ನಾನ್‌ವೆಜ್ ಪ್ರಿಯರಿಗೆ ಬಿಗ್ ಶಾಕ್; ಕೋಳಿ ಮಾಂಸದ ಬೆಲೆಯಲ್ಲಿ ಭಾರೀ ಏರಿಕೆ!
ಕೋಳಿ ಮಾಂಸದ ಬೆಲೆ ದಿನೇದಿನೇ ಏರಿಕೆಯಾಗುತ್ತಿದ್ದು, ಕಳೆದ ಎರಡು ವಾರಗಳಲ್ಲಿ ಪ್ರತಿ ಕೆ.ಜಿ ಮೇಲೆ ಸುಮಾರು 100 ರೂಗೂ ಹೆಚ್ಚಾಗಿದೆ. ಇದರಿಂದ ಚಿಕನ್ ಪ್ರಿಯರ ಜೇಬು ಸುಡುತ್ತಿದೆ. ಕೋಳಿ ಮಾಂಸದ ದಿಢೀರ್ ಬೆಲೆ ಏರಿಕೆಗೆ ಹಲವು ಕಾರಣಗಳಿವೆ. ಪ್ರಮುಖವಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಕೋಳಿ ಸಾಕಾಣೆದಾರರು ನಡೆಸುತ್ತಿರುವ ಪ್ರತಿಭಟನೆ ಇದಕ್ಕೆ ಕಾರಣ ಎನ್ನಲಾಗಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ಕೋಳಿ ಮಾಂಸದ ಬೆಲೆ ದಿನೇದಿನೇ ಏರಿಕೆಯಾಗುತ್ತಿದ್ದು, (Chicken Price Hike) ಕಳೆದ ಎರಡು ವಾರಗಳಲ್ಲಿ ಪ್ರತಿ ಕೆ.ಜಿ ಮೇಲೆ ಸುಮಾರು 100 ರೂಗೂ ಹೆಚ್ಚಾಗಿದೆ. ಇದರಿಂದ ಚಿಕನ್ ಪ್ರಿಯರ ಜೇಬು ಸುಡುತ್ತಿದೆ. ಸದ್ಯ ಬೆಂಗಳೂರು ಸೇರಿ ವಿವಿಧೆಡೆ ಚಿಕನ್ ದರ ಕೆ.ಜಿಗೆ 350 ರೂ ದಾಟಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಕೆಜಿ ಕೋಳಿ ಮಾಂಸ 260 ರಿಂದ 280 ರೂಗಳ ನಡುವೆ ದೊರೆಯುತ್ತಿತ್ತು. ಇದೀಗ ಅದೇ ಚಿಕನ್ ಬೆಲೆ 340 ರಿಂದ 350 ರೂ ಗಡಿ ದಾಟಿದೆ. ಕೆಲ ಪ್ರದೇಶಗಳಲ್ಲಿ ಈಗಾಗಲೇ ಕೆಜಿಗೆ 350 ರೂ ದರ ತಲುಪಿದ್ದು, ಮುಂದಿನ ದಿನಗಳಲ್ಲಿ 370–380 ರೂ ಆಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
ಬೆಲೆ ಹೆಚ್ಚಳಕ್ಕೆ ಕಾರಣವೇನು?
ಕೋಳಿ ಮಾಂಸದ ದಿಢೀರ್ ಬೆಲೆ ಏರಿಕೆಗೆ ಹಲವು ಕಾರಣಗಳಿವೆ. ಪ್ರಮುಖವಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಕೋಳಿ ಸಾಕಾಣೆದಾರರು ನಡೆಸುತ್ತಿರುವ ಪ್ರತಿಭಟನೆ ಇದಕ್ಕೆ ಕಾರಣ ಎನ್ನಲಾಗಿದೆ. ನಿರ್ವಹಣಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಂಪನಿಗಳು ಹೆಚ್ಚು ಹಣ ನೀಡಬೇಕು ಎಂದು ಕೋಳಿ ಸಾಕಾಣೆದಾರರು ಒತ್ತಾಯಿಸುತ್ತಿದ್ದಾರೆ. ಇದೇ ಸಮಯದಲ್ಲಿ ಕೋಳಿ ಉತ್ಪಾದನೆಯಲ್ಲೂ ಕುಸಿತ ಕಂಡುಬಂದಿದ್ದು, ಬೇಡಿಕೆಗೆ ತಕ್ಕಂತೆ ಪೂರೈಕೆ ಸಾಧ್ಯವಾಗುತ್ತಿಲ್ಲ.
ಜನವರಿ 1ರಿಂದ ಕೋಳಿ ಉತ್ಪಾದನೆ ಸಂಪೂರ್ಣ ಸ್ಥಗಿತಗೊಳಿಸುವ ಮೂಲಕ ಹೋರಾಟ ತೀವ್ರಗೊಳಿಸಿದ್ದಾರೆ. ಈ ಹಿನ್ನೆಲೆ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಗೆ ಕೋಳಿ ಮಾಂಸದ ಪೂರೈಕೆ ಬಹುತೇಕ ಸ್ಥಗಿತಗೊಂಡಿದೆ. ಆಂಧ್ರಪ್ರದೇಶದಲ್ಲಿಯೂ ಕೋಳಿ ಮಾಂಸದ ಬೆಲೆ ಹೆಚ್ಚಾಗಿದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಕೋಳಿಗಳ ಬೆಳವಣಿಗೆ ನಿಧಾನವಾಗುತ್ತದೆ. ಅಲ್ಲದೇ ಬಹುತೇಕ ಕೋಳಿಗಳು ಈ ಸಂದರ್ಭದಲ್ಲಿ ಸಾಯುತ್ತವೆ ಎಂದು ಹೇಳಲಾಗುತ್ತದೆ. ಇದೂ ಸಹ ದರ ಹೆಚ್ಚಳದಲ್ಲಿ ಪ್ರಮುಖ ಪಾತ್ರ ವಹಿಸಬಹುದು.
Tomato Price Hike: ಟೊಮೆಟೊ ಬೆಲೆ ಗಗನಕ್ಕೆ, ತರಕಾರಿ ಬೆಲೆಯೂ ಹೆಚ್ಚಳ, ಗ್ರಾಹಕ ಕಂಗಾಲು
ಹೋಟೆಲ್‌ಗಳಲ್ಲಿ ದರ ಹೆಚ್ಚಳ
ಚಿಕನ್ ಬೆಲೆ ಏರಿಕೆಯಿಂದ ನಾನ್‌ವೆಜ್ ರೆಸ್ಟೋರೆಂಟ್‌ಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಚಿಕನ್ ಬಿರಿಯಾನಿ, ಚಿಕನ್ ಕಬಾಬ್ ಸೇರಿದಂತೆ ಹಲವು ನಾನ್‌ವೆಜ್ ಖಾದ್ಯಗಳ ಬೆಲೆಯಲ್ಲಿ ಏರಿಕೆ ಕಾಣಬಹುದು.