ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RSS Baithak In Belagavi: ರಾಮ ಮಂದಿರ ಹುಂಡಿ‌ ಹಣ ಕಳ್ಳತನ ಪ್ರಕರಣ; ದುಃಖ ವ್ಯಕ್ತಪಡಿಸಿದ ಆರ್‌ಎಸ್‌ಎಸ್‌

ಬೆಳಗಾವಿ ನಗರದಲ್ಲಿ ಕಳೆದ ಮೂರು ದಿನಗಳಿಂದ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರಾಂತ ಪ್ರಚಾರಕ್ ಬೈಠಕ್ ಭಾನುವಾರ ಮುಕ್ತಾಯವಾಯಿತು. ಈ‌ ಮಹತ್ವದ ಸಭೆಯಲ್ಲಿ ಅಯೋಧ್ಯೇ ರಾಮ ಮಂದಿರದಲ್ಲಿ ಉಂಟಾದ ಹುಂಡಿ ಹಣ ಕಳ್ಳತನ ಪ್ರಕರಣದ ಕುರಿತು ಗಂಭೀರ ಚರ್ಚೆ ಮಾಡಲಾಗಿದೆ.

ರಾಮ ಮಂದಿರ ಹುಂಡಿ‌ ಹಣ ಕಳ್ಳತನ; ದುಃಖ ವ್ಯಕ್ತಪಡಿಸಿದ ಆರ್‌ಎಸ್‌ಎಸ್‌

-

Prabhakara R
Prabhakara R Jul 12, 2026 5:25 PM

ಬೆಳಗಾವಿ: ಅಯೋಧ್ಯೆಯ ರಾಮ ಮಂದಿರದ ದಾನ ಪೆಟ್ಟಿಗೆಯ ಕಾಣಿಕೆ ಎಣಿಕೆಯಲ್ಲಿ ನಡೆದ ಅಕ್ರಮ ಕುರಿತು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ದುಃಖ ವ್ಯಕ್ತಪಡಿಸಿದೆ. ಮುಂದೆ ಈ ರೀತಿಯ ಘಟನೆ ಮರುಕಳಿಸದಂತೆ ಕಳಕಳಿ ವ್ಯಕ್ತಪಡಿಸಿದೆ.

ಬೆಳಗಾವಿ ನಗರದಲ್ಲಿ ಕಳೆದ ಮೂರು ದಿನಗಳಿಂದ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರಾಂತ ಪ್ರಚಾರಕ್ ಬೈಠಕ್ (RSS Baithak In Belagavi) ಭಾನುವಾರ ಮುಕ್ತಾಯವಾಯಿತು. ಈ‌ ಮಹತ್ವದ ಸಭೆಯಲ್ಲಿ ಅಯೋಧ್ಯೇ ರಾಮ ಮಂದಿರದಲ್ಲಿ ಉಂಟಾದ ಹುಂಡಿ ಹಣ ಕಳ್ಳತನ ಪ್ರಕರಣದ (Ram mandir fund theft) ಕುರಿತು ಗಂಭೀರ ಚರ್ಚೆ ಮಾಡಲಾಗಿದೆ.

_RSS Baithak In Belagavi (1)

ಶ್ರೀರಾಮ ಜನ್ಮಭೂಮಿ ಮಂದಿರದ ದಾನ ಪೆಟ್ಟಿಗೆಯ ಕಾಣಿಕೆಯ ಎಣಿಕೆಯಲ್ಲಿ ನಡೆದಿರುವ ಅಕ್ರಮದ ಘಟನೆಗೆ ಬೈಠಕ್‌ನಲ್ಲಿ ಎಲ್ಲರೂ ದುಃಖ ವ್ಯಕ್ತಪಡಿಸಿದರು. ತೀರ್ಥಕ್ಷೇತ್ರ ನ್ಯಾಸದ (ಟ್ರಸ್ಟ್) ಮನವಿಯ ಮೇರೆಗೆ ನಡೆಯುತ್ತಿರುವ ಎಸ್‌ಐಟಿ (SIT) ಮತ್ತು ಪೊಲೀಸ್ ತನಿಖೆಯು ನಿರ್ಣಾಯಕ ಹಂತವನ್ನು ತಲುಪಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಲಾಯಿತು.

ಭವಿಷ್ಯದಲ್ಲಿ ಇಂತಹ ಯಾವುದೇ ಘಟನೆಗಳು ಮರುಕಳಿಸದಂತೆ ತೀರ್ಥಕ್ಷೇತ್ರ ನ್ಯಾಸವು ಖಚಿತಪಡಿಸಿಕೊಳ್ಳಬೇಕು, ಇದರಿಂದ ಸಮಸ್ತ ರಾಮಭಕ್ತರ ರಾಮಮಂದಿರದ ಮೇಲಿರುವ ಶ್ರದ್ಧೆ ಮತ್ತು ಆಳವಾದ ನಂಬಿಕೆಗೆ ಧಕ್ಕೆಯಾಗಬಾರದು ಎಂದು ಅಪೇಕ್ಷಿಸಲಾಯಿತು.

ಈ ಬೈಠಕ್‌ನಲ್ಲಿ ಆರ್‌ಎಸ್‌ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿ 226 ಕಾರ್ಯಕರ್ತರು ಉಪಸ್ಥಿತರಿದ್ದರು. ಈ ವೇಳೆ ಮಾರ್ಚ್ 2026ರ ನಂತರ ಸಂಘದ ವಿವಿಧ ಸ್ತರಗಳಲ್ಲಿ ನಡೆದ ಪ್ರಶಿಕ್ಷಣ ವರ್ಗಗಳ ವಿಶ್ಲೇಷಣೆ ನಡೆಸಲಾಯಿತು. ಈ ವರ್ಷ ದೇಶಾದ್ಯಂತ ಒಟ್ಟು 83 ಸಂಘ ಶಿಕ್ಷಾ ವರ್ಗ ಮತ್ತು 12 ಕಾರ್ಯಕರ್ತ ವಿಕಾಸ ವರ್ಗಗಳು ಸಂಪನ್ನಗೊಂಡವು.

_RSS Baithak In Belagavi (2)

ಇದರಲ್ಲಿ ಒಟ್ಟು 18,842 ಸ್ವಯಂಸೇವಕರು ತರಬೇತಿ ಪಡೆದರು. ಈ ತರಬೇತಿಯಲ್ಲಿ ಶಾಖಾ ಸಂಚಾಲನೆ, ಸಂಘ ಕಾರ್ಯಪದ್ಧತಿ, ಗ್ರಾಮ ವಿಕಾಸ, ಕುಟುಂಬ ಪ್ರಬೋಧನ, ವಿಪತ್ತು ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆ ಮುಂತಾದ ವಿಷಯಗಳು ಒಳಗೊಂಡಿದ್ದವು.

ಶಾಖೆಗಳ ಸ್ತರದಲ್ಲಿ ಕಾರ್ಯಯೋಜನೆಯ ಅನುಷ್ಠಾನದ ದೃಷ್ಟಿಯಿಂದ ವಿವರವಾಗಿ ಚರ್ಚಿಸಲಾಯಿತು ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಗರಿಷ್ಠ ಶಾಖಾ ವಿಸ್ತಾರ ಯೋಜನೆಯ ಕುರಿತೂ ಚರ್ಚೆ ನಡೆಸಲಾಯಿತು. ಇದರೊಂದಿಗೆ ಶತಾಬ್ದಿ ವರ್ಷದ ಅಂಗವಾಗಿ ನಡೆದ ಕಾರ್ಯಕ್ರಮಗಳ ವಿಶ್ಲೇಷಣೆ ಹಾಗೂ ನಿಗದಿಪಡಿಸಲಾದ ಉಳಿದ ಕಾರ್ಯಕ್ರಮಗಳ ಯೋಜನೆಯ ಕುರಿತು ವಿಚಾರ ಮಾಡಲಾಯಿತು.

ಶತಾಬ್ದಿ ವರ್ಷದ ವಿವಿಧ ಕಾರ್ಯಕ್ರಮಗಳ ಮೂಲಕ ಸಂಪರ್ಕಕ್ಕೆ ಬಂದ ಜನರನ್ನು ಸಾಮಾಜಿಕ ಕಾರ್ಯಗಳಲ್ಲಿ ಮತ್ತು ಪಂಚ ಪರಿವರ್ತನೆಯ ವಿಷಯಗಳಲ್ಲಿ ಸಕ್ರಿಯಗೊಳಿಸುವ ಯೋಜನೆಯ ಕುರಿತು ಚರ್ಚಿಸಲಾಯಿತು. 2026-27ನೇ ಸಾಲಿನ ಪೂಜನೀಯ ಸರಸಂಘಚಾಲಕರ ಪ್ರವಾಸದ ಯೋಜನೆಯ ಕುರಿತೂ ಚರ್ಚೆ ನಡೆಯಿತು.

Jitendra Kundeshwara Column: ರಾಮಮಂದಿರ ಹೆಸರಲ್ಲಿ ಬಡವರಿಗೆ ನೂರಾರು ಸೂರು!

ಬೈಠಕ್‌ನಲ್ಲಿ ಪ್ರಸ್ತುತ ಸನ್ನಿವೇಶದ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಇದರಲ್ಲಿ ಮುಖ್ಯವಾಗಿ ಜನಗಣತಿಯ ಸಂದರ್ಭದ ಮಾಹಿತಿ ಮತ್ತು ಜನಸಂಖ್ಯಾ ಅಸಮತೋಲನದಿಂದ ಎದುರಾಗುವ ಸವಾಲುಗಳು ಮುಂತಾದ ವಿಷಯಗಳು ಒಳಗೊಂಡಿದ್ದವು. ಡ್ರಗ್ಸ್‌ನ ಹೆಚ್ಚುತ್ತಿರುವ ದುಷ್ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸುವುದರೊಂದಿಗೆ, ವ್ಯಸನ ಮುಕ್ತಿ ತಡೆಗಾಗಿ ಆದ್ಯತೆಯ ಮೇರೆಗೆ ಪ್ರಯತ್ನಗಳ ಅಗತ್ಯತೆಯ ಕುರಿತು ಮತ್ತು ಸಂತ ಶಿರೋಮಣಿ ರವಿದಾಸ ಮಹಾರಾಜರ 650 ನೇ ಜನ್ಮ ಜಯಂತಿ ವರ್ಷದ ಕಾರ್ಯಕ್ರಮಗಳ ಯೋಜನೆಯ ಕುರಿತು ಚರ್ಚಿಸಲಾಯಿತು. ಈ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನಿಲ್ ಅಂಬೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.