Bengaluru assault case: ಬೆಂಗಳೂರಲ್ಲಿ ಕನ್ನಡಿಗರ ಮೇಲೆ ತಮಿಳು ಗೂಂಡಾಗಳಿಂದ ಹಲ್ಲೆ; ಟಿಟಿ ವಾಹನ ಅಡ್ಡಗಟ್ಟಿ ಕಿರಿಕ್!
ಬೆಂಗಳೂರಿನ ವೈಟ್‌ಫೀಲ್ಡ್‌ನಿಂದ ತಮಿಳುನಾಡಿನ ಕೃಷ್ಣಗಿರಿಗೆ ಚಾಲಕ ಬಾಡಿಗೆಗೆ ಹೋಗಿದ್ದ. ಈ ವೇಳೆ ವಾಹನದಲ್ಲಿ ಇದ್ದ ಕನ್ನಡಿಗರು ಮತ್ತು ಕೃಷ್ಣಗಿರಿಯ ಸ್ಥಳೀಯರ ನಡುವೆ ಕಿರಿಕ್ ಆಗಿದೆ. ಈ ವೇಳೆ ತಕ್ಷಣ ಅಲ್ಲಿಂದ ತಪ್ಪಿಸಿಕೊಂಡು ಟಿಟಿ ವಾಹನದಲ್ಲಿ ಕನ್ನಡಿಗರು ಅತ್ತಿಬೆಲೆ ಕಡೆಗೆ ಬಂದಿದ್ದಾರೆ. ಆದರೆ, ತಮಿಳು ಗೂಂಡಾಗಳು ಟಿಟಿ ವಾಹನ ಬೆನ್ನಟ್ಟಿ ಬಂದು, ಅತ್ತಿಬೆಲೆ ಟೋಲ್ ಬಳಿ ಕನ್ನಡಿಗರ ಮೇಲೆ ಹಲ್ಲೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಕನ್ನಡಿಗರು ತೆರಳುತ್ತಿದ್ದ ಟಿಟಿ ಅಡ್ಡಗಟ್ಟಿದ ತಮಿಳು ಗೂಂಡಾಗಳು. -
ಬೆಂಗಳೂರು: ಕನ್ನಡಿಗರನ್ನು ಹಿಂಬಾಲಿಸಿಕೊಂಡು ಬಂದು ತಮಿಳು ಗೂಂಡಾಗಳು ದೊಣ್ಣೆ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಟೋಲ್ ಬಳಿ ನಡೆದಿದೆ. ಮಹಿಳೆಯರು, ಮಕ್ಕಳ ಎದುರೇ ತಮಿಳುನಾಡಿನ ಗೂಂಡಾಗಳು ಅಟ್ಟಹಾಸ ಮೆರೆದಿದ್ದಾರೆ.
ಟಿಟಿ ವಾಹನದ ಚಾಲಕ ರಾಮಕೃಷ್ಣ ಮೇಲೆ ತಮಿಳು ಗೂಂಡಾಗಳು ಹಲ್ಲೆ ಮಾಡಿದ್ದಾರೆ. ತಮಿಳು ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ.
ವೈಟ್‌ಫೀಲ್ಡ್‌ನಿಂದ ತಮಿಳುನಾಡಿನ ಕೃಷ್ಣಗಿರಿಗೆ ಚಾಲಕ ಬಾಡಿಗೆಗೆ ಹೋಗಿದ್ದ. ಈ ವೇಳೆ ವಾಹನದಲ್ಲಿ ಇದ್ದ ಕನ್ನಡಿಗರು ಮತ್ತು ಕೃಷ್ಣಗಿರಿಯ ಸ್ಥಳೀಯರ ನಡುವೆ ಕಿರಿಕ್ ಆಗಿದೆ. ಈ ವೇಳೆ ತಕ್ಷಣ ಅಲ್ಲಿಂದ ತಪ್ಪಿಸಿಕೊಂಡು ಟಿಟಿ ವಾಹನದಲ್ಲಿ ಕನ್ನಡಿಗರು ಅತ್ತಿಬೆಲೆ ಕಡೆಗೆ ಬಂದಿದ್ದಾರೆ.
ಈ ವೇಳೆ ದೊಣ್ಣೆ ಮಾರಕಾಸ್ತ್ರಗಳಿಂದ ಹಿಡಿದು ತಮಿಳು ಗೂಂಡಾಗಳು ವಾಹನ ಹಿಂಬಾಲಿಸಿಕೊಂಡು ಬಂದಿದ್ದಾರೆ. ಅತ್ತಿಬೆಲೆ ಟೋಲ್‌ನಲ್ಲಿ ಟಿಟಿ ವಾಹನ ಅಡ್ಡಗಟ್ಟಿ ಕನ್ನಡಿಗರ ಮೇಲೆ ತಮಿಳು ಗೂಂಡಾಗಳು ಹಲ್ಲೆ ಮಾಡಿದ್ದಾರೆ. ರಾಷ್ಟ್ರೀಯ ಹೆದಾರಿಯಲ್ಲಿಯೇ ಟಿಟಿ ವಾಹನದ ಗಾಜು ಒಡೆದು ಪುಡಿ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಚಾಲಕ ರಾಮಕೃಷ್ಣಗೆ ಗಂಭೀರ ಗಾಯಗಳಾಗಿವೆ.
Belagavi news: ಪತ್ನಿಯ ಆತ್ಮಹತ್ಯೆ ಸುದ್ದಿ ತಿಳಿದು ಧಾವಿಸಿ ಬರುವಾಗ ಆಕ್ಸಿಡೆಂಟ್, ಪತಿಯೂ ಸಾವು!
ಮದ್ದೂರಿನಲ್ಲಿ ರೌಡಿಶೀಟರ್ ಬರ್ಬರ ಹತ್ಯೆ
ಮಂಡ್ಯ: ರೌಡಿಶೀಟರ್ನನ್ನು ಬರ್ಬರವಾಗಿ ಹತ್ಯೆ (murder case) ಮಾಡಿರುವುದು ಮದ್ದೂರಿನ ಹೊಳೆ ಆಂಜನೇಯ ಸ್ವಾಮಿ ದೇಗುಲದ ಬಳಿಯ ಪಟೇಲ್ ಸಾಮಿಲ್ ಹತ್ತಿರ ನಡೆದಿದೆ. ಘಟನೆ ವೇಳೆ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿ ಆಗಿದೆ. ಸ್ಥಳಕ್ಕೆ ಮಂಡ್ಯ ಎಸ್ಪಿ ಶೋಭಾರಾಣಿ (Mandya SP Sobharani) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ತಡರಾತ್ರಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಸಿಗರೇಟ್ ವಿಚಾರವಾಗಿ ಎದ್ದ ತಗಾದೆ ಎರಡು ಗುಂಪುಗಳ ನಡುವೆ ಬಡಿದಾಟಕ್ಕೆ ತಿರುಗಿದ್ದು, ಇದರಲ್ಲಿ ರೌಡಿ ಶೀಟರ್, ಮರಳಿಗ ಗ್ರಾಮದ ಯಶ್ವಂತ್ @ಕಜ್ಜಿ ಅಭಿ ಎಂಬಾತನನ್ನು ಕೊಲೆ ಮಾಡಲಾಗಿದೆ. ಹೊಡೆದಾಟದಲ್ಲಿ ಮತ್ತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆಯಾದ ಯಶ್ವಂತ್ ಮೂಲತಃ ಮದ್ದೂರಿನ ನಿವಾಸಿ.
Murder Case: ಸ್ನೂಕರ್ ಸ್ಟಿಕ್‌ನಲ್ಲಿ ಹೊಡೆದು ಹೆಡ್‌ಕುಕ್ ಹತ್ಯೆ, ಹೆಣ ಸಾಗಿಸುವಾಗ ಸಿಕ್ಕಿಬಿದ್ದ ಹೋಟೆಲ್ ಮಾಲಿಕ
ಯಶ್ವಂತ್ ಜೊತೆಗೆ ಸಚಿನ್, ದರ್ಶನ್ ಎಂಬುವವರ ಮೇಲೂ ಹಲ್ಲೆ ನಡೆದಿದೆ. ಗಾಯಗೊಂಡಿರುವ ಸಚಿನ್ ಮತ್ತು ದರ್ಶನ್ ಇಬ್ಬರಿಗೆ ಮಂಡ್ಯ ಮಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬಳಿಕ ಸ್ಥಳಕ್ಕೆ ಮಂಡ್ಯ ಎಸ್ಪಿ ಶೋಭಾರಾಣಿ ಭೇಟಿ, ಪರಿಶೀಲನೆ ನಡೆದಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.