ನ.23 ರ ಗಂಗಾಮತ ನೌಕರರ ಕ್ಷೇಮಾಭಿವೃದ್ದಿ ಸಂಘದ ಸರ್ವ ಸದಸ್ಯರ ಸಭೆ ಸ್ಥಳ ಬದಲಾವಣೆ : ಬಾಸ್ಕ್ಯು ಮಗಜಿ ಆರ್ಕಿಡ್ ಹೋಟೆಲ್ ಗೆ ಸ್ಥಳಾಂತರ
ಆನಂದರಾವ್ ವೃತ್ತದ ಸನಿಹದಲ್ಲಿರುವ ಶ್ರೀ ವಿಶ್ವೇಶ್ವರಯ್ಯ ಇಂಜಿನಿಯರ್ಸ್ ಸಮುದಾಯ ಭವನದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಹಂಚಿಕೆ ಮಾಡಿ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಆದರೆ ಕೆಇಬಿ ಇಂನಿಯರ್ಸ್ ಸಂಘಕ್ಕೆ ಸರ್ಕಾರ ಆಡಳಿತಾಧಿಕಾರಿ ನೇಮಿಸಿರುವ ಕಾರಣ ಇಲ್ಲಿ ಮಹಾಸಭೆ ನಡೆಸಲು ಸಾಧ್ಯವಿಲ್ಲ
-
ಬೆಂಗಳೂರು: ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ 2025 – 26 ನೇ ಸಾಲಿನ ಮಹಾಸಭೆ ಮತ್ತು ಮಹಾ ಸರ್ವ ಸದಸ್ಯರ ಸಭೆಯನ್ನು ಶೇಷಾದ್ರಿಪುರಂ ನಲ್ಲಿರುವ ಬಾಸ್ಕ್ಯು ಮಗಜಿ ಆರ್ಕಿಡ್ ಹೋಟೆಲ್ ನಲ್ಲಿ ನ.23ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಂ.ಶ್ರೀನಿವಾಸ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮುನ್ನ ಆನಂದರಾವ್ ವೃತ್ತದ ಸನಿಹ ದಲ್ಲಿರುವ ಶ್ರೀ ವಿಶ್ವೇಶ್ವರಯ್ಯ ಇಂಜಿನಿಯರ್ಸ್ ಸಮುದಾಯ ಭವನದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಹಂಚಿಕೆ ಮಾಡಿ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಆದರೆ ಕೆಇಬಿ ಇಂನಿಯರ್ಸ್ ಸಂಘಕ್ಕೆ ಸರ್ಕಾರ ಆಡಳಿತಾಧಿಕಾರಿ ನೇಮಿಸಿರುವ ಕಾರಣ ಇಲ್ಲಿ ಮಹಾಸಭೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಮಹಾಸಭೆ ಸ್ಥಳವನ್ನು ಶೇಷಾದ್ರಿಪುರಂನಲ್ಲಿರುವ ಬಾಸ್ಕ್ಯು ಮಗಜಿ ಆರ್ಕಿಡ್ ಹೋಟೆಲ್ ಗೆ ಸ್ಥಳಾಂತರಿಸಲಾಗಿದೆ ಎಂದರು.
ಇದನ್ನೂ ಓದಿ: Bangalore News: ಇಎಂಇಯಲ್ಲಿ ಬ್ರೂಸ್ ಲೀ ಮಣಿಯವರ ಮತ್ತು ಎಂ.ಡಿ. ಪಲ್ಲವಿ ಅವರ ಮಾಸ್ಟರ್‌ಕ್ಲಾಸ್
ಕೆಇಬಿ ಇಂಜಿನಿಯರ್ಸ್ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವ ಕಾರಣ ಅಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ನೀಡಲು ಸಾಧ್ಯವಿಲ್ಲ. ಹೀಗಾಗಿ ಕೊನೆ ಗಳಿಗೆಯಲ್ಲಿ ಬದಲಾವಣೆ ಮಾಡಲಾಗಿದೆ. ಸದಸ್ಯರಿಗೆ ಆದ ತೊಂದರೆಗೆ ವಿಷಾಧಿಸುತ್ತಿದ್ದೇವೆ ಎಂದು ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಡಾ. ಕೃಷ್ಣಯ್ಯ, ಕಾರ್ಯಾಧ್ಯಕ್ಷ ಕೆ.ಎಂ. ಧನಂಜಯ, ಬೆಂ.ನಗರ ಘಟಕದ ಅಧ್ಯಕ್ಷ ಎಂ.ಪಿ. ಮಂಜುನಾಥ್, ಖಜಾಂಚಿ ದತ್ತಾತ್ರೆಯ ಶಶಿಕಿರಣ್, ಉಪಾಧ್ಯಕ್ಷ ಎಚ್.ಡಿ. ಕಟ್ಟಿಮನಿ, ನಿರ್ದೇಶಕ ಎನ್. ನಾರಾಯಣ ಸ್ವಾಮಿ, ಸಂಘಟನಾ ಕಾರ್ಯದರ್ಶಿ ಎನ್. ವೆಂಕಟಸ್ವಾಮಿ, ಪದಾಧಿಕಾರಿಗಳಾದ ವಿ ಚಂಗಪ್ಪ, ಎಂ. ಮುನಿರಾಜ್ ಮತ್ತಿತರರು ಉಪಸ್ಥಿತರಿದ್ದರು.