ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನಲ್ಲಿ ಚರಕ ಕೈಮಗ್ಗ ಉತ್ಪಾದನೆಗಳ ಮಾರಾಟ ಮೇಳಕ್ಕೆ ಚಾಲನೆ ನೀಡಿದ ವೂಡೇ ಪಿ. ಕೃಷ್ಣ

Bengaluru News: ಪಾಶ್ಚಿಮಾತ್ಯ ಜೀವನಶೈಲಿಯ ಅಂಧಾನುಕರಣೆಯಿಂದ ದೂರವಾಗಿ ದೇಸಿ ಜೀವನಪದ್ಧತಿಯನ್ನು ಬೆಳೆಸಿಕೊಳ್ಳಬೇಕು. ಕೈಮಗ್ಗ ಕ್ಷೇತ್ರವು ಅನೇಕ ಕುಟುಂಬಗಳ ಜೀವನೋಪಾಯಕ್ಕೆ ನೆರವಾಗುತ್ತಿದ್ದು, ಅದನ್ನು ಪ್ರೋತ್ಸಾಹಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಚರಕ ಕೈಮಗ್ಗ ಉತ್ಪಾದನೆಗಳ ಮಾರಾಟ ಮೇಳಕ್ಕೆ ಚಾಲನೆ

-

Profile
Siddalinga Swamy Nov 20, 2026 5:18 PM

ಬೆಂಗಳೂರು, ನ.20: ಪಾಶ್ಚಿಮಾತ್ಯ ಜೀವನಶೈಲಿಯ ಅಂಧಾನುಕರಣೆಯಿಂದ ದೂರವಾಗಿ ದೇಸಿ ಜೀವನ ಪದ್ಧತಿ ಹಾಗೂ ಸ್ವಾವಲಂಬನೆಯತ್ತ ಸಾಗಬೇಕಿದೆ. ಪ್ರಕೃತಿಯೊಂದಿಗೆ ಬೆರೆತು ಬದುಕುವ ಮೂಲಕ ಆರೋಗ್ಯಕರ ಮತ್ತು ಸರಳ ಜೀವನ ನಡೆಸಲು ಸಾಧ್ಯ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ ಹೇಳಿದರು. ನಗರದ ಚಿತ್ರಕಲಾ ಪರಿಷತ್‌ನ 7ನೇ ಗ್ಯಾಲರಿಯಲ್ಲಿ ಸಾಗರ ಹೆಗ್ಗೋಡಿನ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದಿಂದ ಆಯೋಜಿಸಿರುವ ನೈಸರ್ಗಿಕ ಹತ್ತಿಯ ಕೈಮಗ್ಗ ಹಾಗೂ ಕರಕುಶಲ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿ ಕೈಮಗ್ಗ, ಕೈನೂಲುವಿಕೆ ಹಾಗೂ ಖಾದಿಯನ್ನು ಸ್ವಾವಲಂಬನೆಯ ಸಂಕೇತವಾಗಿ ಕಂಡಿದ್ದರು. ಇಂದು ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳ ಬಳಕೆ ಸರಳತೆ ಹಾಗೂ ಪರಿಸರ ಸ್ನೇಹಿ ಜೀವನದ ಸಂಕೇತವಾಗಿದೆ. ನೈಸರ್ಗಿಕ ಬಣ್ಣ ಬಳಸಿ ತಯಾರಿಸಿದ ಬಟ್ಟೆಗಳಲ್ಲಿ ಬಣ್ಣ ಸ್ವಲ್ಪ ಮಂಕಾಗುವುದು ಸಹ ಅದರದೇ ಆದ ಸೌಂದರ್ಯವಾಗಿದೆ ಎಂದರು.

ಪಾಶ್ಚಿಮಾತ್ಯ ಜೀವನಶೈಲಿಯ ಅಂಧಾನುಕರಣೆಯಿಂದ ದೂರವಾಗಿ ದೇಸಿ ಜೀವನಪದ್ಧತಿಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳನ್ನು ಇಂತಹ ಪ್ರದರ್ಶನಗಳಿಗೆ ಕರೆತಂದು ಕೈಮಗ್ಗ, ಕರಕುಶಲ ಹಾಗೂ ಸ್ವದೇಶಿ ಉತ್ಪನ್ನಗಳ ಮಹತ್ವವನ್ನು ಪರಿಚಯಿಸಬೇಕು. ಕೈಮಗ್ಗ ಕ್ಷೇತ್ರವು ಅನೇಕ ಕುಟುಂಬಗಳ ಜೀವನೋಪಾಯಕ್ಕೆ ನೆರವಾಗುತ್ತಿದ್ದು, ಅದನ್ನು ಪ್ರೋತ್ಸಾಹಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಹೇಳಿದರು.‌

ಡೋಕ್ರಾ ಕರಕುಶಲ ಕಲಾವಿದ ಸುಭಾಷ್‌ ಮಂಡಲ್‌ಗೆ ಎಚ್.ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ

ಚರಕದ ಮಾರುಕಟ್ಟೆ ವ್ಯವಸ್ಥಾಪಕ ಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಚರಕದ ನಿರ್ದೇಶಕಿ ಮಧುರಾ ಎಸ್.ವಿ. ಅಧ್ಯಕ್ಷತೆ ವಹಿಸಿದ್ದರು. ಸಿಇಒ ಟೆರೆನ್ಸ್ ಪೀಟರ್ , ವಿನ್ಯಾಸ ವಿಭಾಗದ ವ್ಯವಸ್ಥಾಪಕಿ ಪದ್ಮಶ್ರೀ ಉಪಸ್ಥಿತರಿದ್ದರು. ನ.22ರವರೆಗೆ ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ನಡೆಯುವ ಪ್ರದರ್ಶನದಲ್ಲಿ ಚರಕದ ಕೈಮಗ್ಗ ಉತ್ಪನ್ನಗಳೊಂದಿಗೆ ವಿವಿಧ ಸಂಸ್ಥೆಗಳ ಕರಕುಶಲ ಹಾಗೂ ನೈಸರ್ಗಿಕ ಉತ್ಪನ್ನಗಳು ಲಭ್ಯವಿವೆ.