OTT Release This Week: ಸಿನಿ ಪ್ರಿಯರಿಗೆ ಹಬ್ಬ; ʻದಿ ಫ್ಯಾಮಿಲಿ ಮ್ಯಾನ್ 3ʼ ಜೊತೆ ಒಟಿಟಿಗೆ ಬಂದಿವೆ ಸಾಲು ಸಾಲು ಸಿನಿಮಾಗಳು, ಕನ್ನಡ ಚಿತ್ರವೂ ಇದೆ
OTT Movies: . ಪ್ರತಿ ವಾರ ಹೊಸ ಹೊಸ ಸರಣಿಗಳು ಬರುವುದರಿಂದ ವೀಕ್ಷಕರ ವಲಯದಲ್ಲಿ ಕುತೂಹಲ ಹೆಚ್ಚಿರುತ್ತದೆ. ಕೆಲವು ವಾರ ಸಪ್ಪೆ ಎನಿಸಿದರೆ ಇನ್ನೂ ಕೆಲವು ವಾರ ಸಾಕಷ್ಟು ಸಿನಿಮಾಗಳು ಒಟ್ಟಾಗಿ ಬರುತ್ತವೆ. ಈ ವಾರ ಒಟಿಟಿ ಪ್ರಿಯರಿಗೆ ಸುಗ್ಗಿ. ರಾಜಕೀಯ ಥ್ರಿಲ್ಲರ್‌ಗಳು, ಐತಿಹಾಸಿಕ ಕಥೆಗಳು ಮತ್ತು ಭಾವನಾತ್ಮಕ ಪ್ರೇಮಕಥೆಗಳ ಸಿನಿಮಾಗಳು ಇವೆ. ತಮಿಳು ಚಿತ್ರರಂಗದಲ್ಲಿ ಬಹಳ ಚರ್ಚೆ ಹುಟ್ಟಾಕ್ಕಿದ್ದ 'ಬೈಸನ್'ಹಾಗೂ 'ದಿ ಫ್ಯಾಮಿಲಿಮ್ಯಾನ್ ಸೀಸನ್- 3' ವೆಬ್ ಸೀರಿಸ್ ಕೂಡ ಈ ಲಿಸ್ಟ್‌ನಲ್ಲಿದೆ.
ಒಟಿಟಿ ಸಿನಿಮಾಗಳು -
ಈ ವಾರ ಪ್ರೈಮ್ ವಿಡಿಯೋ (Prime Video), ZEE5 ಮತ್ತು JioHotstar ನಲ್ಲಿ ಹೊಸ ಹೊಸ ಸಿನಿಮಾಗಳು (Cinema) ಎಂಟ್ರಿ ಕೊಟ್ಟಿವೆ. ರಾಜಕೀಯ ಥ್ರಿಲ್ಲರ್‌ಗಳು (Political Thriller), ಐತಿಹಾಸಿಕ ಕಥೆಗಳು ಮತ್ತು ಭಾವನಾತ್ಮಕ ಪ್ರೇಮಕಥೆಗಳ ಸಿನಿಮಾಗಳು ಇವೆ. ತಮಿಳು (Tamil Movie) ಚಿತ್ರರಂಗದಲ್ಲಿ ಬಹಳ ಚರ್ಚೆ ಹುಟ್ಟಾಕ್ಕಿದ್ದ 'ಬೈಸನ್'ಹಾಗೂ 'ದಿ ಫ್ಯಾಮಿಲಿಮ್ಯಾನ್ (The Family Man 3) ಸೀಸನ್- 3' ವೆಬ್ ಸೀರಿಸ್ ಕೂಡ ಈ ಲಿಸ್ಟ್‌ನಲ್ಲಿದೆ.
ಜಿದ್ದಿ ಇಷ್ಕ್
'ಜಿದ್ದಿ ಇಷ್ಕ್' ಪ್ರೇಮ ಕಥೆ ಸಿರೀಸ್. ಆದಿತಿ ಪೋಹಂಕರ್, ಬರ್ಖಾ ಬಿಶ್ತ್ ಮತ್ತು ಪರಂಬ್ರತ ಚಟ್ಟೋಪಾಧ್ಯಾಯ ನಟಿಸಿರುವ ಈ ಸಿರೀಸ್‌ವನ್ನು ರಾಜ್ ಚಕ್ರವರ್ತಿ ರಚಿಸಿ ನಿರ್ದೇಶಿಸಿದ್ದಾರೆ. ಜಿಯೋ ಹಾಟ್‌ಸ್ಟಾರ್ ನಲ್ಲಿ ನವೆಂಬರ್ 21 ರಿಂದ ಸ್ಟ್ರೀಮಿಂಗ್ ಆಗಲಿದೆ.
ಇದನ್ನೂ ಓದಿ: OTT Release: ಮೋಹನ್ ಲಾಲ್ ನಟನೆಯ ಎಂಪೂರನ್ OTTಗೆ ಬರೋದು ಯಾವಾಗ?
ದಿ ಬೆಂಗಾಲ್ ಫೈಲ್ಸ್
'ದಿ ಬೆಂಗಾಲ್ ಫೈಲ್ಸ್' ಗ್ರೇಟ್ ಕಲ್ಕತ್ತಾ ಹತ್ಯಾಕಾಂಡ ಎಂದೂ ಕರೆಯುತ್ತಾರೆ ಮತ್ತು ನೊಖಾಲಿ ಗಲಭೆಗಳು ಸಹ ಇದರಲ್ಲಿ ಸೇರಿವೆ. ಈ ಚಿತ್ರವು ಸ್ವಾತಂತ್ರ್ಯ ಪೂರ್ವ ಬಂಗಾಳದ ರಾಜಕೀಯ ಮತ್ತು ಕೋಮು ಕ್ರಾಂತಿಯ ಕುರಿತಾಗಿ ಇದೆ. ''ದಿ ಬೆಂಗಾಲ್ ಫೈಲ್ಸ್'' ಚಿತ್ರ ಇದೇ ನವೆಂಬರ್ 21ರಿಂದ ''ಜೀ 5''ನಲ್ಲಿ ಪ್ರಸಾರವಾಗಲಿದೆ.
''ದಿ ಬೆಂಗಾಲ್ ಫೈಲ್ಸ್''.. ಕಳೆದ ಸೆಪ್ಟೆಂಬರ್ 5ರಂದು ತೆರೆಗೆ ಬಂದಿದ್ದ ಚಿತ್ರ. ''ದಿ ಕಾಶ್ಮೀರ್ ಫೈಲ್ಸ್'' ಚಿತ್ರವನ್ನು ನಿರ್ದೇಶಿಸುವದರ ಮೂಲಕ ಬಾಕ್ಸಾಫೀಸ್‌ನಲ್ಲಿ ಕೋಟ್ಯಂತರ ಹಣ ದೋಚಿದ್ದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಚಿತ್ರ ಇದು.
ದಿ ಫ್ಯಾಮಿಲಿ ಮ್ಯಾನ್ 3
ಈ ವಾರ 3ನೇ ಸೀಸನ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ. ಮನೋಜ್ ಬಾಜ್ಪೆ, ಪ್ರಿಯಾಮಣಿ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಈ ಹಿಂದೆ ಸೀಸನ್‌ಗಳಲ್ಲಿ ಇದ್ದ ಕಲಾವಿದರ ಜೊತೆ ಹೊಸದಾಗಿ ಮತ್ತಷ್ಟು ಜನ ಸೇರಿಕೊಂಡಿದ್ದಾರೆ. ಎರಡನೇ ಸರಣಿಯ ಕೊನೆಯಲ್ಲಿ ಈ ವಿಚಾರ ಕುಟುಂಬದವರಿಗೆ ಗೊತ್ತಾಗುವ ಪರಿಸ್ಥಿತಿ ಬಂದಿರುತ್ತದೆ. ಈಗ ಮೂರನೇ ಸರಣಿಯಲ್ಲಿ ಶ್ರೀಕಾಂತ್ ತಿವಾರಿ ತನ್ನ ಕುಟುಂಬದವರಿಗೆ ತನ್ನ ಕೆಲಸ ಏನು ಎಂಬುದನ್ನು ಹೇಳುತ್ತಾನೆ. ಹೀಗಾಗಿ, ಅಸಲಿ ಆಟ ಈಗ ಶುರುವಾಗಲಿದೆ.
ಉಸಿರು ಕನ್ನಡ ಸಿನಿಮಾ
'ಉಸಿರು' ಕನ್ನಡ ಸಿನಿಮಾ ಈ ವಾರ ಒಟಿಟಿಗೆ ಬರ್ತಿದೆ. ತಿಲಕ್, ಪ್ರಿಯಾ ಹೆಗಡೆ, ಸಂತೋಷ ನಂದಿವಾಡ, ಅಪೂರ್ವ ನಾಗರಾಜ್, ರಾಘು ರಾಮನಕೊಪ್ಪ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು ಶುಕ್ರವಾರ ಸನ್ ನೆಕ್ಸ್ಟ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾ ನೋಡಬಹುದು.
ಕಳೆದ ಆಗಸ್ಟ್ 29 ರಂದು ಥಿಯೇಟರ್‌ಗೆ ಬಂದಿತ್ತು. ಚಿತ್ರವನ್ನ ಪಣೆಮ್ ಪ್ರಭಾಕರ್ ಡೈರೆಕ್ಷನ್ ಮಾಡಿದ್ದಾರೆ. ಚಿತ್ರದ ಕಥೆ ಮತ್ತು ಚಿತ್ರಕಥೆಯನ್ನು ಇವರೇ ಮಾಡಿಕೊಂಡಿದ್ದಾರೆ. ಆರ್. ಎಸ್.ಗಣೇಶ್ ನಾರಾಯಣ್ ಸಂಗೀತ ಕೊಟ್ಟಿದ್ದಾರೆ. ಮೋಹನ್ ರಾಮ್ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ.
ಬೈಸನ್
ಧ್ರುವ ವಿಕ್ರಮ್ ನಾಯಕನಾಗಿ ನಟಿಸಿರುವ ಇತ್ತೀಚೆಗೆ ಬಿಡುಗಡೆಯಾದ ತಮಿಳು ಕ್ರೀಡಾ ನಾಟಕ ಬೈಸನ್ ಕಾಲಮಾದನ್ ಈ ವಾರ ಒಟಿಟಿಯಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ. ನಿರ್ದೇಶಕ ಮಾರಿ ಸೆಲ್ವರಾಜ್ ಮತ್ತು ನಟ ಧ್ರುವ ವಿಕ್ರಮ್ ಅವರ ಸಿನಿಮಾ.
ತಮಿಳು ನಟ ಚಿಯಾನ್ ವಿಕ್ರಮ್ ಪುತ್ರ ಧ್ರುವ್ ಚಿತ್ರದ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಪಶುಪತಿ, ಅಮೀರ್, ಲಾಲ್ ಹಾಗೂ ಅನುಪಮಾ ಪರಮೇಶ್ವರನ್ ತಾರಾಗಣದಲ್ಲಿದ್ದಾರೆ.. ನವೆಂಬರ್ 21ರಂದು ನೆಟ್‌ಫ್ಲಿಕ್ಸ್‌ನಲ್ಲಿ ಈ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ ಸಿನಿಮಾ ಬಿಡುಗಡೆ ಆಗಲಿದೆ.
ಇದನ್ನೂ ಓದಿ: Ekka OTT: ದೊಡ್ಮನೆ ಅಭಿಮಾನಿಗಳಿಗೆ ಮನರಂಜನೆ ಫಿಕ್ಸ್; OTTಗೆ ಎಂಟ್ರಿ ಕೊಡ್ತಿದೆ ʻಎಕ್ಕʼ ಸಿನಿಮಾ, ಸ್ಟ್ರೀಮಿಂಗ್ ಎಲ್ಲಿ?
ಕನ್ನಡಕ್ಕೂ ಡಬ್ ಆಗಿ ಬರ್ತಿದೆ.ಅಮೀರ್, ಅನುಪಮಾ ಪರಮೇಶ್ವರನ್, ರಜಿಶಾ ವಿಜಯನ್ ಮತ್ತು ಇತರರು ಸಹ ಚಿತ್ರದ ಭಾಗವಾಗಿದ್ದಾರೆ ಮತ್ತು ಬೈಸನ್ ನಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸಂಗೀತವನ್ನು ನಿವಾಸ್ ಕೆ ಪ್ರಸನ್ನ ಸಂಯೋಜಿಸಿದ್ದಾರೆ.