Physical Abuse: ಬೆಂಗಳೂರಿನಲ್ಲಿ ಮನೆಗೆ ನುಗ್ಗಿ ಮಹಿಳೆ ಮೇಲೆ ಮೂವರಿಂದ ಅತ್ಯಾಚಾರ
Harassment: ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿಗಳು ಅಪರಾಧ ಎಸಗುವ ಮುನ್ನ ಮದ್ಯಪಾನ ಮಾಡಿದ್ದರು ಎನ್ನಲಾಗಿದೆ. ಪಶ್ಚಿಮ ಬಂಗಾಳ ಮೂಲದ ಮಹಿಳೆ ಇಲ್ಲಿ ಬಾಡಿಗೆ ಮನೆಯಲ್ಲಿದ್ದರು.

-

ಬೆಂಗಳೂರು: ಬೆಂಗಳೂರು (Bengaluru Crime News) ಉತ್ತರ ತಾಲೂಕಿನ ಗಂಗೊಂಡನಹಳ್ಳಿಯಲ್ಲಿ ಪಶ್ಚಿಮ ಬಂಗಾಳ ಮೂಲದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ (Physical Abuse) ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಿನ್ನೆ ರಾತ್ರಿ ಮೂವರು ಪುಂಡರು ಆಕೆಯ ಮನೆಗೆ ನುಗ್ಗಿ ಮಹಿಳೆ ಮೇಲೆ ಅತ್ಯಾಚಾರ (Harassment) ಎಸಗಿದ್ದಾರೆ. ಮಹಿಳೆ ವಾಸವಿದ್ದ ಬಾಡಿಗೆ ಮನೆಯಲ್ಲೇ ಆಕೆಯ ಮೇಲೆ ಅತ್ಯಾಚಾರ ನಡೆದಿದೆ. ಸಂತ್ರಸ್ತೆ ನೀಡಿರುವ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿಗಳು ಅಪರಾಧ ಎಸಗುವ ಮುನ್ನ ಮದ್ಯಪಾನ ಮಾಡಿದ್ದರು ಎನ್ನಲಾಗಿದೆ. ಯುವಕರು ಪ್ರಕರಣದ ನಂತರ ನಾಪತ್ತೆಯಾಗಿದ್ದಾರೆ. ಅವರನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ. ಮಹಿಳೆಗೂ ಹಾಗೂ ಈ ಯುವಕರಿಗೂ ಮೊದಲೇ ಪರಿಚಯವಿತ್ತೇ ಎನ್ನುವುದಿನ್ನೂ ದೃಢಪಟ್ಟಿಲ್ಲ.ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಂಡತಿ ಕಿರುಕುಳ ತಾಳಲಾರದೆ ಗಂಡ ಆತ್ಮಹತ್ಯೆ
ರಾಮನಗರ: ಹೆಂಡತಿ ಕಿರುಕುಳ ತಾಳಲಾರದೆ ಸೆಲ್ಫಿ ವಿಡಿಯೊ ಮಾಡಿ ಗಂಡ ಆತ್ಮಹತ್ಯೆ ಮಾಡಿಕೊಂಡಿರುವುದು ರಾಮನಗರ ತಾಲೂಕಿನ (Ramanagara News) ಬಿಡದಿಯಲ್ಲಿ ನಡೆದಿದೆ. ಹಾರೋಹಳ್ಳಿ ತಾಲೂಕಿನ ಅಣ್ಣೆದೊಡ್ಡಿ ಗ್ರಾಮದ ನಿವಾಸಿ ರೇವಂತ್ ಕುಮಾರ್ (30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ನನ್ನ ಹೆಂಡತಿ ತುಂಬಾ ಟಾರ್ಚರ್ ಕೊಡುತ್ತಿದ್ದಾಳೆ ಎಂದು ವಿಡಿಯೋದಲ್ಲಿ ಆರೋಪ ಮಾಡಿರುವ ರೇವಂತ್ ಕುಮಾರ್, ಸೋಮವಾರ ಬೆಳಗಿನ ಜಾವ ರೈಲಿಗೆ ಸಿಲುಕಿ ಆತ್ಯಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: Police Firing: ಗೋಪೂಜೆ ದಿನವೇ ಅಕ್ರಮ ಗೋ ಸಾಗಾಟಗಾರನ ಕಾಲಿಗೆ ಗುಂಡು
ಬಿಡದಿ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ರೇವಂತ್ ಕುಮಾರ್ ಕೆಲಸ ಮಾಡುತ್ತಿದ್ದ. ಐದು ತಿಂಗಳ ಹಿಂದೆ ಮಲ್ಲಿಕಾ ಎಂಬುವರರನ್ನು ಮೃತ ರೇವಂತ್ ಕುಮಾರ್ ವಿವಾಹವಾಗಿದ್ದ. ಕೌಟುಂಬಿಕ ಕಲಹದಿಂದ ಬೇಸತ್ತ ರೇವಂತ್ ಕುಮಾರ್ ಸೋಮವಾರ ಸಂಜೆ ರೈಲಿಗೆ ತಲೆ ಕೊಟ್ಟು ಆತ್ಯಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿದಾಗ, ರೇವಂತ್ ಮೊಬೈಲ್ ಪತ್ತೆಯಾಗಿದೆ. ಮೊಬೈಲ್ ಪರಿಶೀಲಿಸಿದಾಗ, ರೇವಂತ್ ಆತ್ಮಹತ್ಯೆಗೆ ಕೆಲವೇ ಕ್ಷಣಗಳ ಮೊದಲು ರೆಕಾರ್ಡ್ ಮಾಡಿದ ವಿಡಿಯೊ ಲಭ್ಯವಾಗಿದೆ. ಈ ವಿಡಿಯೊದಲ್ಲಿ ಯುವಕ ಕಣ್ಣೀರಿನೊಂದಿಗೆ ತನ್ನ ನೋವಿನ ಕತೆಯನ್ನು ಹೇಳಿಕೊಂಡಿದ್ದಾನೆ. ನಾನು ಸಾಯಲು ಹೊರಟಿದ್ದೇನೆ. ನನ್ನ ಸಾವಿಗೆ ಹೆಂಡತಿ ಕಾರಣ. ಅವಳು ತುಂಬಾ ಕಷ್ಟ ಕೊಡುತ್ತಿದ್ದಾಳೆ. ಜೀವನ ಮಾಡಲು ಆಗದೆ, ಬದುಕಲು ಆಗುತ್ತಿಲ್ಲ ಎಂದು ಪತ್ನಿ ಮಲ್ಲಿಕಾ ವಿರುದ್ಧ ಆರೋಪ ಮಾಡಿದ್ದಾನೆ. ಈ ಸಂಬಂಧ ಬೆಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.