ಮನೆ ಸೀಲಿಂಗ್ ನೊಳಗೆ ಸೇರಿಕೊಂಡಿದ್ದ ಹೆಬ್ಬಾವು.. ಮುಂದೇನಾಯ್ತು ನೋಡಿ..
ಮನೆಯ ಸೀಲಿಂಗ್ ಒಳಗೆ 5- 6 ಮೀಟರ್ ಉದ್ದದ ಸುಮಾರು 60 ಕಿಲೋ ಗ್ರಾಂ ತೂಕದ ಭಾರಿ ಗಾತ್ರದ ಹೆಬ್ಬಾವು ಪತ್ತೆಯಾಗಿರುವ ಘಟನೆ ಮಲೇಷ್ಯಾದಲ್ಲಿ ನಡೆದಿದೆ. ಶಿಕ್ಷಕಿಯೊಬ್ಬರ ಮನೆಯಲ್ಲಿ ಈ ಘಟನೆ ನವೆಂಬರ್ ತಿಂಗಳಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
(ಸಂಗ್ರಹ ಚಿತ್ರ) -
ಮಲೇಷ್ಯಾ: ಮನೆಯ ಸೀಲಿಂಗ್ (house ceiling) ಒಮ್ಮೆ ಪರೀಕ್ಷೆ ಮಾಡಿಕೊಳ್ಳಿ. ಎಲ್ಲಾದರೂ ಬಿರುಕು ಬಿಟ್ಟಿದ್ದರೆ ಕೂಡಲೇ ಸರಿಪಡಿಸಿಕೊಳ್ಳಿ. ಇಲ್ಲವಾದರೆ ಮನೆ ಮಂದಿಗೆಲ್ಲ ಅಪಾಯವಾಗಬಹುದು ಎಚ್ಚರ. ಇಂತಹ ಒಂದು ಭಯಾನಕ ಘಟನೆ ಮಲೇಷ್ಯಾದಲ್ಲಿ (malaysia) ನಡೆದಿದೆ. ಮನೆಯೊಂದರ ಬಾತ್ ರೂಮ್ ನಿಂದ ಬರುತ್ತಿದ್ದ ವಿಚಿತ್ರ ಶಬ್ದ ಕೇಳಿ ಸೀಲಿಂಗ್ ಪರೀಕ್ಷೆ ಮಾಡಿದಾಗ ಅದರೊಳಗೆ ಭಾರಿ ಗಾತ್ರದ ಹಾವೊಂದು (python) ಕಂಡು ಬಂದಿದೆ. ಇದರಿಂದ ಗಾಬರಿಗೊಂಡ ಮನೆಯವರು ರಕ್ಷಣೆಗಾಗಿ ನಾಗರಿಕ ರಕ್ಷಣಾ ಪಡೆ ಸಿಬ್ಬಂದಿಯನ್ನು ಕರೆಸಿದರು.
ಸುಂಗೈ ಪೆಟಾನಿ ಪ್ರದೇಶದ ಕೇಡಾಹ್ ನ ತಾಮನ್ ಬಂದರ್ ಬಾರುವಿನಲ್ಲಿ ನವೆಂಬರ್ 12ರಂದು ಶಿಕ್ಷಕಿಯೊಬ್ಬರ ಮನೆಯಲ್ಲಿ ಈ ಘಟನೆ ನಡೆದಿದೆ. ಅವರ ಮನೆಯಲ್ಲಿ ಕೆಲವು ದಿನಗಳಿಂದ ವಿಚಿತ್ರವಾದ ಶಬ್ದ ಕೇಳಿ ಬರುತ್ತಿತ್ತು. ಇದರಿಂದ ಮನೆ ಮಂದಿಗೆಲ್ಲ ಕಿರಿಕಿರಿ ಉಂಟಾಗಿತ್ತು. ಶಬ್ದ ಕೇಳಿ ಗಾಬರಿಗೊಂಡ ಮನೆಯವರು ನಾಗರಿಕ ರಕ್ಷಣಾ ಪಡೆಗೆ ಕರೆ ಮಾಡಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ಪಡೆ ಸಿಬ್ಬಂದಿ ಮನೆಯ ಸೀಲಿಂಗ್ ಒಡೆದರು. ಆಗ ಅಲ್ಲಿ ಭಾರಿ ಗಾತ್ರದ ಹೆಬ್ಬಾವು ಪತ್ತೆಯಾಗಿದೆ.
Viral Video: ಅಸೆಂಬ್ಲಿಯಲ್ಲೇ ಬಿಟ್ಟಿ ಹಣಕ್ಕಾಗಿ ಮುಗಿಬಿದ್ದ ಪಾಕ್ ಸಂಸದರು; ವಿಡಿಯೋ ನೋಡಿ
ಮನೆಯ ಸೀಲಿಂಗ್ ಪ್ಲಾಸ್ಟರ್ ಒಡೆದಾಗ ಅದರಲ್ಲಿ 5-6 ಮೀಟರ್ ಉದ್ದದ ಸುಮಾರು 60 ಕಿಲೋ ಗ್ರಾಂ ತೂಕದ ಭಾರಿ ಗಾತ್ರದ ಹೆಬ್ಬಾವು ಪತ್ತೆಯಾಗಿದೆ. ಇದನ್ನು ರಕ್ಷಣಾ ಪಡೆ ಸಿಬ್ಬಂದಿ ಸುರಕ್ಷಿತವಾಗಿ ಹೊರತೆಗೆದು ದೂರದ ಪ್ರದೇಶಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಹೆಬ್ಬಾವಿಗೆ ಮರುಜೀವ ಕೊಟ್ಟ ಉರಗ ರಕ್ಷಕ
ಅರಣ್ಯ ಇಲಾಖೆ ಮತ್ತು ದೇಡಿಯಾಪದಾ ಮೂಲದ ಜೀವದಯಾ ಪ್ರೇಮಿ ಎಂಬ ಸಂಘಟನೆಯ ಪ್ರಾಣಿ ಕಲ್ಯಾಣ ಕಾರ್ಯಕರ್ತರು ಹೆಬ್ಬಾವನ್ನು ರಕ್ಷಿಸಿದ ಘಟನೆ ಗುಜರಾತ್‍ನ ನರ್ಮದಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.
ತಲೆಗೆ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದ ಹೆಬ್ಬಾವನ್ನು ನೋಡಿದ ಪ್ರಾಣಿ ಕಲ್ಯಾಣ ಕಾರ್ಯಕರ್ತ ಭವಿನ್‌ಭಾಯ್ ವಾಸವ ಅವರು ಅದಕ್ಕೆ ಸಿಪಿಆರ್ ನೀಡಿ ಜೀವ ಉಳಿಸಿದರು. ಇದರ ವೈರಲ್ ಆಗಿರುವ ವಿಡಿಯೊದಲ್ಲಿ ವಾಸವ ಅವರು ದೈತ್ಯ ಹಾವಿನ ಬಾಯಿಗೆ ಸಣ್ಣ, ಟೊಳ್ಳಾದ ರಾಡ್ ಹಾಕಿ ಸಿಪಿಆರ್ ಅನ್ನು ನೀಡಿದರು. ಅನಂತರ ಅರಣ್ಯ ಇಲಾಖೆಯ ತಂಡ ಮತ್ತು ಪ್ರಾಣಿ ಕಲ್ಯಾಣ ಕಾರ್ಯಕರ್ತರು ಹೆಬ್ಬಾವನ್ನು ಸುರಕ್ಷಿತವಾಗಿ ಕಾಡಿಗೆ ಕರೆದುಕೊಂಡು ಹೋಗಿ ಬಿಟ್ಟರು.
Dr N Someshwara Column: ಮಂಗನ ಹೃದಯವನ್ನು ಮಗುವಿಗೆ ಬದಲಿ ಜೋಡಿಸಿದರು !
ಕಳೆದ ತಿಂಗಳು ಕೂಡ ಇಂತಹ ಒಂದು ಘಟನೆ ಗುಜರಾತ್‌ನಲ್ಲಿ ನಡೆದಿತ್ತು. ವಲ್ಸಾದ್‍ನಲ್ಲಿ ವನ್ಯಜೀವಿ ರಕ್ಷಕರೊಬ್ಬರು ವಿದ್ಯುತ್ ಆಘಾತಕ್ಕೊಳಗಾಗಿದ್ದ ಹಾವಿಗೆ ಬಾಯಿಯ ಮೂಲಕ ಸಿಪಿಆರ್ ನೀಡಿ ಬದುಕಿಸಿದ್ದರು.