ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

First Night: ಮೊದಲ ರಾತ್ರಿ ಮೈ ಮುಟ್ಟಿಲ್ಲ, ಗಂಡ ನಪುಂಸಕ ಎಂದು ಸಿಡಿದೆದ್ದ ಪತ್ನಿ, ಕೋಟಿ ಪರಿಹಾರಕ್ಕೆ ಡಿಮ್ಯಾಂಡ್

Bengaluru: ಮೊದಲ ರಾತ್ರಿಯಲ್ಲಿ ಪತ್ನಿಯನ್ನು ಮುಟ್ಟಲು ಪ್ರವೀಣ್ ಹಿಂದೇಟು ಹಾಕಿದ್ದಾರಂತೆ. ಹೀಗಾಗಿ ಗಂಡ ನಪುಂಸಕ ಎಂದು ಪತ್ನಿ ಗಲಾಟೆ ಮಾಡಿದ್ದಾಳೆ. ಇದೇ ಕಾರಣಕ್ಕೆ ಆಗಸ್ಟ್ 17 ರಂದು ಬೆಂಗಳೂರಿನ ಗೋವಿಂದರಾಜ ನಗರದಲ್ಲಿರುವ ಪ್ರವೀಣ್ ಮನೆಗೆ‌ ನುಗ್ಗಿ ಪತ್ನಿ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ.

ಮೊದಲ ರಾತ್ರಿ ಮೈ ಮುಟ್ಟಿಲ್ಲ, ಗಂಡ ನಪುಂಸಕ ಎಂದು ಸಿಡಿದೆದ್ದ ಪತ್ನಿ

-

ಹರೀಶ್‌ ಕೇರ ಹರೀಶ್‌ ಕೇರ Sep 24, 2025 7:31 AM

ಬೆಂಗಳೂರು: ಮದುವೆಯಾದ ಮೊದಲ ರಾತ್ರಿಯಲ್ಲಿ (first night) ಗಂಡ (husband) ತನ್ನ ಮೈಮುಟ್ಟಿಲ್ಲ ಅಂತ ಹೆಂಡತಿ (Wife) ಗಂಡನ ವಿರುದ್ಧ ತಿರುಗಿ ಬಿದ್ದಿದ್ದಾಳೆ. ತನ್ನ ಮನೆಯವರಿಗೆ ವಿಷಯ ತಿಳಿಸಿ ಗಂಡನ ಮಾನ ಮೂರು ಕಾಸಿಗೆ ಹರಾಜು ಹಾಕಿದ್ದಲ್ಲದೆ, ಕೋಟ್ಯಂತರ ರೂಪಾಯಿ ಪರಿಹಾರದ (compensation) ಹಣಕ್ಕೆ ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಡಿಮ್ಯಾಂಡ್ ಮಾಡಿದ್ದಾರೆ. ಇದರಿಂದ ರೋಸಿ ಹೋದ ಗಂಡ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಬೆಂಗಳೂರಿನಲ್ಲಿ (Bengaluru news) ಈ ಘಟನೆ ನಡೆದಿದೆ.

ಚಿಕ್ಕಮಗಳೂರು ಮೂಲದ ಯುವತಿಯನ್ನು ಪ್ರವೀಣ್ ವಿವಾಹವಾಗಿದ್ದರು. ಮೇ 5ರಂದು ಚಿಕ್ಕಮಗಳೂರು ಜಿಲ್ಲೆಯ ತರಿಕೇರೆಯಲ್ಲಿ ಇಬ್ಬರ ಮದುವೆಯಾಗಿತ್ತು. ಮೊದಲ ರಾತ್ರಿಯಲ್ಲಿ ಪತ್ನಿಯನ್ನು ಮುಟ್ಟಲು ಪ್ರವೀಣ್ ಹಿಂದೇಟು ಹಾಕಿದ್ದಾರಂತೆ. ಹೀಗಾಗಿ ಗಂಡ ನಪುಂಸಕ ಎಂದು ಪತ್ನಿ ಗಲಾಟೆ ಮಾಡಿದ್ದಾಳೆ. ಇದೇ ಕಾರಣಕ್ಕೆ ಆಗಸ್ಟ್ 17 ರಂದು ಬೆಂಗಳೂರಿನ ಗೋವಿಂದರಾಜನಗರದಲ್ಲಿರುವ ಪ್ರವೀಣ್ ಮನೆಗೆ‌ ನುಗ್ಗಿ ಪತ್ನಿ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ.

ಫಸ್ಟ್ ನೈಟ್‌ನಲ್ಲಿ ಲೈಂಗಿಕ ಕ್ರಿಯೆಯಲ್ಲಿ ಪತಿ ಭಾಗಿಯಾಗಿಲ್ಲ ಎಂದು ಆರೋಪಿಸಿ ಗಲಾಟೆ ಎಬ್ಬಿಸಿ, ಗಂಡ ನಪುಂಸಕನೆಂದು ಬಿಂಬಿಸಿದ ಪತ್ನಿ ಹಾಗೂ ಕುಟುಂಬದವರು ನಂತರ ಪ್ರವೀಣ್‌ನಿಂದ ಕೋಟಿ ಕೋಟಿ ಹಣಕ್ಕೆ ಡಿಮಾಂಡ್ ಮಾಡಿದ್ದಾರೆ. ಜೀವನಾಂಶದ ಹೆಸರಲ್ಲಿ ಪತ್ನಿ ಬರೋಬ್ಬರಿ ಎರಡು ಕೋಟಿ ಹಣಕ್ಕೆ ಡಿಮಾಂಡ್ ಮಾಡಿದ್ದಾಳೆ. ಈ ಬಗ್ಗೆ ಪತಿ ಪ್ರವೀಣ್ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರವೀಣ್ ನೀಡಿರೋ ದೂರು ಆಧರಿಸಿ, ಪ್ರವೀಣ್ ಪತ್ನಿ ಸೇರಿದಂತೆ 10 ಮಂದಿ ವಿರುದ್ದ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ. ಮತ್ತೊಂದೆಡೆ ಪತಿ ದೂರಿನ ಬಳಿಕ ಪತ್ನಿಯೂ ಮಹಿಳಾ‌ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ. ದೂರು ಪ್ರತಿದೂರು ಬಳಿಕ ಕುಟುಂಬಸ್ಥರು ಮಾತುಕತೆ ನಡೆಸಿದ್ದಾರೆ. ಈ ವೇಳೆ ಮದುವೆ ಖರ್ಚನ್ನು ನೀಡುವಂತೆ ಪತ್ನಿಯ ಕುಟುಂಬಸ್ಥರು ಕೇಳಿದ್ದಾರೆ. ಮದುವೆಗೆ 65 ಲಕ್ಷ ಹಣ ಖರ್ಚು ಮಾಡಿದ್ದು, ಆ ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ದೂರಲಾಗಿದೆ.

ಕೊನೆಗೆ ಪ್ರವೀಣ್ ಕುಟುಂಬಸ್ಥರು 50 ಲಕ್ಷ ಹಣವನ್ನು ನೀಡಿದ್ದಾರೆ. ಸದ್ಯ ಹಣ ಪಡೆದು ಪತ್ನಿ ಕುಟುಂಬಸ್ಥರು ಹೇಳಿಕೆ ದಾಖಲಿಸಿ ಹೋಗಿದ್ದಾರೆ. ಇದೀಗ ಎರಡೂ ಕಡೆಯವರಿಂದಲೂ ಪೊಲೀಸರು ಹೇಳಿಕೆ ದಾಖಲಿಸಿಕೊಂಡು, ಪ್ರಕರಣ ಕ್ಲೋಸ್ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Viral Video: ಹೆರಿಗೆ ನೋವಿನಿಂದ ಮಹಿಳೆ ಒದ್ದಾಡ್ತಿದ್ರೆ ಇತ್ತ ಡಾಕ್ಟರ್‌ ಮೇಲೆಯೇ ಹಲ್ಲೆ ಮಾಡಿದ್ರು! ಈ ವಿಡಿಯೊ ನೋಡಿ