ಸಿಎಂ ಡಿಕೆಶಿ ಹೇಳಿದ ಶ್ಲೋಕಗಳಿಗೆ ಬಿಜೆಪಿಗರೇ ಥಂಡಾ
ಸಿಎಂ ಶ್ಲೋಕಗಳನ್ನು ತದೇಕ ಚಿತ್ತದಿಂದ ಆಲಿಸಿದ ಬಿಜೆಪಿಯ ಸದಸ್ಯರು ಅವರ ಉಚ್ಚಾರ ಹಾಗೂ ಮಾತಿನ ಶೈಲಿಗೆ ತಲೆದೂಗುತ್ತಿರುವುದು ಕಂಡುಬಂತು. ಕೊರಗಲೇಕೆ, ಮರುಗಲೇಕೆ, ಹುಟ್ಟಿ ಬಂದಿದ್ದೇ.. ಅಳಲೇಕೆ, ಸುಖವೇ ಬರಲಿ, ದುಃಖವೇ ಬರಲಿ, ರೋಗ ಭೋಗವೇ ಇರಲಿ, ಎಲ್ಲಾ ಹೊತ್ತು, ಋಣ ತೆತ್ತು, ಮುಂದೆ ಪುಣ್ಯದ ಬೀಜ ಬಿತ್ತು ಎಂದು ಸಾವಿನ ಸತ್ಯ ವ್ಯಾಖ್ಯಾನಿಸಿದರು.
-
ಸಾವಿನ ಯಜಮಾನ ಭಗವಂತ, ಈ ಜಗತ್ತಿನ ತೋಟಗಾರ ಅವನು
ಶ್ಲೋಕ, ಸುಭಾಷಿತಗಳ ಮೂಲಕ ಗೆಳೆಯರು, ಗಣ್ಯರು, ಹಿರಿಯ ನಾಯಕರಿಗೆ ಸಂತಾಪ ಸೂಚಿಸಿದ ಸಿಎಂ
ಸುಧಾಕರ್ ಅಗಲಿಕೆ ಕಷ್ಟದಿಂದಲೇ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ
ವಿಧಾನಸಭೆ ಸಾವಿನ ಯಜಮಾನ ಭಗವಂತ. ಈ ಜಗತ್ತಿಗೆ ತೋಟಗಾರ ಅವನು. ಇವತ್ತು ನಾವು ಆ ತೋಟದಲ್ಲಿ ನಮ್ಮ ನಮ್ಮ ಬೀಜಗಳನ್ನು ಬಿತ್ತಿ, ಪ್ರತಿಯೊಬ್ಬರ ಸ್ವಭಾವಕ್ಕೆ ತಕ್ಕಂತೆ ಬೆಳೆದು, ಕೊನೆಗೆ ಸಾವನ್ನು ಪಡೆದುಕೊಡು ಹೋಗುತ್ತಿದ್ದೇವೆ.
ಗುರುವಾರ ಆರಂಭಗೊಂಡ ವಿಧಾನಸಭೆ ಅಧಿವೇಶನದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಸಾವಿನ ಕುರಿತು ತಾತ್ಪರ್ಯ ನೀಡಿದ್ದು ಹೀಗೆ. ವಿಧಾನಮಂಡಲ ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ಇತ್ತೀಚೆಗೆ ನಿಧನರಾದ ಗಣ್ಯರು, ರಾಜಕೀಯ ನಾಯಕರು, ರಾಷ್ಟ್ರದ ಸಾಧಕರಿಗೆ ಗೌರವ ಸಲ್ಲಿಸಲು ಸಂತಾಪ ಸೂಚಕ ನಿರ್ಣಯದ ಮೇಲೆ ಮುಖ್ಯಮಂತ್ರಿಗಳು ಮಾತನಾಡಿ, ಶ್ಲೋಕ, ಸುಭಾಷಿತ ಗಳೊಂದಿಗೆ ಅಗಲಿದ ಗಣ್ಯರಿಗೆ ನುಡಿನಮನ ಸಲ್ಲಿಸಿದರು.
ಸಿಎಂ ಶ್ಲೋಕಗಳನ್ನು ತದೇಕ ಚಿತ್ತದಿಂದ ಆಲಿಸಿದ ಬಿಜೆಪಿಯ ಸದಸ್ಯರು ಅವರ ಉಚ್ಚಾರ ಹಾಗೂ ಮಾತಿನ ಶೈಲಿಗೆ ತಲೆದೂಗುತ್ತಿರುವುದು ಕಂಡು ಬಂತು. ಕೊರಗಲೇಕೆ, ಮರುಗಲೇಕೆ, ಹುಟ್ಟಿ ಬಂದಿದ್ದೇ.. ಅಳಲೇಕೆ, ಸುಖವೇ ಬರಲಿ, ದುಃಖವೇ ಬರಲಿ, ರೋಗ ಭೋಗವೇ ಇರಲಿ, ಎಲ್ಲಾ ಹೊತ್ತು, ಋಣ ತೆತ್ತು, ಮುಂದೆ ಪುಣ್ಯದ ಬೀಜ ಬಿತ್ತು ಎಂದು ಸಾವಿನ ಸತ್ಯ ವ್ಯಾಖ್ಯಾನಿಸಿದರು.
ಇದನ್ನೂ ಓದಿ: Bangalore News: ಜಂತರ್ – ಮಂತರ್ ಯುವ ಸಂಗ್ರಾಮದಿಂದ ಮೋದಿ ಸರ್ಕಾರ ಪತನ ಸನ್ನಿಹಿತ: ಡಾ.ಆನಂದ ಕುಮಾರ್
ಹೀಗಾಗಿ ಸುಧಾಕರ್ ಅಗಲಿಕೆ ಕಷ್ಟದಿಂದಲೇ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಈಗ ಬಂದಿದೆ. ಸುಧಾಕರ್ ನನ್ನ ಆತ್ಮೀಯ ಗೆಳೆಯ. ಇಬ್ಬರದೂ ಒಂದೇ ವಯಸ್ಸು. ಆತನ ಉಸಿರು ಇಷ್ಟು ಬೇಗ ಹೋಗುತ್ತದೆ ಎಂದು ನಾವು, ನೀವು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸುಧಾಕರ್ ನನ್ನನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಬೇಕು ಅಂತ ಬಹಳ ಆಸೆ ಪಟ್ಟಿದ್ದರು. ನಿನ್ನ ಸಂಪುಟದಲ್ಲಿ ಮಂತ್ರಿಯಾಗದೇ ಇದ್ದರೂ ಚಿಂತೆ ಇಲ್ಲ ಎಂದಿದ್ದರು. ಪ್ರೀತಿ, ಗೆಳೆತನವನ್ನು ಒಪ್ಪಿಕೊಳ್ಳಬೇಕು. ಸಾವನ್ನು ಸ್ವಾಗತಿಸಬೇಕು ಎಂದು ಹಿರಿಯರು ಹೇಳಿದ್ದಾರೆ ಎಂದರು.
ಹುಟ್ಟುವಾಗ ಮಗು ಅಳುತ್ತಿರುತ್ತದೆ. ಆಗ ಸಮಾಜ ಬಹಳ ಸಂತೋಷ ಪಡುತ್ತದೆ. ಅದೇ ಮಗು ಬೆಳೆದು ದೊಡ್ಡವನಾಗಿ ಸಾಧನೆ ಮಾಡಿ ಸತ್ತಾಗ ಇದೇ ಸಮಾಜ ಅಳುತ್ತದೆ. ಗೆಳೆಯ ಸುಧಾಕರ್ ಅವರ ಸಾವು ಇನ್ನೂ ಕಣ್ಣ ಮುಂದಿದೆ. ಆ ಒಂದು ತಿಂಗಳು ಆತ ಸಾವು ಬದುಕಿನಲ್ಲಿ ಮಾಡಿದ ಹೋರಾಟ ನೆನೆಸಿಕೊಂಡರೆ ದುಃಖವಾಗುತ್ತದೆ ಎಂದು ಹೇಳಿದರು.
ಎಸ್.ಎಂ.ಕೃಷ್ಣ ಅವರು ಸಂಪುಟದಲ್ಲಿ ನಾನು ಸಹಕಾರ ಸಚಿವನಾಗಿದ್ದೆ. ಅಂದು ವಿಲಾಸ್ ರಾವ್ ದೇಶಮುಖ್ ಅವರನ್ನು ಆಹ್ವಾನಿಸಿ ಸಹಕಾರಿ ಸಪ್ತಾಹ ಮಾಡಿzವು. ಸಮಾರಂಭ ಮುಗಿದ ನಂತರ ಹಿರಿಯ ಅಧಿಕಾರಿಯೊಬ್ಬರು ನನ್ನ ಬಳಿ ಬಂದು, ‘ಕ್ಷಣಂ ಚಿತ್ತಂ ಕ್ಷಣಂ ವಿತ್ತಂ/ ಕ್ಷಣಂ ಜೀವತಿ ಮಾನವಃ/ ಯಮಸ್ಯ ಕರುಣಾ ನಾಸ್ತಿ ಧರ್ಮಸ್ಯ ತ್ವರಿತಾ ಗತಿಃ:ಎಂಬ ಶ್ಲೋಕ ಹೇಳಿದರು. ನಿನ್ನ ಪ್ರತಿ ಕ್ಷಣ ಪವಿತ್ರವಾದದ್ದು. ಒಳ್ಳೆದು ಮಾಡೋದಕ್ಕೆ ಕಾಯಲು ಹೋಗಬೇಡ.
ತೀರ್ಮಾನದಲ್ಲಿ ಜಾಗೃತರಾಗಿರಿ ಎಂದು ಅರ್ಥ ವಿವರಿಸಿದರು. ಈ ಮಾತನ್ನು ಹೇಳಿದ ಆ ಅಧಿ ಕಾರಿಗೆ ಮಾರನೇ ದಿನ ಬೆಳಗ್ಗೆಯೇ ಹೃದಯಾಘಾತವಾಗಿ, ಮೃತಪಟ್ಟರು ಎನ್ನುವ ಮಾಹಿತಿ ಬಂತು. ಈ ಘಟನೆಯಿಂದ ತಿಳಿಯಬೇಕಾದದ್ದು ಏನೆಂದರೆ, ನಾವುಗಳು ಯಾರೂ ಚಿರಂಜೀವಿಗಳಲ್ಲ ಎನ್ನುವುದನ್ನು ಮುಖ್ಯಮಂತ್ರಿಗಳು ಸದನಕ್ಕೆ ವಿವರಿಸಿದರು.
ಕಾಲಿನ ಶಸ್ತ್ರಚಿಕಿತ್ಸೆಗೆ ತೆರಳಿದಾಗ ಹೆಚ್ಚು ಕಡಿಮೆಯಾಗಿ ಸಾವಾಯಿತು. ನಾವೆಲ್ಲ ಅವರನ್ನು ಉಳಿಸಿ ಕೊಳ್ಳಲು ಬಹಳ ಪ್ರಯತ್ನ ಮಾಡಿದೆವು. ಆದರೆ ಸಾಧ್ಯವಾಗಲಿಲ್ಲ. ಆತನ ಸಾವನ್ನು ಬಹಳ ಕಷ್ಟ ದಿಂದಲೇ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಈಗ ಬಂದಿದೆ ಎಂದರು. ಸಾವನ್ನು ಒಪ್ಪಬೇಕು ಎಂದು ಶ್ರೀ ಕೃಷ್ಣ ಮಾರ್ಗದರ್ಶನ ನೀಡಿದ್ದಾನೆ. ಸಾವನ್ನು ಹುಡುಕಿಕೊಂಡು ಹೋಗಬೇಕು ಎಂದು ಬುದ್ದ ಹೇಳಿದ್ದಾನೆ.
ಸಾವಿಲ್ಲದ ಮನೆಯಿಂದ ಸಾಸಿವೆ ತೆಗೆದುಕೊಂಡು ಬಾ ಎಂದೂ ಅರಿವು ಮೂಡಿಸಿದ್ದಾನೆ. ಹುಟ್ಟು ನಮ್ಮದು ಅಲ್ಲ, ಸಾವು ನಮ್ಮದಲ್ಲ. ಇದರ ನಡುವೆ ಬರುವ ಬದುಕು ಮಾತ್ರ ನಮ್ಮದು ಎಂದರು.
ಸುಧಾಕರ್ ಅವರ ಮರಣದಲ್ಲಿ ನಾನು ಸಾರ್ಥಕತೆ ಕಂಡಿದ್ದೇನೆ. ಅವರು ಸೌಮ್ಯ, ಸ್ವಾಭಾವದ ಹಸನ್ಮುಖಿ ರಾಜಕಾರಣಿ. ಭಾರತ್ ಜೋಡೋ ಯಾತ್ರೆ ವೇಳೆ ಮಳೆ ಬಂದು ತೊಂದರೆಯಾದಾಗ ಕಾರ್ಯಕರ್ತರ ಸೈನ್ಯ ಕಟ್ಟಿಕೊಂಡು ಯಾತ್ರೆ ಯಶಸ್ವಿಗೊಳಿಸಿದರು. ಇವರ ಅಂದಿನ ಶ್ರಮ ನೆನಪಿಸಿಕೊಂಡು ರಾಹುಲ್ ಗಾಂಧಿ ಅವರು ಸುಧಾಕರ್ ಕುಟುಂಬದ ಜತೆ ಮಾತನಾಡಿ ಸಾಂತ್ವನ ಹೇಳಿದರು ಎಂದರು.
ಮೊದಲ ದಿನವೇ ಬಿರುಸಿನ ಚರ್ಚೆ: ವಿಧಾನಮಂಡಲದ ಅಧಿವೇಶನದ ಮೊದಲ ದಿನವೇ ಸಂತಾಪ ಸೂಚನೆ ಹಾಗೂ ನೂತನ ಸಚಿವರ ಪರಿಚಯ ವಿಚಾರವಾಗಿ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಸಣ್ಣ ಮಟ್ಟಿನ ಚರ್ಚೆ ನಡೆಯಿತು. ಸಂತಾಪ ಸೂಚನೆಯ ಗಂಭೀರ ಸಂದರ್ಭವನ್ನು ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿರುವವರ ಸಂಭ್ರಮದೊಂದಿಗೆ ಮಿಶ್ರಣ ಮಾಡಬಾರದು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಅಭಿಪ್ರಾಯಪಟ್ಟಿದ್ದು, ಇದಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಮತ ವ್ಯಕ್ತಪಡಿಸಿದರು. ವಿಧಾನಮಂಡಲದ ಅಧಿವೇಶನ ರಾಷ್ಟ್ರಗೀತೆ ವಂದೇ ಮಾತರಂ’ ಗಾಯನದೊಂದಿಗೆ ಆರಂಭವಾಯಿತು.
ಬಳಿಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇತ್ತೀಚೆಗೆ ಸಂಪುಟಕ್ಕೆ ಸೇರ್ಪಡೆಯಾದ ನೂತನ ಸಚಿವರನ್ನು ಸದನಕ್ಕೆ ಪರಿಚಯಿಸಲು ಮುಂದಾದರು. ಈ ವೇಳೆ ಎದ್ದು ನಿಂತ ಪ್ರತಿಪಕ್ಷ ನಾಯಕ ಆರ್.ಅಶೊಕ , ಸದನದಲ್ಲಿ ಸಂತಾಪ ಸೂಚನೆ ನಡೆಯಬೇಕಿದೆ. ಸಚಿವರಾಗಿ ಅಧಿಕಾರ ಸ್ವೀಕರಿಸಿರು ವವರಿಗೆ ಇದು ಸಂಭ್ರಮದ ವಿಚಾರ.
ಹೀಗಾಗಿ ಸಂತಾಪ ಸೂಚನೆಯ ಗಂಭೀರ ಸಂದರ್ಭದ ಜೊತೆಗೆ ನೂತನ ಸಚಿವರ ಪರಿಚಯದ ಸಂಭ್ರಮ ಮಿಶ್ರಣ ಮಾಡುವ ಹೊಸ ಸಂಪ್ರದಾಯ ಬೇಡ ಎಂದು ಹೇಳಿದರು. ಅಲ್ಲದೆ, ಅಽವೇಶನದ ಅಽಕೃತ ಕಾರ್ಯಕಲಾಪಗಳು ಸೋಮವಾರದಿಂದ ಆರಂಭವಾಗಲಿದ್ದು, ಅಂದೇ ನೂತನ ಸಚಿವ ರನ್ನು ಸದನಕ್ಕೆ ಪರಿಚಯಿಸಬಹುದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಭಾಧ್ಯಕ್ಷರ ಪೀಠದಲ್ಲಿದ್ದ ಹಂಗಾಮಿ ಸಭಾಧ್ಯಕ್ಷ ಟಿ.ಬಿ. ಜಯಚಂದ್ರ ಅವರು ಮಧ್ಯಪ್ರವೇಶಿಸಿ, ಸಂತಾಪ ಸೂಚನಾ ನಿರ್ಣಯ ಇನ್ನೂ ಮಂಡನೆಯಾಗಿಲ್ಲ. ಆದ್ದರಿಂದ ಮುಖ್ಯ ಮಂತ್ರಿ ಅವರು ನೂತನ ಸಚಿವರನ್ನು ಸದನಕ್ಕೆ ಪರಿಚಯಿಸಬಹುದು ಎಂದು ಅಭಿಪ್ರಾಯ ಪಟ್ಟರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರತಿಪಕ್ಷದ ನಾಯಕ ಆರ್. ಅಶೋಕ ಅವರ ಭಾವನೆಗಳಿಗೆ ತಮ್ಮ ಬೆಂಬಲವಿದೆ ಎಂದು ಹೇಳಿದರು. ಮೊದಲು ಸಂತಾಪ ಸೂಚನೆ ನಡೆಯಲಿ. ಬಳಿಕ ನೂತನ ಸಚಿವರನ್ನು ಸದನಕ್ಕೆ ಪರಿಚಯಿಸುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಚೆನ್ನಮ್ಮರಿಗೆ ಸರಕಾರಿ ಗೌರವ ಸಮರ್ಥಿಸಿದ ಸಿಎಂ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮ ನವರ ಅಂತ್ಯಕ್ರಿಯೆಯ ವಿಚಾರವಾಗಿ ಚರ್ಚೆ ನಡೆದವು. ಆದರೆ, ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ನಾನು ಗಟ್ಟಿ ನಿರ್ಧಾರ ತೆಗೆದುಕೊಂಡೆ. ದೇವೇ ಗೌಡರ ಧರ್ಮಪತ್ನಿ ಚೆನ್ನಮ್ಮ ಅವರು ಸರಳವಾಗಿ ಬದುಕಿದ ಜೀವ. ರಾಜಕಾರಣಿಗಳ ಮನೆಯಲ್ಲಿ ಹೆಣ್ಣುಮಕ್ಕಳು ಹೇಗಿರ ಬೇಕು ಎಂಬುದಕ್ಕೆ ಇವರ ಬದುಕೇ ಸಾಕ್ಷಿ.
ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎನ್ನುವುದಕ್ಕೆ ಅನ್ವರ್ಥದಂತೆ ಬದುಕಿದವರು. ತಾಯಿಯ ಮಾರ್ಗದರ್ಶನ ಸದಾ ಇತ್ತು ಎಂಬುದು ನನ್ನ ಭಾವನೆ ಎಂದರು. ದೇವೇಗೌಡರು ಪ್ರಧಾನಿಗಳಾಗಲು, ಅವರ ಮಕ್ಕಳು ಈ ರಾಜ್ಯದ ಜನರ ಸೇವೆ ಮಾಡಲು ಚೆನ್ನಮ್ಮನವರ ಮಾರ್ಗ ದರ್ಶನವಿದೆ. ಅಧಿಕಾರ ಇರಲಿ ಇಲ್ಲದೇ ಇರಲಿ ನಾಡಿನ ಜನಸೇವೆಯಲ್ಲಿ ಅವರ ಕುಟುಂಬ ತೊಡಗಿ ಕೊಂಡಿದೆ. ಅದಕ್ಕೆ ನಾವು ಆ ಕುಟುಂಬಕ್ಕೆ ಗೌರವ ಕೊಡಬೇಕು ಎಂದು ಸಿಎಂ ಚೆನ್ನಮ್ಮನವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದರು.