ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ ಸಾಹಸ ಶ್ಲಾಘಿಸಿದ ಇಸ್ರೇಲ್‌ನ ದಕ್ಷಿಣ ಭಾರತದ ಕಾನ್ಸುಲೇಟ್‌ ಜನರಲ್‌

Captain Smit Machchhar: ಫ್ಲೈದುಬೈ ವಿಮಾನ ಪತನಗೊಳಿಸಲು ಯತ್ನಿಸಿದ್ದ ಒಮಾನ್‌ ದೇಶದ ಕೋ ಪೈಲಟ್‌ನ ದುಷ್ಕೃತ್ಯ ವಿಫಲಗೊಳಿಸಿರುವ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ ಅವರ ಸಾಹಸವನ್ನು ಇಸ್ರೇಲ್‌ನ ದಕ್ಷಿಣ ಭಾರತದ ಕಾನ್ಸುಲೇಟ್‌ ಜನರಲ್‌ ಒರ್ಲಿ ವಿಟ್ಜ್‌ಮನ್‌ ಶ್ಲಾಘಿಸಿದ್ದಾರೆ.

ಸ್ಮಿತ್ ಮಚ್ಚಾರ್‌ ಸಾಹಸ ಶ್ಲಾಘಿಸಿದ ಇಸ್ರೇಲ್‌ನ ಕಾನ್ಸುಲೇಟ್‌ ಜನರಲ್‌

ಒರ್ಲಿ ವಿಟ್ಜ್‌ಮನ್‌ ಮತ್ತು ಸ್ಮಿತ್‌ ಮಚ್ಚಾರ್‌ -

Ramesh Ballamoole
Ramesh Ballamoole Oct 1, 2026 9:40 PM

ಬೆಂಗಳೂರು, ಅ. 1: ಫ್ಲೈದುಬೈ ವಿಮಾನ (Flydubai flight) ಪತನಗೊಳಿಸಲು ಯತ್ನಿಸಿದ್ದ ಒಮಾನ್‌ ದೇಶದ ಕೋ ಪೈಲಟ್‌ನ ದುಷ್ಕೃತ್ಯ ವಿಫಲಗೊಳಿಸಿರುವ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ (Captain Smit Machchhar) ಅವರ ಸಾಹಸವನ್ನು ಇಸ್ರೇಲ್‌ನ ದಕ್ಷಿಣ ಭಾರತದ ಕಾನ್ಸುಲೇಟ್‌ ಜನರಲ್‌ ಒರ್ಲಿ ವಿಟ್ಜ್‌ಮನ್‌ (Orli Weitzman) ಶ್ಲಾಘಿಸಿದ್ದಾರೆ. ಈ ಭಯೋತ್ಪಾದನೆ ಸಂಚಿನ ಹಿಂದೆ ಯಾರಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಿ ಇಸ್ರೇಲ್‌ ಕಠಿಣ ಕ್ರಮ ಕೈಗೊಳ್ಳಲಿದೆ ಎಂದವರು ಹೇಳಿದ್ದಾರೆ.

ಗುರುವಾರ ಬೆಳಗ್ಗೆ ಆಯ್ದ ಮಾಧ್ಯಮ ಪ್ರತಿನಿಧಿಗಳ ಜತೆ ಆನ್‌ಲೈನ್‌ ಸಂವಾದ ನಡೆಸಿದ ಅವರು, ಫ್ಲೈದುಬೈ ವಿಮಾನ ಪ್ರಕರಣದ ಕುರಿತು ಮಾಹಿತಿ ಹಂಚಿಕೊಂಡರು.

"ವಿಮಾನದಲ್ಲಿ 166 ಮಂದಿ ಇಸ್ರೇಲ್‌ ನಾಗರಿಕರೇ ಇದ್ದರು. ಹಾಗಾಗಿ ಇದು ಇಸ್ರೇಲ್‌ ನಾಗರಿಕರನ್ನೇ ಗುರಿಯಾಗಿಸಿಕೊಂಡು ಮಾಡಿರುವ ಕೃತ್ಯ. ಕೋ ಪೈಲಟ್‌ 9/11 ಮಾದರಿಯಲ್ಲಿ ವಿಮಾನವನ್ನು ವಿಧ್ವಂಸಕ ಕೃತ್ಯಕ್ಕೆ ಬಳಸಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ'' ಎಂದು ಒರ್ಲಿ ವಿಟ್ಜ್‌ಮನ್‌ ವಿವರಿಸಿದರು.‌

''ವಿಮಾನದಲ್ಲಿ ಹೆಚ್ಚಿ ಕಮ್ಮಿಯಾದರೆ ನಿಮ್ಮನ್ನು ಯಾರು ಉಳಿಸುತ್ತಾರೆ?ʼʼ-ಸ್ಮಿತ್ ಮಚ್ಚಾರ್‌ ಸಂದರ್ಶನ ವೈರಲ್

"ಭಾರತ ಮತ್ತು ಇಸ್ರೇಲ್‌ ನಡುವೆ ದೃಢವಾದ ಬಾಂಧವ್ಯ ಇದೆ. ಇದೀಗ ಆಪತ್ತಿನ ಸಂದರ್ಭದಲ್ಲಿ ಭಾರತೀಯ ಮೂಲದ ವಿಮಾನದ ಕ್ಯಾಪ್ಟನ್‌ ನೂರಾರು ಇಸ್ರೇಲಿಗರ ಜೀವ ಕಾಪಾಡಿದ್ದಾರೆ. ಭಾರತ-ಇಸ್ರೇಲ್‌ ಸ್ನೇಹ ಮತ್ತಷ್ಟು ಗಟ್ಟಿಯಾಗಿ ಸುದೀರ್ಘವಾಗಿ ಮುಂದುವರಿಯಲಿದೆʼʼ ಎಂದು ವರ್ಲಿ ಅಭಿಪ್ರಾಯಪಟ್ಟರು.

ʼʼಈ ಹಿಂದೆ ಬಿಕ್ಕಟ್ಟಿನ ಸಂದರ್ಭದಲ್ಲೆಲ್ಲ ಭಾರತವು ಇಸ್ರೇಲ್‌ ಪರ ನಿಂತಿದೆ. ಭಾರತಕ್ಕೆ ಇಸ್ರೇಲ್‌ ಪರವಾಗಿ ಧನ್ಯವಾದ ಹೇಳಲು ಬಯಸುತ್ತೇನೆ. ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ ಅವರ ಸಾಹಸವನ್ನು ಇಸ್ರೇಲ್‌ ಸದಾ ನೆನಪಿಸಿಕೊಳ್ಳಲಿದೆʼʼ ಎಂದವರು ಹೇಳಿದರು.

ಮೋದಿ, ನೆತನ್ಯಾಹು ಶ್ಲಾಘನೆ

ಫ್ಲೈದುಬೈ ವಿಮಾನ ಪತನ ಸಂಚು ತಪ್ಪಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ ಅವರ ಪತ್ನಿ ಮತ್ತು ಪೋಷಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ ಧೈರ್ಯ ಹೇಳಿದ್ದಾರೆ. ನೂರಾರು ಜೀವ ಕಾಪಾಡಿದ ಸ್ಮಿತ್ ಮಚ್ಚಾರ್‌ ಅವರ ಸಾಹಸವನ್ನು ಮೋದಿ ಕೊಂಡಾಡಿದ್ದಾರೆ.

ಈ ನಡುವೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು, “ಭಾರತದ ಪೈಲಟ್ ಸ್ಮಿತ್‌ ಸಮಯಪ್ರಜ್ಞೆ ಮತ್ತು ಧೈರ್ಯ ಪ್ರದರ್ಶಿಸಿದ್ದಾರೆ. 9/11 ರೀತಿಯ ದಾಳಿ ತಡೆದಿದ್ದಾರೆʼʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಅಸಾಧಾರಣ ಧೈರ್ಯ ಪ್ರದರ್ಶಿಸಿದ ಭಾರತೀಯ ಪೈಲಟ್‌ ಕ್ಯಾಪ್ಟನ್‌ ಸ್ಮಿತ್‌ ಮಚ್ಚಾರ್‌ ಅವರಿಗೆ ನನ್ನ ವಂದನೆಗಳು. ಚಾಕುವಿನಿಂದ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರೂ ಅವರು ಪ್ರತಿರೋಧ ತೋರಿ, ಹೋರಾಡಿದರು. ಕಾಕ್‌ಪಿಟ್‌ನ ಬಾಗಿಲು ತೆರೆದರು. ಇದರಿಂದ ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿಗೆ ದಾಳಿಕೋರನನ್ನು ನಿಯಂತ್ರಿಸಲು ಸಾಧ್ಯವಾಯಿತು. ಆ ಮೂಲಕ ಸಂಭವಿಸಬಹುದಾಗಿದ್ದ ಭೀಕರ ದುರಂತ ತಪ್ಪಿತು” ಎಂದು ನೆತನ್ಯಾಹು ಹೇಳಿದ್ದಾರೆ.

174 ಮಂದಿಯ ಜೀವ ಉಳಿಸಿದ ಭಾರತೀಯ ಪೈಲಟ್ ಸ್ಮಿತ್‌ ಮಚ್ಚಾರ್‌ ಸೌದಿ ಅರೇಬಿಯಾದಿಂದ ಅಬು ಧಾಬಿಗೆ ಏರ್‌ಲಿಫ್ಟ್‌

ವಿಮಾನವು ದುಬೈಯಿಂದ ಇಸ್ರೇಲ್‌ನ ಟೆಲ್‌ ಅವೀವ್‌ಗೆ ತೆರಳುತ್ತಿತ್ತು. ಗಾಯಾಳು ಕ್ಯಾಪ್ಟನ್‌ ಮಚ್ಚಾರ್‌ ಅವರನ್ನು ಸೌದಿ ಅರೇಬಿಯಾದಿಂದ ಅಬು ದಾಬಿಗೆ ಏರ್‌ ಲಿಫ್ಟ್‌ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.