ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನ್ಯೂಜಿಲೆಂಡ್ ಸರಣಿಗೆ ಪ್ರಕಟಿಸಿದ ತಂಡವೇ 2026ರ ಟಿ20 ವಿಶ್ವಕಪ್‌ಗೆ ಅಂತಿಮ; ಬಿಸಿಸಿಐ

New Zealand series: ನ್ಯೂಜಿಲೆಂಡ್ ವಿರುದ್ಧದ ಐದು ಟಿ20 ಪಂದ್ಯಗಳು ನಾಗ್ಪುರ (ಜನವರಿ 21), ರಾಯ್‌ಪುರ (ಜನವರಿ 23), ಗುವಾಹಟಿ (ಜನವರಿ 25), ವೈಜಾಗ್ (ಜನವರಿ) 28 ಮತ್ತು ತಿರುವನಂತಪುರ (ಜನವರಿ 31)ದಲ್ಲಿ ನಡೆಯಲಿವೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಭಾರತ ಆಡಲಿದೆ.

ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡಕ್ಕೆ 10 ಪಂದ್ಯ ಬಾಕಿ

ಟೀಮ್‌ ಇಂಡಿಯಾ -

Abhilash BC
Abhilash BC Nov 22, 2025 11:37 AM

ಮುಂಬಯಿ, ನ.22: ಅಜಿತ್ ಅಗರ್ಕರ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿಯು ನ್ಯೂಜಿಲೆಂಡ್(New Zealand series) ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಗೆ ಆಯ್ಕೆ ಮಾಡುವ ತಂಡವನ್ನೇ ಐಸಿಸಿ ಟಿ20 ವಿಶ್ವಕಪ್‌(T20 World Cup 2026)ನಲ್ಲೂ ಆಡಿಸಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಪಂದ್ಯಾವಳಿಯ ವೇಳಾಪಟ್ಟಿಯನ್ನು ಇನ್ನೂ ಘೋಷಿಸಲಾಗಿಲ್ಲವಾದರೂ, 20 ತಂಡಗಳ ಪಂದ್ಯಾವಳಿಯ ತಾತ್ಕಾಲಿಕ ಆರಂಭಿಕ ದಿನಾಂಕವನ್ನು ಫೆಬ್ರವರಿ 7 ಎಂದು ಹೇಳಲಾಗಿದೆ. ನ್ಯೂಜಿಲೆಂಡ್ ಟಿ20 ಸರಣಿಯು ಜನವರಿ 21 ರಿಂದ ಆರಂಭವಾಗಲಿದ್ದು, ಟಿ20 ವಿಶ್ವಕಪ್‌ಗೆ ಮುಂಚಿನ ಕೊನೆಯ ಸರಣಿಯಾಗಲಿದೆ.

ಐಸಿಸಿ ನಿಯಮದ ಪ್ರಕಾರ ಟೂರ್ನಯಲ್ಲಿ ಪಾಲ್ಗೊಳ್ಳುವ ಅಂತಿಮ 15 ಸದಸ್ಯರ ತಂಡವನ್ನು ಪಂದ್ಯಾವಳಿ ಪ್ರಾರಂಭವಾಗುವ ಒಂದು ತಿಂಗಳ ಮೊದಲು ಸಲ್ಲಿಸಬೇಕು. ಆಯ್ಕೆ ಸಮಿತಿಯು ತಮ್ಮ ಆಯ್ಕೆಗಳನ್ನು ಪ್ರಕಟಿಸುತ್ತದೆ ಮತ್ತು ನಿರ್ದಿಷ್ಟ ಕಟ್-ಆಫ್ ದಿನಾಂಕದವರೆಗೆ ಬದಲಾವಣೆಗಳನ್ನು ಮಾಡುವ ಆಯ್ಕೆ ಇರುತ್ತದೆ. 2024 ರ ಆವೃತ್ತಿಯ ಮಾದರಿಯ ನಿಯಮದಲ್ಲೇ ಈ ಬಾರಿಯ ಟೂರ್ನಿಯೂ ನಡೆಯಲಿದೆ.

"ಟಿ20 ವಿಶ್ವಕಪ್‌ಗೆ ಮುನ್ನ ಕೇವಲ 10 ಟಿ20 ಪಂದ್ಯಗಳು ಮಾತ್ರ ಉಳಿದಿವೆ, ಯಾವುದೇ ನಿರ್ದಿಷ್ಟ ಗಾಯದಿಂದಾಗಿ ಯಾರನ್ನಾದರೂ ಹೊರಗಿಡದ ಹೊರತು ತಂಡದಲ್ಲಿ ಹೆಚ್ಚಿನ ಬದಲಾವಣೆಗಳು ಸಂಭವಿಸುವುದನ್ನು ನೀವು ನೋಡುವುದಿಲ್ಲ" ಎಂದು ಬಿಸಿಸಿಐ ನಿಕಟ ಮೂಲಗಳು ಪಿಟಿಐಗೆ ತಿಳಿಸಿವೆ.

ಇದನ್ನೂ ಓದಿ T20 World Cup 2026: ಫೆ.15ಕ್ಕೆ ಭಾರತ-ಪಾಕ್‌ ಟಿ20 ವಿಶ್ವಕಪ್‌ ಫೈಟ್‌

ನ್ಯೂಜಿಲೆಂಡ್ ವಿರುದ್ಧದ ಐದು ಟಿ20 ಪಂದ್ಯಗಳು ನಾಗ್ಪುರ (ಜನವರಿ 21), ರಾಯ್‌ಪುರ (ಜನವರಿ 23), ಗುವಾಹಟಿ (ಜನವರಿ 25), ವೈಜಾಗ್ (ಜನವರಿ) 28 ಮತ್ತು ತಿರುವನಂತಪುರ (ಜನವರಿ 31)ದಲ್ಲಿ ನಡೆಯಲಿವೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಭಾರತ ಆಡಲಿದೆ. ಈ ಸರಣಿಯು ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್‌ಗೆ ತಂಡವನ್ನು ಪರೀಕ್ಷಿಸಲು ಕೊನೆಯ ಅವಕಾಶವಾಗಿರಲಿದೆ.

ಮೂಲಗಳ ಪ್ರಕಾರ, ಭಾರತ ಫೆಬ್ರವರಿ 8 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಯುಎಸ್ಎ ವಿರುದ್ಧ ಆಡುವ ಮೂಲಕ ಭಾರತ ಟಿ20 ವಿಶ್ವಕಪ್‌ ಅಭಿಯಾನವನ್ನು ಪ್ರಾರಂಭಿಸಲಿದೆ, ನಂತರ ಫೆಬ್ರವರಿ 12 ರಂದು ದೆಹಲಿಯಲ್ಲಿ ನಮೀಬಿಯಾ ವಿರುದ್ಧದ ಪಂದ್ಯವನ್ನು ಆಡಲಿದೆ.

ನಂತರ ತಂಡವು ಪಾಕಿಸ್ತಾನ ವಿರುದ್ಧ ಫೆ.15ರಂದು ಕೊಲಂಬೊದಲ್ಲಿ ಆಡಲಿದೆ. ಫೆಬ್ರವರಿ 18 ರಂದು ಮುಂಬೈನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧದ ಕೊನೆಯ ಗ್ರೂಪ್ ಲೀಗ್ ಪಂದ್ಯದಲ್ಲಿ ಆಡಲಿದೆ. ಫೆಬ್ರವರಿ 22, 26 ಮತ್ತು ಮಾರ್ಚ್ 1 ರಂದು ಕ್ರಮವಾಗಿ ಅಹಮದಾಬಾದ್, ಚೆನ್ನೈ ಮತ್ತು ಕೋಲ್ಕತ್ತಾ ಸೂಪರ್ 8 ಪಂದ್ಯಗಳನ್ನು ಆಯೋಜಿಸಲಿವೆ ಎಂದು ತಿಳಿದುಬಂದಿದೆ.