ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯಲ್ಲಿ 5 ಲಕ್ಷ ಗಡಿ ದಾಟಿ ಮೈಲುಗಲ್ಲು ಸಾಧನೆ ಮಾಡಿದ ಏಥರ್ ಎನರ್ಜಿ
5,00,೦೦೦ ಎಲೆಕ್ಟ್ರಿಕ್ ಸ್ಕೂಟರ್ ಗಳ ಉತ್ಪಾದನಾ ಗಡಿಯನ್ನು ದಾಟಿರುವುದು ಏಥರ್ ಗೆ ಬಹು ದೊಡ್ಡ ಮೈಲುಗಲ್ಲಾಗಿದೆ. ಮೊದಲ ಪ್ರೋಟೋಟೈಪ್ ರೂಪಿಸಿದಾಗಿನಿಂದ ಹಿಡಿದು ಇಲ್ಲಿಯವರೆಗೆ ಸಾಗಿ ಬಂದ ನಮ್ಮ ಈ ಪಯಣದಲ್ಲಿ ನಾವು ಕೇವಲ ವಾಹನಗಳನ್ನು ನಿರ್ಮಿಸುವುದರ ಬಗ್ಗೆ ಮಾತ್ರವೇ ಗಮನ ಹರಿಸಿಲ್ಲ, ಬದಲಿಗೆ ವಿಸ್ತರಣೆ ಮಾಡಬಹುದಾದ, ವಿಶ್ವಾಸಾರ್ಹ ಮತ್ತು ಸ್ಥಿರವಾದ ಉತ್ಪಾದನಾ ವ್ಯವಸ್ಥೆಯನ್ನು ಕಟ್ಟುವುದರ ಕಡೆಗೆ ಹೆಚ್ಚಿನ ಗಮನ ಹರಿಸಿದ್ದೇವೆ.

-

ಬೆಂಗಳೂರು: ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿ ಚಕ್ರ ವಾಹನ ತಯಾರಕರಾದ ಏಥರ್ ಎನರ್ಜಿ ಲಿಮಿಟೆಡ್ ಕಂಪನಿಯು ಇಂದು ತಮ್ಮ ತಮಿಳುನಾಡಿನ ಹೊಸೂರು ಮ್ಯಾನುಫ್ಯಾಕ್ಚರಿಂಗ್ ಪ್ಲಾಂಟ್ ನಲ್ಲಿ 5 ಲಕ್ಷ ನೇ ಎಲೆಕ್ಟ್ರಿಕ್ ವಾಹನ ಡೆಲಿವರಿ ಮಾಡುವ ಮೂಲಕ 5 ಲಕ್ಷ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮಾಡಿದ ಮಹತ್ವದ ಮೈಲಿಗಲ್ಲು ಸಾಧನೆ ಮಾಡಿದೆ. ಏಥರ್ ನ ಪ್ರಮುಖ ಫ್ಯಾಮಿಲಿ ಸ್ಕೂಟರ್ ಆಗಿರುವ ರಿಜ್ತಾ ಡೆಲಿವರಿ ಮಾಡುವ ಮೂಲಕ ಈ ಸಾಧೆ ಘೋಷಿಸಲಾಗಿದೆ. ಏಥರ್ ರಿಜ್ತಾ ಕಳೆದ ವರ್ಷ ಬಿಡುಗಡೆಯಾದಾಗಿನಿಂದಲೂ ಏಥರ್ ನ ಅದ್ಭುತ ಬೆಳವಣಿಗೆಯ ಪ್ರಯಾಣದ ಪ್ರಮುಖ ಚಾಲಕ ಶಕ್ತಿಯಾಗಿದೆ.
ಈ ಸಾಧನೆ ಕುರಿತು ಮಾತನಾಡಿದ ಏಥರ್ ಎನರ್ಜಿಯ ಸಹ- ಸ್ಥಾಪಕ ಮತ್ತು ಸಿಟಿಓ ಸ್ವಪ್ನಿಲ್ ಜೈನ್ ಅವರು, “5,00,೦೦೦ ಎಲೆಕ್ಟ್ರಿಕ್ ಸ್ಕೂಟರ್ ಗಳ ಉತ್ಪಾದನಾ ಗಡಿಯನ್ನು ದಾಟಿರುವುದು ಏಥರ್ ಗೆ ಬಹು ದೊಡ್ಡ ಮೈಲುಗಲ್ಲಾಗಿದೆ. ಮೊದಲ ಪ್ರೋಟೋಟೈಪ್ ರೂಪಿಸಿದಾಗಿನಿಂದ ಹಿಡಿದು ಇಲ್ಲಿಯವರೆಗೆ ಸಾಗಿ ಬಂದ ನಮ್ಮ ಈ ಪಯಣದಲ್ಲಿ ನಾವು ಕೇವಲ ವಾಹನಗಳನ್ನು ನಿರ್ಮಿಸುವು ದರ ಬಗ್ಗೆ ಮಾತ್ರವೇ ಗಮನ ಹರಿಸಿಲ್ಲ, ಬದಲಿಗೆ ವಿಸ್ತರಣೆ ಮಾಡಬಹುದಾದ, ವಿಶ್ವಾಸಾರ್ಹ ಮತ್ತು ಸ್ಥಿರವಾದ ಉತ್ಪಾದನಾ ವ್ಯವಸ್ಥೆಯನ್ನು ಕಟ್ಟುವುದರ ಕಡೆಗೆ ಹೆಚ್ಚಿನ ಗಮನ ಹರಿಸಿದ್ದೇವೆ.
ಇದನ್ನೂ ಓದಿ: Bangalore News: ಮಾನಸಿಕ ಆರೋಗ್ಯ ಅಭಿಯಾನಗಳಿಗಾಗಿ ಎಚ್ಎಲ್ಎಲ್ ನಿಂದ ನಿಮ್ಹಾನ್ಸ್ ಜತೆ ಒಪ್ಪಂದ
ಈ ಸಾಧನೆಯು ಹಲವು ವರ್ಷಗಳ ಕಾಲದ ಅತ್ಯುತ್ಕೃಷ್ಟ ಎಂಜಿನಿಯರಿಂಗ್, ಕಠಿಣ ಪರೀಕ್ಷೆಗಳು ಮತ್ತು ಉತ್ಪಾದನೆಯ ಪ್ರತಿ ಹಂತದಲ್ಲಿ ಗುಣಮಟ್ಟ ಪಾಲಿಸುವ ಕಡೆಗೆ ನಾವು ಕೊಟ್ಟಿರುವ ಗಮನವನ್ನು ತೋರಿಸುತ್ತದೆ. ಜೊತೆಗೆ ಈ ಸಾಧನೆಯು ಕಂಪನಿಯ ವಿವಿಧ ತಂಡಗಳ ಶ್ರದ್ಧೆಯನ್ನೂ ಮತ್ತು ಈ ಪಯಣದಲ್ಲಿ ನಮ್ಮೊಂದಿಗೆ ಇದ್ದ ನಮ್ಮ ಗ್ರಾಹಕರು ನಮ್ಮ ಮೇಲೆ ಇರಿಸಿರುವ ನಂಬಿಕೆ ಮತ್ತು ಅವರು ನೀಡಿರುವ ಬೆಂಬಲವನ್ನೂ ತೋರಿಸುತ್ತದೆ” ಎಂದು ಹೇಳಿದರು.
ಕಳೆದ ಹಲವು ವರ್ಷಗಳಲ್ಲಿ ಏಥರ್ ಸಂಸ್ಥೆಯು ಅತ್ಯುತ್ತಮ ಕಾರ್ಯಕ್ಷಮತೆ ತೋರಿಸುತ್ತಾ ಬಂದಿದೆ ಮತ್ತು ಫ್ಯಾಮಿಲಿ ಸ್ಕೂಟರ್ ಗಳ ಒಂದು ಬಲಿಷ್ಠ ಪೋರ್ಟ್ ಫೋಲಿಯೋವನ್ನು ಕಟ್ಟಿಕೊಂಡಿದೆ. ಬಿಡುಗಡೆಯಾದ ಒಂದು ವರ್ಷದೊಳಗೆಯೇ ಏಥರ್ ರಿಜ್ತಾ ಸ್ಕೂಟರ್ ಏಥರ್ ನ ಅಭಿವೃದ್ಧಿ ಪಯಣದಲ್ಲಿನ ಪ್ರಮುಖ ಸ್ಕೂಟರ್ ಆಗಿ ಹೊರಹೊಮ್ಮಿದೆ. ಈ ಸ್ಕೂಟರ್ ಸಂಸ್ಥೆಯ ಒಟ್ಟು ಉತ್ಪಾದನಾ ಪರಿಮಾಣದ ಮೂರನೇ ಒಂದರಷ್ಟು ಭಾಗವನ್ನು ತನ್ನದಾಗಿಸಿಕೊಂಡಿದೆ ಮತ್ತು ಕಂಪನಿಯ ಅಭಿವೃದ್ಧಿಯನ್ನು ವೇಗಗೊಳಿಸುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಏಥರ್ ಮಧ್ಯ ಭಾರತ ಮತ್ತು ಉತ್ತರ ಭಾರತದಲ್ಲಿ ಬಹಳಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಅದರಲ್ಲೂ ವಿಶೇಷವಾಗಿ ಮೆಟ್ರೋ ಮಾರುಕಟ್ಟೆಗಳ ಜೊತೆಗೆ ಎರಡನೇ ಮತ್ತು ಮೂರನೇ ಶ್ರೇಣಿಯ ನಗರಗಳಲ್ಲಿ ಹೆಚ್ಚು ಗಮನ ಹರಿಸಿದೆ.
ಏಥರ್ ಪ್ರಸ್ತುತ ತಮಿಳುನಾಡಿನ ಹೊಸೂರಿನಲ್ಲಿ ಎರಡು ಉತ್ಪಾದನಾ ಘಟಕಗಳನ್ನು ಹೊಂದಿದೆ. ಅದರಲ್ಲಿ ವೆಹಿಕಲ್ ಅಸೆಂಬ್ಲಿಗೆ ಬಳಸಿದರೆ ಮತ್ತೊಂದು ಬ್ಯಾಟರಿ ಉತ್ಪಾದನೆಗಾಗಿ ಬಳಕೆ ಯಾಗುತ್ತಿದೆ. ಹೊಸೂರು ಘಟಕವು ವರ್ಷಕ್ಕೆ 4,2೦,೦೦೦ ಸ್ಕೂಟರ್ ಗಳಷ್ಟು ಉತ್ಪಾದಿಸುವ ಉತ್ಪಾ ದನಾ ಸಾಮರ್ಥ್ಯವನ್ನು ಹೊಂದಿದೆ. ಬೆಳೆಯುತ್ತಿರುವ ಬೇಡಿಕೆಯನ್ನು ಪೂರೈಸಲು ಏಥರ್ ತನ್ನ ಮೂರನೇ ತಯಾರಕ ಘಟಕವಾದ ಫ್ಯಾಕ್ಟರಿ 3.0 ಅನ್ನು ಮಹಾರಾಷ್ಟ್ರದ ಛತ್ರಪತಿ ಸಂಭಾಜೀನಗರ್ ನ ಔರಿಕ್ ಬಿಡ್ಕಿನ್ ನಲ್ಲಿ ಸ್ಥಾಪಿಸುತ್ತಿದೆ. ಈ ಘಟಕವು ಎರಡು ಹಂತಗಳಲ್ಲಿ ನಿರ್ಮಾಣವಾಗಲಿದೆ ಮತ್ತು ಇಂಡಸ್ಟ್ರಿ 4.0 ತತ್ವಗಳ ಮೇಲೆ ನಿರ್ಮಾಣಗೊಳ್ಳುತ್ತದೆ.
ಈ ಘಟಕದಲ್ಲಿ ಉತ್ಪಾದನಾ ಪ್ರಕ್ರಿಯೆಗಳಿಗೆ ಆಧುನಿಕ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಲಾಗು ತ್ತದೆ. ಎರಡು ಹಂತಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಆರಂಭಿಸಿದರೆ ಫ್ಯಾಕ್ಟರಿ 3.0 ಏಥರ್ ನ ಎಲ್ಲಾ ಘಟಕಗಳಲ್ಲಿ ದೊಡ್ಡ ಘಟಕವಾಗಲಿದ್ದು, ವರ್ಷಕ್ಕೆ 1.42 ಮಿಲಿಯನ್ ಎಲೆಕ್ಟ್ರಿಕ್ ದ್ವಿ ಚಕ್ರ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಲಿದೆ.