ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಫೆ.6ರಿಂದ 8ರವರೆಗೆ ಬೆಂಗಳೂರಿನ ಇಂಡಿಯನ್ ಇನ್ಸ್‌ ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಕ್ರಾಫ್ಟನ್ ಇಂಡಿಯಾದ ಕಾಲೇಜ್ ಕ್ಯಾಂಪಸ್ ಟೂರ್

ಇದು ಸಂಸ್ಥೆಯ ಪ್ರಮುಖ ತಳಮಟ್ಟದ ಯೋಜನೆಗಳಲ್ಲಿ ಒಂದಾಗಿದ್ದು, ಈ ವರ್ಷ ಎರಡನೇ ಆವೃತ್ತಿ ನಡೆಯುತ್ತಿದೆ. ಈ ಕಾರ್ಯಕ್ರಮವು ವೃತ್ತಿಪರ ಶೈಲಿಯ ಟೂರ್ನಮೆಂಟ್‌ ಗಳನ್ನು ನೇರವಾಗಿ 'ಪ್ರವೇಗ-12' ಕಾರ್ಯಕ್ರಮದೊಂದಿಗೆ ಸಂಯೋಜಿಸಲಿದ್ದು, ಈ ಮೂಲಕ ವಿದ್ಯಾರ್ಥಿಗಳಿಗೆ ಸಂಘಟಿತ ಮತ್ತು ಸ್ಪರ್ಧಾ ತ್ಮಕ ವಾತಾವರಣದಲ್ಲಿ ಸ್ಪರ್ಧಿಸುವ ಅವಕಾಶವನ್ನು ಒದಗಿಸಲಿದೆ.

ಫೆ.6ರಿಂದ 8ರವರೆಗೆ ಕ್ರಾಫ್ಟನ್ ಇಂಡಿಯಾದ ಕಾಲೇಜ್ ಕ್ಯಾಂಪಸ್ ಟೂರ್

-

Ashok Nayak
Ashok Nayak Feb 5, 2026 11:19 PM

ಕಾಲೇಜು ಮಟ್ಟದ ಬಿಜಿಎಂಐ ಮತ್ತು ರಿಯಲ್ ಕ್ರಿಕೆಟ್ ಟೂರ್ನಮೆಂಟ್‌ ಗಳ ಮೂಲಕ ಕ್ಯಾಂಪಸ್ ಆಟಗಾರರಿಗೆ ಸಂಘಟಿತ ಇ-ಸ್ಪೋರ್ಟ್ಸ್ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಸುಗಮ ಹಾದಿ ರೂಪಿಸಲು ವಿನೂತನ ಅಭಿಯಾನ

ಬೆಂಗಳೂರು: ಕ್ರಾಫ್ಟನ್ ಇಂಡಿಯಾ ಸಂಸ್ಥೆಯು ಕ್ಯಾಂಪಸ್ ಆಟಗಾರರು ಇ-ಸ್ಪೋರ್ಟ್ಸ್ ವಿಭಾಗ ದಲ್ಲಿ ಸುಲಭವಾಗಿ ತೊಡಗುವಂತೆ ಮಾಡುವ ಉದ್ದೇಶದಿಂದ ರಾಷ್ಟ್ರವ್ಯಾಪಿ ಕಾಲೇಜ್ ಕ್ಯಾಂಪಸ್ ಟೂರ್ ಆಯೋಜಿಸಿದ್ದು, ಇದೀಗ ಫೆ.6, 7 ಮತ್ತು 8 ರಂದು ಬೆಂಗಳೂರಿನ ಐಐಎಸ್‌ಸಿಯಲ್ಲಿ ಈ ಕ್ಯಾಂಪಸ್ ಟೂರ್ ನಡೆಯಲಿದೆ.

ಇದು ಸಂಸ್ಥೆಯ ಪ್ರಮುಖ ತಳಮಟ್ಟದ ಯೋಜನೆಗಳಲ್ಲಿ ಒಂದಾಗಿದ್ದು, ಈ ವರ್ಷ ಎರಡನೇ ಆವೃತ್ತಿ ನಡೆಯುತ್ತಿದೆ. ಈ ಕಾರ್ಯಕ್ರಮವು ವೃತ್ತಿಪರ ಶೈಲಿಯ ಟೂರ್ನಮೆಂಟ್‌ ಗಳನ್ನು ನೇರವಾಗಿ 'ಪ್ರವೇಗ-12' ಕಾರ್ಯಕ್ರಮದೊಂದಿಗೆ ಸಂಯೋಜಿಸಲಿದ್ದು, ಈ ಮೂಲಕ ವಿದ್ಯಾರ್ಥಿಗಳಿಗೆ ಸಂಘಟಿತ ಮತ್ತು ಸ್ಪರ್ಧಾತ್ಮಕ ವಾತಾವರಣದಲ್ಲಿ ಸ್ಪರ್ಧಿಸುವ ಅವಕಾಶವನ್ನು ಒದಗಿಸಲಿದೆ.

ಐಐಎಸ್‌ಸಿ ವಿದ್ಯಾರ್ಥಿಗಳು ಬಿಜಿಎಂಐ ಮತ್ತು ರಿಯಲ್ ಕ್ರಿಕೆಟ್ ಟೂರ್ನಮೆಂಟ್‌ ಗಳಲ್ಲಿ ಅಧಿಕೃತ ನಿಯಮಗಳು, ಅನುಭವಿ ಮೇಲ್ವಿಚಾರಣೆ ಮತ್ತು ಪ್ರಗತಿ ಸಾಧಿಸುವ ಗುರಿಗಳೊಂದಿಗೆ ಸ್ಪರ್ಧಿಸ ಲಿದ್ದಾರೆ. ಭಾಗವಹಿಸುವವರು ಸಾಮಾನ್ಯ ಗೇಮಿಂಗ್‌ ಗಿಂತ ಭಿನ್ನವಾಗಿ, ವೃತ್ತಿಪರ ಇ-ಸ್ಪೋರ್ಟ್ಸ್‌'ನ ಶಿಸ್ತು ಮತ್ತು ತೀವ್ರ ಸ್ಪರ್ಧೆಯನ್ನು ಎದುರಿಸಲಿದ್ದಾರೆ. ಈ ಪಂದ್ಯಾವಳಿಯು ಅಧಿಕೃತ ನಿಯಮಾವಳಿ ಗಳು, ನೇರ ವೀಕ್ಷಕ ವಿವರಣೆ ಮತ್ತು ಅತ್ಯುತ್ತಮ ಪ್ರದರ್ಶನ ನೀಡುವವರಿಗೆ ವಿಶೇಷ ಮನ್ನಣೆಯನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: Bangalore News: ಡಾ.ವಿಷ್ಣು ಭರತ್ ಆಲಂಪಳ್ಳಿ ಅವರ ಲೈಫ್ ಟ್ವಿಸ್ಟ್ ಅಂಡ್ ಟರ್ನ್ ಎಂಬ ಪುಸ್ತಕ ಬಿಡುಗಡೆ

ವಿದ್ಯಾರ್ಥಿಗಳ ಅಪಾರ ಬೇಡಿಕೆಯಿಂದಾಗಿ ದೇಶಾದ್ಯಂತ 128 ಕಾಲೇಜುಗಳಿಗೆ ಈ ಅಭಿಯಾನ ವಿಸ್ತರಿಸಲಾಗಿದೆ. ಈ ಪ್ರವಾಸದ ಮೊದಲ ಆವೃತ್ತಿಯಲ್ಲಿ ಭಾರತದಾದ್ಯಂತ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆರಂಭದಲ್ಲಿ 64 ಕಾಲೇಜುಗಳಿಗೆ ಯೋಜಿಸಲಾಗಿದ್ದ ಈ ಕಾರ್ಯ ಕ್ರಮವು ಶೇ. 32ರಷ್ಟು ವಿಸ್ತಾರಗೊಂಡು 85 ಕಾಲೇಜುಗಳಿಗೆ ತಲುಪಿತ್ತು. ಇದೀಗ ಇನ್ನೂ ಹೆಚ್ಚಿನ ಕಾಲೇಜುಗಳನ್ನು ಸೇರಿಸಲಾಗಿದೆ. ಈ ಬೆಳವಣಿಗೆಯು ಕಾಲೇಜು ಮಟ್ಟದಲ್ಲಿ, ವಿಶೇಷವಾಗಿ ಮಹಾ ನಗರಗಳನ್ನು ಹೊರತಾದ ಉದಯೋನ್ಮುಖ ಇ-ಸ್ಪೋರ್ಟ್ಸ್ ಹಬ್‌ ಗಳಲ್ಲಿ ವಿಶ್ವಾಸಾರ್ಹ ಸ್ಪರ್ಧಾ ತ್ಮಕ ವೇದಿಕೆಗಳಿಗೆ ಹೆಚ್ಚುತ್ತಿರುವ ಆಸಕ್ತಿಯನ್ನು ತೋರಿಸುತ್ತದೆ.

ಐಐಎಸ್‌ಸಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ತಂಡಗಳು 'ವಲಯ ಮಟ್ಟದ' ಸ್ಪರ್ಧೆಗಳಲ್ಲಿ ಸ್ಪರ್ಧಿಸುವ ಅರ್ಹತೆ ಪಡೆಯುತ್ತಾರೆ. ಈ ವಲಯ ಹಂತಗಳಲ್ಲಿ ಉತ್ತಮ ಸಾಧನೆ ಮಾಡುವ ತಂಡಗಳಿಗೆ ಕ್ರಾಫ್ಟನ್ ಇಂಡಿಯಾದ ಉನ್ನತ ಮಟ್ಟದ ಅರ್ಹತಾ ಸುತ್ತುಗಳಿಗೆ ಆಮಂತ್ರಣ ನೀಡಲಾಗುವುದು. ಇದರಲ್ಲಿ ಬಿಜಿಐಎಸ್ ಮತ್ತು ಬಿಎಂಪಿಸ್ ನಂತಹ ಪ್ರಮುಖ ಟೂರ್ನಮೆಂಟ್‌ ಗಳಿಗೆ ಪ್ರವೇಶ ಪಡೆಯುವ ಅವಕಾಶಗಳೂ ಸೇರಿವೆ. ಅನೇಕ ವಿದ್ಯಾರ್ಥಿಗಳಿಗೆ, ಇದು ಭಾರತದಲ್ಲಿ ವೇಗವಾಗಿ ವೃತ್ತಿಪರಗೊಳ್ಳುತ್ತಿರುವ ಇ-ಸ್ಪೋರ್ಟ್ಸ್ ಕ್ಷೇತ್ರಕ್ಕೆ ಮೊದಲ ವ್ಯವಸ್ಥಿತ ಪ್ರವೇಶ ಹಂತ ವಾಗಿದೆ. ಇತ್ತೀಚಿನ ಕೇಂದ್ರ ಬಜೆಟ್ 2025-26 ರಲ್ಲಿ 'ಕ್ರಿಯೇಟರ್ ಲ್ಯಾಬ್‌ಗಳು' ಮತ್ತು ಡಿಜಿಟಲ್ ಆವಿಷ್ಕಾರ ಮೂಲಸೌಕರ್ಯಗಳಿಗೆ ನೀಡಲಾದ ಒತ್ತು, ತಳಮಟ್ಟದ ಪ್ರತಿಭೆಗಳ ಬೆಳವಣಿಗೆಯನ್ನು ಇನ್ನಷ್ಟು ವೇಗಗೊಳಿಸುವ ಮತ್ತು ಸ್ಪರ್ಧಾತ್ಮಕ ಗೇಮಿಂಗ್ ವೃತ್ತಿಜೀವನಕ್ಕೆ ಗಟ್ಟಿ ಅಡಿಪಾಯ ಹಾಕುವ ನಿರೀಕ್ಷೆಯಿದೆ.

ಈ ಕುರಿತು ಮಾತನಾಡಿದ ಕ್ರಾಫ್ಟನ್ ಇಂಡಿಯಾದ ಇ- ಸ್ಪೋರ್ಟ್ಸ್ ವಿಭಾಗದ ಸಹ ನಿರ್ದೇಶಕರಾದ ಕರಣ್ ಪಾಠಕ್ ಅವರು, "ಗಂಭೀರ ಸ್ಪರ್ಧೆ ಮತ್ತು ಮನ್ನಣೆಗಾಗಿ ಕಾಲೇಜು ಕ್ಯಾಂಪಸ್‌ ಗಳಲ್ಲಿ ಆಸಕ್ತಿ ಹೆಚ್ಚಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಅದಕ್ಕೆ ಪೂರಕವಾಗಿ ವಿದ್ಯಾರ್ಥಿಗಳ ಸ್ಥಳಕ್ಕೇ ನಾವು ಹೋಗಿ ಅವರ ಹುಮ್ಮಸ್ಸಿಗೆ ತಕ್ಕಂತೆ ಅರ್ಥಪೂರ್ಣ ನಿರ್ದೇಶನ ನೀಡುವುದು ನಮ್ಮ ಉದ್ದೇಶ ವಾಗಿದೆ. ಇಂತಹ ಕ್ಯಾಂಪಸ್ ಟೂರ್‌ ಗಳ ಮೂಲಕ ನಾವು ಸ್ಥಳೀಯ ಆಸಕ್ತರ ಮಾತುಗಳನ್ನು ಕೇಳಲು, ಅವರಿಂದ ಕಲಿಯಲು ಮತ್ತು ಇ-ಸ್ಪೋರ್ಟ್ಸ್ ಅನ್ನು ತಳಮಟ್ಟದಿಂದಲೇ ಬೆಳೆಸಲು ಸಾಧ್ಯವಾಗುತ್ತದೆ" ಎಂದು ತಿಳಿಸಿದರು.

ಬೆಂಗಳೂರಿಗೆ ವ್ಯವಸ್ಥಿತ ಸ್ಪರ್ಧಾತ್ಮಕ ಗೇಮಿಂಗ್ ಅನ್ನು ತರುವ ಮೂಲಕ, ಕ್ರಾಫ್ಟನ್ ಇಂಡಿಯಾವು ಇ-ಸ್ಪೋರ್ಟ್ಸ್ ಅನ್ನು ಒಂದು ಮುಖ್ಯವಾಹಿನಿಯ ಹವ್ಯಾಸವಾಗಿ ಬೆಳೆಸುತ್ತಿದೆ.