Bengaluru’s love triangle: ಲವರ್ ಸಂತುಗೆ ಗುಡ್‌ಬೈ; ಕೊನೆಗೂ ಗಂಡ ಮಂಜನ ಮನೆ ಸೇರಿದ ಲೀಲಾ!
ತನ್ನನ್ನು ಹಾಗೂ ಮೂವರು ಮಕ್ಕಳನ್ನು ಬಿಟ್ಟು ಲವರ್ ಜತೆ ಪತ್ನಿ ಲೀಲಾ ಹೋಗಿದ್ದ ಕಾರಣ ಪತಿ ಮಂಜು ವಿಡಿಯೋ ಮಾಡಿ ಇತ್ತೀಚೆಗೆ ಗೋಳಾಡಿದ್ದರು. ಇದೀಗ ಮಂಜು-ಲೀಲಾ-ಸಂತು ತ್ರಿಕೋನ ಪ್ರೇಮಕಥೆ ಸುಖಾಂತ್ಯ ಕಂಡಿದ್ದು, ಪ್ರಿಯಕರ ಸಂತುವನ್ನು ಬಿಟ್ಟು ಗಂಡ ಮಂಜು ಮನೆಗೆ ಲೀಲಾ ವಾಪಸ್ ಆಗಿದ್ದಾಳೆ.
ಮಂಜು ಮತ್ತು ಲೀಲಾ ದಂಪತಿ. -
ಆನೇಕಲ್, ಡಿ.10: ಬನ್ನೇರುಘಟ್ಟ ಸಮೀಪದ ಬಸವನಪುರದಲ್ಲಿ ನಡೆದಿದ್ದ ಟ್ರಯಾಂಗಲ್ ಲವ್ ಸ್ಟೋರಿ ಇತ್ತೀಚೆಗೆ ಭಾರಿ ಸುದ್ದಿಯಾಗಿತ್ತು. ತನ್ನನ್ನು ಹಾಗೂ ಮೂವರು ಮಕ್ಕಳನ್ನು ಬಿಟ್ಟು ಲವರ್ ಜತೆ ಪತ್ನಿ ಲೀಲಾ ಹೋಗಿದ್ದ ಕಾರಣ ಪತಿ ಮಂಜು ವಿಡಿಯೋ ಮಾಡಿ ಗೋಳಾಡಿದ್ದರು. ಮಾಧ್ಯಮಗಳ ಎದುರು ಕಣ್ಣೀರು ಹಾಕಿದ್ದ ಮಂಜು, ಸಂತುವನ್ನು ಬಿಟ್ಟು ಬಂದ್ಬಿಡು ಎಂದು ಹೇಳಿದ್ದ. ಆದರೆ, ಲವರ್‌ನ ಬಿಟ್ಟುಬರಲು ಲೀಲಾ ಒಪ್ಪಿರಲಿಲ್ಲ. ಆದರೆ, ಇದೀಗ ಈ ತ್ರಿಕೋನ ಪ್ರೇಮಕಥೆ ಸುಖಾಂತ್ಯ ಕಂಡಿದ್ದು, ಕೆಲವೇ ದಿನಗಳಲ್ಲಿ ಲವರ್‌ನ ಲೀಲಾ ತೊರೆದು, ಮತ್ತೆ ಗಂಡನ ಮನೆ ಸೇರಿದ್ದಾಳೆ.
ಹೌದು, ಲವರ್ ಸಂತುಗೆ ಗುಡ್ ಬೈ ಹೇಳಿರುವ ಲೀಲಾ ಮರಳಿ ಪತಿ ಮಂಜನ ಮನೆ ಸೇರಿದ್ದಾಳೆ. ಸಂತು ಮನೆಯಲ್ಲಿಯೇ ಪತ್ನಿ ಲೀಲಾ ವಾಸವಿದ್ದ ಕಾರಣ ರೊಚ್ಚಿಗೆದ್ದ ಮಂಜ ಅವರ ಮೇಲೆ ಹಲ್ಲೆ ನಡೆಸಿ ಜೈಲು ಸೇರಿದ್ದ. ಜೈಲಿನಿಂದ ಬಿಡುಗಡೆ ಬಳಿಕ ಬಸವನಪುರದಲ್ಲಿ ಮನೆ ಖಾಲಿ ಮಾಡಿದ್ದ ಆತ, ಬನ್ನೇರುಘಟ್ಟ ಸಮೀಪದ ಜಲ್ಲಿಮಿಷನ್ ಏರಿಯಾಗೆ ಬಂದಿದ್ದ.
ಲೀಲಾ ಬಳಿ ಇದ್ದ ದೊಡ್ಡ ಮಗನನ್ನು ಕರೆದುಕೊಂಡು ಹೋಗಿದ್ದ ಪತಿ ಮಂಜು, ಇನ್ಸ್ಟಾಗ್ರಾಮ್ ರೀಲ್ಸ್ನಲ್ಲಿ ಲೀಲಾ ಮೇಲಿನ ವಿರಹ ವೇದನೆ ವ್ಯಕ್ತಪಡಿಸುತ್ತಿದ್ದ. ಆ ಮೂಲಕ ಲೀಲಾ-ಸಂತುಗೆ ಟಕ್ಕರ್ ಕೊಡುತ್ತಿದ್ದ. ಜತೆಗೆ ಹೊಸ ಆಟೋ ಖರೀದಿ ಮಾಡಿ ಮಗನ ಜತೆ ಜೀವನ ನಡೆಸುತ್ತಿದ್ದ.

ಈ ನಡುವೆ ಇಬ್ಬರು ಮಕ್ಕಳನ್ನು ಸಂತು ಮತ್ತು ಲೀಲಾ ಸ್ಕೂಲಿಗೆ ಕಳುಹಿಸುತ್ತಿಲ್ಲ ಎಂದು ಮಂಜು ಆರೋಪಿಸಿದ್ದ. ನನ್ನ ಇಬ್ಬರು ಮಕ್ಕಳನ್ನು ನನಗೆ ಕೊಡಿಸಿ ಎಂದು ಬೇಡಿಕೊಂಡಿದ್ದ. ಇದಾದ ಬಳಿಕ ಈಗ ಮಕ್ಕಳ ಜತೆಗೆ ಲೀಲಾ ಈಗ ಮಂಜನ ಮನೆ ಸೇರಿದ್ದಾಳೆ.
ಗ್ಯಾಂಗ್ ರೇಪ್ ಕೇಸ್; ಲವರ್ ಬಳಿ ಸತ್ಯ ಮುಚ್ಚಿಡಲು ಸುಳ್ಳು ದೂರು ಕೊಟ್ಟ ಯುವತಿ!
ದಂಪತಿ ಮತ್ತೆ ಒಂದಾಗಲು ಕಾರಣವೇನು?
ನಮಗಾಗಿ ಅಲ್ಲದಿದ್ದರೂ ಮಕ್ಕಳಿಗಾಗಿ ನಾವು ಒಂದಾಗೋಣ. ನೀನು ಬಂದರೆ ನಾನು ಚೆನ್ನಾಗಿ ಸಾಕುತ್ತೀನಿ. ಕುಡಿಯೋ ಚಟ ಬಿಡುವ ಜತೆಗೆ ಬೇರೆ ಹೆಣ್ಣಿನ ಸಹವಾಸವನ್ನೂ ಬಿಡ್ತೀನಿ ಎಂದು ಮಂಜ ಈ ಹಿಂದೆ ಹೇಳಿದ್ದ. ಅದರಂತೆಯೇ ಈಗ ಮಕ್ಕಳ ಕಾರಣಕ್ಕೆ ದಂಪತಿ ಒಂದಾಗಿದ್ದಾರೆ. ಇನ್ನು ಮುಂದೆ ಪತಿ ಮಂಜು ಹಾಗೂ ಮೂವರು ಮಕ್ಕಳ ಜತೆ ಇರುವುದಾಗಿ ಲೀಲಾ ಹೇಳಿದ್ದಾಳೆ.
ಈ ಬಗ್ಗೆ ಮಂಜು ಪ್ರತಿಕ್ರಿಯಿಸಿ, ನನ್ನ ಬಂಗಾರಿ ಇವತ್ತು ಮತ್ತೆ ಬಂದಿದ್ದಾಳೆ. ಆಗಿದ್ದೆಲ್ಲಾ ಕೆಟ್ಟ ಗಳಿಗೆ ಎಂದು ಒಟ್ಟಾಗಿ ಜೀವನ ನಡೆಸುತ್ತೇವೆ. ಮಕ್ಕಳಿಗಾಗಿ ನಾವು ಮತ್ತೆ ಹೊಸ ಜೀವನ ಆರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.