Bengaluru News: ನವೆಂಬರ್ 29, 30ರಂದು ಬೆಂಗಳೂರಿನಲ್ಲಿ ಏಕವ್ಯಕ್ತಿ ತಾಳಮದ್ದಲೆ
Bengaluru News: ಬೆಂಗಳೂರು ನಗರದ ಬಸವನಗುಡಿಯಲ್ಲಿರುವ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ನವೆಂಬರ್ 29, 30ರಂದು ಏಕವ್ಯಕ್ತಿ ತಾಳಮದ್ದಲೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ನ. 29ರಂದು ‘ಕಪಿಕುಲ ಸಾರ್ವಭೌಮ’ ಏಕವ್ಯಕ್ತಿ ತಾಳಮದ್ದಲೆ, ನ.30ರಂದು ʼಲೋಕ ರಾವಣʼ ಏಕವ್ಯಕ್ತಿ ತಾಳಮದ್ದಲೆ ನಡೆಯಲಿದೆ.
-
Siddalinga Swamy
Nov 28, 2026 8:47 PM
ಬೆಂಗಳೂರು, ನ. 28: ನಗರದ ಬಸವನಗುಡಿಯಲ್ಲಿರುವ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ನವೆಂಬರ್ 29, 30ರ ಎರಡು ದಿನ ಏಕವ್ಯಕ್ತಿ ತಾಳಮದ್ದಲೆ ಏರ್ಪಡಿಸಲಾಗಿದೆ. ನ. 29ರ ಸಂಜೆ 6 ಗಂಟೆಗೆ ʼಕಪಿಕುಲ ಸಾರ್ವಭೌಮʼ ಏಕವ್ಯಕ್ತಿ ತಾಳಮದ್ದಲೆ ನಡೆಯಲಿದೆ. ಕಲಾವಿದರಾದ ದಿವಾಕರ ಹೆಗಡೆ ಕೆರೆಹೊಂಡ, ಅನಂತ ಹೆಗಡೆ ದಂತಳಿಗೆ, ಎ.ಪಿ. ಫಾಟಕ್ ಕಾರ್ಕಳ ನಡೆಸಿಕೊಡಲಿದ್ದಾರೆ.
ನ. 30ರ ಸಂಜೆ 6 ಗಂಟೆಗೆ ʼಲೋಕ ರಾವಣʼ ಏಕವ್ಯಕ್ತಿ ತಾಳಮದ್ದಲೆ ನಡೆಯಲಿದೆ. ಕಲಾವಿದರಾದ ದಿವಾಕರ ಹೆಗಡೆ ಕೆರೆಹೊಂಡ, ಅನಂತ ಹೆಗಡೆ ದಂತಳಿಗೆ, ಎ.ಪಿ. ಫಾಟಕ್ ಕಾರ್ಕಳ ನಡೆಸಿಕೊಡಲಿದ್ದಾರೆ.