ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bengaluru Murder Case: ವೆಸ್ಟರ್ನ್ ಸ್ಟೈಲ್‌ನಲ್ಲಿ ಪ್ರಪೋಸ್ ಮಾಡ್ತೀನಿ ಎಂದು ಯುವಕನ ಕೈ-ಕಾಲು ಕಟ್ಟಿ, ಬೆಂಕಿ ಹಚ್ಚಿ ಕೊಂದ ಪ್ರೇಯಸಿ!

ಬೆಂಗಳೂರಿನಲ್ಲಿ ನಡೆದ ಯುವಕನ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಆರಂಭದಲ್ಲಿ ಯುವಕ ತಾನಾಗಿಯೇ ಬೆಂಕಿ ಹಚ್ಚಿಕೊಂಡಿದ್ದ ಎಂದು ಪೊಲೀಸರಿಗೆ ಸುಳ್ಳು ಹೇಳಿದ್ದ ಯುವತಿಯ ಬಣ್ಣ ಸಿಸಿಟಿವಿ ದೃಶ್ಯಾವಳಿಗಳಿಂದ ಬಯಲಾಗಿದೆ. ಯುವಕನ ಕೈ-ಕಾಲು ಕಟ್ಟಿ, ಪೆಟ್ರೋಲ್‌ ಸುರಿದು ಪ್ರೇಯಸಿಯೇ ಬೆಂಕಿ ಹಚ್ಚಿದ್ದಾಳೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಯುವಕನ ಕೈ-ಕಾಲು ಕಟ್ಟಿ, ಬೆಂಕಿ ಹಚ್ಚಿ ಕೊಂದ ಪ್ರೇಯಸಿ!

ಮೃತ ಕಿರಣ್ ಮತ್ತು ಆರೋಪಿ ಯುವತಿ. -

Prabhakara R
Prabhakara R Apr 21, 2026 7:37 PM

ಬೆಂಗಳೂರು: ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಯುವಕನ ಆತ್ಮಹತ್ಯೆ ಪ್ರಕರಣಕ್ಕೆ (Bengaluru Murder Case) ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಮೊದಲಿಗೆ ಯುವತಿ ಮನೆಗೆ ತೆರಳಿ ಪ್ರಿಯಕರನೇ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿತ್ತು. ಆದರೆ, ಇದೀಗ ಸತ್ಯಾಂಶ ಹೊರಬಿದ್ದಿದ್ದು, ಆತನ ಪ್ರೇಯಸಿಯೇ ಪೆಟ್ರೋಲ್‌ ಸುರಿದು ಕೊಂದಿದ್ದಾಳೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಹೌದು, ವೆಸ್ಟರ್ನ್ ಸ್ಟೈಲ್‌ನಲ್ಲಿ ಪ್ರಪೋಸ್ ಮಾಡ್ತೀನಿ ಎಂದು ನಂಬಿಸಿದ ಯುವತಿ, ಪ್ರಿಯಕರನ ಕೈ-ಕಾಲು ಕಟ್ಟಿ, ಪೆಟ್ರೋಲ್ ಸುರಿದು ಹತ್ಯೆ ಮಾಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

ಮೃತ ಕಿರಣ್ ಮತ್ತು ಆರೋಪಿ ಯುವತಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಮಂಗಳವಾರ ಯುವತಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಿರಣ್ ಅಲ್ಲಿಗೆ ತೆರಳಿದ್ದ. ಈ ವೇಳೆ ಯುವತಿಯು ನಿನಗೆ ವೆಸ್ಟರ್ನ್ ಸ್ಟೈಲ್‌ನಲ್ಲಿ ಪ್ರಪೋಸ್ ಮಾಡ್ತೀನಿ ಎಂದು ನಂಬಿಸಿ ಕಿರಣ್‌ನ ಕಣ್ಣಿಗೆ ಬಟ್ಟೆ ಕಟ್ಟಿ, ಕೈ-ಕಾಲುಗಳನ್ನು ಹಗ್ಗದಿಂದ ಬಿಗಿದಿದ್ದಾಳೆ. ಈ ವೇಳೆ ಯಾಕೆ ಇಷ್ಟು ಟೈಟ್ ಆಗಿ ಕಟ್ತಿದ್ದೀಯಾ? ಕಿರಣ್ ಕೇಳಿದಾಗ, ಇದು ಫಾರಿನ್ ಸ್ಟೈಲ್, ಸುಮ್ಮನಿರು ಎಂದು ನಂಬಿಸಿದ್ದಾಳೆ. ಕಿರಣ್ ಅಸಹಾಯಕನಾಗುತ್ತಿದ್ದಂತೆ ಆತನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ ಎನ್ನಲಾಗಿದೆ. ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಳ್ಳಲಾಗದೆ ಕಿರಣ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಆರಂಭದಲ್ಲಿ ಕಿರಣ್ ತಾನಾಗಿಯೇ ಬೆಂಕಿ ಹಚ್ಚಿಕೊಂಡ ಎಂದು ಪೊಲೀಸರಿಗೆ ಸುಳ್ಳು ಹೇಳಿದ್ದ ಯುವತಿಯ ಬಣ್ಣ ಸಿಸಿಟಿವಿ ದೃಶ್ಯಾವಳಿಗಳಿಂದ ಬಯಲಾಗಿದೆ. ಕಿರಣ್ ಬರುವಾಗ ಯಾವುದೇ ಪೆಟ್ರೋಲ್ ತಂದಿರಲಿಲ್ಲ, ಹೀಗಾಗಿ ಯುವತಿಯೇ ಇದನ್ನು ಮೊದಲೇ ಸಂಚು ರೂಪಿಸಿ ತಂದಿಟ್ಟಿದ್ದಳು ಎಂಬ ಅನುಮಾನ ದಟ್ಟವಾಗಿದೆ.

Sirsi Doctor Murder Case: ಶಿರಸಿ ವೈದ್ಯನ ಕೊಲೆ ಪ್ರಕರಣದ ಆರೋಪಿ ಅರೆಸ್ಟ್: 15 ಲಕ್ಷ ರೂ.‌ ಮೌಲ್ಯದ ಚಿನ್ನಾಭರಣ, 50 ಸಾವಿರ ನಗದು ವಶಕ್ಕೆ

ಈ ಭೀಕರ ಕೃತ್ಯವನ್ನು ಯುವತಿ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾಳೆ ಎನ್ನಲಾಗಿದೆ. ಸದ್ಯ ಬ್ಯಾಡರಹಳ್ಳಿ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.