‌ನ ಬೀಗವನ್ನು ಯಶಸ್ವಿಯಾಗಿ ತೆರೆಯ ಲಾಯಿತು. ಮನೆ ಬಾಗಿಲು ತೆರೆದ ತಕ್ಷಣ ಇಡಿ ಅಧಿಕಾರಿಗಳು ತಪಾಸಣೆ ಪ್ರಕ್ರಿಯೆಯನ್ನು ವಿಡಿಯೋ ಕ್ಯಾಮೆರಾದಲ್ಲಿ ರೆಕಾರ್ಡ್ (ಇನ್‌ಕ್ಯಾಮೆರಾ ಪರಿಶೀಲನೆ) ಮಾಡುವ ಮೂಲಕ ಆರಂಭಿಸಿದ್ದಾರೆ

ಸಿಇಟಿ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ KEA; ಫಲಿತಾಂಶ ಹೀಗೆ ಚೆಕ್‌ ಮಾಡಿ

ಸಿಇಟಿ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ KEA; ಫಲಿತಾಂಶ ಹೀಗೆ ಚೆಕ್‌ ಮಾಡಿ

KEA: ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದ ಸಿಇಟಿ ಕೋರ್ಸ್‌ಗಳ ಎರಡನೇ ಸುತ್ತು ಹಾಗೂ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶದ ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಪ್ರಕಟವಾಗಿದೆ. ಆಕ್ಷೇಪಣೆ ಸಲ್ಲಿಸಲು ಆ.24 ಸಂಜೆ 4 ಗಂಟೆ ಗಡುವು ನೀಡಲಾಗಿದ್ದು, ಆಕ್ಷೇಪಣೆ ಇದ್ದರೆ ಆಧಾರ ಸಮೇತ ಇ-ಮೇಲ್ ಮೂಲಕ ಸಲ್ಲಿಸಬೇಕು ಎಂದು ಕೆಇಎ ಸೂಚನೆ ನೀಡಿದೆ.

ನೀರಾವರಿ ಯೋಜನೆಗಳ ಭರವಸೆ, ಕೃಷಿಯ ಸಾಮರ್ಥ್ಯಕ್ಕೆ ಕೈಗಾರಿಕೆಯ ಕೊರತೆ; ಮೂಲಸೌಕರ್ಯಕ್ಕೆ ಕಾಯಕಲ್ಪದ ನಿರೀಕ್ಷೆ

ಚಿಕ್ಕಬಳ್ಳಾಪುರಕ್ಕೆ 20ರ ಹರೆಯ; ಅಭಿವೃದ್ಧಿಯ ದಾಹ ಇನ್ನೂ ನೀಗಿಲ್ಲ!

ಬೆಂಗಳೂರು ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಜಿಲ್ಲೆಗೆ ಕೈಗಾರಿಕೆ, ಪ್ರವಾಸೋದ್ಯಮ, ಕೃಷಿ ಸಂಸ್ಕರಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಪಾರ ಅವಕಾಶಗಳಿವೆ. ಆದರೆ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಕಾರ್ಯಕ್ಕೆ ಇನ್ನಷ್ಟು ವೇಗದ ಅಗತ್ಯವಿದೆ.

MLA Abhay Patil Car Accident: ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಕಾರು ಭೀಕರ ಅಪಘಾತ

ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಕಾರು ಭೀಕರ ಅಪಘಾತ

ದೆಹಲಿಯ ಐ.ಪಿ ಎಸ್ಟೇಟ್ ರಸ್ತೆಯಲ್ಲಿ ಭಾನುವಾರ ರಾತ್ರಿ 9:30 ಕ್ಕೆ ಇನ್ನೋವಾ ಹಾಗೂ ಸ್ವಿಪ್ಟ್ ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ. ಘಟನೆ ವೇಳೆ ಇನ್ನೋವಾ ಕಾರಿನಲ್ಲಿದ್ದ ಕಿರಾರಿ ವಿಧಾನ ಸಭಾ ಕ್ಷೇತ್ರದ ಹಾಲಿ ಶಾಸಕ ಅನಿಲ್ ಝಾ ಮತ್ತು ಕರ್ನಾಟಕದ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಇದ್ದರು.

ಬಿ ಝೆಡ್ ಕಪ್ ಮೀಡಿಯಾ ಕ್ರಿಕೆಟ್ ಲೀಗ್ ಟೂರ್ನಿಯ  ಟ್ರೋಫಿ, ಜೆರ್ಸಿ ಅನಾವರಣ ಮಾಡಿದ ಕೆ. ವಿ. ಪ್ರಭಾಕರ್‌

ಬಿ ಝೆಡ್ ಕಪ್ ಟ್ರೋಫಿ, ಜೆರ್ಸಿ ಅನಾವರಣ ಮಾಡಿದ ಕೆ. ವಿ. ಪ್ರಭಾಕರ್‌

9 ಡ್ರೀಮ್ಸ್ ಸಂಸ್ಥೆ ಆಯೋಜಿಸುತ್ತಿರುವ ಬಿ ಝೆಡ್ ಕಪ್ ಮೀಡಿಯಾ ಕ್ರಿಕೆಟ್ ಲೀಗ್ ಟೂರ್ನಿಯ ಟ್ರೋಫಿ, ಜೆರ್ಸಿಯನ್ನು ಬೆಂಗಳೂರಿನಲ್ಲಿ ಭಾನುವಾರ ಭಾನುವಾರ ಅನಾವರಣ ಮಾಡಲಾಯಿತು. ಕ್ರಿಕೆಟ್ ಆಟದ ಮೂಲಕ ಅವರ ಒತ್ತಡಗಳನ್ನು ನಿವಾರಣೆ ಮಾಡಲು ಇದೊಂದು ವೇದಿಕೆಯಾಗಿದೆ ಎಂದು ಕೆ. ವಿ. ಪ್ರಭಾಕರ್‌ ತಿಳಿಸಿದ್ದಾರೆ.

BESCOM Clean-Up Drive: ರಜಾದಿನವೂ ಬೆಸ್ಕಾಂನಿಂದ ಮುಂದುವರಿದ ಸ್ವಚ್ಛತಾ ಆಂದೋಲನ

ರಜಾದಿನವೂ ಬೆಸ್ಕಾಂನಿಂದ ಮುಂದುವರಿದ ಸ್ವಚ್ಛತಾ ಆಂದೋಲನ

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್‌. ಶಿವಶಂಕರ ಅವರ ಮುಂದಾಳತ್ವದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಶನಿವಾರ ತಡರಾತ್ರಿಯೇ ಬೆಸ್ಕಾಂ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿದರು. ಭಾನುವಾರ ಬೆಳಗ್ಗೆ 6 ಗಂಟೆಯಿಂದ ಮತ್ತೆ ಮಲ್ಲೇಶ್ವರ, ರಾಜಾಜಿನಗರ ಸೇರಿ ವಿವಿಧೆಡೆ ಸ್ವಚ್ಛತಾ ಆಂದೋಲನ ನಡೆಸಲಾಗಿದೆ.

ಕೊಪ್ಪಳ ಸೇರಿ ಉತ್ತರ ಕರ್ನಾಟಕದಲ್ಲಿ ಆರೋಗ್ಯಸೇವೆ ವಿಸ್ತರಣೆ: ಸದ್ಗುರು ಶ್ರೀ ಮಧುಸೂದನ ಸಾಯಿ

ಉತ್ತರ ಕರ್ನಾಟಕದಲ್ಲಿ ಆರೋಗ್ಯಸೇವೆ ವಿಸ್ತರಣೆ: ಸದ್ಗುರು

ಕೊಪ್ಪಳ ನಗರದಲ್ಲಿ ನಡೆದ "ದಿವ್ಯ ಸಂಜೆ" ಸಂವಾದ ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಮಾತನಾಡಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಆರೋಗ್ಯ ಸೇರಿದಂತೆ ಹಲವು ಸೇವಾ ಚಟುವಟಿಕೆಗಳನ್ನು ವಿಸ್ತರಿಸಬೇಕು ಎಂದುಕೊಂಡಿದ್ದೇವೆ ಎಂದು ಸದ್ಗುರು ತಿಳಿಸಿದ್ದಾರೆ.

Mandya News: ಮಂಡ್ಯದಲ್ಲಿ ಮೃತಪಟ್ಟ ಭಿಕ್ಷುಕಿ ಮನೆಯಲ್ಲಿ ಮೂಟೆಗಟ್ಟಲೆ ಹಣ; ಸಂಬಂಧಿಕರು ಶಾಕ್!

ಮಂಡ್ಯದಲ್ಲಿ ಮೃತಪಟ್ಟ ಭಿಕ್ಷುಕಿ ಮನೆಯಲ್ಲಿ ಮೂಟೆಗಟ್ಟಲೆ ಹಣ!

Beggar Woman Dies in Mandya: ವೃದ್ಧೆಯ ಸಾವಿನ ನಂತರ ಸಂಬಂಧಿಕರು ಹಾಗೂ ಸ್ಥಳೀಯರು ಸೇರಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ನಂತರ, ಅವರ ಮನೆಗೆ ತೆರಳಿ ಪರಿಶೀಲಿಸಿದಾಗ ಲಕ್ಷಾಂತರ ರೂಪಾಯಿ ಹಣ ಇರುವುದು ಕಂಡು ಅಲ್ಲಿನ ಜನ ಶಾಕ್‌ ಆಗಿದ್ದಾರೆ.

Gudibande News: ಸಮಾವೇಶ ಯಶಸ್ವಿಗೆ ಕರೆ: ಗುಡಿಬಂಡೆಯಲ್ಲಿ ಪೂರ್ವಭಾವಿ ಸಭೆ

ಸಮಾವೇಶ ಯಶಸ್ವಿಗೆ ಕರೆ: ಗುಡಿಬಂಡೆಯಲ್ಲಿ ಪೂರ್ವಭಾವಿ ಸಭೆ

ರಾಜ್ಯ ಸರ್ಕಾರದಲ್ಲಿ 7.75 ಲಕ್ಷ ಹುದ್ದೆಗಳು ಮಂಜೂರಾಗಿದ್ದರೂ, ಪ್ರಸ್ತುತ ಸುಮಾರು 4 ಲಕ್ಷ ನೌಕರರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 2.84 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಉಳಿದಿವೆ. ಅಲ್ಲದೆ, 24 ಸಾವಿರಕ್ಕೂ ಅಧಿಕ ಬ್ಯಾಕ್‌ಲಾಗ್ ಹುದ್ದೆಗಳು ಭರ್ತಿಯಾಗದೆ ಇರುವುದರಿಂದ ಎಸ್ಸಿ/ಎಸ್ಟಿ ಸಮುದಾಯ ಕ್ಕೆ ಮೀಸಲಾತಿಯ ಸಂಪೂರ್ಣ ಪ್ರಯೋಜನ ದೊರೆಯುತ್ತಿಲ್ಲ

Gudibande News: ರಕ್ತದಾನದಿಂದ ಮಾನವೀಯತೆ, ಸೇವಾ ಮನೋಭಾವ ಬೆಳೆಯುತ್ತದೆ: ರಾಜಯೋಗಿನಿ ಪದ್ಮಾ

ರಕ್ತದಾನದಿಂದ ಮಾನವೀಯತೆ, ಸೇವಾ ಮನೋಭಾವ ಬೆಳೆಯುತ್ತದೆ

ಬ್ರಹ್ಮಕುಮಾರೀಸ್ ಸಂಸ್ಥೆಯು ಜ್ಞಾನ ದಾನ, ಯೋಗ ದಾನ ಹಾಗೂ ರಕ್ತದಾನದ ಮೂಲಕ ಸಮಾಜ ಸೇವೆಯ ಸಂದೇಶವನ್ನು ಸಾರುತ್ತಿದೆ. ಜ್ಞಾನ ದಾನದಿಂದ ಜೀವನದಲ್ಲಿ ಬೆಳಕು ಮೂಡಿ, ಸರಿಯಾದ ದಿಕ್ಕಿನಲ್ಲಿ ಸಾಗಲು ಸ್ಪಷ್ಟತೆ ದೊರೆಯುತ್ತದೆ. ಯೋಗ ಮತ್ತು ಧ್ಯಾನದಿಂದ ಆತ್ಮಶಕ್ತಿ, ಸಂತೋಷ, ಶಾಂತಿ, ಏಕಾಗ್ರತೆ ಹಾಗೂ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ

Gautam Adani: ಉದ್ಯಮಿ ಅದಾನಿ ಭೇಟಿ ಬಗ್ಗೆ ಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದೇನು?

ಉದ್ಯಮಿ ಅದಾನಿ ಭೇಟಿ ಬಗ್ಗೆ ಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದೇನು?

ಉದ್ಯಮಿ ಗೌತಮ್ ಅದಾನಿ ಅವರು‌ ಬೆಂಗಳೂರಿನ 'ಆರ್ಟ್ ಆಫ್ ಲಿವಿಂಗ್'ಗೆ ಭಾನುವಾರ ಭೇಟಿ ನೀಡಿದ್ದರು. ಅಲ್ಲಿಂದ ವಾಪಸ್‌ ತೆರಳುವಾಗ ಸಿಎಂ ಡಿ.ಕೆ. ಶಿವಕುಮಾ‌ರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಸಿಎಂ ಡಿ.ಕೆ ಶಿವಕುಮಾ‌ರ್ ಜತೆ ಅದಾನಿ ಸುಮಾರು 20 ನಿಮಿಷ ಚರ್ಚೆ ನಡೆಸಿದ್ದಾರೆ.

Kalaburagi Breaking: ಕಪನೂರ ಕೈಗಾರಿಕಾ ಪ್ರದೇಶದಲ್ಲಿ ದಾಲ್‌ಮಿಲ್‌ನಲ್ಲಿ ಪರವಾನಗಿ ಇಲ್ಲದೆ ಸಂಗ್ರಹ: ಅಕ್ರಮ ಯೂರಿಯಾ ದಂಧೆ ಪತ್ತೆ; 1,250 ಚೀಲ ವಶ

ಅಕ್ರಮ ಯೂರಿಯಾ ದಂಧೆ ಪತ್ತೆ; 1,250 ಚೀಲ ವಶ

ಖಚಿತ ಮಾಹಿತಿ ಹಾಗೂ ದೂರು ಆಧರಿಸಿ ಕೃಷಿ ಇಲಾಖೆ ಅಧಿಕಾರಿಗಳ ತಂಡ ದಾಲ್‌ಮಿಲ್‌ಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ, ನಿಯಮಬಾಹಿರವಾಗಿ ಸಂಗ್ರಹಿಸಿಟ್ಟಿದ್ದ ಯೂರಿಯಾ ಪತ್ತೆಯಾಗಿದ್ದು, ಸ್ಥಳದಲ್ಲಿದ್ದ ಗೊಬ್ಬರವನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ಗೊಬ್ಬರದ ಅಂದಾಜು ಮೌಲ್ಯ ₹3.72 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

​ಯೋಗಸಾಧನೆಯ ಅಮೃತಪಾನದಿಂದ ಮುಪ್ಪು-ಸಾವುಗಳನ್ನು ಮೀರಬಹುದು: ರಾಘವೇಶ್ವರ ಶ್ರೀ

​ಯೋಗಸಾಧನೆಯಿಂದ ಮುಪ್ಪು-ಸಾವುಗಳನ್ನು ಮೀರಬಹುದು

Annabrahma Chaturmasya: ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ರಾಘವೇಶ್ವರ ಭಾರತೀ ಶ್ರೀಗಳು ಪ್ರವಚನ ನೀಡಿದ್ದಾರೆ. ಆಹಾರಕ್ಕೂ ಉಪವಾಸಕ್ಕೂ ನಡುವೆ ಅಮೃತಾಹಾರ ಎನ್ನಬಹುದಾದ ಒಂದು ಯೋಗಮಾರ್ಗವಿದ್ದು, ಯೋಗಿಗಳು ಪಾನಮಾಡುವ ಈ ಅಮೃತವು ಅಂಗಡಿಯಲ್ಲಿ ಸಿಗುವಂತದ್ದಲ್ಲ ಎಂದು ತಿಳಿಸಿದ್ದಾರೆ.

NICE Road: ನೈಸ್ ರಸ್ತೆ ಹಗರಣದ ವಿರುದ್ಧ ಇಡೀ ರಾಜ್ಯದ ಜನರು ಎದ್ದು ನಿಲ್ಲಬೇಕು: ಎಚ್‌ಡಿಕೆ ಕರೆ

ನೈಸ್ ರಸ್ತೆ ಹಗರಣದ ವಿರುದ್ಧ ಜನರು ಎದ್ದು ನಿಲ್ಲಬೇಕು: ಎಚ್‌ಡಿಕೆ ಕರೆ

ನೈಸ್ ರಸ್ತೆಗಾಗಿ 20 ವರ್ಷದಿಂದ ರೈತರ ಭೂಮಿ ವಶಕ್ಕೆ ಪಡೆದು ಇನ್ನೂ ಪರಿಹಾರದ ದುಡ್ಡು ಕೊಟ್ಟಿಲ್ಲ. ಅಭಿವೃದ್ಧಿ ಹೆಸರಲ್ಲಿ ರೈತರ ಭೂಮಿ ವಶಪಡಿಸಿಕೊಂಡು 20 ವರ್ಷದಿಂದ ಅನಧಿಕೃತವಾಗಿ ಟೋಲ್ ಸಂಗ್ರಹ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

NICE Road toll row: ನೈಸ್ ಟೋಲ್ ವಿಷಯದಲ್ಲಿ ನಾನು ಪ್ರಚೋದಿಸುತ್ತಿಲ್ಲ, ಇಷ್ಟೊತ್ತಿಗೆ ಜನರೇ ನುಗ್ಗಬೇಕಿತ್ತು: ಎಚ್‍.ಡಿ.ಕುಮಾರಸ್ವಾಮಿ ಕಿಡಿ

ನೈಸ್ ರೋಡ್‌ ಟೋಲ್‌ಗೆ ಇಷ್ಟೊತ್ತಿಗೆ ಜನರೇ ನುಗ್ಗಬೇಕಿತ್ತು: ಎಚ್‍ಡಿಕೆ ಕಿಡಿ

ನೈಸ್ ಯೋಜನೆ ರಾಜ್ಯದಲಿಯೇ ಅತಿದೊಡ್ಡ ಹಗರಣ ಎಂದರೆ ತಪ್ಪಲ್ಲ. ಈ ಸರ್ಕಾರ ನೈಸ್ ಯೋಜನೆಯ ಹೆಸರಿನಲ್ಲಿ ಆ ಕಂಪನಿ ಜತೆ ಶಾಮೀಲಾಗಿದೆ. ಇದೊಂದೇ ಅಲ್ಲ, ಹಿಂದಿನ ಸರ್ಕಾರಗಳು ಹಾಗೂ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

Dharma Reservoir: ಮಳಗಿ ಧರ್ಮಾ ಡ್ಯಾಂ ಅಸ್ತಿತ್ವಕ್ಕೆ ಧಕ್ಕೆ; ತೂಬು, ಕಾಲುವೆಗಳ ದುರಸ್ತಿಗೆ ರೈತರ ಆಗ್ರಹ

ಮಳಗಿ ಧರ್ಮಾ ಡ್ಯಾಂ ತೂಬು, ಕಾಲುವೆಗಳ ದುರಸ್ತಿಗೆ ರೈತರ ಆಗ್ರಹ

ಉತ್ತರ ಕನ್ನಡ ಜಿಲ್ಲೆಯ ಮಂಡಗೋಡ ತಾಲೂಕಿನ ಮಳಗಿ ಗ್ರಾಮದ ಧರ್ಮಾ ಜಲಾಶಯದ ತೂಬು ಹಾಗೂ ಕಾಲುವೆಗಳ ದುರಸ್ತಿ ಇಲ್ಲದೆ ರೈತರ ಜಮೀನುಗಳಿಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಸರ್ಕಾರ ಅಗತ್ಯ ಕ್ರಮ ಕೈಗೊಂಡು ರೈತರಿಗೆ ಸಮರ್ಪಕ ನೀರಾವರಿ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.

Grafton Automotives: ಬೆಂಗಳೂರಿನ ಗಿರಿನಗರದಲ್ಲಿ ಗ್ರಾಫ್ಟನ್ ಆಟೋಮೋಟಿವ್ಸ್ ಶುಭಾರಂಭ

ಬೆಂಗಳೂರಿನ ಗಿರಿನಗರದಲ್ಲಿ ಗ್ರಾಫ್ಟನ್ ಆಟೋಮೋಟಿವ್ಸ್ ಶುಭಾರಂಭ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರಾಥಮಿಕ ಮತ್ತು ಪದವಿ ವ್ಯಾಸಂಗ ಮುಗಿಸಿದ ಗುರುದೀಪ ಭಟ್ ಧೋರಣಗಿರಿ ಬೆಂಗಳೂರಿನಲ್ಲಿ ಒಂದೆರಡು ವರ್ಷ ಪಿಪಿಫ್ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿ ಪ್ರಸ್ತುತ ಅದೇ ಕ್ಷೇತ್ರದಲ್ಲಿ ಸ್ವಂತ ಆಟೋಮೋಟಿವ್ ಸ್ಟುಡಿಯೋ ಆರಂಭಿಸಿದ್ದಾರೆ.

Gautam Adani: ಬೆಂಗಳೂರಿನಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾದ ಉದ್ಯಮಿ ಗೌತಮ್‌ ಅದಾನಿ; ಮಹತ್ವದ ಚರ್ಚೆ

ಸಿಎಂ ಡಿಕೆಶಿ ನಿವಾಸಕ್ಕೆ ಉದ್ಯಮಿ ಗೌತಮ್‌ ಅದಾನಿ ಭೇಟಿ; ಮಹತ್ವದ ಚರ್ಚೆ

Adani Visits CM DK Shivakumar: ರಾಹುಲ್‌ ಗಾಂಧಿ ಸೇರಿ ಕಾಂಗ್ರೆಸ್‌ ನಾಯಕರು ಉದ್ಯಮಿ ಗೌತಮ್‌ ಅದಾನಿ ವಿರುದ್ಧ ಸದಾ ಟೀಕೆ ಮಾಡುತ್ತಿರುತ್ತಾರೆ. ಈ ನಡುವೆ ಅವರು ಕಾಂಗ್ರೆಸ್‌ ಸರ್ಕಾರದ ಸಿಎಂ ಅನ್ನು ಭೇಟಿಯಾಗಿರುವುದು ತೀವ್ರ ಕುತೂಹಲ ಮೂಡಿಸಿದೆ. ಸುಮಾರು 20 ನಿಮಿಷಗಳ ಕಾಲ ಕರ್ನಾಟಕ ಸಿಎಂ ಡಿಕೆಶಿ ಜತೆ ಗೌತಮ್‌ ಅದಾನಿ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಪಾಗಲ್​ ಪ್ರೇಮಿಯ ಕಿರುಕುಳಕ್ಕೆ ಬೇಸತ್ತು ಕೆರೆಗೆ ಹಾರಿ ಯುವತಿ ಆತ್ಮಹತ್ಯೆ!

ಪಾಗಲ್​ ಪ್ರೇಮಿಯ ಕಿರುಕುಳಕ್ಕೆ ಬೇಸತ್ತು ಕೆರೆಗೆ ಹಾರಿ ಯುವತಿ ಆತ್ಮಹತ್ಯೆ!

Bengaluru News: ಬೆಂಗಳೂರಿನ ಎಚ್ಎಸ್ಆರ್ ಲೇಔಟ್​ನಲ್ಲಿ ಘಟನೆ ನಡೆದಿದೆ. ಯುವಕನ ಕಾಟಕ್ಕೆ ನೊಂದ ಯುವತಿ ಆಗರ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಯುವಕ ನೀಡಿರುವ ಕಿರುಕುಳದ ಬಗ್ಗೆ ಡೆತ್‌ನೋಟ್‌ನಲ್ಲಿ ಯುವತಿ ವಿವರಿಸಿದ್ದಾಳೆ. ಹೀಗಾಗಿ ಆರೋಪಿ ಯುವಕನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Shahapur Accident: ಶಹಾಪುರದಲ್ಲಿ ವಿದ್ಯುತ್ ಕಂಬಕ್ಕೆ ಬೊಲೆರೋ ಡಿಕ್ಕಿ; ಮೂವರು ಕೂಲಿ ಕಾರ್ಮಿಕರ ದುರ್ಮರಣ

ಶಹಾಪುರದಲ್ಲಿ ವಿದ್ಯುತ್ ಕಂಬಕ್ಕೆ ಬೊಲೆರೋ ಡಿಕ್ಕಿಯಾಗಿ ಮೂವರ ಸಾವು

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಡ್ನಾಳ್ ಗ್ರಾಮದ ಬಳಿ ಭೀಕರ ಅಪಘಾತ ನಡೆದಿದೆ. ಬೊಲೆರೋ ವಾಹನ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ ಗಂಭೀರವಾಗಿ ಗಾಯಗೊಂಡು ಮೂವರು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Loading...