ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಡಿಕೆ, ಸಿದ್ದು, ಹರಿ ದಿಲ್ಲಿಗೆ: ಸಂಪುಟ ವಿಸ್ತರಣೆ ಫಿಕ್ಸ್‌

ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ವಿದೇಶದಿಂದ ವಾಪಸಾಗುತ್ತಿದ್ದಂತೆ, ರಾಜ್ಯ ಕಾಂಗ್ರೆಸ್‌ನಲ್ಲಿ ಸಂಪುಟ ರಚನೆಯ ಪ್ರಕ್ರಿ ಯೆಗೆ ವೇಗ ಸಿಕ್ಕಿದೆ. ಇದಕ್ಕೆ ಪೂರಕ ಎನ್ನುವಂತೆ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿ ಪ್ರಸಾದ್ ದೆಹಲಿ ಪ್ರವಾಸ ಕೈಗೊಂಡಿರುವುದು ಸಂಪುಟ ವಿಸ್ತರಣೆಗೆ ಕಾಲಕೂಡಿ ಬಂದಿದೆ ಎನ್ನುವ ಮಾತು ಗಳಿಗೆ ಪುಷ್ಟಿ ನೀಡಿದೆ.

ಡಿಕೆ, ಸಿದ್ದು, ಹರಿ ದಿಲ್ಲಿಗೆ: ಸಂಪುಟ ವಿಸ್ತರಣೆ ಫಿಕ್ಸ್‌

-

Profile
Ashok Nayak Jul 16, 2026 9:03 AM

ದೆಹಲಿಗೆ ತೆರಳುವ ಮುನ ಸಿದ ರಾಮಯ್ಯ ಜತೆ ಸಿಎಂ ಡಿಕೆ ದೀರ್ಘ ಚರ್ಚೆ ಪಟ್ಟಿ ಇಂದೇ ಅಂತಿಮ ನಿರೀಕ್ಷೆ

ಜು.17-19ರೊಳಗೆ ಸಂಪುಟ ವಿಸ್ತರಣೆ

ಖಾಲಿಯಿರುವ 20 ಸ್ಥಾನಕ್ಕಾಗಿ 60ರಿಂದ 70 ಶಾಸಕರಿಂದ ಪ್ರಬಲ ಲಾಬಿ

ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಬುಲಾವ್ ನಿರೀಕ್ಷೆಯ ಲ್ಲಿದ್ದ ರಾಜ್ಯ ನಾಯಕರು ದೆಹಲಿಗೆ ಪ್ರಯಾಣಿಸಿದ್ದು, ಸಚಿವ ಸಂಪುಟ ವಿಸ್ತರಣೆ ಬಹುತೇಕ ಖಚಿತವೆನಿಸಿದೆ. ಮುಖ್ಯ ಮಂತ್ರಿ ಡಿ. ಕೆ.ಶಿವಕುಮಾರ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆದರೂ, ಪೂರ್ಣ ಪ್ರಮಾಣದ ಸಂಪುಟ ರಚನೆಯಾಗದಿರುವುದು ಸಾರ್ವಜನಿಕ ವಲಯದಲ್ಲಿ ಹಾಗೂ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ವಿದೇಶದಿಂದ ವಾಪಸಾಗುತ್ತಿದ್ದಂತೆ, ರಾಜ್ಯ ಕಾಂಗ್ರೆಸ್‌ನಲ್ಲಿ ಸಂಪುಟ ರಚನೆಯ ಪ್ರಕ್ರಿ ಯೆಗೆ ವೇಗ ಸಿಕ್ಕಿದೆ. ಇದಕ್ಕೆ ಪೂರಕ ಎನ್ನುವಂತೆ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿ ಪ್ರಸಾದ್ ದೆಹಲಿ ಪ್ರವಾಸ ಕೈಗೊಂಡಿರುವುದು ಸಂಪುಟ ವಿಸ್ತರಣೆಗೆ ಕಾಲಕೂಡಿ ಬಂದಿದೆ ಎನ್ನುವ ಮಾತು ಗಳಿಗೆ ಪುಷ್ಟಿ ನೀಡಿದೆ.

ಮೂಲಗಳ ಪ್ರಕಾರ ಜು.17ರಿಂದ 19ರೊಳಗೆ ಸಂಪುಟ ವಿಸ್ತರಣೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಗುರುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣು ಗೋಪಾಲ್, ರಣದೀಪ್ ಸುರ್ಜೇವಾಲ ಸಮ್ಮುಖದಲ್ಲಿ ಪುನಾರಚನೆಗೆ ಅಂತಿಮಮುದ್ರೆ ಹಾಕುವ ಸಾಧ್ಯತೆಯಿದೆ.

ಇದನ್ನೂ ಓದಿ: CM DK Shivakumar: ಬೆಂಗಳೂರಿನಾಚೆಗೆ ಮತ್ತಷ್ಟು ಹೊಸ ಬೆಂಗಳೂರುಗಳ ನಿರ್ಮಾಣ: ಸಿಎಂ ಡಿ.ಕೆ. ಶಿವಕುಮಾರ್

ದೆಹಲಿಗೆ ತೆರಳಿದ ಮೂವರು: ಬುಧವಾರ ಮಧ್ಯಾಹ್ನ 2ಗಂಟೆಗೆ ಮುಖ್ಯಮಂತ್ರಿಗಳು ದೆಹಲಿಗೆ ತೆರಳಬೇಕಿತ್ತು. ಆದರೆ ಬಿಡದಿ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸುದ್ದಿಗೋಷ್ಠಿಯ ಕಾರಣಕ್ಕೆ ಸಮಯವನ್ನು ಬದಲಾಯಿಸಿಕೊಂಡು ಮಧ್ಯಾಹ್ನ 4 ಗಂಟೆಗೆ ದೆಹಲಿಗೆ ತೆರಳಿದ್ದಾರೆ. ಡಿಕೆ ಜತೆಗೆ ಸಿದ್ದರಾಮಯ್ಯ ಪ್ರಯಾಣಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಪ್ರತ್ಯೇಕವಾಗಿ ಪ್ರಯಾಣ ಬೆಳೆಸಿದ್ದಾರೆ. ಇದಕ್ಕೂ ಮುನ್ನ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿದ ಡಿಕೆ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಈ ಪಟ್ಟಿಯಲ್ಲಿ ಕೆಲವೊಂದಷ್ಟು ಬದಲಾವಣೆಯನ್ನು ಹೈಕಮಾಂಡ್ ನಾಯಕರು ಸೂಚಿಸಲಿದ್ದು, ಅವರ ಸಲಹೆಗಳನ್ನು ಪರಿಗಣಿಸಿ ಪಟ್ಟಿ ಅಂತಿಮಗೊಳಿಸಿ, ಸಂಪುಟ ವಿಸ್ತರಣೆಯ ದಿನಾಂಕವನ್ನು ನಿಗದಿಪಡಿಸಿಕೊಂಡು ಬರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಬೀಡುಬಿಟ್ಟಿರುವ ಸಚಿವಾಕಾಂಕ್ಷಿಗಳು: ಗುರುವಾರ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಜತೆ ರಾಜ್ಯ ನಾಯಕರು ಚರ್ಚಿಸಲು ದೆಹಲಿಗೆ ಆಗಮಿಸುವ ಮೊದಲೇ, ಸಚಿವಾಕಾಂಕ್ಷಿಗಳು ದೆಹಲಿಗೆ ತಲುಪಿದ್ದಾರೆ. ತಮ್ಮ ತಮ್ಮ ಆಪ್ತರ ಮೂಲಕ ಪಕ್ಷದ ಹೈಕಮಾಂಡ್ ಹಾಗೂ ದೆಹಲಿ ನಾಯಕರ ಮೇಲೆ ಒತ್ತಡ ಹೇರುವ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಖಾಲಿಯಿರುವ 20 ಸಚಿವ ಸ್ಥಾನಕ್ಕೆ ಕನಿಷ್ಠ 60 ರಿಂದ 70 ಪ್ರಬಲಾಕಾಂಕ್ಷಿಗಳಿದ್ದು, ಅದರಲ್ಲಿ 50ಕ್ಕೂ ಹೆಚ್ಚು ಶಾಸಕರು ಎರಡು ಅಥವಾ ಅದಕ್ಕಿಂತ ಹೆಚ್ಚಿನ ಬಾರಿ ಶಾಸಕರಾಗಿದ್ದಾರೆ.

ವಿಧಾನಸಭಾ ಚುನಾವಣೆಗೆ ಒಂದು ವರ್ಷ 10 ತಿಂಗಳು ಬಾಕಿಯಿರುವಾಗ ಹಾಗೂ ಮುಂದಿನ ಕೆಲ ತಿಂಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ಎದುರಾಗುವುದರಿಂದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ, ವಿಸ್ತರಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಸಂಪುಟ ಸಭೆಯೂ ಮುಂದಕ್ಕೆ ಸಂಪುಟ ವಿಸ್ತರಣೆಯ ವಿಷಯವಾಗಿ ಚರ್ಚಿಸಲು ನಾಯಕರು ದೆಹಲಿಗೆ ತೆರಳಿದ್ದು, ವಾಪಸು ಯಾವಾಗ ಬರಲಿದ್ದಾರೆ ಎನ್ನುವ ಸ್ಪಷ್ಟತೆ ಇಲ್ಲವಾಗಿದೆ. ಆದ್ದರಿಂದ ಗುರುವಾರ ನಿಗದಿಯಾಗಿದ್ದ ಸಚಿವಸಂಪುಟ ಸಭೆಯನ್ನು ಮುಂದೂಡಲಾಗಿದೆ. ದೆಹಲಿಯಲ್ಲಿ ಪಕ್ಷದ ಹೈಕಮಾಂಡ್ ನೊಂದಿಗೆ ಚರ್ಚಿಸಿ, ವಿಸ್ತರಣೆಯನ್ನು ಖಚಿತಪಡಿಸಿಕೊಂಡೇ ಬರುವ ಸಾಧ್ಯತೆ ಯಿರುವುದರಿಂದ ಪೂರ್ಣಪ್ರಮಾಣದ ಸಂಪುಟದೊಂದಿಗೆ ಸಚಿವಸಂಪುಟ ಸಭೆ ನಡೆಸುವ ಆಲೋಚನೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ

ಬಿ.ಆರ್.ಪಾಟೀಲ್ ಸ್ಪೀಕರ್?

ಈ ನಡುವೆ ಯು.ಟಿ.ಖಾದರ್ ಸಚಿವರಾದ ಬಳಿಕ ತೆರವಾಗಿರುವ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ದಿ‌ನೇಶ್ ಗುಂಡೂರಾವ್, ಎಚ್.ಕೆ.ಪಾಟೀಲ್ ಅವರಲ್ಲಿ ಒಬ್ಬರು ಆಯ್ಕೆಯಾಗಬಹುದು ಎನ್ನಲಾಗಿತ್ತು. ಆದರೀಗ ಬಿ.ಆರ್.ಪಾಟೀಲ್ ಹೆಸರು ಮಂಚೂಣಿಯಲ್ಲಿದ್ದು, ಅವರ ಹೆಸರೇ ಅಂತಿಮವಾಗುವುದು ಬಹುತೇಕ ಖಚಿತ ಎನ್ನಲಾಗಿದೆ.

ಯಾರ್ಯಾರು ಸ್ಪರ್ಧೆಯಲ್ಲಿ?

ಸಂಪುಟ ವಿಸ್ತರಣೆ ವೇಳೆ ಒಕ್ಕಲಿಗ ಕೋಟಾದಲ್ಲಿ ಮಾಗಡಿ ಬಾಲಕೃಷ್ಣ, ಚಲುವರಾಯಸ್ವಾಮಿ ಹೆಸರು ಮುಂಚೂಣಿಯಲ್ಲಿದೆ. ಇನ್ನು ಶಿವಲಿಂಗೇಗೌಡರ ಪರವಾಗಿ ಸಿದ್ದರಾಮಯ್ಯ ಬ್ಯಾಟ್ ಮಾಡಿದ್ದು, ಮಲ್ಲಿಕಾರ್ಜುನ ಖರ್ಗೆ ಲೇಔಟ್ ಕೃಷ್ಣಪ್ಪ ಪರವಾಗಿ ಬ್ಯಾಟ್ ಮಾಡಿದ್ದಾರೆ. ಈ ಇಬ್ಬರಲ್ಲಿ ಒಬ್ಬರನ್ನು ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಮುಸ್ಲಿಂ ಕೋಟಾ ದಲ್ಲಿ ಎನ್.ಎ.ಹ್ಯಾರೀಸ್, ಸಲೀಂ ಅಹ್ಮದ್, ತನ್ವೀರ್ ಸೇಠ್, ರಿಜ್ವಾನ್ ಅರ್ಷದ್ ಹಾಗೂ ಜಮೀರ್ ಹೆಸರಿದೆ. ಈ ಪೈಕಿ ಸಲೀಂ ಅಹ್ಮದ್ ಹಾಗೂ ರಿಜ್ವಾನ್ ಅರ್ಷದ್ ಸಂಪುಟಕ್ಕೆ ಸೇರುವ ಸಾಧ್ಯತೆ ದಟ್ಟವಾಗಿದೆ.

ಏನೇನಾಯ್ತು?

ಯಾರ್ಯಾರಿಗೆ ಸಚಿವ ಸ್ಥಾನ ಕೊಡಬೇಕೆಂದು ಪಕ್ಷದ ರಾಜ್ಯ ನಾಯಕತ್ವದೊಳಕ್ಕೆ ಸುದೀರ್ಘ ಚರ್ಚೆ

ರಾಜ್ಯಮಟ್ಟದಲ್ಲಿ ಪಟ್ಟಿ ಅಂತಿಮವಾಗಿರುವ ಸುಳಿವು, ದಿಲ್ಲಿ ನಾಯಕರ ಅಂಕಿತಕ್ಕಾಗಿ ಇಂದು ಸಭೆ

ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಶಿವಕುಮಾರ್

ಶಿವಕುಮಾರ್, ಸಿದ್ದರಾಮಯ್ಯಗೂ ಮುನ್ನವೇ ದೆಹಲಿಗೆ ತೆರಳಿರುವ ಸಚಿವಾಕಾಂಕ್ಷಿಗಳಿಂದ ಒತ್ತಡ