Airport Fashion Show 2025: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಡೆಲ್‌ಗಳ ಕ್ಯಾಟ್‌ವಾಕ್
Airport Fashion Show 2025: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಅವರ ನೇತೃತ್ವದಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಮಾಡೆಲ್‌ಗಳು ಹೆಜ್ಜೆ ಹಾಕಿದರು. ಈ ಕುರಿತಂತೆ ಇಲ್ಲಿದೆ ವರದಿ.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ, ಫ್ಯಾಷನ್ ರ‍್ಯಾಂಪ್‌ನಲ್ಲಿ ಹಾಗೂ ಸಾಕಷ್ಟು ಕಾರ್ಯಕ್ರಮಗಳಲ್ಲಿ ಮಾಡೆಲ್‌ಗಳು ಹೆಜ್ಜೆ ಹಾಕುವುದು ಗೊತ್ತು. ಆದರೆ ಇಂಟರ್ ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ ಮಾಡೆಲ್‌ಗಳು ಕ್ಯಾಟ್‌ವಾಕ್ ಮಾಡಿರುವ ವಿಚಾರ ನಿಮಗೆ ಗೊತ್ತೆ? ಹೌದು, ಇದು ಸತ್ಯ. ಸೆಕ್ಯೂರಿಟಿ ಕಾರಣದಿಂದಾಗಿ ಯಾವುದೇ ವಿಮಾನ ನಿಲ್ದಾಣದಲ್ಲಿ ಫ್ಯಾಷನ್ ಶೋಗಳು ನಡೆಯುವುದು ತೀರಾ ವಿರಳ. ಆದರೆ ನಮ್ಮ ಉದ್ಯಾನನಗರಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (Airport Fashion Show 2025) ಮಾತ್ರ, ಈ ರೀತಿ ಅಪರೂಪದ ಫ್ಯಾಷನ್ ಶೋವೊಂದು ಯಶಸ್ವಿಯಾಗಿ ನಡೆಯಿತು.
ಪ್ರಸಾದ್ ಬಿದ್ದಪ್ಪ ನೇತೃತ್ವದ ಫ್ಯಾಷನ್ ಶೋ
ಈ ಫ್ಯಾಷನ್ ಶೋ ನಡೆಯಲು ಕಾರಣಕರ್ತರು ಬೇರ್ಯಾರು ಅಲ್ಲ. ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ. ಎಂದಿನಂತೆ ಇವರ ನೇತೃತ್ವದಲ್ಲಿ ಈ ವಿಭಿನ್ನ ಫ್ಯಾಷನ್ ಶೋ ಏರ್‌ಪೋರ್ಟ್ ಕ್ಯಾಂಪಸ್‌ನಲ್ಲಿ ನಡೆಯಿತು. ಪ್ರೊಫೆಷನಲ್ ಮಾಡೆಲ್‌ಗಳು ತಮ್ಮದೇ ಆದ ಸ್ಟೈಲ್‌ನಲ್ಲಿ ಕ್ಯಾಟ್‌ವಾಕ್ ಮಾಡಿ ನೆರೆದಿದ್ದವರ ಮನರಂಜಿಸಿದರು.
ಟರ್ಮಿನಲ್ 1ರಲ್ಲಿ ಫ್ಯಾಷನ್ ಶೋ
ಬೆಂಗಳೂರು ಏರ್‌ಪೋರ್ಟ್ ಆಯೋಜಿಸಿದ್ದ ಈ ಫ್ಯಾಷನ್ ಶೋದಲ್ಲಿ ಟಾಪ್ ಇಂಟರ್‌ನ್ಯಾಷನಲ್ ಬ್ರ್ಯಾಂಡ್ ಸಹಭಾಗಿತ್ವದಲ್ಲಿ, ಏರ್‌ಪೋರ್ಟ್ ಲುಕ್‌ನಲ್ಲಿ ಕಾಣಿಸಿಕೊಂಡ ಮಾಡೆಲ್‌ಗಳು ಮನಮೋಹಕವಾಗಿ ಹೆಜ್ಜೆ ಹಾಕಿದರು.
ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಮಾತು
ಇದುವರೆಗೂ ಫ್ಯಾಷನ್ ಶೋಗಳು ಎಲ್ಲೆಡೆ ನಡೆಯುತ್ತಿದ್ದವು. ಇದೀಗ ಆವಾರ್ಡ್ ವಿನ್ನಿಂಗ್ ಏರ್‌ಪೋರ್ಟ್‌ನಲ್ಲಿ ನಡೆಯುತ್ತಿರುವುದು ವಿಭಿನ್ನ ಪ್ರಯೋಗಕ್ಕೆ ಸಾಕ್ಷಿಯಾಗಿದೆ. ಇಂದಿನ ಜೀವನಶೈಲಿಯಲ್ಲಿ ಏರ್‌ಪೋರ್ಟ್ ಲುಕ್ ಕೂಡ ಪ್ರಾಮುಖ್ಯತೆ ಪಡೆದುಕೊಂಡಿದೆ. ಹೇಗೆಲ್ಲಾ ಏರ್‌ಪೋರ್ಟ್ ಲುಕ್‌ನಲ್ಲಿ ಕಾಣಿಸಿಕೊಳ್ಳಬಹುದು ಎಂಬುದಕ್ಕೆ ಈ ಫ್ಯಾಷನ್ ಶೋ ಕೈಗನ್ನಡಿ ಹಿಡಿದಂತಿದೆ ಎಂದು ಪ್ರಸಾದ್ ಬಿದ್ದಪ್ಪ ವಿಶ್ವಾವಾಣಿ ನ್ಯೂಸ್‌ಗೆ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Makeup Kit Awareness 2025: ಸೌಂದರ್ಯವರ್ಧಕಗಳ ಬಾಳಿಕೆಗೆ ಈ 5 ಟಿಪ್ಸ್ ಫಾಲೋ ಮಾಡಿ
ರಾಕ್ ಕಾನ್ಸೆರ್ಟ್
ಈ ಫ್ಯಾಷನ್ ಶೋ ಜತೆಯಲ್ಲೆ 13 ಎಡಿ ಹೆಸರಿನ ರಾಕ್ ಕಾನ್ಸೆರ್ಟ್ ಕೂಡ ನಡೆಯಿತು. ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)