ನಮ್ಮ ಮೆಟ್ರೋ ಪಿಂಕ್ ಲೈನ್‌ನ ಪರಿಶೀಲನೆ ಪೂರ್ಣ; ಎಲಿವೇಟೆಡ್ ಮಾರ್ಗದ ಸುರಕ್ಷತಾ ಪರಿಶೀಲನೆ
Namma Metro: ನಮ್ಮ ಮೆಟ್ರೋ ಪಿಂಕ್ ಲೈನ್‌ನ ಕಾಳೇನ ಅಗ್ರಹಾರ–ತಾವರೆಕೆರೆ ನಡುವಿನ 7.5 ಕಿ.ಮೀ. ಎಲಿವೇಟೆಡ್ ಮಾರ್ಗದ ಸುರಕ್ಷತಾ ಪರಿಶೀಲನೆ ಪೂರ್ಣಗೊಂಡಿದೆ. ಅಕ್ಟೋಬರ್ 6ರಿಂದ 8ರವರೆಗೆ ದಕ್ಷಿಣ ವಲಯ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತ (ಸಿಎಂಆರ್‌ಎಸ್) ವಿ. ವೆಂಕಟಸುಬ್ರಮಣಿಯನ್ ನೇತೃತ್ವದಲ್ಲಿ ಪರಿಶೀಲನಾ ಕಾರ್ಯ ನಡೆಯಿತು.
ನಮ್ಮ ಮೆಟ್ರೋ ಸುರಕ್ಷತಾ ಪರಿಶೀಲನೆ -
ಬೆಂಗಳೂರು, ಅ. 8: ಬಹು ನಿರೀಕ್ಷಿತ ನಮ್ಮ ಮೆಟ್ರೋ (Namma Metro) ಪಿಂಕ್ ಲೈನ್ ಆರಂಭಕ್ಕೆ ಸಂಬಂಧಿಸಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಕಾಳೇನ ಅಗ್ರಹಾರ–ತಾವರೆಕೆರೆ ನಡುವಿನ 7.5 ಕಿ.ಮೀ. ಎಲಿವೇಟೆಡ್ ಮಾರ್ಗದ ಸುರಕ್ಷತಾ ಪರಿಶೀಲನೆ ಪೂರ್ಣಗೊಂಡಿದೆ. ಅಕ್ಟೋಬರ್ 6ರಿಂದ 8ರವರೆಗೆ ದಕ್ಷಿಣ ವಲಯ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತ (ಸಿಎಂಆರ್‌ಎಸ್) ವಿ. ವೆಂಕಟಸುಬ್ರಮಣಿಯನ್ ನೇತೃತ್ವದಲ್ಲಿ ಪರಿಶೀಲನಾ ಕಾರ್ಯ ನಡೆಯಿತು. ಈ ಮಾರ್ಗವು ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ ಮತ್ತು ತಾವರೆಕೆರೆ ಸೇರಿ ಒಟ್ಟು 6 ನಿಲ್ದಾಣಗಳನ್ನು ಒಳಗೊಂಡಿದೆ. ಈ ಸುರಕ್ಷತಾ ತಪಾಸಣೆಯು ಮಾರ್ಗದಲ್ಲಿ ಪ್ರಯಾಣಿಕರ ಸೇವೆಯನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಮಹತ್ವದ ಮೈಲುಗಲ್ಲು ಎನಿಸಿಕೊಂಡಿದೆ.
ಅಕ್ಟೋಬರ್ 6ರಂದು ವೆಂಕಟಸುಬ್ರಮಣಿಯನ್ ಮತ್ತು ಅವರ ತಂಡವು ಮುಖ್ಯ ಮಾರ್ಗ ಹಾಗೂ ಸಂಬಂಧಿತ ಮೂಲಸೌಕರ್ಯಗಳನ್ನು ಮೋಟಾರ್ ಟ್ರಾಲಿ ಮೂಲಕ ಪರಿಶೀಲಿಸಿತು. ಅಕ್ಟೋಬರ್ 7ರಂದು ಮೋಟಾರ್ ಟ್ರಾಲಿ ತಪಾಸಣೆಯನ್ನು ಮುಂದುವರಿಸುವುದರ ಜತೆಗೆ ಕೋತನೂರು ಡಿಪೋದ ಸೌಲಭ್ಯಗಳನ್ನು ಪರಿಶೀಲಿಸಿ, ಮುಖ್ಯ ಮಾರ್ಗದಲ್ಲಿ ಮೆಟ್ರೋ ರೈಲುಗಳ ಪ್ರಾಯೋಗಿಕ ಸಂಚಾರ ಮತ್ತು ವಿವಿಧ ಪರೀಕ್ಷೆಗಳನ್ನು ನಡೆಸಿತು. ಅಕ್ಟೋಬರ್ 8ರಂದು ಬೈಯಪ್ಪನಹಳ್ಳಿಯಲ್ಲಿರುವ ಕಾರ್ಯಾಚರಣೆ ನಿಯಂತ್ರಣ ಕೇಂದ್ರವನ್ನು (OCC) ಪರಿಶೀಲಿಸುವ ಮೂಲಕ 3 ದಿನಗಳ ತಪಾಸಣೆಯನ್ನು ಪೂರ್ಣಗೊಳಿಸಲಾಯಿತು.
ನಮ್ಮ ಮೆಟ್ರೋದ ಎಕ್ಸ್ ಪೋಸ್ಟ್:
Media Release -CMRS INSPECTION on Pink Line of Namma Metro sr https://t.co/jsSMABH0Wo
— ನಮ್ಮ ಮೆಟ್ರೋ (@OfficialBMRCL) October 8, 2026
ಬಿಎಂಆರ್‌ಸಿಎಲ್ (Bangalore Metro Rail Corporation Limited) 2026ರ ಆಗಸ್ಟ್‌ನಲ್ಲಿ ಸಂಶೋಧನಾ ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆ (RDSO) ವೇಗ ಪ್ರಮಾಣಪತ್ರವನ್ನು ಪಡೆದುಕೊಂಡಿತ್ತು. ನಂತರ ರೈಲ್ವೆ ಮಂಡಳಿಯಿಂದ ಮೆಟ್ರೋ ರೈಲು ಬೋಗಿಗಳಿಗೆ ತಾತ್ಕಾಲಿಕ ಅನುಮೋದನೆ ಮತ್ತು ಸಿಗ್ನಲಿಂಗ್ ವ್ಯವಸ್ಥೆಗೆ ಸ್ವತಂತ್ರ ಸುರಕ್ಷತಾ ಮಾಲ್ಯಮಾಪಕರಿಂದ (ISA) ಸುರಕ್ಷತಾ ಪ್ರಮಾಣೀಕರಣವನ್ನು ಪಡೆಯಲಾಗಿತ್ತು. ಸಾರ್ವಜನಿಕ ಪ್ರಯಾಣಿಕರ ಸಂಚಾರಕ್ಕೆ ಈ ಮಾರ್ಗವನ್ನು ಮುಕ್ತಗೊಳಿಸುವ ಮೊದಲು ಸಿಎಂಆರ್‌ಎಸ್ ನಡೆಸುವ ತಪಾಸಣೆ ಮುಖ್ಯ.
ನಮ್ಮ ಮೆಟ್ರೋ ನೇರಳೆ ಲೈನಿಗೆ ಜಿಗಿದು ವ್ಯಕ್ತಿ ಆತ್ಮಹತ್ಯೆ, ಮೆಟ್ರೋ ಸಂಚಾರ ಸ್ಥಗಿತ
ತಪಾಸಣೆಯ ಸಂದರ್ಭದಲ್ಲಿ ಆರ್‌ಎಸ್ ಸೂಚಿಸಿರುವ ಅಂಶಗಳು ಮತ್ತು ಷರತ್ತುಗಳನ್ನು ಪಾಲಿಸಿದ ನಂತರವೇ ಪ್ರಯಾಣಿಕರ ಸಂಚಾರಕ್ಕೆ ಅನುಮೋದನೆ ನೀಡಲಾಗುತ್ತದೆ. ಪಿಂಕ್ ಮಾರ್ಗದ ಈ ಎತ್ತರಿಸಿದ ವಿಭಾಗವು ಸಾರ್ವಜನಿಕ ಸೇವೆಗೆ ಮುಕ್ತಗೊಂಡ ಬಳಿಕ ನಮ್ಮ ಮೆಟ್ರೋದ ಮಾರ್ಗವು 96.10 ಕಿ.ಮೀ.ಯಿಂದ 103.60 ಕಿ.ಮೀ.ಗೆ ವಿಸ್ತರಣೆಯಾಗಲಿದೆ. ಇದರಿಂದ ಬನ್ನೇರುಘಟ್ಟ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಮೆಟ್ರೋ ಸಂಪರ್ಕ ಮತ್ತಷ್ಟು ಸುಧಾರಿಸಲಿದ್ದು, ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಬಲ ದೊರೆಯಲಿದೆ ಎಂದು ನಮ್ಮ ಮೆಟ್ರೋ ಪ್ರಕಟಣೆಯಲ್ಲಿ ತಿಳಿಸಿದೆ.
ನಮ್ಮ ಮೆಟ್ರೋಗೆ ʼಬಸವ ಮೆಟ್ರೋʼ ಎಂದು ಹೆಸರಿಡಲು ಕೇಂದ್ರಕ್ಕೆ ಶಿಫಾರಸು: ಸಿಎಂ
ಹೊಸ ಡಿಟಿಜಿ ರೈಲುಗಳ ಸೇರ್ಪಡೆಗೆ ಸಿಎಂಆರ್‌ಎಸ್ ಅನುಮತಿ
ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಡಿಸ್ಟೆನ್ಸ್-ಟು-ಗೋ (DTG) ಸಿಗ್ನಲಿಂಗ್ ವ್ಯವಸ್ಥೆ ಹೊಂದಿರುವ ಸಿಆರ್‌ಆರ್‌ಸಿ ನಿರ್ಮಿತ ನೂತನ 6 ಬೋಗಿಗಳ ರೈಲುಗಳನ್ನು ಸೇರ್ಪಡೆಗೊಳಿಸಿ ಕಾರ್ಯಾಚರಣೆ ನಡೆಸಲು ಬಿಎಂಆರ್‌ಸಿಎಲ್ ದಕ್ಷಣ ವಲಯದ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಿಂದ ಅನುಮೋದನೆ ದೊರೆತಿದೆ. ಪ್ರಸ್ತುತ ಲಭ್ಯವಿರುವ 4 ರೂಲುಗಳನ್ನು ಹಂತ ಹಂತವಾಗಿ ವಾಜಿಜ್ಯ ಸೇವೆಗೆ ಪರಿಯಲಿಸಲಾಗುವುದು ಎಂದು ಇತ್ತೀಚೆಗೆ ಬಿಎಂಆರ್‌ಸಿಎಲ್ ಮಾಹಿತಿ ನೀಡಿತ್ತು.
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.