ಭೀಮ ಗೋಲ್ಡ್ ಪೈವೇಟ್ ಲಿಮಿಟೆಡ್ ಘೋಷಿಸುತ್ತದೆ 'ಭೀಮ ಬ್ರಿಲಿಯನ್ ಡೈಮಂಡ್ ಜ್ಯುವೆಲ್ಲರಿ ಫೆಸ್ಟಿವಲ್'
ಭೀಮದಲ್ಲಿ ವರ್ಷಕ್ಕೆ ಎರಡು ಬಾರಿ ಜೂನ್ ಮತ್ತು ಡಿಸೆಂಬರ್ ತಿಂಗಳಲ್ಲಿ ನಡೆಯುವ ಈ ಡೈಮಂಡ್ ಅಭಿಯಾನ ಸಂಸ್ಥೆಯ ಪ್ರಮುಖ ತಂತ್ರಾತ್ಮಕ ಚಟುವಟಿಕೆಯಾಗಿದ್ದು, ಡಿಸೆಂಬರ್ ತಿಂಗಳಲ್ಲಿ ಡೈಮಂಡ್ ಆಭರಣಗಳ ಮೇಲಿನ ಎನ್‌ಆರ್‌ಐ ಗ್ರಾಹಕರ ಹೆಚ್ಚಿದ ಆಸಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿ ಕೊಳ್ಳಲು ರೂಪಿಸಲಾಗಿದೆ.
-
ಡಿಸೆಂಬರ್ 8, 2025 ರಿಂದ ಜನವರಿ 11, 2026 ರವರೆಗೆ ಎಲ್ಲಾ ಭೀಮ ಮಳಿಗೆಗಳಲ್ಲಿ ವಿಶೇಷ ಡೈಮಂಡ್ ಸಂಗ್ರಹ, ಎನ್‌ಆರ್‌ಐಗಳಿಗೆ ವಿಶೇಷ ಪ್ರಯೋಜನಗಳು ಮತ್ತು ಅಸಾಧಾರಣ ಮೌಲ್ಯದ ಕೊಡುಗೆಗಳು
ಬೆಂಗಳೂರು: ಶುದ್ಧತೆ ಹಾಗೂ ನಂಬಿಕೆಗೆ ಹೆಸರಾದ ಭಾರತದ ಐಕಾನಿಕ್ ಜ್ಯುವೆಲ್ಲರಿ ಸಂಸ್ಥೆಯಾದ ಭೀಮ ಹಬ್ಬದ ಮತ್ತು ರಜಾದಿನಗಳ ಸಂದರ್ಭದಲ್ಲಿ ವಿದೇಶಗಳಿಂದ ಭಾರತಕ್ಕೆ ಮರಳುವ ಅನಿವಾಸಿ ಭಾರತೀಯರನ್ನು (NRI) ಗಮನದಲ್ಲಿಟ್ಟುಕೊಂಡು, ತನ್ನ ವಿಶೇಷ ಡೈಮಂಡ್ ಅಭಿಯಾನ ವಾದ 'ಭೀಮ ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಫೆಸ್ಟಿವಲ್' ಅನ್ನು ಇಂದು ಅಧಿಕೃತವಾಗಿ ಘೋಷಿಸು ತ್ತಿದೆ .
ಭೀಮದಲ್ಲಿ ವರ್ಷಕ್ಕೆ ಎರಡು ಬಾರಿ ಜೂನ್ ಮತ್ತು ಡಿಸೆಂಬರ್ ತಿಂಗಳಲ್ಲಿ ನಡೆಯುವ ಈ ಡೈಮಂಡ್ ಅಭಿಯಾನವು ಸಂಸ್ಥೆಯ ಪ್ರಮುಖ ತಂತ್ರಾತ್ಮಕ ಚಟುವಟಿಕೆಯಾಗಿದ್ದು, ಡಿಸೆಂಬರ್ ತಿಂಗಳಲ್ಲಿ ಡೈಮಂಡ್ ಆಭರಣಗಳ ಮೇಲಿನ ಎನ್‌ಆರ್‌ಐ ಗ್ರಾಹಕರ ಹೆಚ್ಚಿದ ಆಸಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ರೂಪಿಸಲಾಗಿದೆ. ಈ ಅಭಿಯಾನದ ಉದ್ದೇಶ ಭೀಮ ವನ್ನು ಡಿಸೆಂಬರ್ ತಿಂಗಳಲ್ಲಿ ಪ್ರೀಮಿಯಂ ಡೈಮಂಡ್ ಆಭರಣ ಖರೀದಿಗೆ ಅತ್ಯುತ್ತಮ ಮತ್ತು ನಂಬಿಕಸ್ಥ ಗಮ್ಯಸ್ಥಾನವಾಗಿ ಸ್ಥಾಪಿಸುವುದಾಗಿದೆ.
ಈ ಅಭಿಯಾನವು ಡಿಸೆಂಬರ್ 8, 2025 ರಂದು ಆರಂಭಗೊಂಡಿದ್ದು, ಜನವರಿ 11, 2026 ರವರೆಗೆ ಎಲ್ಲಾ ಭೀಮ ಮಳಿಗೆಗಳಲ್ಲಿ ನಡೆಯಲಿದೆ. ಈ ಸಂದರ್ಭವನ್ನು ವಿಶೇಷವಾಗಿಸಲು, ಭೀಮ ಆಧುನಿಕ ಅಭಿರುಚಿಗೆ ತಕ್ಕ ವಿಶಿಷ್ಟ ಡೈಮಂಡ್ ವಿನ್ಯಾಸಗಳು, ಜಾಗತಿಕ ಶೈಲಿ ಹಾಗೂ ಭಾರತೀಯ ಪರಂಪರೆಯ ಸಂಯೋಜನೆಯನ್ನು ಪ್ರತಿಬಿಂಬಿಸುವ ಆಕರ್ಷಕ ಸಾಲಿಟೇರ್ ಗಳು ಮತ್ತು ವಿಶೇಷ ಡೈಮಂಡ್ ಸಂಗ್ರಹಗಳನ್ನು ಪರಿಚಯಿಸಲಿದೆ.
ಜೊತೆಗೆ, ಡಿಸೆಂಬರ್ ತಿಂಗಳಿಗೆ ಮಾತ್ರ ಅನ್ವಯಿಸುವ ವಿಶೇಷ ಖರೀದಿ ಪ್ರಯೋಜನಗಳನ್ನು ಗ್ರಾಹಕರಿಗೆ ಒದಗಿಸಲಾಗುತ್ತದೆ. ಆಯ್ದ ಡೈಮಂಡ್ ಶ್ರೇಣಿಗಳ ಮೇಲೆ ಆಕರ್ಷಕ ಕೊಡುಗೆಗಳು, ವಿಶೇಷ ಬೆಲೆಯ ವಿನ್ಯಾಸಗಳು ಮತ್ತು ಅಂತರರಾಷ್ಟ್ರೀಯ ಗ್ರಾಹಕರಿಗೆ ಹೊಂದುವಂತೆ ರೂಪಿಸ ಲಾಗಿರುವ ಮೌಲ್ಯಾಧಾರಿತ ಪ್ರಯೋಜನಗಳು ಈ ಅಭಿಯಾನದ ಭಾಗವಾಗಿರುತ್ತವೆ.
ಡೈಮಂಡ್ ಕೊಡುಗೆಗಳು:
- ಪ್ರತಿ ಕ್ಯಾರಟ್ ಖರೀದಿಗೆ ಉಚಿತ 24 ಕ್ಯಾರಟ್ ಗೋಲ್ಡ್ ಬಾರ್ ಹಾಗೂ ರೂ.10,000 ಮೌಲ್ಯದ ಆಭರಣ!
- ಮೇಕಿಂಗ್ ಶುಲ್ಕದ ಮೇಲೆ 100% ವರೆಗೆ ರಿಯಾಯಿತಿ
ಭೀಮದ ಪ್ರತಿಷ್ಠಿತ ಡೈಮಂಡ್ ಗ್ರಾಹಕರಿಗಾಗಿ ಹೆಚ್ಚುವರಿ ವಿಶೇಷ ಪ್ರಯೋಜನೆಗಳನ್ನು ಘೋಷಿಸ ಲಾಗಿದೆ. ಹಳೆಯ ಭೀಮ ಡೈಮಂಡ್ ಆಭರಣಗಳ ವಿನಿಮಯದ ಮೇಲೆ ಪ್ರತಿ ಕ್ಯಾರಟ್‌ಗೆ ರೂ. 5,000 ಹೆಚ್ಚುವರಿ ನೀಡಲಾಗುತ್ತದೆ. ಇದು ಬಹುಪೀಳಿಗೆಯಿಂದ ಭೀಮವನ್ನು ನಂಬಿಕೊಂಡಿರುವ ಕುಟುಂಬಗಳು ಮತ್ತು ಎನ್‌ಆರ್‌ಐ ಗ್ರಾಹಕರ ಖರೀದಿ ಅನುಭವವನ್ನು ಇನ್ನಷ್ಟು ಮೌಲ್ಯಯುತ ಗೊಳಿಸುವ ಉದ್ದೇಶದಿಂದ ಮಾತ್ರ.
ಭೀಮದ ಡೈಮಂಡ್ ವಿಶ್ವಾಸಾರ್ಹತೆ, ಅದರ ಕಟ್ಟುನಿಟ್ಟಾದ ಶುದ್ಧತಾ ಮಾನದಂಡಗಳು, ಪ್ರಮಾ ಣೀಕೃತ ಸಾಲಿಟೇರ್ಗಳು, ಪಾರದರ್ಶಕ ಮೌಲ್ಯಮಾಪನ ವಿಧಾನಗಳು ಮತ್ತು ನೈತಿಕ ಖರೀದಿ ಪ್ರಕ್ರಿಯೆಗಳ ಮೇಲೆ ಆಧಾರಿತವಾಗಿದೆ. ಎನ್‌ಆರ್‌ಐಗಳ ಡೈಮಂಡ್ ಖರೀದಿ ಸೀಸನ್ ಆರಂಭವಾಗು ತ್ತಿರುವ ಸಂದರ್ಭದಲ್ಲಿ, ಭೀಮ ತನ್ನ ಭರವಸೆಗಳನ್ನು ಇನ್ನಷ್ಟು ಬಲಪಡಿಸಿದ್ದು, ಇಂಟರ್ ನ್ಯಾಷನಲ್ ಜೆಮಾಲಾಜಿಕಲ್ ಇನ್‌ಸ್ಟಿಟ್ಯೂಟ್ (IGI) ಮತ್ತು ಜೆಮಾಲಾಜಿಕಲ್ ಇನ್‌ಸ್ಟಿಟ್ಯೂಟ್ ಆಫ್ ಅಮೆರಿಕಾ (GIA) ದಿಂದ ಪ್ರಮಾಣೀಕೃತ ಭೀಮದ ಡೈಮಂಡ್‌ಗಳು ಗುಣಮಟ್ಟವನ್ನು ಖಾತರಿಪಡಿಸುತ್ತವೆ.
ಡೈಮಂಡ್ ವಿನ್ಯಾಸದ ನವೀನತೆಯಲ್ಲೂ ಭೀಮ ಸದಾ ಮುಂಚೂಣಿಯಲ್ಲಿದ್ದು ಸಮಕಾಲೀನ ಫ್ಯಾಷನ್, ವಿವಾಹ ಟ್ರೆಂಡ್‌ಗಳು, ಪ್ಯೂಷನ್ ಶೈಲಿ ಮತ್ತು ಆಧುನಿಕ ಹೇರ್ಲೂಮ್ ಪರಿಕಲ್ಪನೆ ಗಳಿಂದ ಪ್ರೇರಿತ ಹೊಸ ಡೈಮಂಡ್ ಸಂಗ್ರಹಗಳು ಈ ಅಭಿಯಾನದ ಮೂಲಕ ಪರಿಚಯಗೊಳ್ಳ ಲಿದ್ದು. ವಿವಾಹ, ಕುಟುಂಬ ಸಮಾರಂಭಗಳು ಅಥವಾ ಸ್ವಂತ ಬಳಕೆಗೆ ಡೈಮಂಡ್ ಖರೀದಿಸಲು ಬಯಸುವ ಅಂತರರಾಷ್ಟ್ರೀಯ ಗ್ರಾಹಕರಿಗೆ, ಭೀಮದ ಡೈಮಂಡ್ ಆಭರಣಗಳು ಸೌಂದರ್ಯ ಹಾಗೂ ದೀರ್ಘಕಾಲೀನ ಮೌಲ್ಯದ ಪರಿಪೂರ್ಣ ಸಂಯೋಜನೆಯನ್ನು ಒದಗಿಸುತ್ತವೆ.
ಡಿಸೆಂಬರ್‌ನ 'ಭೀಮ ಬ್ರಿಲಿಯನ್ಸ್ ಡೈಮಂಡ್ ಜುವೆಲ್ಲರಿ ಫೆಸ್ಟಿವಲ್' ಭೀಮ ಸಂಸ್ಥೆಯ ಡೈಮಂಡ್ ವಿಭಾಗದಲ್ಲಿ ಅದರ ನಾಯಕತ್ವವನ್ನು ಪ್ರತಿಬಿಂಬಿಸುವುದರ ಜೊತೆಗೆ, ಡೈಮಂಡ್‌ಗಳು ಕೇವಲ ಆಭರಣವಲ್ಲ ಅವು ವ್ಯಕ್ತಿತ್ವ, ಸಾಧನೆ ಮತ್ತು ವೈಯಕ್ತಿಕ ಕಥೆಗಳ ಭಾವನಾತ್ಮಕ ಸಂಕೇತಗಳೆಂಬ ಭೀಮದ ದೃಷ್ಟಿಕೋನವನ್ನು ಒತ್ತಿ ಹೇಳುತ್ತದೆ. ಶತಮಾನಗಳ ನಂಬಿಕೆ ಮತ್ತು ಶುದ್ಧತೆಯ ನೆಲೆ ಯಲ್ಲಿ ನಿರ್ಮಿತ ಈ ಅಭಿಯಾನ, ಜಾಗತಿಕ ಭಾರತೀಯ ಗ್ರಾಹಕರೊಂದಿಗೆ ಭೀಮದ ಬಾಂಧವ್ಯ ವನ್ನು ಇನ್ನಷ್ಟು ಬಲಪಡಿಸುವ ಗುರಿ ಹೊಂದಿದೆ.