ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪುಸ್ತಕಕ್ಕೆ ಚಿಂತನೆ ಬದಲಿಸುವ ಶಕ್ತಿ ಇದೆ

ಹಸಿವಾದಾಗ ಊಟ ಮಾಡುವುದು, ದೇಹಕ್ಕೆ ಅಗತ್ಯವಾದ ವಿಶ್ರಾಂತಿ ಪಡೆಯುವುದು ಹಾಗೂ ಉತ್ತಮ ನಿದ್ರೆಗೆ ಆದ್ಯತೆ ನೀಡುವುದು ಸೇರಿದಂತೆ ದೇಹದ ಸಹಜ ಸಂಕೇತಗಳನ್ನು ಅರಿತು ಬದುಕುವ ಅಗತ್ಯವಿದೆ ಎಂದರು. ಗಣಿತದ ಗಮ್ಮತ್ತು ಕೃತಿ ಗಣಿತವನ್ನು ಕೇವಲ ಕಠಿಣ ವಿಷಯವಾಗಿ ನೋಡುವ ಬದಲು ಅದರಲ್ಲಿರುವ ಕುತೂಹಲ, ಪದಗಳ ಆಟ ಹಾಗೂ ಮನರಂಜನೆ ಅರಿಯುವಂತೆ ಮಾಡುವ ಕೃತಿ ಇದಾಗಿದೆ. ಗಣಿತ ಒಮ್ಮೆ ನಮ್ಮದಾದರೆ ಅದು ಸುಲಭವಾಗುತ್ತದೆ, ಇಲ್ಲದಿದ್ದರೆ ಕಷ್ಟವಾಗುತ್ತದೆ.

Profile
Ashok Nayak Aug 24, 2026 9:49 AM

ಅಕ್ಷರ ಆರಾಧನೆ-2026 ನಾಲ್ಕನೇ ಆವೃತ್ತಿ ಕಾರ್ಯಕ್ರಮದಲ್ಲಿ ಸಾಹಿತಿ ಜೋಗಿ

ಬೆಂಗಳೂರು: ಪುಸ್ತಕಗಳು ಕೇವಲ ಮಾಹಿತಿಯನ್ನು ನೀಡುವುದಷ್ಟೇ ಅಲ್ಲ, ಓದುಗರ ಚಿಂತನೆ, ಬದುಕಿನ ದೃಷ್ಟಿಕೋನ ಹಾಗೂ ಆಲೋಚನಾ ಕ್ರಮವನ್ನೇ ಬದಲಾಯಿಸುವ ಶಕ್ತಿ ಹೊಂದಿವೆ ಎಂದು ಕನ್ನಡಪ್ರಭ ಸಂಪಾದಕ, ಸಾಹಿತಿ ಜೋಗಿ ಅಭಿಪ್ರಾಯಪಟ್ಟರು.

ನಗರದ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ಭಾನುವಾರ ನಡೆದ ಅಕ್ಷರ ಆರಾಧನೆ-2026 ನಾಲ್ಕನೇ ಆವೃತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಓದುವಾಗ ಒಂದು ಪುಸ್ತಕದೊಳಗೆ ಪ್ರವೇಶಿಸಿ ದಂತೆ ಆಗುತ್ತದೆ. ಕೆಲವೊಮ್ಮೆ ಪುಸ್ತಕ ನಮ್ಮ ಚಿಂತನೆಯನ್ನೇ ಬದಲಿಸಿ, ನಮ್ಮದೇ ದಾರಿಯಲ್ಲಿ ಕರೆದೊಯ್ಯುತ್ತದೆ. ಇಂದಿನ ಬದುಕಿನಲ್ಲಿ ಕೈಗಡಿಯಾರಕ್ಕಿಂತ ಮೈಗಡಿಯಾರದ ಮಾತು ಕೇಳುವುದು ಮುಖ್ಯ ಎಂಬ ಸಂದೇಶ ಗಮನ ಸೆಳೆಯುತ್ತದೆ.

ಹಸಿವಾದಾಗ ಊಟ ಮಾಡುವುದು, ದೇಹಕ್ಕೆ ಅಗತ್ಯವಾದ ವಿಶ್ರಾಂತಿ ಪಡೆಯುವುದು ಹಾಗೂ ಉತ್ತಮ ನಿದ್ರೆಗೆ ಆದ್ಯತೆ ನೀಡುವುದು ಸೇರಿದಂತೆ ದೇಹದ ಸಹಜ ಸಂಕೇತಗಳನ್ನು ಅರಿತು ಬದುಕುವ ಅಗತ್ಯವಿದೆ ಎಂದರು. ಗಣಿತದ ಗಮ್ಮತ್ತು ಕೃತಿ ಗಣಿತವನ್ನು ಕೇವಲ ಕಠಿಣ ವಿಷಯವಾಗಿ ನೋಡುವ ಬದಲು ಅದರಲ್ಲಿರುವ ಕುತೂಹಲ, ಪದಗಳ ಆಟ ಹಾಗೂ ಮನರಂಜನೆ ಅರಿಯುವಂತೆ ಮಾಡುವ ಕೃತಿ ಇದಾಗಿದೆ. ಗಣಿತ ಒಮ್ಮೆ ನಮ್ಮದಾದರೆ ಅದು ಸುಲಭವಾಗುತ್ತದೆ, ಇಲ್ಲದಿದ್ದರೆ ಕಷ್ಟವಾಗುತ್ತದೆ. ಪುರಾಣ ಸಾಹಿತ್ಯದ ಕೃತಿಗಳಲ್ಲಿ ಅಪರೂಪದ ಪಾತ್ರಗಳ ಮೂಲಕ ಅವುಗಳ ಮನಸ್ಸು, ಘಟನೆಗಳಿಗೆ ಅವು ನೀಡಿದ ಪ್ರತಿಕ್ರಿಯೆ ಹಾಗೂ ಆ ಕಾಲದ ಚಿಂತನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ ವಾಗುತ್ತದೆ. ಇದೇ ಕಾರಣಕ್ಕೆ ಪೌರಾಣಿಕ ಕೃತಿಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಇದನ್ನೂ ಓದಿ: Bigg Boss Kannada 13: ʻಗೆಟ್‌ ಔಟ್‌ʼ ಎಂದ ವಿನಯ್‌ ಗೌಡ! ತಮ್ಮದೇ ಸ್ಟೈಲ್‌ನಲ್ಲಿ ತಿರುಗೇಟು ಕೊಟ್ಟ ಸ್ಪರ್ಧಿ ಶ್ರೇಯಸ್

ವಿಸ್ಮಯ ಸಂಗತಿಗಳು ರೀತಿಯ ಪುಸ್ತಕಗಳು ಆಸಕ್ತರಿಗೆ ಹೊಸ ಮಾಹಿತಿಯ ಜಗತ್ತನ್ನೇ ತೆರೆದಿಡುತ್ತವೆ. ಪುಸ್ತಕದಲ್ಲಿರುವ ಮಾಹಿತಿಯನ್ನು ಪತ್ರಕರ್ತರು ವಾಸ್ತವಾಂಶ ಪರಿಶೀಲ ನೆಯ ದೃಷ್ಟಿಯಿಂದ ನೋಡುವುದು ಅಗತ್ಯ. ಪುಸ್ತಕ ಓದು ವಾಗ ಕುತೂಹಲದ ಜತೆಗೆ ಪ್ರಶ್ನಿಸುವ ಮನೋಭಾವವೂ ಇರಬೇಕು. ಅಭಿಮನ್ಯುವಿನ ಪತ್ನಿ ಹಾಗೂ ಪರೀಕ್ಷಿತನ ತಾಯಿ ಉತ್ತರೆಯ ಬದುಕನ್ನು ಕೇಂದ್ರ ವಾಗಿಟ್ಟುಕೊಂಡ ಕೃತಿ ಉಲ್ಲೇ ಖಿಸಿ, ಮಹಾಯುದ್ಧದ ನಂತರದ ಏಕಾಂತ, ಮಗನನ್ನು ಬೆಳೆಸುವ ಜವಾಬ್ದಾರಿ. ಯುದ್ಧದ ಸಾವು-ನೋವಿನ ನೆನಪು ಗಳ ನಡುವೆ ಆಕೆ ಎದುರಿಸಿದ ಅಂತರಂಗದ ಸಂಘರ್ಷವನ್ನು ಕೃತಿ ಪರಿಣಾಮಕಾರಿಯಾಗಿ ಚಿತ್ರಿಸಿದೆ ಎಂದರು.

ಸಾಹಿತಿ ಡಾ.ನಾ.ಸೋಮೇಶ್ವರ ಮಾತನಾಡಿ , ಸಾವು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಸಾವನ್ನು ಧೈರ್ಯದಿಂದ ಸ್ವೀಕರಿಸುವ ಸಂಸ್ಕೃತಿ ನಮ್ಮದು. ಪ್ರೀತಿಪಾತ್ರರ ಮರಣ, ವಾಸಿಯಾಗದ ಕಾಯಿಲೆ ಇರುವುದು ತಿಳಿಯುವುದು ಹಾಗೂ ಇನ್ನು ಕೆಲವೇ ತಿಂಗಳು ಬದುಕಬಹುದು ಎಂಬ ಸ್ಥಿತಿ ಈ ಮೂರು ಸಂದರ್ಭಗಳಲ್ಲಿ ವ್ಯಕ್ತಿ ಸಾವನ್ನು ಎದುರಿಸುವುದು ಅತ್ಯಂತ ಕಷ್ಟವಾಗುತ್ತದೆ. ಮನೋ ವಿಜ್ಞಾನಿ ಎಲಿಜಬೆತ್ ಕುಬ್ಲರ್ ರಾಸ್ ಅವರು ಇಂತಹ ಸಂದರ್ಭದಲ್ಲಿ ವ್ಯಕ್ತಿಯ ಮನಸ್ಸಿನಲ್ಲಿ ಉಂಟಾಗುವ ಐದು ಹಂತಗಳನ್ನು ಗುರುತಿಸಿzರೆ. ನಿರಾಕರಣೆ, ಕೋಪ, ವಾಸ್ತವ ಬದಲಾಯಿ ಸಲು ಪ್ರಯತ್ನ, ಖಿನ್ನತೆ ಮತ್ತು ಅಂತಿಮವಾಗಿ ಪರಿಸ್ಥಿತಿಯನ್ನು ಒಪ್ಪಿಕೊಳ್ಳುವುದು ಈ ಐದು ಹಂತ ಗಳಾಗಿವೆ ಎಂದರು.

ಹದಿಹರೆಯದವರಲ್ಲಿ ಆರೋಗ್ಯ ಅರಿವು ಅಗತ್ಯ ಕರ್ನಾಟಕದಲ್ಲಿ ಹದಿಹರೆಯದ ಹೆಣ್ಣುಮಕ್ಕಳ ಗರ್ಭಧಾರಣೆ ಪ್ರಕರಣಗಳ ಹೆಚ್ಚಾಗಿವೆ. ಮಕ್ಕಳಲ್ಲಿ ಆರೋಗ್ಯ ಮತ್ತು ದೈಹಿಕ ಅರಿವು ಮೂಡಿಸುವ ಅಗತ್ಯವಿದೆ. ಪ್ರಾಥಮಿಕ ಅರಿವಿನ ಕೊರತೆಯಿಂದ ಮಕ್ಕಳು ಸಮಸ್ಯೆಗಳಿಗೆ ಸಿಲುಕುತ್ತಿzರೆ. ಹೀಗಾಗಿ ಮಕ್ಕಳು ಮತ್ತು ಪೋಷಕರನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯದ ಕುರಿತು ಸರಳವಾಗಿ ತಿಳಿಸುವ ಕೃತಿಗಳ ಅಗತ್ಯವಿದೆ ಎಂದು ಸಾಹಿತಿ ಡಾ. ನಾ. ಸೋಮೇಶ್ವರ ತಿಳಿಸಿದರು.

image

ಎರಡು ಪುರಾಣ, ಎರಡು ಗಣಿತ, ಎರಡು ಮನಸ್ಸು ಸೇರಿದಂತೆ ವೈವಿಧ್ಯಮಯ ವಿಚಾರಗಳನ್ನು ಒಳಗೊಂಡಿರುವ ಕೃತಿಗಳು ಈ ಬಾರಿಯ ಅಕ್ಷರ ಆರಾಧನೆಯಲ್ಲಿ ಗಮನ ಸೆಳೆಯುತ್ತಿವೆ. ಉಪದೇಶ ಕ್ಕಿಂತ ಅವಲೋಕನಕ್ಕೆ ಹೆಚ್ಚಿನ ಮಹತ್ವ ನೀಡಿರುವ ಇಂತಹ ಕೃತಿಗಳು ಓದುಗರನ್ನು ಹೊಸ ಚಿಂತನೆಗಳತ್ತ ಕರೆದೊಯ್ಯುತ್ತವೆ. ಪುಸ್ತಕಗಳು ಆರೋಗ್ಯ, ಪುರಾಣ, ಗಣಿತ, ಬದುಕು ಹಾಗೂ ಚಿಂತನೆಯ ಕುರಿತ ನಮ್ಮ ದೃಷ್ಟಿಕೋನ ಬದಲಿಸುವ ಸಾಮರ್ಥ್ಯ ಹೊಂದಿವೆ.

-ಜೋಗಿ, ಕನ್ನಡಪ್ರಭ ಸಂಪಾದಕ