ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Japanese industrial township: 7000 ಕೋಟಿ ಹೂಡಿಕೆ, 88 ಸಾವಿರ ಉದ್ಯೋಗ: ಜಪಾನ್ ಕೈಗಾರಿಕಾ ಟೌನ್‌ಶಿಪ್‌ಗೆ 300 ಎಕರೆ: ಎಂ.ಬಿ.ಪಾಟೀಲ

ತುಮಕೂರನ್ನು ಬೆಂಗಳೂರಿನ ನಂತರದ ಕೈಗಾರಿಕಾ ತಯಾರಿಕೆಯ ನಗರವನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಇದಕ್ಕಾಗಿ 1736 ಎಕರೆಯನ್ನು ಮೀಸಲಿ ಟ್ಟಿದ್ದು, ಇದರಿಂದ 7 ಸಾವಿರ ಕೋಟಿ ರುಪಾಯಿ ಹೂಡಿಕೆ ಹರಿದು ಬರಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

7000 ಕೋಟಿ ಹೂಡಿಕೆ, 88 ಸಾವಿರ ಉದ್ಯೋಗ

-

Profile
Ashok Nayak Aug 18, 2026 8:35 AM

ಬೆಂಗಳೂರು: ತುಮಕೂರನ್ನು ಬೆಂಗಳೂರಿನ ನಂತರದ ಕೈಗಾರಿಕಾ ತಯಾರಿಕೆಯ ನಗರವನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಇದಕ್ಕಾಗಿ 1736 ಎಕರೆಯನ್ನು ಮೀಸಲಿಟ್ಟಿದ್ದು, ಇದರಿಂದ 7 ಸಾವಿರ ಕೋಟಿ ರುಪಾಯಿ ಹೂಡಿಕೆ ಹರಿದು ಬರಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ನೇತೃತ್ವದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಮತ್ತು ಅನುಷ್ಠಾನ ಮಂಡಳಿಯ 3ನೇ ಮೇಲುಸ್ತುವಾರಿ ಪ್ರಾಧಿಕಾರದ ಸಭೆಯಲ್ಲಿ ಅವರು ವರ್ಚುಯಲ್ ಆಗಿ ಪಾಲ್ಗೊಂಡು ಮಾತನಾಡಿ, ಬೆಂಗಳೂರು-ಚೆನ್ನೈ ಕೈಗಾರಿಕಾ ಕಾರಿಡಾರ್‌ನ ತುಮಕೂರು ನೋಡ್‌ನಲ್ಲಿ ಈಗಾಗಲೇ ಶೇ.30ರಷ್ಟು ಭೌತಿಕ ಪ್ರಗತಿ ಮತ್ತು ಶೇ.20ರಷ್ಟು ಆರ್ಥಿಕ ಪ್ರಗತಿ ಸಾಧಿಸಲಾಗಿದೆ. ಇಲ್ಲಿ 300 ಎಕರೆ ಭೂಮಿಯನ್ನು ಜಪಾನ್ ಟೌನ್‌ಶಿಪ್‌ಗೆ ಮತ್ತು 200 ಎಕರೆ ಯನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಮಂಜೂರು ಮಾಡಲಾಗಿದೆ.

ಇದನ್ನೂ ಓದಿ: MB Patil: ಕೆಎಸ್‌ಡಿಎಲ್ ವಿರುದ್ಧ ಅಕ್ರಮ ಆರೋಪ; ಹುರುಳಿದ್ದರೆ ಶಿಕ್ಷೆ, ಇಲ್ಲದಿದ್ದರೆ ಕಾನೂನು ಕ್ರಮ ಎಂದ ಎಂ.ಬಿ ಪಾಟೀಲ್‌

ತುಮಕೂರು ನೋಡ್ ಅಭಿವೃದ್ಧಿಯಿಂದ 88 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಆಗಲಿದೆ ಎಂದು ತಿಳಿಸಿದ್ದಾರೆ. ಇಲ್ಲಿ ಜಿಂದಾಲ್ ಅಲ್ಯೂಮಿನಿಯಂ ಪ್ರಧಾನ ಹೂಡಿಕೆ ದಾರ ಕಂಪನಿ ಯಾಗಿದ್ದು, ಅದಕ್ಕೆ 151 ಎಕರೆ ಭೂಮಿ ಕೊಡಲಾಗಿದೆ. 41 ಎಕರೆಯನ್ನು ಸಾಂಸ್ಥಿಕ ಬಳಕೆಗೆ ಮೀಸಲಿಡಲಾಗಿದೆ. ಭೂಸ್ವಾಧೀನ ಸುಗಮವಾಗಿ ನಡೆ ಯುತ್ತಿದ್ದು, 2027ರಲ್ಲಿ ಯೋಜನೆಯನ್ನು ಮುಗಿಸಲಾ ಗುವುದು. ಈ ನೋಡ್ನಲ್ಲಿ ಆಹಾರ ಮತ್ತು ಪಾನೀಯ, ಜವಳಿ ಮತ್ತು ಉಡುಪು, ಎಲೆಕ್ಟ್ರಾನಿಕ್ಸ್, ರಾಸಾಯನಿಕ, ಜನರಲ್ ಎಂಜಿನಿಯರಿಂಗ್ ಮತ್ತು ಲಾಜಿಸ್ಟಿಕ್ಸ್ ವಲಯಗಳಿಗೆ ಆದ್ಯತೆ ಕೊಡಲಾಗುವುದು ಎಂದರು. ‌

ಸಭೆಯಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೈಗಾರಿಕಾ ಸಚಿವರು ಭಾಗವಹಿಸಿದ್ದರು. ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುರ್ಮಾ, ಮುಖ್ಯಮಂತ್ರಿಯವರ ಕಾರ್ಯದರ್ಶಿ ನಕುಲ, ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ ಸೇರಿ ಇತರರು ಇದ್ದರು.

ಕೇಂದ್ರಕ್ಕೆ ಅಗತ್ಯ ಸಹಕಾರ ಕಲಬುರಗಿಗೆ ಮಂಜೂರಾಗಿರುವ ಪಿಎಂ ಮಿತ್ರ ಕೈಗಾ ರಿಕಾ ಪಾರ್ಕ್ ಮತ್ತು ’ಭವ್ಯ’ ಯೋಜನೆಯಡಿ ರಾಜ್ಯಕ್ಕೆ ಮಂಜೂರಾಗಿರುವ ಯೋಜನೆಗಳನ್ನು ಮುಗಿಸಲಾಗು ವುದು. ಇದಕ್ಕೆ ಕೇಂದ್ರಕ್ಕೆ ಅಗತ್ಯ ಸಹಕಾರ ಕೊಡಲಾಗುತ್ತದೆ. ಕೇಂದ್ರ ಸರಕಾರದ ಈ ಯೋಜನೆಯ ಅಡಿಯಲ್ಲಿ 13 ರಾಜ್ಯ ಗಳಲ್ಲಿ 11 ಕೈಗಾರಿಕಾ ಕಾರಿಡಾರ್ ಮತ್ತು 20 ಸ್ಮಾರ್ಟ್ ಸಿಟಿ ಅಭಿವೃದ್ಧಿಪಡಿಸ ಲಾಗುತ್ತಿದೆ. ಈ ಪೈಕಿ 4 ಸ್ಮಾರ್ಟ್ ಸಿಟಿ ಯೋಜನೆಗಳು ಮುಗಿದಿದ್ದು, ಉಳಿದ 16 ಅಭಿವೃ ದ್ಧಿಯ ನಾನಾ ಹಂತಗಳಲ್ಲಿವೆ ಎಂದು ಸಚಿವ ಎಂ.ಬಿ.ಪಾಟೀಲ ವಿವರಿಸಿದರು.

image

ಈ ಉಪಕ್ರಮದ ವ್ಯಾಪ್ತಿಯ ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್‌ಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. 50759 ಕೋಟಿ ರುಪಾಯಿ ವೆಚ್ಚದ ಈ ಯೋಜನೆ 5.35 ಲಕ್ಷ ಕೋಟಿ ಹೂಡಿಕೆಯ ಸಾಮರ್ಥ್ಯ ಹೊಂದಿದ್ದು 14 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದೆ. ಒಟ್ಟು 49,120 ಎಕರೆಯಲ್ಲಿ ಅನುಷ್ಠಾನಕ್ಕೆ ಬರಲಿರುವ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ’ಭವ್ಯ’ ಉಪಕ್ರಮದ ಮೂಲಕ 100 ಕೈಗಾರಿಕಾ ಪಾರ್ಕ್‌ಗಳು ಅಸ್ತಿತ್ವಕ್ಕೆ ಬರಲಿವೆ.

- ನಿರ್ಮಲಾ ಸೀತಾರಾಮನ್ ಕೇಂದ್ರ ಸಚಿವೆ