ರಾಜ್ಯದ ಶೇ.95ರಷ್ಟು ಪೆಟ್ರೋಲ್ ಬಂಕಲ್ಲಿ ವಂಚನೆ: ಪೆಟ್ರೋಲ್, ಡೀಸೆಲ್ ಹಾಕುವಾಗ 60-100 ಎಂಎಲ್ ಕಡಿಮೆ ತೈಲ ಪೂರೈಕೆ
ರಾಜ್ಯದ ಶೇ.95ರಷ್ಟು ಪೆಟ್ರೋಲ್ ಬಂಕ್‌ಗಳಲ್ಲಿ ನಿಖರತೆಯ ಕೊರತೆ ಪತ್ತೆಯಾಗಿದೆ ಎನ್ನುವ ಅಂಶ ವನ್ನು ಸ್ವತಃ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಿಜ್ವಾನ್ ಅರ್ಷದ್ ಬಹಿರಂಗಪಡಿಸಿದ್ದಾರೆ. ವಿಕಾಸಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 5946 ಪೆಟ್ರೋಲ್ ಬಂಕ್‌ಗಳಿವೆ.
-
Ashok Nayak
Sep 17, 2026 10:08 AM
ಬೆಂಗಳೂರು: ರಾಜ್ಯದ ಶೇ.95ರಷ್ಟು ಪೆಟ್ರೋಲ್ ಬಂಕ್‌ಗಳಲ್ಲಿ ನಿಖರತೆಯ ಕೊರತೆ ಪತ್ತೆಯಾಗಿದೆ ಎನ್ನುವ ಅಂಶವನ್ನು ಸ್ವತಃ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಿಜ್ವಾನ್ ಅರ್ಷದ್ ಬಹಿರಂಗಪಡಿಸಿದ್ದಾರೆ. ವಿಕಾಸಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 5946 ಪೆಟ್ರೋಲ್ ಬಂಕ್‌ಗಳಿವೆ.
ಕಳೆದ ಒಂದು ವಾರ ಕಾನೂನು ಮಾಪನಶಾಸ್ತ್ರ, ಆಹಾರ ಇಲಾಖೆ ಅಧಿಕಾರಿಗಳು 805 ಪೆಟ್ರೋಲ್ ಬಂಕ್ ತಪಾಸಣೆ ಮಾಡಿದ್ದಾರೆ. ಈ ಪೈಕಿ ನಿಖರತೆ ಇಲ್ಲದೇ ಇರುವ 768 ಬಂಕ್ ಗಳು ಪತ್ತೆಯಾಗಿವೆ.
ಇದನ್ನೂ ಓದಿ: Petrol, diesel price Hike: ತೈಲ ಬೆಲೆ ಹೆಚ್ಚಳ ಭಾರತದಲ್ಲೇ ಕನಿಷ್ಠ: ಪ್ರಲ್ಹಾದ್ ಜೋಶಿ ಸ್ಪಷ್ಟನೆ
ಅಂದರೆ, ಶೇ.95 ಬಂಕ್ ಗಳು ನಿಖರ ಇಂಧನ ಕೊಡುತ್ತಿಲ್ಲ ಎಂದರು. ಈ ಪೈಕಿ 101 ಬಂಕ್‌ಗಳ ಮೇಲೆ ಪ್ರಕರಣ ದಾಖಲಿಸಿ 6.66 ಲಕ್ಷ ರು. ದಂಡ ವಿಧಿಸಲಾಗಿದೆ. ನಿಯಮದಂತೆ 5 ಲೀಟರ್‌ಗೆ 25 ಎಂಎಲ್ ವ್ಯತ್ಯಾಸವಾಗಬಹುದು. ಕೆಲವು ಬಂಕ್‌ಗಳಲ್ಲಿ 60-100 ಎಂಎಲ್ ವ್ಯತ್ಯಾಸ ಕಂಡುಬಂದಿದೆ ಎಂದಿದ್ದಾರೆ.