ನೈಸ್ ಬಳಿ ಇರುವ ಭೂಮಿ ಟೌನ್ʼಶಿಪ್ʼಗೆ ಕೊಡಬಹುದೇ ? ಸರಕಾರಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಥ್ ಪತ್ರ
ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಯಲ್ಲಿ ನೀಡಲಾಗಿರುವ ಪೈಕಿ ಬಳಕೆ ಯಾಗದೆ ಉಳಿದಿರುವ ಸರಕಾರಿ ಭೂಮಿ ಯನ್ನು ಹಿಂಪಡೆದು, ಉದ್ದೇಶಿತ ಬಿಡದಿ ಟೌನ್ ಶಿಪ್ ಯೋಜನೆಗೆ ಬಳಸಿಕೊಳ್ಳುವ ಸಾಧ್ಯವೇ? ಎನ್ನುವ ಬಗ್ಗೆ ಪರಿಶೀಲಿಸಿ. ಇದರಿಂದಾಗಿ, ರೈತರ ಫಲವತ್ತಾದ ಕೃಷಿ ಭೂಮಿ ಸ್ವಾಧೀನಪಡಿಸಿ ಕೊಳ್ಳುವುದನ್ನು ತಪ್ಪಿಸಬಹುದು ಅಥವಾ ಕಡಿಮೆ ಮಾಡಬಹುದು ಎಂದು ಗೆಹ್ಲೋಥ್ ಅಭಿಪ್ರಾಯಪಟ್ಟಿದ್ದಾರೆ.
-
ಬೆಂಗಳೂರು: ವಿವಾದಕ್ಕೆ ಕಾರಣವಾಗಿರುವ ಬಿಡದಿ ಟೌನ್‌ಶಿಪ್ ಗೊಂದಲಕ್ಕೆ ಇದೀಗ ಲೋಕ ಭವನ ‘ಎಂಟ್ರಿ’ಯಾಗಿದ್ದು, ಬಿಡದಿ ಟೌನ್‌ಶಿಪ್‌ಗೆ ನೈಸ್ ಯೋಜನೆಗೆ ನೀಡಿ, ಬಳಕೆಯಾಗದೇ ಇರುವ ಸರಕಾರಿ ಭೂಮಿ ಯನ್ನು ನೀಡಬಹುದೇ ಎಂದು ಪರಿಶೀಲಿಸಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಥ್(Governor Thawar Chand Gehlot) ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ನಿರ್ದೇಶನ ನೀಡಿದ್ದಾರೆ.
ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಯಲ್ಲಿ ನೀಡಲಾಗಿರುವ ಪೈಕಿ ಬಳಕೆಯಾಗದೆ ಉಳಿದಿರುವ ಸರಕಾರಿ ಭೂಮಿಯನ್ನು ಹಿಂಪಡೆದು, ಉದ್ದೇಶಿತ ಬಿಡದಿ ಟೌನ್ ಶಿಪ್ ಯೋಜನೆಗೆ ಬಳಸಿಕೊಳ್ಳುವ ಸಾಧ್ಯವೇ? ಎನ್ನುವ ಬಗ್ಗೆ ಪರಿಶೀಲಿಸಿ. ಇದರಿಂದಾಗಿ, ರೈತರ ಫಲವತ್ತಾದ ಕೃಷಿ ಭೂಮಿ ಸ್ವಾಧೀನಪಡಿಸಿ ಕೊಳ್ಳುವುದನ್ನು ತಪ್ಪಿಸಬಹುದು ಅಥವಾ ಕಡಿಮೆ ಮಾಡಬ ಹುದು ಎಂದು ಗೆಹ್ಲೋಥ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Bidadi Township: ಬಿಡದಿ ಟೌನ್‌ಶಿಪ್‌ಗೆ ಭೂಮಿ ನೀಡಲು ಸಿದ್ಧ; ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲು ಸಿಎಂಗೆ ರೈತರ ಮನವಿ
ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಹಾಗೂ ಬೈರಮಂಗಲ-ಕುಂಚಾಗರನಹಳ್ಳಿ ಪಂಚಾ ಯಿತಿಗಳ ರೈತ ಹಿತರಕ್ಷಣಾ ಸಮಿತಿಗಳು ನೀಡಿದ ಮನವಿಯನ್ನು ಉಲ್ಲೇಖಿಸಿ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಆಗ 13ರಂದು ಪತ್ರ ಬರೆದಿದ್ದಾರೆ.
ನೈಸ್ ಯೋಜನೆಗಾಗಿ ನೀಡಲಾದ ಜಮೀನಿನಲ್ಲಿ ರಿಂಗ್ ರಸ್ತೆ, ಲಿಂಕ್ ರಸ್ತೆ ಮತ್ತಿತರ ಕಾಮಗಾರಿಗಳಿಗೆ ಕೇವಲ 376 ಎಕರೆ ಮಾತ್ರ ಬಳಕೆಯಾಗಿದೆ. ಉಳಿದ ಸುಮಾರು 6757 ಎಕರೆ ಸರಕಾರಿ ಜಮೀನು ಬಳಕೆಯಾಗದೆ ನೈಸ್ ಅಥವಾ ಇತರ ಖಾಸಗಿ ಸಂಸ್ಥೆಗಳ ಅಕ್ರಮ ವಶದಲ್ಲಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಬಿಡದಿ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆಗಾಗಿ ಒಂಬತ್ತು ಗ್ರಾಮಗಳ ವ್ಯಾಪ್ತಿಯ ಸುಮಾರು 7431 ಎಕರೆ ಭೂಮಿ ಸ್ವಾಧೀನಕ್ಕೆ ಪ್ರಕ್ರಿಯೆ ನಡೆಯುತ್ತಿದೆ. ಐದು ಲಕ್ಷಕ್ಕೂ ಹೆಚ್ಚು ಹಣ್ಣಿನ ಗಿಡಗಳು, 840 ಎಕರೆ ಭೂಮಿ, 501 ಎಕರೆ ಹಿಪ್ಪುನೇರಳೆ (ರೇಷ್ಮೆ) ಬೇಸಾಯ ಹಾಗೂ ಲಕ್ಷಾಂತರ ಲೀಟರ್ ಹಾಲು ಉತ್ಪಾದಿಸುವ ಹೈನು ಗಾರಿಕೆ ವಲಯ ನಾಶವಾಗುವುದನ್ನು ತಪ್ಪಿಸ ಬಹುದು.
ಸಾವಿರಾರು ರೈತ ಕುಟುಂಬಗಳ ಸ್ಥಳಾಂತರ ಹಾಗೂ ಸಂಕಷ್ಟವನ್ನು ಮಿತಿಗೊಳಿಸ ಬಹುದು. ಸರಕಾರಕ್ಕೆ ಭೂಸ್ವಾಧೀನದ ಕೋಟ್ಯಂತರ ರುಪಾಯಿ ವೆಚ್ಚ ಹಾಗೂ ಕಾನೂನು ಸಂಘರ್ಷವೂ ಕಡಿಮೆಯಾಗಲಿದೆ ಎನ್ನುವ ವಿಷಯ ಮನವಿಯಲ್ಲಿದೆ. ಆದ್ದರಿಂದ ಈ ಎಲ್ಲ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯಪಾಲ ಗೆಹ್ಲೋಥ್ ಅವರು, ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಂಡು, ಶೀಘ್ರವೇ ಕೈಗೊಂಡ ಕ್ರಮಗಳ ವರದಿ ಯನ್ನು ತಮಗೆ ಸಲ್ಲಿಸುವಂತೆ ಮುಖ್ಯ ಕಾರ್ಯ ದರ್ಶಿಯವರಿಗೆ ನಿರ್ದೇಶಿಸಿದ್ದಾರೆ.