ʼʼಬರಗೆಟ್ಟ ಆಡಳಿತʼʼ: ಬರ ಪರಿಸ್ಥಿತಿ ಮಧ್ಯೆ ʼಬೆಂಗಳೂರು ಜಾತ್ರೆʼ ಆಯೋಜಿಸಿದ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಕಿಡಿ
JDS: ಡಿಸೆಂಬರ್ 4ರಿಂದ 13ರವರೆಗೆ 10 ದಿನಗಳ ಕಾಲ ʼಬೆಂಗಳೂರು ಜಾತ್ರೆʼ ಆಚರಿಸಲು ಮುಂದಾದ ರಾಜ್ಯ ಸರ್ಕಾರವನ್ನು ಪ್ರತಿಪಕ್ಷ ಜೆಡಿಎಸ್ ಟೀಕಿಸಿದೆ. ರಾಜ್ಯಾದ್ಯಂತ ಬರ ಪರಿಸ್ಥಿತಿ ಇರುವಾಗ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಜಾತ್ರೆ ಆಯೋಜಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದೆ. ʼಬೆಂಗಳೂರು ಜಾತ್ರೆʼ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿ ಲೂಟಿ ಹೊಡೆಯಲು ಹೊರಟಿದ್ದೀರಿ ಎಂದು ಆರೋಪಿಸಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಅ. 10: ‘ಬೆಂಗಳೂರಿನ ಜನರಿಂದ, ಬೆಂಗಳೂರಿನ ಜನರಿಗಾಗಿ’ ಎಂಬ ಕಲ್ಪನೆಯೊಂದಿಗೆ 5 ಜಿಬಿಎ ನಗರ ಪಾಲಿಕಾ ವಲಯಗಳಲ್ಲಿ ಡಿಸೆಂಬರ್ 4ರಿಂದ 13ರವರೆಗೆ 10 ದಿನಗಳ ಕಾಲ ʼಬೆಂಗಳೂರು ಜಾತ್ರೆʼ (Bengaluru Jatre) ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ನಿರ್ಧಾರವನ್ನು ಪ್ರತಿಪಕ್ಷ ಜೆಡಿಎಸ್ ಟೀಕಿಸಿದೆ. ರಾಜ್ಯಾದ್ಯಂತ ಬರ ಪರಿಸ್ಥಿತಿ ಇರುವಾಗ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಜಾತ್ರೆ ಆಯೋಜಿಸುವ ಅಗತ್ಯವೇನಿದೆ ಎಂದು ಜೆಡಿಎಸ್ ಪ್ರಶ್ನಿಸಿದೆ. ಟೇಕಾಫ್ ಆಗದ ಸರ್ಕಾರದ 100 ದಿನದ ಕಾರ್ಯಕ್ಕೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದಾಯಿತು. ಈಗ ʼಬೆಂಗಳೂರು ಜಾತ್ರೆʼ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿ ಲೂಟಿ ಹೊಡೆಯಲು ಹೊರಟಿದ್ದೀರಿ ಎಂದು ಆರೋಪಿಸಿದೆ.
ಈ ಬಗ್ಗೆ ಜೆಡಿಎಸ್ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದೆ. ʼʼರೋಮ್ ಹೊತ್ತಿ ಉರಿಯುವಾಗ ದೊರೆ ನೀರೋ ಅರಮನೆಯಲ್ಲಿ ಕೂತು ಪಿಟೀಲು ಬಾರಿಸಿದಂತಿದೆ. ಕಾಂಗ್ರೆಸ್ ಸರ್ಕಾರದ ಬರಗೆಟ್ಟ ಆಡಳಿತʼʼ ಎಂದು ಹೇಳಿದೆ.
ಜಾತ್ರೆಯ ಅಧಿಕೃತ ವೆಬ್‌ಸೈಟ್ ಬಿಡುಗಡೆಗೊಳಿಸಿದ ಸಚಿವ: ಡಿ. 4ರಿಂದ 10 ದಿನ ಬೆಂಗಳೂರು ಜಾತ್ರೆ
ʼʼಟೇಕಾಫ್ ಆಗದ ಸರ್ಕಾರದ ನೂರು ದಿನದ ಕಾರ್ಯಕ್ಕೆ ನೂರಾರು ಕೋಟಿ ಖರ್ಚು ಮಾಡಿದ್ದಾಯಿತು. ಈಗ ʼಬೆಂಗಳೂರು ಜಾತ್ರೆʼ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಹೊಡೆಯಲು ಹೊರಟಿದ್ದೀರಿ. ಬೆಂಗಳೂರಿನ ರಸ್ತೆ ಗುಂಡಿಗಳಲ್ಲಿ ನಿತ್ಯವೂ ರೋಲರ್ ಕೋಸ್ಟರ್ ಅನುಭವ, ಟ್ರಾಫಿಕ್ ಜಾಮ್‌ನಲ್ಲಿ ವಾಹನಗಳ ಹಾರ್ನ್‌ಗಳೇ ಸಂಗೀತದ ರಸದೌತಣ. ಇಷ್ಟೆಲ್ಲ 'ಉಚಿತ'ವಾಗಿ ಸಿಗುತ್ತಿರುವಾಗ ಮತ್ತೆ 200 ಕೋಟಿ ರೂಪಾಯಿ ಸುರಿದು 'ಬೆಂಗಳೂರು ಜಾತ್ರೆ' ಯಾರು ಕೇಳಿದ್ರು ಸ್ವಾಮಿ? ಕೃಷ್ಣ ಬೈರೇಗೌಡ ಅವರೇ, ರಸ್ತೆ, ನೀರು, ಕರೆಂಟ್ ಸೇರಿ ಅಗತ್ಯ ಮೂಲಸೌಕರ್ಯ ಒದಗಿಸುವಲ್ಲಿ ವಿಫಲವಾಗಿರುವ ಡಿ.ಕೆ. ಶಿವಕುಮಾರ್ ಸರ್ಕಾರ, ಈಗ ಬಿಡಿಎ, ಬೆಸ್ಕಾಂ, ಜಲಮಂಡಳಿ ಮತ್ತು ಮೆಟ್ರೋದಂತಹ ಸಂಸ್ಥೆಗಳ ಹಣವನ್ನು ಕಿತ್ತು ಜಾತ್ರೆಗೆ ಸುರಿದು ಮೋಜು-ಮಸ್ತಿಗೆ ಹೊರಟಿರುವುದು ವಿಪರ್ಯಾಸʼʼ ಎಂದು ಟೀಕಿಸಿದೆ.
ಜೆಡಿಎಸ್ ಎಕ್ಸ್ ಪೋಸ್ಟ್:
ರೋಮ್ ಹೊತ್ತಿ ಉರಿಯುವಾಗ ದೊರೆ ನೀರೋ ಅರಮನೆಯಲ್ಲಿ ಕೂತು ಪಿಟೀಲು ಬಾರಿಸಿದಂತಿದೆ @INCKarnataka ಸರ್ಕಾರದ ಬರಗೆಟ್ಟ ಆಡಳಿತ. ಟೀಕಾಪ್ ಆಗದ ಸರ್ಕಾರದ ನೂರು ದಿನದ ಕಾರ್ಯಕ್ಕೆ ನೂರಾರು ಕೋಟಿ ಖರ್ಚು ಮಾಡಿದ್ದಾಯಿತು. ಈಗ ಬೆಂಗಳೂರು ಜಾತ್ರೆ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಹೊಡೆಯಲು ಹೊರಟಿದ್ದೀರಿ. ಬೆಂಗಳೂರಿನ ರಸ್ತೆ ಗುಂಡಿಗಳಲ್ಲಿ ನಿತ್ಯವೂ ರೋಲರ್ ಕೋಸ್ಟರ್ ಅನುಭವ, ಟ್ರಾಫಿಕ್ ಜಾಮ್‌ನಲ್ಲಿ ವಾಹನಗಳ ಹಾರ್ನ್‌ಗಳೇ ಸಂಗೀತದ ರಸದೌತಣ. ಇಷ್ಟೆಲ್ಲಾ 'ಉಚಿತ'ವಾಗಿ ಸಿಗುತ್ತಿರುವಾಗ ಮತ್ತೆ ₹200 ಕೋಟಿ ಸುರಿದು 'ಬೆಂಗಳೂರು ಜಾತ್ರೆ' ಯಾರು ಕೇಳಿದ್ರು ಸ್ವಾಮಿ? @krishnabgowda ಅವರೇ , ರಸ್ತೆ, ನೀರು, ಕರೆಂಟ್ ಸೇರಿ ಅಗತ್ಯ ಮೂಲಸೌಕರ್ಯ ಒದಗಿಸುವಲ್ಲಿ ವಿಫಲವಾಗಿರುವ @DKShivakumar ಸರ್ಕಾರ, ಈಗ ಬಿಡಿಎ, ಬೆಸ್ಕಾಂ, ಜಲಮಂಡಳಿ ಮತ್ತು ಮೆಟ್ರೋದಂತಹ ಸಂಸ್ಥೆಗಳ ಹಣವನ್ನು ಕಿತ್ತು ಜಾತ್ರೆಗೆ ಸುರಿದು ಮೋಜು-ಮಸ್ತಿಗೆ ಹೊರಟಿರುವುದು ವಿಪರ್ಯಾಸ. ಒಂದೆಡೆ ರಾಜ್ಯದ ಅನ್ನದಾತ ಮಳೆ, ಬೆಳೆ ಇಲ್ಲದೆ ಸಾಲದ ಸುಳಿಯಲ್ಲಿ ಸಿಲುಕಿ ಕಣ್ಣೀರು ಹಾಕುತ್ತಿದ್ದಾನೆ. ರೈತರ ಹೊಟ್ಟೆ ತಣ್ಣಗಿದ್ದರೆ ತಾನೇ ನಾಡಿಗೆ ಕಲೆ, ಸಾಹಿತ್ಯ, ಹಬ್ಬ, ಜಾತ್ರೆ ಎಲ್ಲವೂ? ಈ ಸರ್ಕಾರಕ್ಕೆ ನಿಜವಾಗಿಯೂ ಜನರ ಮೇಲೆ ಕಾಳಜಿ ಇದ್ದರೆ, ಆಡಂಬರದ ಜಾತ್ರೆಗಳನ್ನು ಬಿಟ್ಟು, ಇದರ ಸಂಪೂರ್ಣ ಮೊತ್ತವನ್ನು ತಕ್ಷಣವೇ ಸಂಕಷ್ಟದಲ್ಲಿರುವ ರೈತರಿಗೆ ಕೊಡಿ. ರೈತರು ಬದುಕಿದರೆ ಮಾತ್ರ ರಾಜ್ಯಕ್ಕೆ ಉಳಿವು. ರೋಮ್ ಹೊತ್ತಿ ಉರಿಯುವಾಗ ಪಿಟೀಲು ಬಾರಿಸಿದ ಕಥೆ ನಮಗೆ ಬೇಡ. #ಕರ್ನಾಟಕನೀರೋಸರ್ಕಾರ್ #BengaluruJatre #FarmersFirst #SaveFarmers
— Janata Dal Secular (@JanataDal_S) October 4, 2026
ʼʼಒಂದೆಡೆ ರಾಜ್ಯದ ಅನ್ನದಾತ ಮಳೆ, ಬೆಳೆ ಇಲ್ಲದೆ ಸಾಲದ ಸುಳಿಯಲ್ಲಿ ಸಿಲುಕಿ ಕಣ್ಣೀರು ಹಾಕುತ್ತಿದ್ದಾನೆ. ರೈತರ ಹೊಟ್ಟೆ ತಣ್ಣಗಿದ್ದರೆ ತಾನೇ ನಾಡಿಗೆ ಕಲೆ, ಸಾಹಿತ್ಯ, ಹಬ್ಬ, ಜಾತ್ರೆ ಎಲ್ಲವೂ? ಈ ಸರ್ಕಾರಕ್ಕೆ ನಿಜವಾಗಿಯೂ ಜನರ ಮೇಲೆ ಕಾಳಜಿ ಇದ್ದರೆ, ಆಡಂಬರದ ಜಾತ್ರೆಗಳನ್ನು ಬಿಟ್ಟು, ಇದರ ಸಂಪೂರ್ಣ ಮೊತ್ತವನ್ನು ತಕ್ಷಣವೇ ಸಂಕಷ್ಟದಲ್ಲಿರುವ ರೈತರಿಗೆ ಕೊಡಿ. ರೈತರು ಬದುಕಿದರೆ ಮಾತ್ರ ರಾಜ್ಯಕ್ಕೆ ಉಳಿವು. ರೋಮ್ ಹೊತ್ತಿ ಉರಿಯುವಾಗ ಪಿಟೀಲು ಬಾರಿಸಿದ ಕಥೆ ನಮಗೆ ಬೇಡʼʼ ಎಂದು ತಿಳಿಸಿದೆ.
ಪಿಂಚಣಿ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳದಿರಿ; ಪಹಣಿ, ಪೋಡಿ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿ: ಸಿಎಂ ಡಿಕೆ ಶಿವಕುಮಾರ್
ಏನಿದು ʼಬೆಂಗಳೂರು ಜಾತ್ರೆʼ?
ʼʼನಮ್ಮ ರಾಜ್ಯವು ಆರ್ಥಿಕತೆಯಲ್ಲಿ, ತಂತ್ರಜ್ಞಾನದಲ್ಲಿ ದೇಶ ವಿದೇಶಗಳಿಗೆ ಮಾದರಿಯಾಗಿರುವಂತೆ, ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ ಸೇರಿ ಜೀವನ ಶೈಲಿಯಲ್ಲಿಯೂ ಅತ್ಯುತ್ತಮ ನಗರವಾಗಬೇಕು. ನಗರದಲ್ಲಿ ಕಲೆ, ಸಾಹಿತ್ಯ ಹಾಗೂ ಸಾಮಾಜಿಕ ಮೂಲಸೌಕರ್ಯಗಳನ್ನು ಉತ್ತೇಜಿಸುವುದರಿಂದ ಬೆಂಗಳೂರಿನ ಪ್ರವಾಸೋದ್ಯಮ ಮತ್ತು ಆರ್ಥಿಕ ಪ್ರಗತಿಗೆ ಹೊಸ ಚೈತನ್ಯ ಸಿಗಲಿದೆ. ʼಬೆಂಗಳೂರು ಜಾತ್ರೆʼ ಕೇವಲ ಸರ್ಕಾರಿ ಆಯೋಜನೆಯಾಗದೆ, ಬೆಂಗಳೂರಿನ ಸಂಸ್ಕೃತಿ, ಕಲೆ, ಸಾಹಿತ್ಯ ಹಾಗೂ ಆಹಾರ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಉದ್ದೇಶದಿಂದ ಸಾರ್ವಜನಿಕರು, ವಿವಿಧ ಸಂಘ- ಸಂಸ್ಥೆಗಳು ಹಾಗೂ ಖಾಸಗಿ ಸಹಭಾಗಿತ್ವದೊಂದಿಗೆ ನಡೆಸುವ ಹಬ್ಬʼʼ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.