ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನೀರಾವರಿ ಇಲಾಖೆಯ 2 ಸಾವಿರ ಕೋಟಿ ಬಿಡುಗಡೆ

ನೀರಾವರಿ ಇಲಾಖೆಯ ಬಾಕಿ ಬಿಲ್‌ಗಳ ಪಾವತಿಗಾಗಿ ಸರಕಾರ ಈಗಾಗಲೇ 1400 ಕೋಟಿ ಮೀಸಲಿಟ್ಟಿತ್ತು. ಇದೀಗ ಹೆಚ್ಚುವರಿಯಾಗಿ 2400 ಕೋಟಿ ಬಿಡುಗಡೆ ಮಾಡಿರುವುದರಿಂದ ಪಾವತಿ ಪ್ರಕ್ರಿಯೆಗೆ ವೇಗ ಸಿಗುವ ನಿರೀಕ್ಷೆಯಿದೆ. ಆದರೆ, 1400 ಕೋಟಿ ಮೊತ್ತದ ಬಿಲ್‌ಗಳನ್ನು ಹಿರಿತನದ ಆಧಾರದ ಮೇಲೆ ಪಾವತಿಸಲು ಸರಕಾರ ಮುಂದಾಗಿರುವುದರಿಂದ ದೊಡ್ಡ ಗುತ್ತಿಗೆದಾರರಿಗೆ ಮೊದಲು ಹಣ ಸಿಗುವ ಸಾಧ್ಯತೆ ಇದ್ದು, ಸಣ್ಣ ಗುತ್ತಿಗೆದಾರರು ಇನ್ನಷ್ಟು ಕಾಯಬೇಕಾಗಬಹುದು ಎಂಬ ಆತಂಕವನ್ನು ಸಂಘ ವ್ಯಕ್ತಪಡಿಸಿದೆ.

ನೀರಾವರಿ ಇಲಾಖೆಯ 2 ಸಾವಿರ ಕೋಟಿ ಬಿಡುಗಡೆ

-

Profile
Ashok Nayak Oct 4, 2026 8:05 AM

ಬೆಂಗಳೂರು: ಬಾಕಿ ಮೊತ್ತ ಪಾವತಿಗೆ ಆಗ್ರಹಿಸಿ ಗುತ್ತಿಗೆದಾರರ ಸಂಘದ ಹೋರಾಟ ಹಾಗೂ ಪ್ರತಿಭಟನೆಯ ಎಚ್ಚರಿಕೆಯ ಬೆನ್ನಲ್ಲೇ ಗುತ್ತಿಗೆದಾರರ ಬಾಕಿ ಮೊತ್ತ ಬಿಡುಗಡೆಗೆ ಸರಕಾರ ಸಿದ್ಧತೆ ಆರಂಭಿಸಿದೆ. ವಿವಿಧ ಇಲಾಖೆಗಳಲ್ಲಿ ಗುತ್ತಿಗೆದಾರರ ಬಾಕಿ ಬಿಲ್ ವಿಷಯವನ್ನು ಗುತ್ತಿಗೆದಾರರು ಮುನ್ನೆಲೆಗೆ ತಂದಿದ್ದು, ನವೆಂಬರ್‌ನೊಳಗೆ ಬಾಕಿ ಮೊತ್ತ ಬಿಡುಗಡೆ ಮಾಡದಿದ್ದರೆ ಕಮಿಷನ್ ಪಡೆದಿರುವವರ ಹೆಸರುಗಳನ್ನು ಬಹಿರಂಗಪಡಿಸುವ ಎಚ್ಚರಿಕೆ ನೀಡಿತ್ತು.

ಇದರ ಬೆನ್ನಲ್ಲೇ ರಾಜ್ಯ ಸರಕಾರ ಮೂರು ದಿನಗಳಲ್ಲಿ ನೀರಾವರಿ ಇಲಾಖೆಯ 2400 ಕೋಟಿ ಬಿಡುಗಡೆ ಮಾಡಿದೆ. ಆದರೆ ಬಾಕಿ ಮೊತ್ತಕ್ಕೆ ಹೋಲಿಸಿದರೆ ಈ ಅನುದಾನ ತೀರಾ ಕಡಿಮೆಯಾಗಿ ರುವುದರಿಂದ ಗುತ್ತಿಗೆದಾರರ ಸಮಸ್ಯೆಗೆ ಈ ಪ್ರಮಾಣದ ಅನುದಾನ ಪರಿಹಾರ ನೀಡುವುದಿಲ್ಲ ಎಂದು ಗುತ್ತಿಗೆದಾರರು ಹೇಳಿದ್ದಾರೆ.

ಇದನ್ನೂ ಓದಿ: Bangalore Chalo Padayatra: ಗ್ರಾ.ಪಂ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ.12ರಿಂದ ಬೆಂಗಳೂರು ಚಲೋ ಪಾದಯಾತ್ರೆ

ನೀರಾವರಿ ಇಲಾಖೆಯ ಬಾಕಿ ಬಿಲ್‌ಗಳ ಪಾವತಿಗಾಗಿ ಸರಕಾರ ಈಗಾಗಲೇ 1400 ಕೋಟಿ ಮೀಸಲಿಟ್ಟಿತ್ತು. ಇದೀಗ ಹೆಚ್ಚುವರಿಯಾಗಿ 2400 ಕೋಟಿ ಬಿಡುಗಡೆ ಮಾಡಿರುವುದರಿಂದ ಪಾವತಿ ಪ್ರಕ್ರಿಯೆಗೆ ವೇಗ ಸಿಗುವ ನಿರೀಕ್ಷೆಯಿದೆ. ಆದರೆ, 1400 ಕೋಟಿ ಮೊತ್ತದ ಬಿಲ್‌ಗಳನ್ನು ಹಿರಿತನದ ಆಧಾರದ ಮೇಲೆ ಪಾವತಿಸಲು ಸರಕಾರ ಮುಂದಾಗಿರುವುದರಿಂದ ದೊಡ್ಡ ಗುತ್ತಿಗೆದಾರರಿಗೆ ಮೊದಲು ಹಣ ಸಿಗುವ ಸಾಧ್ಯತೆ ಇದ್ದು, ಸಣ್ಣ ಗುತ್ತಿಗೆದಾರರು ಇನ್ನಷ್ಟು ಕಾಯಬೇಕಾಗಬಹುದು ಎಂಬ ಆತಂಕವನ್ನು ಸಂಘ ವ್ಯಕ್ತಪಡಿಸಿದೆ.

ನೀರಾವರಿ ಇಲಾಖೆಯ ನಂತರ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರ ಬಾಕಿ ಬಿಲ್‌ಗಳಿಗೂ ಇದೇ ರೀತಿಯಲ್ಲಿ ಹಣ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.