ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉಭಯ ಸದನದಲ್ಲಿ ಕೋಲಾಹಲ

ಹನೂರು ಭಾಗದಲ್ಲಿ ನಡೆದಿರುವ ಎನ್‌ಕೌಂಟರ್ ಉಭಯ ಸದನದಲ್ಲಿ ಸದ್ದು ಮಾಡಿದ್ದು, ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಪ್ರತಿಪಕ್ಷಗಳು ಆಗ್ರಹಿಸಿವೆ. ಸೋಮವಾರ ಸದನ ಆರಂಭವಾಗುತ್ತಿದ್ದಂತೆ ವಿಧಾನಪರಿಷತ್ ನಲ್ಲಿ ಛಲವಾದಿ ನಾರಾಯಣಸ್ವಾಮಿ ಹಾಗೂ ವಿಧಾನಸಭೆ ಯಲ್ಲಿ ಆರ್.ಅಶೋಕ್ ವಿಷಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಉಭಯ ಸದನದಲ್ಲಿ ಕೋಲಾಹಲ

-

Profile
Ashok Nayak Aug 18, 2026 8:02 AM

ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಪ್ರತಿಪಕ್ಷ ಪಟ್ಟು, ಹನೂರು ಎನ್‌ಕೌಂಟರ್ ಪ್ರತಿಧ್ವನಿ

ಬೇಟೆಗಾರರ ಹೆಸರಿನಲ್ಲಿ ಸರಕಾರಿ ಪ್ರಾಯೋಜಿತ ಕಗ್ಗೊಲೆ: ಬಿಜೆಪಿ, ಜೆಡಿಎಸ್ ಸದಸ್ಯರ ಆರೋಪ

ವಿಧಾನಸಭೆ/ವಿಧಾನಪರಿಷತ್: ಹನೂರು ಭಾಗದಲ್ಲಿ ನಡೆದಿರುವ ಎನ್‌ಕೌಂಟರ್ ಉಭಯ ಸದನದಲ್ಲಿ ಸದ್ದು ಮಾಡಿದ್ದು, ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಪ್ರತಿಪಕ್ಷಗಳು ಆಗ್ರಹಿಸಿವೆ. ಸೋಮವಾರ ಸದನ ಆರಂಭವಾಗುತ್ತಿದ್ದಂತೆ ವಿಧಾನಪರಿಷತ್ ನಲ್ಲಿ ಛಲವಾದಿ ನಾರಾಯಣಸ್ವಾಮಿ ಹಾಗೂ ವಿಧಾನಸಭೆಯಲ್ಲಿ ಆರ್. ಅಶೋಕ್ ವಿಷಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇದೊಂದು ಸರಕಾರಿ ಪ್ರಾಯೋಜಿತ ಕೊಲೆ. ಹೊಲದಲ್ಲಿದ್ದ ವ್ಯಕ್ತಿಗಳನ್ನು ಕಾಡಿಗೆ ಕರೆದುಕೊಂಡು ಎನ್‌ಕೌಂಟರ್ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಸರಕಾರ ಈವರೆಗೆ ಸ್ಪಷ್ಟನೆ ನೀಡಿಲ್ಲ. ಇಡೀ ಘಟನಾವಳಿ ಗಳನ್ನು ಗಮನಿಸಿದರೆ, ಪೂರ್ವನಿಯೋಜಿತ ಕೃತ್ಯ ಎನಿಸುತ್ತದೆ ಎಂದು ಟೀಕಿಸಿದರು. ವಿಧಾನಸಭೆಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ನೆರೆ ರಾಜ್ಯದ ಮುಖ್ಯಮಂತ್ರಿ, ಇಂಡಿ ಕೂಟದ ಸ್ನೇಹಿತ ಪ್ರಕರಣದ ಬಗ್ಗೆ ಮಾತನಾಡಿ, ಕರ್ನಾಟಕದಲ್ಲಿ ತಮಿಳರಿಗೆ ರಕ್ಷಣೆ ಇಲ್ಲ ಎಂದು ಆರೋಪಿಸಿದ್ದಾರೆ. ಮೈಸೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ನಾಲ್ಕನೇ ಆರೋಪಿ ಪೊಲೀಸರ ಕಣ್ಗಾವಲಿನಲ್ಲಿದ್ದರೂ ನಾಪತ್ತೆ ಯಾಗಿದ್ದಾನೆ.

ನಿಜಕ್ಕೂ ಬೇಟೆಗಾರರು ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದರೆ, ಒಬ್ಬರ ಮೇಲೆ ಗುಂಡು ಹಾರಿಸಿದರೆ ಇನ್ನುಳಿದವರು ಓಡಿ ಹೋಗುತ್ತಿದ್ದರು. ಆದರೆ ಮೂವರನ್ನು ಸಾಯಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು. ಘಟನೆಗೆ ಸ್ಪಷ್ಟನೆ ನೀಡಿದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು, ಈ ಪ್ರಕರಣ ದಲ್ಲಿ ಯಾರನ್ನು ರಕ್ಷಿಸುತ್ತಿಲ್ಲ. ತನಿಖೆ ನಡೆಯುತ್ತಿದ್ದು, ಮೂರರಿಂದ ನಾಲ್ಕು ದಿನದಲ್ಲಿ ವರದಿ ಕೈಸೇರಲಿದೆ.

ಇದನ್ನೂ ಓದಿ: Bangalore News: ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದಲ್ಲಿ ಅದ್ದೂರಿ ಕಾರ್ಯಕ್ರಮ: ಡಾ.ಟಿ.ಎಸ್.ಸತ್ಯವತಿ ಅವರಿಗೆ ಸನ್ಮಾನ ಹಾಗೂ ಕೈಲಾಸ ಮಾನಸ ಸರೋವರ ದರ್ಶನ

ವರದಿಯಲ್ಲಿ ಅಮಾಯಕರ ಮೇಲೆ ದಾಳಿಯಾಗಿದೆ ಎಂದು ಕಂಡು ಬಂದರೆ ಅವರಿಗೆ ಪರಿಹಾರ, ನ್ಯಾಯಾಂಗ ತನಿಖೆಗೆ ಒಪ್ಪಿಸುವ ಬಗ್ಗೆ ಸಿಎಂ ಜತೆ ಚರ್ಚಿಸುವೆ. ಆದರೆ ಮೃತರು, ದನ ಹುಡುಕಿ ಕೊಂಡು ಹೋಗಿದ್ದರೆ ಅಥವಾ ಹೊಲದಲ್ಲಿ ಜೋಳ ಕಾಯಲು ಹೋಗಿದ್ದರೆ ಅರಣ್ಯ ಪ್ರದೇಶದ ಐದರಿಂದ ಎಂಟು ಕಿಮೀ ಒಳಗೆ ಏಕೆ ಹೋಗಬೇಕಿತ್ತು? ಬ್ಯಾಗ್‌ನಲ್ಲಿ ಅಡುಗೆ ಸಾಮಗ್ರಿಗಳನ್ನು ಏಕೆ ಇಟ್ಟುಕೊಳ್ಳ ಬೇಕಿತ್ತು? ಎಂದು ಪ್ರಶ್ನಿಸಿದರು. ಬೇಟೆಗಾರರಿಂದ ಗುಂಡಿನ ದಾಳಿ ನಡೆದ ಹಿನ್ನೆಲೆ ಯಲ್ಲಿ ಅರಣ್ಯ ಸಿಬ್ಬಂದಿ ಆತ್ಮರಕ್ಷಣೆಗಾಗಿ ಹಾಗೂ ಅರಣ್ಯ ಸಂಪತ್ತಿನ ರಕ್ಷಣೆಗಾಗಿ ಪ್ರತಿದಾಳಿ ನಡೆಸಿ ದ್ದಾರೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಒಬ್ಬ ವ್ಯಕ್ತಿ ಓಡಿ ಹೋಗುತ್ತಿರುವುದು ಕಂಡುಬಂದಿದ್ದು, ಮೂವರು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರ ಪ್ರಾಣ ರಕ್ಷಣೆಗಾಗಿ ಹನೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಹೆಚ್ಚಿನ ಚಿಕಿತ್ಸೆ ಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸ್ಥಳ ಪರಿಶೀಲನೆ ವೇಳೆ ಒಂದು ಬ್ಯಾಗ್‌ನಲ್ಲಿ 22.35 ಕೆ.ಜಿ. ಹಾಗೂ ಮತ್ತೊಂದು ಬ್ಯಾಗ್‌ನಲ್ಲಿ 11.90 ಕೆ.ಜಿ. ಸೇರಿ ಒಟ್ಟು 34.25 ಕೆ.ಜಿ. ವನ್ಯಪ್ರಾಣಿಯ ಮಾಂಸ ಪತ್ತೆಯಾಗಿದೆ. ಮಾಂಸದಲ್ಲಿ ಗುಂಡಿನ ಚಹರೆ ಕಂಡುಬಂದಿದೆ ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ ಎಂದು ವಿವರಿಸಿದರು. ಆದರೆ ರಾಮಲಿಂಗಾರೆಡ್ಡಿ ಅವರ ಸಮರ್ಥನೆ ಯನ್ನು ಒಪ್ಪದೆ, ರಾಜೀನಾಮೆ, ಪರಿಹಾರ ಹಾಗೂ ನ್ಯಾಯಾಂಗ ತನಿಖೆಗೆ ಬಿಜೆಪಿ ಶಾಸಕರು ಪಟ್ಟು ಹಿಡಿದಾಗ ಕೆಲ ಕಾಲ ಗದ್ದಲ ಉಂಟಾಯಿತು.

ನ್ಯಾಯಾಂಗ ತನಿಖೆಗೆ ಆಗ್ರಹ ಉಭಯ ಸದನದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಮಾತ ನಾಡಿ, ಮೃತಪಟ್ಟಿರುವವರು ಅಮಾಯಕರು ಎಂದು ಹೇಳಲಾಗುತ್ತಿದೆ. ಆದ್ದರಿಂದ ಮೃತಪಟ್ಟಿರು ವವರ ಕುಟುಂಬಗಳಿಗೆ ಒಂದು ಕೋಟಿ ರು. ಪರಿಹಾರ ನೀಡಬೇಕು. ಇದರೊಂದಿಗೆ ಈ ಪ್ರಕರಣದಲ್ಲಿ ಸತ್ಯಾಸತ್ಯತೆ ಹೊರಬರಬೇಕು ಎಂದರೆ ನ್ಯಾಯಾಂಗ ತನಿಖೆ ನಡೆಸಬೇಕು. ಈ ಸಾವಿನ ನೈತಿಕ ಹೊಣೆ ಹೊತ್ತು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಎಸಿ ನೇತೃತ್ವದ ತನಿಖೆಯಲ್ಲಿ ಅಧಿಕಾರಿಗಳನ್ನು ರಕ್ಷಿಸುವ ಸಾಧ್ಯತೆಯಿರುತ್ತದೆ. ಆದ್ದರಿಂದ ಪ್ರಕರಣ ವನ್ನು ಕೂಡಲೇ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಪಟ್ಟು ಹಿಡಿದರು.

ಸರಕಾರದ ಸಮರ್ಥನೆ ಏನು?

ದನ ಹುಡುಕಲು ಹೋದವರ ಬಳಿ ಮಚ್ಚು, ಬಂದೂಕು ಏಕಿರಬೇಕು?

ಅರಣ್ಯಾಧಿಕಾರಿಗಳು ಸ್ವಯಂರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು

ಹನೂರಿನಲ್ಲಿ ವೈದ್ಯರು ಅಲಭ್ಯವಾದ ಕಾರಣ ಮೈಸೂರಿಗೆ ಮೃತದೇಹ ವರ್ಗಾವಣೆ

ತನಿಖೆಯಲ್ಲಿ ಇಲಾಖೆ ಅಧಿಕಾರಿಗಳ ತಪ್ಪು ಕಂಡು ಬಂದರೆ ಅವರ ವಿರುದ್ಧವೂ ಕ್ರಮ

ಪ್ರತಿಪಕ್ಷದ ಆರೋಪವೇನು?

ಅಮಾಯಕ ರೈತರ ಮೇಲೆ ಎನ್ ಕೌಂಟರ್, ನ್ಯಾಯಾಂಗ ತನಿಖೆ ಅಗತ್ಯ

ಬೇಟೆಗಾರರಾಗಿದ್ದರೆ ಮೂವರ ಮೇಲೆ ಗುಂಡು ಹಾರಿಸುವ ಅಗತ್ಯ ಏನಿತ್ತು

ನಾಲ್ವರ ಪೈಕಿ ಮೂವರು ಮೃತಪಟ್ಟಿದ್ದಾರೆ; ಬದುಕಿರುವ ಒಬ್ಬ ವ್ಯಕ್ತಿ ಎಲ್ಲಿದ್ದಾನೆ?

ಎನ್‌ಕೌಂಟರ್ ವಿಷಯದಲ್ಲಿ ಸರಕಾರ ಹಾಗೂ ಪಕ್ಷದಲ್ಲಿಯೇ ದ್ವಂದ್ವ ನೀತಿಯಿದೆ.

image

ಇದೊಂದು ಸರಕಾರಿ ಪ್ರಾಯೋಜಿತ ಎನ್ ಕೌಂಟರ್. ಸರಕಾರ ಅಧಿಕಾರಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆಯೇ ? ಚಾಮರಾಜನಗರದಲ್ಲಿ ವೈದ್ಯಕೀಯ ಕಾಲೇಜಿದ್ದರೂ, ಮೈಸೂರಿಗೆ ಮೃತದೇಹ ಗಳನ್ನು ರವಾನಿಸಿದ್ದರ ಹಿಂದಿನ ಷಡ್ಯಂತ್ರವೇನು?

-ಆರ್.ಅಶೋಕ್, ಪ್ರತಿಪಕ್ಷ ನಾಯಕ
image

ಆತ್ಮರಕ್ಷಣೆಗೆ ಎನ್‌ಕೌಂಟರ್ ಮಾಡಲಾಗಿದೆ. ರೈತರು, ಅಮಾಯಕರಾಗಿದ್ದರೆ ಸರಕಾರದಿಂದ ಪರಿಹಾರ ಕೊಡೋಣ. ಒಂದು ವೇಳೆ ನಿಜವಾಗಿಯೂ ಬೇಟೆಗಾರರಾಗಿದ್ದರೆ ಏನು ಮಾಡಬೇಕು? ಈಗಾಗಲೇ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ. ನ್ಯಾಯಾಂಗ ತನಿಖೆಯ ಅಗತ್ಯ, ಪರಿಹಾರ ಸಂಬಂಧ ಸಿಎಂ ಜತೆ ಚರ್ಚಿಸುತ್ತೇನೆ.

-ರಾಮಲಿಂಗಾರೆಡ್ಡಿ, ಅರಣ್ಯ ಸಚಿವ