ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kannada Pustaka Habba- 2026: ಬೆಂಗಳೂರಿನಲ್ಲಿ ನ.28, 29ರಂದು ನಾರಾಯಣ ಶೇವಿರೆ ಅವರ 3 ಕೃತಿ, ಡಾ. ಸೋಂದಾ ನಾರಾಯಣ ಭಟ್ಟರ ‘ಅಕ್ಷಿಪಥʼ ಪುಸ್ತಕ ಲೋಕಾರ್ಪಣೆ

ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿರುವ ‘6ನೇ ಕನ್ನಡ ಪುಸ್ತಕ ಹಬ್ಬ–2026’ರ ಅಂಗವಾಗಿ ಬೆಂಗಳೂರು ನಗರದ ಕೆಂಪೇಗೌಡ ನಗರದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್‌ನ ‘ಕೇಶವಶಿಲ್ಪʼ ಸಭಾಂಗಣದಲ್ಲಿ ನ.28ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ಲೇಖಕ ನಾರಾಯಣ ಶೇವಿರೆ ಅವರ ‘ಉನ್ಮೇಷʼ, ‘ಸುವ್ಯಕ್ತʼ ಹಾಗೂ ‘ಎಲೆಮರೆಯ ಹೂʼ ಎಂಬ ಮೂರು ಹೊಸ ಕೃತಿಗಳು ಮತ್ತು ನ.29ರಂದು ಡಾ. ಸೋಂದಾ ನಾರಾಯಣ ಭಟ್ಟರ ‘ಅಕ್ಷಿಪಥʼ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ನ.28, 29ರಂದು ನಾರಾಯಣ ಶೇವಿರೆ ಅವರ 3 ಕೃತಿಗಳು, ‘ಅಕ್ಷಿಪಥ’ ಲೋಕಾರ್ಪಣೆ

-

Profile
Siddalinga Swamy Nov 27, 2026 2:39 PM

ಬೆಂಗಳೂರು, ನ.27: ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿರುವ ‘6ನೇ ಕನ್ನಡ ಪುಸ್ತಕ ಹಬ್ಬ–2026’ರ (Kannada Pustaka Habba- 2026) ಅಂಗವಾಗಿ ಲೇಖಕ ನಾರಾಯಣ ಶೇವಿರೆ ಅವರ ‘ಉನ್ಮೇಷʼ, ‘ಸುವ್ಯಕ್ತʼ ಹಾಗೂ ‘ಎಲೆಮರೆಯ ಹೂʼ ಎಂಬ ಮೂರು ಹೊಸ ಕೃತಿಗಳು ಮತ್ತು ಡಾ. ಸೋಂದಾ ನಾರಾಯಣ ಭಟ್ಟರ ‘ಅಕ್ಷಿಪಥʼ ಪುಸ್ತಕ ಇದೇ ವಾರಾಂತ್ಯದಲ್ಲಿ ಲೋಕಾರ್ಪಣೆಗೊಳ್ಳಲಿವೆ.

ನಗರದ ಕೆಂಪೇಗೌಡ ನಗರದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್‌ನ ‘ಕೇಶವಶಿಲ್ಪʼ ಸಭಾಂಗಣದಲ್ಲಿ ನವೆಂಬರ್ 28ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ನಡೆಯುವ ಸಮಾರಂಭದಲ್ಲಿ ನಾರಾಯಣ ಶೇವಿರೆ ಅವರ ಮೂರು ಕೃತಿಗಳು ಬಿಡುಗಡೆಯಾಗಲಿವೆ. ಆರ್‌ಎಸ್‌ಎಸ್ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸಿ ಕೃತಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಲೇಖಕ ಹಾಗೂ ತಾಳಮದ್ದಲೆ ಕಲಾವಿದ ದಿವಾಕರ ಹೆಗಡೆ ಕೃತಿಗಳ ಕುರಿತು ಮಾತನಾಡಲಿದ್ದು, ರಾಷ್ಟ್ರೋತ್ಥಾನ ಪರಿಷತ್‌ನ ಕೋಶಾಧ್ಯಕ್ಷ ಕೆ.ಎಸ್. ನಾರಾಯಣ ಮುಖ್ಯ ಅತಿಥಿಯಾಗಿ ಉಪಸ್ಥಿತರಿರಲಿದ್ದಾರೆ.

ನ.29ರಂದು ‘ಅಕ್ಷಿಪಥʼ ಬಿಡುಗಡೆ

ನವೆಂಬರ್ 29ರಂದು ಭಾನುವಾರ ನಡೆಯಲಿರುವ ಕಾರ್ಯಕ್ರಮದಲ್ಲಿ, ‘ಅಸೀಮಾʼ ಸಂಪಾದಕೀಯಗಳ ಸಂಗ್ರಹವಾದ ಡಾ. ಸೋಂದಾ ನಾರಾಯಣ ಭಟ್ಟರ ‘ಅಕ್ಷಿಪಥʼ ಕೃತಿ ಬಿಡುಗಡೆಯಾಗಲಿದೆ. ಹಿರಿಯ ವಿದ್ವಾಂಸರು ಹಾಗೂ ಸಂಸ್ಕೃತ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಕೃತಿ ಲೋಕಾರ್ಪಣೆಯಾಗಲಿದ್ದು, ಲೇಖಕ ಮತ್ತು ಅಂಕಣಕಾರ ನಾರಾಯಣ ಶೇವಿರೆ ಕೃತಿ ಪರಿಚಯ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿಲಾಸಿನಿ ಭಟ್ ಹಾಗೂ ಕೆ.ಎಸ್. ನಾರಾಯಣ ಪಾಲ್ಗೊಳ್ಳಲಿದ್ದಾರೆ.

ಡಿ. 6ರವರೆಗೆ ಪುಸ್ತಕ ಹಬ್ಬ; ಶೇ 60ರವರೆಗೆ ರಿಯಾಯಿತಿ

ಒಟ್ಟು 37 ದಿನಗಳ ಕಾಲ ನಡೆಯುತ್ತಿರುವ ಈ ಪುಸ್ತಕ ಹಬ್ಬವು ಡಿಸೆಂಬರ್ 6ರಂದು ಭಾನುವಾರದವರೆಗೆ ಮುಂದುವರಿಯಲಿದೆ. ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಪುಸ್ತಕ ಪ್ರೇಮಿಗಳಿಗೆ ಪ್ರವೇಶವಿರಲಿದ್ದು, ಈ ಪುಸ್ತಕ ಹಬ್ಬದಲ್ಲಿ ಶೇ. 10ರಿಂದ ಶೇ. 60ರವರೆಗೆ ವಿಶೇಷ ರಿಯಾಯಿತಿ ದೊರೆಯಲಿದೆ. ಡಿಸೆಂಬರ್ 6ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದೊಂದಿಗೆ ಪುಸ್ತಕ ಹಬ್ಬಕ್ಕೆ ತೆರೆ ಬೀಳಲಿದೆ.