ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sandalwood Actress Sudharani: ಹೊಸ ಪೀಳಿಗೆಯ ಮೇಕೊ ರೋಬೊಟಿಕ್ ತಂತ್ರಜ್ಞಾನ ಪರಿಚಯಿಸಿದ ಫೋರ್ಟಿಸ್ ಆಸ್ಪತ್ರೆ

ಶಸ್ತ್ರಚಿಕಿತ್ಸೆಯ ನಂತರದ ನೋವು ಕಡಿಮೆಯಾಗುವುದು, ತ್ವರಿತ ಚೇತರಿಕೆ, ಮೊಣಕಾಲು ಕೀಲು ಕಾರ್ಯನಿರ್ವಹಣೆಯಲ್ಲಿ ಕ್ಷಿಪ್ರ ಸುಧಾರಣೆ ಮತ್ತು ದೀರ್ಘಕಾಲ ದವರೆಗೆ ಮೊಣಕಾಲು ಕೀಲು ಸ್ಥಿರ ವಾಗಿರುವುದಕ್ಕೆ ಇದು ನೆರವಾಗಲಿದೆ. ಇದು ರೋಗಿಯ ಅನುಭವವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ. ದಕ್ಷಿಣ ಭಾರತದ ಜನಪ್ರಿಯ ನಟಿ ಸುಧಾರಾಣಿ ಅವರು ಈ ಹೊಸ ಸೌಲಭ್ಯ ಉದ್ಘಾಟಿಸಿ ಮಾತನಾಡಿದರು

ಹೊಸ ಪೀಳಿಗೆಯ ಮೇಕೊ ರೋಬೊಟಿಕ್ ತಂತ್ರಜ್ಞಾನ ಪರಿಚಯಿಸಿದ ಫೋರ್ಟಿಸ್ ಆಸ್ಪತ್ರೆ

-

Ashok Nayak
Ashok Nayak Dec 10, 2025 7:13 PM

ಮೊಣಕಾಲು ಕೀಲು ಬದಲಿ ಶಸ್ತ್ರಚಿಕಿತ್ಸೆಗೆ ಹೊಸ ಪೀಳಿಗೆಯ ಮೇಕೊ ರೋಬೊಟಿಕ್ ತಂತ್ರಜ್ಞಾನ ಪರಿಚಯಿಸಿದ ಫೋರ್ಟಿಸ್ ಆಸ್ಪತ್ರೆ ನಾಗರಭಾವಿ

ದಕ್ಷಿಣ ಭಾರತದ ಜನಪ್ರಿಯ ನಟಿ ಸುಧಾ ರಾಣಿ ಅವರಿಂದ ಉದ್ಘಾಟನೆ

ರಾಜ್ಯದಲ್ಲಿ ಮೊಣಕಾಲು ಕೀಲು ಬದಲಿ ಶಸ್ತ್ರಚಿಕಿತ್ಸೆಯಲ್ಲಿ ಗಮನಾರ್ಹ ಸುಧಾರಣೆ ತರಲಿರುವ ಹೊಸ ತಲೆಮಾರಿನ ಮೇಕೊ ರೋಬೋಟಿಕ್ ಸಿಸ್ಟಮ್ (Mako Robotic System -Mako TKA 2.0) ಆರಂಭಿಸಿರುವುದಾಗಿ ಫೋರ್ಟಿಸ್ ಹಾಸ್ಪಿಟಲ್, ನಾಗರಬಾವಿ ಪ್ರಕಟಿಸಿದೆ. ಮೇಕೊ ರೋಬೊಟಿಕ್ ಸಿಸ್ಟಮ್- ಯಂತ್ರಮಾನವ (ರೋಬೊಟ್) ನೆರವಿನ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯಲ್ಲಿ ಇತ್ತೀಚಿನ ಸುಧಾರಿತ ತಂತ್ರಜ್ಞಾನವಾಗಿದೆ.

ಸಿಟಿ-ಆಧಾರಿತ 3ಡಿ ಮಾಡೆಲಿಂಗ್, ಶಸ್ತ್ರಚಿಕಿತ್ಸೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಬಳಕೆ ಮತ್ತು ಸ್ಪರ್ಶಜ್ಞಾನದ ಮೂಲಕ ಮಾರ್ಗದರ್ಶನ ನೀಡುವ ಯಾಂತ್ರಿಕ ತೋಳಿನ ನೆರವನ್ನು ಈ ವಿಧಾನವು ಒಳಗೊಂಡಿದೆ. ಒಂದು ಮಿಲಿಮೀಟರ್ಗಿಂತ ಕಡಿಮೆ ನಿಖರತೆ ಸಾಧಿಸಲು ವಿನ್ಯಾಸ ಗೊಳಿಸಲಾಗಿರುವ ಮೇಕೊ ಸೌಲಭ್ಯವು ಆರೋಗ್ಯಕರ ಮೂಳೆ ಮತ್ತು ಮೃದು ಅಂಗಾಂಶಗಳನ್ನು ಸಂರಕ್ಷಿಸುವಾಗ ಸರಿಯಾದ ಸ್ಥಳದಲ್ಲಿ ಮೊಣಕಾಲು ಕೀಲು ಅಳವಡಿಸಲು ನೆರವಾಗಲಿದೆ.

ಈ ನಿಖರತೆಯ ಫಲವಾಗಿ ಶಸ್ತ್ರಚಿಕಿತ್ಸೆಯ ನಂತರದ ನೋವು ಕಡಿಮೆಯಾಗುವುದು, ತ್ವರಿತ ಚೇತರಿಕೆ, ಮೊಣಕಾಲು ಕೀಲು ಕಾರ್ಯನಿರ್ವಹಣೆಯಲ್ಲಿ ಕ್ಷಿಪ್ರ ಸುಧಾರಣೆ ಮತ್ತು ದೀರ್ಘಕಾಲ ದವರೆಗೆ ಮೊಣಕಾಲು ಕೀಲು ಸ್ಥಿರವಾಗಿರುವುದಕ್ಕೆ ಇದು ನೆರವಾಗಲಿದೆ. ಇದು ರೋಗಿಯ ಅನುಭವವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ. ದಕ್ಷಿಣ ಭಾರತದ ಜನಪ್ರಿಯ ನಟಿ ಸುಧಾರಾಣಿ ಅವರು ಈ ಹೊಸ ಸೌಲಭ್ಯ ಉದ್ಘಾಟಿಸಿ ಮಾತನಾಡಿದರು.

"ವಿಶ್ವ ದರ್ಜೆಯ ವೈದ್ಯಕೀಯ ತಂತ್ರಜ್ಞಾನವು ಈಗ ನಮ್ಮ ನಗರದಲ್ಲಿ ಲಭ್ಯವಾಗುವುದನ್ನು ನೋಡುವುದು ಹೃದಯಸ್ಪರ್ಶಿ ಸಂಗತಿಯಾಗಿದೆ. ಮೇಕೊ ರೊಬೊಟಿಕ್ ತೋಳು ನೆರವಿನ ಶಸ್ತ್ರಚಿಕಿತ್ಸಾ ಸೌಲಭ್ಯವು ರೋಗಿಗಳ ಪಾಲಿಗೆ ತುಂಬ ಭರವಸೆದಾಯಕವಾಗಿದೆ. ಇದು ಶಸ್ತ್ರಚಿಕಿತ್ಸೆ ಸುರಕ್ಷಿತವಾಗಿರಲು ಮತ್ತು ಹಿಂದೆಂದಿಗಿಂತಲೂ ಹೆಚ್ಚು ವೇಗವಾಗಿ ಚೇತರಿಸಿಕೊಳ್ಳಲು ನೆರವಾಗಲಿದೆ.

ಇದನ್ನೂ ಓದಿ: Health Tips: ಚಳಿ ಚಳಿ ತಾಳೆನು ಈ ಚಳಿಯ...ಚಳಿಯಿಂದ ನಿಮ್ಮ ಅರೋಗ್ಯವನ್ನು ಹೀಗೆ ಕಾಪಾಡಿಕೊಳ್ಳಿ

ಸಮುದಾಯದ ಒಳಿತಿಗೆ ಇಂತಹ ಸುಧಾರಿತ ಶಸ್ತ್ರ ಚಿಕಿತ್ಸಾ ಸೌಲಭ್ಯವನ್ನು ಆರಂಭಿಸಿರುವುದಕ್ಕೆ ಫೋರ್ಟಿಸ್ ಹಾಸ್ಪಿಟಲ್ ನಾಗರಭಾವಿಯ ಸಂಪೂರ್ಣ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆ ಗಳು" ಎಂದು ಹೇಳಿದ್ದಾರೆ. ಫೋರ್ಟಿಸ್ ಹಾಸ್ಪಿಟಲ್, ನಾಗರಭಾವಿ-ಯ ಮೂಳೆ ಶಸ್ತ್ರಚಿಕಿತ್ಸೆಯ ಹಿರಿಯ ಸಲಹೆಗಾರ ಡಾ. ಮಂಜುನಾಥ ಕೋಡಿಹಳ್ಳಿ ಅವರು ಮಾತನಾಡಿ, ʼಮೇಕೊ ಸೌಲಭ್ಯ ಜೊತೆಗಿನ ನಮ್ಮ ಆರಂಭಿಕ ಅನುಭವವು ಅಸಾಧಾರಣ ಭರವಸೆ ನೀಡಿದೆ. ಇತರ ರೋಬೋಟಿಕ್ ಪ್ಲಾಟ್ಫಾರ್ಮ್ಗಳಿಗಿಂತ ಭಿನ್ನವಾಗಿ, ಮೇಕೊ, ಸಿಟಿ-ಆಧಾರಿತ 3ಡಿ ಪ್ಲ್ಯಾನಿಂಗ್ ನೈಜ-ಸಮಯದ ರೋಬೊಟಿಕ್ ಮಾರ್ಗದರ್ಶನದ ಜೊತೆಗೆ ಅನನ್ಯವಾಗಿ ಸಂಯೋಜಿಸಲಿದೆ.

ಇದು ಪ್ರತಿ ರೋಗಿಯ ಅಂಗರಚನಾಶಾಸ್ತ್ರಕ್ಕೆ ಒಂದು ಮಿಲಿಮೀಟರ್ಗಿಂತ ಕಡಿಮೆ ನಿಖರತೆ ಯೊಂದಿಗೆ ಶಸ್ತ್ರಚಿಕಿತ್ಸೆ ನಡೆಸಲು ಅನುವು ಮಾಡಿಕೊಡುತ್ತದೆ. ಈ ಮಟ್ಟದ ಮುನ್ಸೂಚನೆ ಮತ್ತು ನಿಖರತೆಯು ನಮ್ಮ ರೋಗಿಗಳಿಗೆ ಮೇಕೊ ಆಯ್ಕೆ ಮಾಡುವ ನಮ್ಮ ನಿರ್ಧಾರದ ಮೇಲೆ ಪ್ರಭಾವ ಬೀರಿದೆ. ಈ ಸೌಲಭ್ಯದ ನಿಖರತೆ, ಸ್ಥಿರತೆ ಮತ್ತು ಅಂಗಾಂಶ-ಸಂರಕ್ಷಿಸುವ ಸಾಮರ್ಥ್ಯಗಳು ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯ ಗುಣಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸುತ್ತಿವೆ.

ರೋಗಿಗಳು ಕ್ಷಿಪ್ರವಾಗಿ ನಡೆದಾಡುವುದನ್ನು ಮರಳಿ ಪಡೆಯುವುದನ್ನು, ಶಸ್ತ್ರಚಿಕಿತ್ಸೆಯ ನಂತರದ ಕಡಿಮೆ ಅಸ್ವಸ್ಥತೆ ಅನುಭವಿಸುವುದನ್ನು ಮತ್ತು ಅವರ ಚೇತರಿಕೆಯ ಆರಂಭದಲ್ಲಿ ಮೊಣಕಾಲಿನ ಕೀಲು ಹೆಚ್ಚು ಸ್ಥಿರ ಸ್ವರೂಪದಲ್ಲಿ ಕಾರ್ಯನಿರ್ವಹಿಸುವುದನ್ನು ನಾವು ನೋಡುತ್ತಿದ್ದೇವೆ.

ಮೊಣಕಾಲು ಕೀಲು ಬದಲಿಸುವುದರಲ್ಲಿ ಪರಿವರ್ತನೆಯ ಕ್ರಮ ಕೈಗೊಂಡಿರುವುದನ್ನು ಮೇಕೊ ಪ್ರತಿನಿಧಿಸುತ್ತದೆ. ಇದು ಹಿಂದೆಂದಿಗಿಂತಲೂ ಹೆಚ್ಚು ಊಹಿಸಬಹುದಾದ ಫಲಿತಾಂಶಗಳನ್ನು ನೀಡುತ್ತದೆ" ಎಂದು ಹೇಳಿದ್ದಾರೆ. ಮೇಕೊ ರೋಬೊಟಿಕ್ ಸೌಲಭ್ಯದ ಪ್ರಯೋಜನ ಪಡೆದ ಮೊದಲಿಗರಲ್ಲಿ 60 ವರ್ಷದ ಶ್ರೀಮತಿ ಶೈಲಜಾ (ಹೆಸರು ಬದಲಾಯಿಸಲಾಗಿದೆ) ಅವರೂ ಒಬ್ಬರಾಗಿ ದ್ದಾರೆ. ಅವರು 3 ವರ್ಷಗಳ ಕಾಲ ತೀವ್ರವಾದ ಎಡ ಮೊಣಕಾಲಿನ ಅಸ್ಥಿಸಂಧಿವಾತದಿಂದ ಬಳಲುತ್ತಿದ್ದರು. ಇದರಿಂದಾಗಿ ಅವರು ದಿನನಿತ್ಯ ನಡೆದಾಡುವುದೂ ಸಾಧ್ಯವಾಗಿರಲಿಲ್ಲ.

ಮೇಕೊ ಮೂಲಕ ನಡೆಸಿದ ಶಸ್ತ್ರಚಿಕಿತ್ಸೆಯಲ್ಲಿ ನಿಖರವಾಗಿ ಕೀಲು ಜೋಡಣೆ ಮಾಡಲಾಯಿತು. ಮೃದು ಅಂಗಾಂಶಗಳಿಗೆ ಕನಿಷ್ಠ ಹಾನಿ ಉಂಟಾಯಿತು. ಶಸ್ತ್ರಚಿಕಿತ್ಸೆಯ ನಂತರದ ನೋವು ಗಮನಾರ್ಹವಾಗಿ ಕಡಿಮೆಯಾಗಿತ್ತು. ರೋಗಿಯು ಗಮನಾರ್ಹ ಬಗೆಯಲ್ಲಿ ಚೇತರಿಸಿಕೊಂಡ ಕಾರಣಕ್ಕೆ ಅವರನ್ನು ಮನೆಗೆ ಕಳಿಸಿಕೊಡಲಾಯಿತು. ಕಳೆದ 5 ವರ್ಷಗಳಿಂದ ಎಡ ಮೊಣಕಾಲಿನ ಅಸ್ಥಿಸಂಧಿವಾತದಿಂದ ಬಳಲುತ್ತಿದ್ದ 54 ವರ್ಷದ ಶ್ರೀಮತಿ ಜೀನತ್ (ಹೆಸರು ಬದಲಾಯಿಸಲಾಗಿದೆ) ಹೆಸರಿನ ಮತ್ತೊಬ್ಬ ರೋಗಿಯು, ಈ ಸೌಲಭ್ಯದ ಸ್ಪರ್ಶ ನಿಖರತೆ ಬಳಸಿಕೊಂಡು ಮೇಕೊ ಮಾರ್ಗದರ್ಶನದಲ್ಲಿ – ನಿರ್ದೇಶಿತ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಒಳಗಾದರು. ರೋಬೋಟ್ ನೆರವಿನ ಈ ವಿಧಾನವು ಸಮತೋಲನದ ಕೀಲು ಜೋಡಣೆ ಮತ್ತು ಅತ್ಯುತ್ತಮ ಮೂಳೆ ಸಂರಕ್ಷಣೆ ಯನ್ನು ಖಚಿತಪಡಿಸಿದೆ.

ಶಸ್ತ್ರಚಿಕಿತ್ಸೆ ನಂತರದ ಚೇತರಿಕೆಯು ಸುಗಮವಾಗಿತ್ತು. ಆರಂಭದಲ್ಲಿ ಉತ್ತಮ ರೀತಿಯಲ್ಲಿ ನಡೆದಾಡುವ ಫಲಿತಾಂಶಗಳೊಂದಿಗೆ ಅವರು ಮನೆಗೆ ತೆರಳಿದರು. ಮೇಕೊ ಟಿಕೆಎ 2.0 ಸೌಲಭ್ಯ ಅಳವಡಿಸಿಕೊಂಡಿರುವ ಫೋರ್ಟಿಸ್ ಹಾಸ್ಪಿಟಲ್, ನಾಗರಭಾವಿ, ಸುಧಾರಿತ ಮೂಳೆಚಿಕಿತ್ಸೆ, ರೋಬೊಟ್ ನೆರವಿನ ಮೊಣಕಾಲಿನ ಕೀಲು ಬದಲಿ ಮತ್ತು ಅಪಘಾತ ಆರೈಕೆಯಲ್ಲಿ ಪ್ರಾದೇಶಿಕ ಕೇಂದ್ರವಾಗಿ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ.

ಕರ್ನಾಟಕದಾದ್ಯಂತದ ರೋಗಿಗಳಿಗೆ ಅತ್ಯಾಧುನಿಕ, ನಿಖರ ಶಸ್ತ್ರಚಿಕಿತ್ಸಾ ಸೌಲಭ್ಯಗಳ ಲಭ್ಯತೆ ಯನ್ನು ಇದು ಖಚಿತಪಡಿಸುತ್ತದೆ. ಫೋರ್ಟಿಸ್ ಹಾಸ್ಪಿಟಲ್, ನಾಗರಬಾವಿ-ಯ ಫೆಸಿಲಿಟಿ ಡೈರೆಕ್ಟರ್ ರಥೀಫ್ ನಾಯಕ್ ಅವರು ಪ್ರತಿಕ್ರಿಯಿಸಿ, ʼಮೇಕೊ ರೋಬೋಟಿಕ್ ಸೌಲಭ್ಯವನ್ನು ಪರಿಚಯಿ ಸಿರುವುದು ಸುಧಾರಿತ, ತಂತ್ರಜ್ಞಾನ ಆಧಾರಿತ ಆರೋಗ್ಯ ಸೇವೆ ಒದಗಿಸುವ ನಮ್ಮ ಬದ್ಧತೆಯಲ್ಲಿನ ಒಂದು ಪ್ರಮುಖ ಮುನ್ನಡೆಯಾಗಿದೆ.

ರೋಬೋಟ್ ನೆರವಿನ ಶಸ್ತ್ರಚಿಕಿತ್ಸೆಯು ಸ್ಥಿರತೆ, ನಿಖರತೆ ಮತ್ತು ಫಲಿತಾಂಶಗಳ ಉತ್ತಮ ಮುನ್ಸೂ ಚನೆಯನ್ನು ಖಚಿತಪಡಿಸುತ್ತದೆ. ರೋಗಿಗಳ ಸುರಕ್ಷತೆ ಮತ್ತು ತೃಪ್ತಿ ಎರಡನ್ನೂ ಸುಧಾರಿಸುತ್ತದೆ. ಈ ಜಾಗತಿಕ ಗುಣಮಟ್ಟದ ಸೌಲಭ್ಯ ಒದಗಿಸುವ ಮೂಲಕ, ಫೋರ್ಟಿಸ್ ಆಸ್ಪತ್ರೆ, ನಾಗರಭಾವಿ ರೋಗಿಗಳಿಗೆ ಪ್ರಮುಖ ಅಂತರರಾಷ್ಟ್ರೀಯ ಕೇಂದ್ರಗಳಲ್ಲಿ ಲಭ್ಯವಿರುವ ಇಂತಹದ್ದೆ ಸುಧಾರಿತ ಮೂಳೆಚಿಕಿತ್ಸಾ ಸೌಲಭ್ಯ ಹೊಂದಿರುವುದನ್ನು ಖಚಿತಪಡಿಸುತ್ತಿದೆ" ಎಂದು ಹೇಳಿದ್ದಾರೆ.