ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನಗರದ ಕಸ ಆಯುವವರಿಗೆ ಘನತೆ ತರಲು ಇನ್ ವ್ಯಾಲ್ಯುಯಬಲ್ಸ್ ಬೆಂಗಳೂರಿನಿಂದ `ರೀಸೈಕಲ್ ರೆಸೊಲ್ಯೂಷನ್ಸ್’ ಅಭಿಯಾನಕ್ಕೆ ಚಾಲನೆ

`ರೀಸೈಕಲ್ ರೆಸೊಲ್ಯೂಷನ್ಸ್’ ನಾಗರಿಕರಿಗೆ ಹೊಸ ವರ್ಷದ ಸಂದರ್ಭದಲ್ಲಿ ಅವರಿಗೆ ಡಬ್ಬಾ ತೊಳೆಯಿರಿ, ಹಳೆಯ ಬಟ್ಟೆ ತೆಗೆದುಕೊಳ್ಳಿ ಮತ್ತು ಕೆಂಪು ಗುರುತು ಮಾಡಿ ಈ ಮೂರು ಅಭ್ಯಾಸ ಗಳು ಇದ್ದಲ್ಲಿ ಹೊಸ ಪ್ರತಿಜ್ಞೆಗಳ ಅಗತ್ಯವಿಲ್ಲ. ಅವರನ್ನು ಒಂದು ಸರಳ, ಸಾಮೂಹಿಕ ರಿಮೈಂಡರ್ ಅಡಿ ತರುತ್ತಿದ್ದೇವೆ.

`ರೀಸೈಕಲ್ ರೆಸೊಲ್ಯೂಷನ್ಸ್’ ಅಭಿಯಾನಕ್ಕೆ ಚಾಲನೆ

-

Ashok Nayak
Ashok Nayak Jan 27, 2026 8:36 PM

`ರೀಸೈಕಲ್ ರೆಸೊಲ್ಯೂಷನ್ಸ್’ ಹೊಸ ವರ್ಷದ ನಿರೂಪಣೆಯಾಗಿದ್ದು ಬೆಂಗಳೂರಿಗರಿಗೆ ಸರಳ ಅಭ್ಯಾಸಗಳನ್ನು ನವೀಕರಿಸಲು ಸ್ಫೂರ್ತಿ ಮತ್ತು ನೆನಪು ಮಾಡುವ ಮೂಲಕ ತ್ಯಾಜ್ಯ ಮರುಬಳಕೆಗೆ ಉತ್ತೇಜನ, ಕಸ ಆಯುವವರ ಘನತೆಗೆ ಗೌರವ ಮತ್ತು ದೀರ್ಘಾವಧಿ ಸಮುದಾಯ ಬದಲಾವಣೆಗೆ ಉತ್ತೇಜನ ನೀಡುತ್ತಿದೆ.

ಬಿಬಿಸಿ ಮೀಡಿಯಾ ಆಕ್ಷನ್ ತನ್ನ ಇನ್ ವ್ಯಾಲ್ಯುಯಬಲ್ಸ್ ಉಪಕ್ರಮದ ಭಾಗವಾಗಿ ಹೊಸ ವರ್ಷದ `ರೀಸೈಕಲ್ ರೆಸೊಲ್ಯೂಷನ್ಸ್’ ಎಂಬ ಹೊಸ ವರ್ಷದ ಅಭಿಯಾನ ಪ್ರಾರಂಭಿ ಸಿದ್ದು ಇದು ಬೆಂಗಳೂರಿಗರಿಗೆ ಈಗಾಗಲೇ ಕೆಲಸದಲ್ಲಿರುವವರಿಗೆ ಅತ್ಯುತ್ತಮ ತೀರ್ಮಾನ ಗಳನ್ನು ಕೈಗೊಳ್ಳಲು ನೆನಪಿಸುತ್ತದೆ. ಹಿಂದಿನ ಇನ್ ವ್ಯಾಲ್ಯುಯಬಲ್ಸ್ ಅಭಿಯಾನದ ಪೂರ್ವಸಿದ್ಧ ಅಭ್ಯಾಸಗಳ ಮೇಲೆ ನಿರ್ಮಿಸಲಾದ ಇದು ನಾಗರಿಕರಿಗೆ ಮರುಬಳಕೆ ಸುಧಾ ರಿಸುವ ಮೂರು ಸರಳ ಕ್ರಮಗಳನ್ನು ನವೀಕರಿಸುವ ಮತ್ತು ಕಸ ಆಯುವವರ ಘನತೆ ಯನ್ನು ಗೌರವಿಸುವ 2026ರಲ್ಲಿ ಉಳಿಯುವ ಪರೀಕ್ಷಿಸಲ್ಪಟ್ಟ ಅಭ್ಯಾಸಗಳ ಪ್ರತಿಜ್ಞೆ ಗಳನ್ನು ಕೈಗೊಳ್ಳಲು ಉತ್ತೇಜಿಸುತ್ತದೆ.

ಇದನ್ನೂ ಓದಿ: Prakash Shesharaghavachar Column: ಅಪಾಯದಲ್ಲಿ ಢೋಂಗಿ ಜಾತ್ಯಾತೀತರ ವೋಟು ಬ್ಯಾಂಕ್

`ರೀಸೈಕಲ್ ರೆಸೊಲ್ಯೂಷನ್ಸ್’ ನಾಗರಿಕರಿಗೆ ಹೊಸ ವರ್ಷದ ಸಂದರ್ಭದಲ್ಲಿ ಅವರಿಗೆ ಡಬ್ಬಾ ತೊಳೆಯಿರಿ, ಹಳೆಯ ಬಟ್ಟೆ ತೆಗೆದುಕೊಳ್ಳಿ ಮತ್ತು ಕೆಂಪು ಗುರುತು ಮಾಡಿ ಈ ಮೂರು ಅಭ್ಯಾಸಗಳು ಇದ್ದಲ್ಲಿ ಹೊಸ ಪ್ರತಿಜ್ಞೆಗಳ ಅಗತ್ಯವಿಲ್ಲ. ಅವರನ್ನು ಒಂದು ಸರಳ, ಸಾಮೂ ಹಿಕ ರಿಮೈಂಡರ್ ಅಡಿ ತರುತ್ತಿದ್ದೇವೆ. ಈ ಪೂರ್ವಸಾಧಿತ ವರ್ತನೆಗಳನ್ನು ನವೀಕರಿಸಿದ ಹೊಸ ವರ್ಷದ ಭರವಸೆಗಳಾಗಿ ರೂಪಿಸುವ ಮೂಲಕ ಈ ಅಭಿಯಾನವು ಹಬ್ಬದ ಋತು ವಿನ ಆಚೆಗೂ ಬದಲಾವಣೆಯನ್ನು ಉಳಿಸಿಕೊಳ್ಳುವ ಗುರಿ ಹೊಂದಿದ್ದು ಮನೆಯಲ್ಲಿನ ಸಣ್ಣ, ಸ್ಥಿರವಾದ ಕ್ರಮಗಳು ಬೆಲೆ ಕಟ್ಟಲಾಗದ ರೀಸೈಕ್ಲರ್ ಗಳು ಎಂದು ಖ್ಯಾತಿ ಪಡೆದ ಕಸ ಆಯುವವರ ನೇರ ಸುರಕ್ಷತೆ ಮತ್ತು ಘನತೆಗೆ ಪ್ರಭಾವಿಸುತ್ತವೆ. ಈ ನೆನಪಿನ ಓಲೆಯು #ಇನ್ ವ್ಯಾಲ್ಯುಯಬಲ್ಸ್ ಅಡಿಯಲ್ಲಿ ಹಿಂದಿನ ಉಪಕ್ರಮಗಳ ಯಶಸ್ಸಿನ ಮೇಲೆ ನಿರ್ಮಾಣ ವಾಗಿದ್ದು ಈ ಪ್ರತಿನಿತ್ಯದ ಅಭ್ಯಾಸಗಳು ಮುಂದಕ್ಕೆ ಕೊಂಡೊಯ್ಯಬಹುದಾದ ಪ್ರತಿನಿತ್ಯದ ಅಭ್ಯಾಸಗಳಾಗಿವೆ ಎಂದು ನಿರೂಪಿಸಿವೆ.

ಇವುಗಳಲ್ಲಿ: ಡಬ್ಬಾ ತೊಳೆಯಿರಿ: ಮನೆಗೆ ತರುವ ಆಹಾರದ ಬಾಕ್ಸ್ ಗಳನ್ನು ಎಸೆಯುವ ಮುನ್ನ ಈ ಸರಳ ಕ್ರಮವನ್ನು ಶೇ.60ರಷ್ಟು ಮಂದಿ ಅಳವಡಿಸಿಕೊಂಡಿದ್ದು ಇವರಲ್ಲಿ ಶೇ.60ರಷ್ಟು ಮಂದಿ ಈ ಅಭಿಯಾನಕ್ಕೆ ತೆರೆದುಕೊಂಡಿದ್ದಾರೆ (ಇಂಪ್ಯಾಕ್ಟ್ ಎವ್ಯಾಲ್ಯು ಯೇಷನ್ ರೀಸರ್ಚ್). ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳು (ಡಿ.ಡಬ್ಲ್ಯೂ.ಸಿ.ಸಿ.ಗಳು) ಕೂಡಾ ನಗರದಾದ್ಯಂತ ಸ್ವಚ್ಛ ಕಂಟೈನರ್ ಗಳನ್ನು ನೋಡುತ್ತಿರುವುದಾಗಿ ವರದಿ ಮಾಡಿವೆ.

ಹಳೆಯ ಬಟ್ಟೆಗಳಿವೆಯೇ? ಈ ಅಭಿಯಾನವು ಬೆಂಗಳೂರಿಗರಿಗೆ ಹಳೆಯ ಬಟ್ಟೆಗಳನ್ನು ಎಸೆಯುವಾಗ ಅವುಗಳನ್ನು ಸ್ವಚ್ಛಗೊಳಿಸಿ ಮತ್ತು ಹತ್ತಿರದ ಡಿ.ಡಬ್ಲ್ಯೂ.ಸಿ.ಸಿ.ಗಳಲ್ಲಿನ ಕಸ ಆಯುವವರಿಗೆ ನೀಡುವ ಮೂಲಕ ಹೆಚ್ಚು ಜವಾಬ್ದಾರಿಯುತವಾಗಿ ಎಸೆಯುತ್ತಿದ್ದಾರೆ. ಇದು ಒಂದು ತಿಂಗಳಲ್ಲಿ 16 ಕೇಂದ್ರಗಳಲ್ಲಿ 1.8 ಟನ್ನುಗಳಷ್ಟು ಉಡುಪು ಸಂಗ್ರಹಿಸಲು ನೆರವಾ ಗಿದ್ದು ಸಾಮಾನ್ಯ ಪ್ರಮಾಣಕ್ಕಿಂತ ದುಪಟ್ಟಾಗಿದೆ.

ಕೆಂಪು ಗುರುತು ಮಾಡಿ: ಈ ಹೊಚ್ಚಹೊಸ ಅಭಿಯಾನವು ಸ್ಯಾನಿಟರಿ ಮತ್ತು ಡೈಪರ್ ತ್ಯಾಜ್ಯವನ್ನು ಸುತ್ತಿ ಮತ್ತು ಪ್ಯಾಕೇಜ್ ಅನ್ನು ಕೆಂಪು “X” ಗುರುತು ಮಾಡಲು ಉತ್ತೇಜಿಸು ತ್ತದೆ. ಇದು ಶೇ.41ರಷ್ಟು ಜನರು ಅವರ ಸ್ಯಾನಿಟರಿ ಮತ್ತು ಹಾನಿಕಾರಕ ತ್ಯಾಜ್ಯವನ್ನು ಕಾಗದದರಲ್ಲಿ ಸುತ್ತಿ ಮತ್ತು ಅದನ್ನು ಕೆಂಪು ಗುರುತು ಮಾಡಲು ಪ್ರಾರಂಭಿಸಿದ್ದಾರೆ.

ಈ ಸಕಾರಾತ್ಮಕ ಫಲಿತಾಂಶಗಳು ಏಕೆ ಅಂತಹ ಅಭ್ಯಾಸಗಳನ್ನು ನವೀಕರಿಸುವುದು ಮುಖ್ಯ ಎಂದು ತೋರುತ್ತವೆ ಮತ್ತು ಏಕೆ ರಿಸೈಕಲ್ ರೆಸೊಲ್ಯೂಷನ್ಸ್ ಅವುಗಳನ್ನು ಮುಂದಕ್ಕೆ ಕೊಂಡೊಯ್ಯಲು ಸಕಾಲಿಕ ರಿಮೈಂಡರ್ ಆಗಿಸಲಾಗಿದೆ ಎನ್ನುವುದನ್ನು ತೋರುತ್ತವೆ.

ಇನ್ ವ್ಯಾಲ್ಯುಯಬಲ್ಸ್ ಉಪಕ್ರಮವು 12 ಪಾಲುದಾರರು ಕಸ ಆಯುವವರನ್ನು ಸುರಕ್ಷಿತ ಮತ್ತು ಘನತೆಯ ಜೀವನ ನಡೆಸಲು ಸನ್ನದ್ಧವಾಗಿಸಲು ಸಾಮೂಹಿಕ ಪರಿಣಾಮ ಬೀರುವ ಸಾಮೂಹಿಕ ಶಕ್ತಿ ಅಡಿಯಲ್ಲಿ ಬಿಬಿಸಿ ಮೀಡಿಯಾ ಆಕ್ಷನ್ ಉಪಕ್ರಮವಾಗಿದೆ.

ಈ ಹೊಚ್ಚಹೊಸ ಅಭಿಯಾನವು ಮುಂಚೂಣಿಯ ಇನ್ ಫ್ಲುಯೆನ್ಸರ್ ಗಳು ಮತ್ತು ಪ್ರಮುಖ ಬೆಂಗಳೂರಿಗರ ಬೆಂಬಲ ಪಡೆದಿದೆ. ಅವರಲ್ಲಿ ಮುಖ್ಯವಾದವರು ನಗರದ ಕಾಮಿಡಿಯನ್ @ಅಯ್ಯೊಶ್ರದ್ಧಾ, ಸಂಗೀತಗಾರ ವಾಸು ದೀಕ್ಷಿತ್, ನಟಿ ಭೂಮಿ ಶೆಟ್ಟಿ ಮತ್ತು ಪ್ಲಾಗಿಂಗ್ ಚಾಂಪಿಯನ್ @ಪ್ಲಾಗ್ ರಾಜಾ ಇದ್ದಾರೆ. ಇನ್ ಫ್ಲುಯೆನ್ಸರ್ ಗಳಾದ ಶಿವ ರೈ, ಪಿಂಕಿ ಪ್ರೀತ್ ಮತ್ತು ಹೇಮ ಗಾಯತ್ರಿ ಮತ್ತಿತರರು `ರೀಸೈಕಲ್ ರೆಸೊಲ್ಯೂಷನ್ಸ್’ ಸಂದೇಶ ವನ್ನು ಹರಡುತ್ತಿದ್ದಾರೆ.

#ಇನ್ ವ್ಯಾಲ್ಯುಯಬಲ್ಸ್ ಅಭಿಯಾನದ ಬಹಳ ಕಾಲದ ಬೆಂಬಲಿಗ ಸಂಗೀತಗಾರ ವಾಸು ದೀಕ್ಷಿತ್, “ನಿಜವಾದ ಬದಲಾವಣೆಗೆ ದೊಡ್ಡ ನಡೆಯ ಅಗತ್ಯವಿಲ್ಲ. ಇದು ಸಣ್ಣ, ದೈನಂದಿನ ಕ್ರಮಗಳು. ನಾವು ನಮ್ಮ ಕಸವನ್ನು ಜವಾಬ್ದಾರಿಯುತಾಗಿ ನಿರ್ವಹಿಸಿದರೆ ನಾವು ನಮ್ಮ ಕಸ ಆಯುವವರ ಕೆಲಸವನ್ನು ಸುರಕ್ಷಿತ ಮತ್ತು ಹೆಚ್ಚು ಘನತೆಯುಕ್ತವಾಗಿಸುತ್ತೇವೆ. `ರೀಸೈಕಲ್ ರೆಸೊಲ್ಯೂಷನ್ಸ್’ ಈಗಾಗಲೇ ಕೆಲಸ ಮಾಡುತ್ತಿರುವ ಈ ಸರಳ ಅಭ್ಯಾಸಗಳನ್ನು ನೆನಪಿಸುವುಇದೆ ಮತ್ತು ಅವರನ್ನು ಮುಂದುವರಿಸಲು ಅದೇ ಕಾರಣವಾಗಿದೆ” ಎಂದರು.

2021ರಿಂದಲೂ ಈ ಅಭಿಯಾನದೊಮದಿಗೆ ಗುರುತಿಸಿಕೊಂಡಿರುವ ಕಾಮಿಡಿಯನ್ ಅಯ್ಯೊ ಶ್ರದ್ಧಾ, “ಬಹಳಷ್ಟು ತೀರ್ಮಾನಗಳು ಫೆಬ್ರವರಿಯಲ್ಲಿ ಮರೆತು ಹೋಗುತ್ತವೆ. ಆದರೆ ಇವುಗಳು? ಅವು ಸರಳವಾಗಿವೆ. ನಿಮ್ಮ ಡಬ್ಬಾ ತೊಳೆಯಿರಿ, ಹಳೆಯ ಬಟ್ಟೆಗಳನ್ನು ಒಣ ತ್ಯಾಜ್ಯ ಕೇಂದ್ರಗಳಿಗೆ ಕಳುಹಿಸಿ ಮತ್ತು ಅವರಿಗೆ ಕಸ ಆಯುವವರ ಕೆಲಸವನ್ನು ಸುರಕ್ಷಿತ ಮತ್ತು ಘನತೆಯುಕ್ತವಾಗಿಸಲು ನೆರವಾಗಿರಿ. `ರೀಸೈಕಲ್ ರೆಸೊಲ್ಯೂಷನ್ಸ್’ ನಮ್ಮ ಪಾರಿಸರಿಕ ಪರಿಣಿತರಿಗೆ ಒಂದು ಬಗೆಯ ಭರವಸೆಯಾಗಿದೆ. ನಾವು ವಾಸ್ತವವಾಗಿ ಈ ಭರವಸೆಗಳನ್ನು ಕಾಪಾಡಿಕೊಳ್ಳಬೇಕು” ಎಂದರು.

ಈ ಬಿಡುಗಡೆ ಕುರಿತು ಬಿಬಿಸಿ ಮೀಡಿಯಾ ಆಕ್ಷನ್ ಭಾರತದ ಎಕ್ಸಿಕ್ಯೂಟಿವ್ ಕ್ರಿಯೇಟಿವ್ ಡೈರೆಕ್ಟರ್ ಸೋಮಾ ಕತಿಯಾರ್, “ಹೊಸ ವರ್ಷವು ನಮಗೆ ಮರುಬಳಕೆಯನ್ನು ನೆನಪಿ ಸುವ ಶಕ್ತಿಯುತ ವರ್ತನೆಯ ಬದಲಾವಣೆಯನ್ನು ತಂದಿದ್ದು ಈ ಕ್ರಮಗಳು ತೀರ್ಮಾನ ಗಳಾಗಬೇಕು, ಇದರಿಂದ ಅವು ಅಭಿಯಾನದ ಧ್ವನಿಯಾಗಿ ಅಳಿಸಿ ಹೋಗುವುದಿಲ್ಲ ಬದಲಿಗೆ ಅವುಗಳನ್ನು ಪ್ರತಿನಿತ್ಯದ ರೂಢಿಯಲ್ಲಿ ಹೊಂದಿಸಿಕೊಳ್ಳಲಾಗುತ್ತದೆ.

ನಮ್ಮ ಸೃಜನಶೀಲ ಒಳನೋಟವು ಸ್ಪಷ್ಟವಾಗಿದೆ: ಜನರಿಗೆ ಹೊಸ ಅಭ್ಯಾಸಗಳು ಬೇಕಿಲ್ಲ; ಪರಿಚಿತವಾಗಿರುವ ಅಭ್ಯಾಸಗಳನ್ನು ಸೂಕ್ತ ಸಾಂಸ್ಕೃತಿಕ ಕ್ಷಣದಲ್ಲಿ ಉತ್ತೇಜಿಸಬೇಕಾಗುತ್ತದೆ. ಅಲ್ಲಿಯೇ ವರ್ತನೆಯ ಬದಲಾವಣೆ ನಡೆಯುತ್ತದೆ, ಸರಳ, ಘನತೆಯ ದಿನಚರಿಯು ನಗರ ವನ್ನು ನಮ್ಮ ಇನ್ ವ್ಯಾಲ್ಯುಯಬಲ್ ರೀಸೈಕ್ಲರ್ ಗಳಿಗೆ ಸುರಕ್ಷಿತವಾಗಿಸುತ್ತದೆ” ಎಂದರು.

ಇದರ ವಿಸ್ತಾರ ಪ್ರಾಮುಖ್ಯತೆ ಕುರಿತು ಬಿಬಿಸಿ ಮೀಡಿಯಾ ಆಕ್ಷನ್ ಭಾರತದ ಕಂಟ್ರಿ ಡೈರೆಕ್ಟರ್ ವರಿಂದರ್ ಕೌರ್ ಗಂಭೀರ್, “ಇನ್ ವ್ಯಾಲ್ಯುಯಬಲ್ಸ್ ಸದಾ ನಾಗರಿಕರಿಗೆ ನಮ್ಮ ತ್ಯಾಜ್ಯ ವ್ಯವಸ್ಥೆಯ ಹಿಂದಕ್ಕೆ ನೋಡಲು ಮತ್ತು ಕಾಳಜಿಯಿಂದ ನಡೆದುಕೊಳ್ಳಲು ನೆರವಾಗುವುದಾಗಿದೆ. ಈ ಅಂತಿಮ ಹಂತವು ಇಲ್ಲಿಯವರೆಗೆ ನಾವು ಕಲಿತಿರುವ ಎಲ್ಲವನ್ನೂ ತರುತ್ತದೆ, ಅದಕ್ಕೆ ಪುರಾವೆ ಮತ್ತು ಪರಿಣಾಮದ ಬೆಂಬಲವಿದೆ ಮತ್ತು ಬೆಂಗಳೂರಿಗರಿಗೆಈ ವರ್ತನೆಗಳನ್ನು ನಮ್ಮ ಕಸ ಆಯುವವರತ್ತ ಹಂಚಿಕೊಂಡ ಜವಾಬ್ದಾರಿಯಾಗಿ ಕೊಂಡೊ ಯ್ಯಲು ಆಹ್ವಾನಿಸುತ್ತದೆ” ಎಂದರು.

ಈ ವಾರ ರೀಸೈಕಲ್ ರೆಸೊಲ್ಯೂಷನ್ಸ್ ಹೊರಾಂಗಣಗಳಲ್ಲೂ ಪ್ರಾರಂಭಿಸಲಾಗಿದ್ದು ಅದು ನಗರದ ಪ್ರಮುಖ ಪ್ರದೇಶಗಳ ಬಸ್ ನಿಲ್ದಾಣಗಳು ಮತ್ತು ನಮ್ಮ ಮೆಟ್ರೋಗಳಲ್ಲಿ ನಡೆಸುವ ಮೂಲಕ ಪ್ರತಿನಿತ್ಯ ಸಂಚರಿಸುವರಿಗೆ ಕಾಣುವಂತೆ ಮತ್ತು ತಲುಪುವಂತೆ ಮಾಡಲಾಗುತ್ತಿದೆ. ಇದನ್ನು ಸದ್ಯದಲ್ಲೇ ನಗರದ ಹಲವಾರು ಅಪಾರ್ಟ್ಮೆಂಟ್ ಗಳ ಡಿಜಿಟಲ್ ಪ್ಲಾಟ್ ಫಾರಂ ಗಳಲ್ಲಿಯೂ ಬಿಡುಗಡೆ ಮಾಡಲಾಗುತ್ತದೆ.