Bowring Hospital tragedy: ಬೌರಿಂಗ್ ಆಸ್ಪತ್ರೆ ದುರಂತ; ರಾಜ್ಯ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದ ಬೆಂಗಳೂರು ಡಿಸಿ
ಏಪ್ರಿಲ್ 29ರಂದು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಇಬ್ಬರು ಮಕ್ಕಳು ಸೇರಿ 7 ಮಂದಿ ಮೃತಪಟ್ಟಿದ್ದರು. ಘಟನೆ ಬಳಿಕ ತನಿಖೆಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದರು. ಇದೀಗ ಬೆಂಗಳೂರು ನಗರ ಡಿಸಿ ಜಗದೀಶ ಅವರು ರಾಜ್ಯ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ.
-
ಬೆಂಗಳೂರು: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಏಳು ಜನರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರು ರಾಜ್ಯ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆ ಮಾಡಿದ್ದಾರೆ. ಏಳು ಜನರ ಸಾವಿಗೆ ಆರೋಗ್ಯ ಇಲಾಖೆ ಎಂಜಿನಿಯರ್ ಮತ್ತು ಗುತ್ತಿಗೆದಾರರ ಬೇಜವಾಬ್ದಾರಿ ಹಾಗೂ ಆಸ್ಪತ್ರೆ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ವರದಿಯಲ್ಲಿ ತಿಳಿಸಲಾಗಿದೆ.
ವರದಿಯಲ್ಲಿ ಏನಿದೆ?
- ಗೋಡೆ ಪಕ್ಕದಲ್ಲಿ ಮಣ್ಣು ಸುರಿದಿರುವುದು ದುರಂತಕ್ಕೆ ಮೂಲ ಕಾರಣ
- ಗೋಡೆ ಪಕ್ಕದ ಮಣ್ಣನ್ನು ಸೂಕ್ತ ಸಮಯಕ್ಕೆ ಗುತ್ತಿಗೆದಾರ ಮತ್ತು ಆರೋಗ್ಯ ಇಲಾಖೆ ಎಂಜಿನಿಯರ್ ತೆರವು ಮಾಡಿಲ್ಲ
- ಆರೋಗ್ಯ ಇಲಾಖೆ ಎಂಜಿನಿಯರ್ ಮತ್ತು ಗುತ್ತಿಗೆದಾರ ಕಾರಣ
- 8 ಅಡಿ ಗೋಡೆ ಇದ್ದರೆ 6 ಅಡಿ ಮಣ್ಣು ಸುರಿದಿದ್ದಾರೆ
- ಗೋಡೆ ಪಕ್ಕದಲ್ಲಿ ಕ್ರಿಕೆಟ್ ಆಡುವುದಕ್ಕೆ ನೆಟ್ ಸೃಷ್ಟಿ ಮಾಡಲಾಗಿದೆ, ಇದರಲ್ಲಿ ಆಸ್ಫತ್ರೆ ನಿರ್ಲಕ್ಷ್ಯವಿದೆ
- ಸಿಎಸ್‌ಆರ್ ಫಂಡ್ ಕೊಟ್ಟಿದ್ದಾರೆ, ದಾನಿಯೊಬ್ಬರಿಗೆ ಗೋಡೆ ಪಕ್ಕದಲ್ಲಿ ಸ್ಟೇಡಿಯಂ ರೀತಿ ಆಸ್ಪತ್ರೆ ಆಡಳಿತ ಮಂಡಳಿ ಸೃಷ್ಟಿ ಮಾಡಿದೆ
ಈ ಕುರಿತು ಬೆಂಗಳೂರು ಡಿಸಿ ಜಗದೀಶ್ ಮಾತನಾಡಿ, ಸರ್ಕಾರ ತನಿಖೆಗೆ ಸೂಚಿಸಿತ್ತು, ಕೂಲಂಕಷವಾಗಿ ತನಿಖೆ ಮಾಡಿ, ವರದಿ ಸಲ್ಲಿಕೆ ಮಾಡಿದ್ದೇವೆ. ಮುಚ್ಚಿದ ಲಕೋಟೆಯಲ್ಲಿ ನೀಡಿದ್ದೇನೆ. ಸರ್ಕಾರ ಏನು ಕ್ರಮ ವಹಿಸುತ್ತದೋ ಕಾದು ನೋಡಬೇಕು ಎಂದು ತಿಳಿಸಿದ್ದಾರೆ.
ದಲಿತರ ಮೇಲೆ ದೌರ್ಜನ್ಯದಲ್ಲಿ ರಾಜ್ಯ 8ನೇ ಸ್ಥಾನ: NCRB ವರದಿ ಉಲ್ಲೇಖಿಸಿ ಸರ್ಕಾರದ ವಿರುದ್ಧ ನಿಖಿಲ್ ವಾಗ್ದಾಳಿ
ಏಪ್ರಿಲ್ 29ರಂದು ಸಂಜೆ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಇಬ್ಬರು ಮಕ್ಕಳು ಸೇರಿ 7 ಮಂದಿ ಮೃತಪಟ್ಟಿದ್ದರು. ಈ ಹಿನ್ನೆಲೆ ದುರಂತದ (Bowring Hospital Tragedy) ಬಗ್ಗೆ ತನಿಖೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಒಂದು ವೇಳೆ ಅಧಿಕಾರಿಗಳ ನಿರ್ಲಕ್ಷ್ಯವಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಇದೀಗ ಸರ್ಕಾರಕ್ಕೆ ತನಿಖಾ ವರದಿಯನ್ನು ಜಿಲ್ಲಾಧಿಕಾರಿಗಳು ಸಲ್ಲಿಸಿದ್ದಾರೆ.