30 ರೂ. ಟೀ ಕುಡಿಯಲು ಹೋಗಿ 30 ಲಕ್ಷ ಕಳೆದುಕೊಂಡ ಬೆಂಗಳೂರಿನ ಟೆಕ್ಕಿ ದಂಪತಿ!
Bengaluru Theft Case: ಬೆಂಗಳೂರು ನಗರದ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ ಘಟನೆ ನಡೆದಿದೆ. ದಂಪತಿ ಸಂಜೆ ಟೀ ಕುಡಿಯಲು ಕೆಫೆಗೆ ಹೋಗಿದ್ದನ್ನು ಗಮನಿಸಿದ್ದ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಟೆಕ್ಕಿ ದಂಪತಿ ಟೀ ಕುಡಿಯಲು ಕೆಫೆಗೆ ಹೋದ ಸಮಯದಲ್ಲಿ ಮನೆಯ ಬೀಗ ಮುರಿದು ಸುಮಾರು 30 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನ, ಬೆಳ್ಳಿ ಕಳ್ಳತನ ಮಾಡಿರುವ ಘಟನೆ ನಗರದ (Bengaluru News) ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ ನಡೆದಿದೆ. ದಂಪತಿ ಸಂಜೆ ಟೀ ಕುಡಿಯಲು ಕೆಫೆಗೆ ಹೋದಾಗ, ಕಳ್ಳರು ತೋರಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಚ್‌ಆರ್‌ಬಿಆರ್ ಲೇಔಟ್ 2ನೇ ಬ್ಲಾಕ್‌ನಲ್ಲಿರುವ ಬಾಲಾಜಿ (34) ಎಂಬುವವರ ಫ್ಲ್ಯಾಟ್‌ನಲ್ಲಿ ಶನಿವಾರ ಸಂಜೆ ಕಳ್ಳತನ ನಡೆದಿದೆ. ಇವರ ಮನೆ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಲ್ಲಿದ್ದು, ದಪತಿ ಮನೆಗೆ ಬೀಗ ಹಾಕಿ ಟೀ ಕುಡಿಯೋಣ ಎಂದು ಹತ್ತಿರದ ಕೆಫೆಗೆ ಹೋಗಿದ್ದರು. ಸಂಜೆ 6.30ಕ್ಕೆ ಮನೆಗೆ ಮರಳಿದಾಗ, ಮುಖ್ಯ ಬಾಗಿಲಿನ ಬೀಗ ಮುರಿದಿರುವುದು ಗೊತ್ತಾಗಿದೆ. ಒಳಗೆ ಹೋಗಿ ನೋಡಿದಾಗ ಬೆಡ್‌ರೂಮ್‌ನ ಕಪಾಟುಗಳು ತೆರೆದಿತ್ತು. ಅಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿದ್ದವು. ಈ ವೇಳೆ ಸುಮಾರು 250 ಗ್ರಾಂ ಚಿನ್ನದ ಆಭರಣಗಳು, ಪೂಜಾ ಕೋಣೆಯಲ್ಲಿದ್ದ 300 ಗ್ರಾಂ ಬೆಳ್ಳಿಯ ವಸ್ತುಗಳು ಹಾಗೂ ಇತರ ಬೆಲೆಬಾಳುವ ವಸ್ತುಗಳು ಕಳ್ಳತನ ಆಗಿವೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು, ಬೆರಳಚ್ಚು ತಜ್ಞರು, ವಿಧಿವಿಜ್ಞಾನದ ಜತೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದೇಶ ಕಾಯುವವರಿಗೆ ಅವಮಾನ! ವ್ಹೀಲ್ ಚೇರ್‌ನಲ್ಲಿರುವ ಮಾಜಿ ಯೋಧನಿಗೆ ಟೋಲ್ ಸಿಬ್ಬಂದಿಯಿಂದ ಕಿರುಕುಳ, ವಿಡಿಯೋ ನೋಡಿ
ಮನೆಗೆ ನುಗ್ಗಿ ಹಣ, ಚಿನ್ನ ಕದಿಯುವಾಗಲೇ ಸಿಕ್ಕಿಬಿದ್ದ ಕಳ್ಳರು
ತುಮಕೂರು: ಮನೆಯೊಂದಕ್ಕೆ ನುಗ್ಗಿ ಚಿನ್ನಾಭರಣ, ನಗದು ಕದಿಯುವ ಸಂದರ್ಭದಲ್ಲಿಯೇ ಕಳ್ಳರನ್ನು ರೆಡ್ ಹ್ಯಾಂಡ್ ಆಗಿ ಗ್ರಾಮಸ್ಥರು ಹಿಡಿದಿರುವ ಘಟನೆ ಜಿಲ್ಲೆಯ ತುರುವೇಕೆರೆಯಲ್ಲಿ ನಡೆದಿದೆ. ಬಳಿಕ ಕಳ್ಳರನ್ನು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ.
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಘಟನೆ ನಡೆದಿದೆ. ಗ್ರಾಮದ ಮನೆಗೆ ಆಂಧ್ರಪ್ರದೇಶದ ಚಿತ್ತೂರು ಮೂಲದ ಇಬ್ಬರು ಕಳ್ಳರು ನುಗ್ಗಿದ್ದಾರೆ. ಮನೆಯ ಒಳಗೆ ಆಗುತ್ತಿದ್ದ ಶಬ್ದವನ್ನು ಗಮನಿಸಿದ ಗ್ರಾಮಸ್ಥರು, ಕಳ್ಳರನ್ನು ಹಿಡಿಯಲು ಮನೆಯನ್ನು ಸುತ್ತುವರಿದಿದ್ದಾರೆ.
ಮನೆಯ ಒಳಗೆ ಹಣ, ಒಡವೆ ಕದ್ದು ಪರಾರಿಯಾಗಲು ಪ್ರಯತ್ನಿಸಿದಾಗ ಇಬ್ಬರು ಕಳ್ಳರನ್ನು ಗ್ರಾಮಸ್ಥರು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಗ್ರಾಮಸ್ಥರ ಕಳ್ಳರ ಬಳಿ ಹಣ, ಒಡವೆ, ಚಾಕು ಇರುವುದು ಪೊಲೀಸರ ಪರಿಶೀಲನೆ ವೇಳೆ ಪತ್ತೆಯಾಗಿದೆ .