ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಡೆತಡೆ, ದ್ರೋಹ ಮೆಟ್ಟಿ ನಿಂತು ಅಮೆರಿಕನ್ ಪೌರತ್ವ ಪಡೆದ ಕನ್ನಡಿಗ

ಸಾಮಾನ್ಯ ಅಂತಾರಾಷ್ಟ್ರೀಯ ವಿದ್ಯಾರ್ಥಿಯಾಗಿ ಅಮೆರಿಕಕ್ಕೆ ಕಾಲಿಟ್ಟ ಸೈಮನ್ ಶೆಟ್ಟಿ, ಶಿಕ್ಷಣಕ್ಕಾಗಿ ಮಾಡಿದ ಭಾರಿ ಪ್ರಮಾಣದ ಸಾಲ, ಉದ್ಯೋಗ ನಿರಾಕರಣೆಯ ಕಹಿ ಅನುಭವಗಳು, ಎಚ್-1ಬಿ ವೀಸಾ, ಲಾಟರಿ ಸೋಲುಗಳು ಮತ್ತು ಪರಿಚಿತರೇ ಫೆಡರಲ್ ವಲಸೆ ಅಧಿಕಾರಿಗಳಿಗೆ ನೀಡಿದ ದುರುದ್ದೇಶ ಪೂರಿತ ದೂರುಗಳನ್ನು ಎದುರಿಸಿ ಇಂದು ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.

ಅಡೆತಡೆ, ದ್ರೋಹ ಮೆಟ್ಟಿ ನಿಂತು ಅಮೆರಿಕನ್ ಪೌರತ್ವ ಪಡೆದ ಕನ್ನಡಿಗ

-

Profile
Ashok Nayak Aug 16, 2026 8:58 AM

ಬೆಂಗಳೂರು: ವರ್ಷಗಳ ಕಾಲ ವ್ಯವಸ್ಥಿತ ವಲಸೆ ಅಡೆತಡೆಗಳು, ಸಾಲದ ಹೊರೆ ಹಾಗೂ ಆತ್ಮೀಯ ರೆನ್ನಿಸಿಕೊಂಡವರಿಂದಲೇ ಎದುರಾದ ವೈಯಕ್ತಿಕ ದ್ರೋಹಗಳನ್ನು ಮೆಟ್ಟಿ ನಿಂತ ಕರ್ನಾಟಕದ ಟೆಕ್ ಉದ್ಯಮಿಯೊಬ್ಬರು ಕೊನೆಗೂ ಅಮೆರಿಕದ ಪೌರತ್ವವನ್ನು ಪಡೆದುಕೊಂಡಿದ್ದಾರೆ.

ಸಾಮಾನ್ಯ ಅಂತಾರಾಷ್ಟ್ರೀಯ ವಿದ್ಯಾರ್ಥಿಯಾಗಿ ಅಮೆರಿಕಕ್ಕೆ ಕಾಲಿಟ್ಟ ಸೈಮನ್ ಶೆಟ್ಟಿ, ಶಿಕ್ಷಣಕ್ಕಾಗಿ ಮಾಡಿದ ಭಾರಿ ಪ್ರಮಾಣದ ಸಾಲ, ಉದ್ಯೋಗ ನಿರಾಕರಣೆಯ ಕಹಿ ಅನುಭವಗಳು, ಎಚ್-1ಬಿ ವೀಸಾ, ಲಾಟರಿ ಸೋಲುಗಳು ಮತ್ತು ಪರಿಚಿತರೇ ಫೆಡರಲ್ ವಲಸೆ ಅಧಿಕಾರಿಗಳಿಗೆ ನೀಡಿದ ದುರುದ್ದೇಶ ಪೂರಿತ ದೂರುಗಳನ್ನು ಎದುರಿಸಿ ಇಂದು ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿ ದ್ದಾರೆ. ತಮ್ಮ ಈ ಸುದೀರ್ಘ ಹಾಗೂ ಕಠಿಣ ಪಯಣವನ್ನು ಸ್ಮರಿಸಿಕೊಂಡಿರುವ ಅವರು, ಸಂಕೀರ್ಣ ವೀಸಾ ವ್ಯವಸ್ಥೆಯಲ್ಲಿ ಹೆಣಗಾಡುತ್ತಿರುವ ಸಹ ವಲಸಿಗರ ಪರವಾಗಿ ಸದಾ ಧ್ವನಿಯೆತ್ತುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಕರ್ನಾಟಕದ ಸಣ್ಣ ಹಳ್ಳಿಯಿಂದ ಅರಿಜೋನಾದ ಬಿಸಿ ಮರುಭೂಮಿಯವರೆಗೆ: ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಮೆರಿಕನ್ ಪೌರತ್ವ ಪಡೆದ ಸಂಭ್ರಮವನ್ನು ಹಂಚಿಕೊಂಡ ಸೈಮನ್ ಶೆಟ್ಟಿ, ನನ್ನ ಜೀವನದುದ್ದಕ್ಕೂ ಅನುಭವಿಸಿದ್ದ ಯುಎಸ್ ಸಿಐಎಸ್ (ಯುನೈಟೆಡ್ ಸ್ಟೇಟ್ಸ್‌ ಸಿಟಿಜನ್‌ಶಿಪ್ ಅಂಡ್ ಇಮಿಗ್ರೇಷನ್ ಸರ್ವೀಸಸ್) ಜತೆಗಿನ ಅಲೆದಾಟ ಅಧಿಕೃತವಾಗಿ ಮುಗಿದಿದೆ. ಇಂದಿ ನಿಂದ ನಾನು ಅಮೆರಿಕನ್ ಪೌರ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Hari Paraak Column: ಶಾಲೆಗೆ ಎಲ್ಲರಿಗಿಂತ ಮುಂಚೆ ಬರೋ ಮೇಷ್ಟ್ರು ಲಗೂ ಗುರು

ನನ್ನ ಈ ಸುದೀರ್ಘ ಪಯಣ ಪ್ರಾರಂಭವಾಗಿದ್ದು ಕರ್ನಾಟಕದ ಒಂದು ಸಣ್ಣ ಹಳ್ಳಿಯಲ್ಲಿ. ಗೂಗಲ್ ಮ್ಯಾಪ್‌ನಲ್ಲೂ ಸಿಗದಂತಹ ಕುಗ್ರಾಮದಿಂದ, ಕೈಯಲ್ಲಿ ಹಣವಿಲ್ಲದೆ, ಕೇವಲ ಒನ್‌ವೇ ಟಿಕೆಟ್ ಹಿಡಿದು ಅಮೆರಿಕದ ಅರಿಜೋನಾದ ಉರಿಯುವ ಮರುಭೂಮಿಗೆ ಬಂದು ಇಳಿದಿದ್ದೆ. ಹೊಸ ದೇಶ, ಹೊಸ ಭಾಷೆ, ಎಲ್ಲವೂ ಸಂಪೂರ್ಣ ಹೊಸದಾಗಿತ್ತು. ನಮ್ಮ ಇಡೀ ಕುಟುಂಬದ ಪ್ರಪಂಚದ ಈ ಭಾಗಕ್ಕೆ ಕಾಲಿಟ್ಟ ಮೊದಲ ವ್ಯಕ್ತಿ ನಾನು. ಜತೆಗೆ ಇರಲು ಸ್ನೇಹಿತರಿರಲಿಲ್ಲ, ಬೆಂಬಲಕ್ಕೆ ಸುರಕ್ಷತಾ ಜಾಲವಿರಲಿಲ್ಲ, ಯಾವುದೇ ‘ಪ್ಲಾನ್ ಬಿ’ ಕೂಡ ಇರಲಿಲ್ಲ.

ಪ್ರತಿಯೊಂದು ತಿರುವಿನಲ್ಲೂ ಪರೀಕ್ಷೆ ಒಡ್ಡಿದ ಅಮೆರಿಕ: ಅಮೆರಿಕ ನನಗಾಗಿ ರೆಡ್ ಕಾರ್ಪೆಟ್ ಹಾಸಿರಲಿಲ್ಲ. ಪ್ರತಿಯೊಂದು ತಿರುವಿನಲ್ಲೂ ನನ್ನನ್ನು ಪರೀಕ್ಷಿಸಿತು. ಹೇಗೆ ತೀರಿಸಬೇಕೆಂದು ತಿಳಿಯದ ಸಾಲದ ಹೊರೆ, ಸತತವಾಗಿ ‘ನೋ’ ಎಂದ ಕಂಪನಿಗಳು, ಕೈತಪ್ಪಿದ ಎಚ್-1ಬಿ ವೀಸಾ ಲಾಟರಿಗಳು... ಕೊನೆಗೆ ಸ್ವಂತ ಉದ್ಯಮ ಕಟ್ಟಲು ಸಿಲಿಕಾನ್ ವ್ಯಾಲಿಯ ಆಕರ್ಷಕ ಸಂಬಳದ ಕೆಲಸವನ್ನೇ ತೊರೆದೆ. ಪ್ರತಿಯೊಂದು ಹೆಜ್ಜೆಯಲ್ಲೂ ನಾನು ನನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಬೇಕಿತ್ತು ಎಂದು ಬರೆದಿದ್ದಾರೆ.

ಅಸೂಯೆಯಿಂದ ನಕಲಿ ದೂರು ನೀಡಿದ್ದ ಪರಿಚಿತರು: ತಮ್ಮ ಯಶಸ್ಸನ್ನು ಸಹಿಸದ ಕೆಲವು ಪರಿಚಿತರೇ ತಮ್ಮ ವಿರುದ್ಧ ವಲಸೆ ಅಧಿಕಾರಿಗಳಿಗೆ ದೂರು ನೀಡಿದ್ದ ಘಟನೆ ಯನ್ನು ಸಂಸ್ಥಾಪಕ ಹಾಗೂ ಸಿಇಒ ಸೈಮನ್ ನೆನಪಿಸಿಕೊಂಡಿದ್ದಾರೆ. ಕೆಲವು ಅಸೂಯಾಪರ ವ್ಯಕ್ತಿಗಳು ನಾನು ವಂಚಕ ಎಂದು ಬಿಂಬಿಸಿ, ನನ್ನ ವಿರುದ್ಧ ಒಂದು ಬಲೆ ಹೆಣೆದರು. ಅದನ್ನು ಸುಂದರವಾಗಿ ಅಲಂಕರಿಸಿ ಯುಎಸ್‌ಸಿಐಎಸ್ʼಗೆ ತಲುಪಿಸಿದರು. ಒಂದು ಕ್ಷಣ, ಪ್ರಪಂಚದ ಅತ್ಯಂತ ಶಕ್ತಿಶಾಲಿ ವಲಸೆ ವ್ಯವಸ್ಥೆ ಯು ಆ ಸುಳ್ಳು ದೂರಿಗೆ ಮರುಳಾಗುವ ಹಂತಕ್ಕೆ ತಲುಪಿತ್ತು. ಆದರೆ, ಈ ದೇಶವು ಕೊನೆಗೂ ನ್ಯಾಯಕ್ಕೆ ಹೆಸರುವಾಸಿ ಎಂಬುದನ್ನು ನಿರೂಪಿಸಿತು. ಅಂತಿಮವಾಗಿ ನನಗೆ ನ್ಯಾಯ ಸಿಕ್ಕಿತು.

ಸಹ-ವಲಸಿಗರಿಗೆ ಮತ್ತು ಕನಸುಗಾರರಿಗೆ ನೀಡಿದ ಸಂದೇಶ: ತಮ್ಮ ಈ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಪ್ರಮುಖ ಕಾರಣವೇ ಇತರರಿಗೆ ಭರವಸೆ ತುಂಬು ವುದು ಎಂದು ತಿಳಿಸಿರುವ ಅವರು, ಕಷ್ಟಪಡುತ್ತಿರುವ ವಲಸಿಗರಿಗೆ ಈ ಕೆಳಗಿನಂತೆ ಸಂದೇಶ ನೀಡಿದ್ದಾರೆ.

ನೀವು ಎಫ್-1 ವಿದ್ಯಾರ್ಥಿ ವೀಸಾದಲ್ಲಿದ್ದು, ಮನೆಯಿಂದ ಸಾವಿರಾರು ಮೈಲಿ ದೂರದಲ್ಲಿದ್ದು ಭಯ ದಲ್ಲಿದ್ದರೆ... ಈ ಯಶಸ್ಸು ನಿಮಗಾಗಿ. ನೀವು ಎಚ್1ಬಿ, ಒ1, ಎಲ್1 ವೀಸಾದಲ್ಲಿದ್ದು, ಸಮಯದ ಗಡಿಯಾರ ನೋಡುತ್ತಾ ಲಾಟರಿ ಫಲಿತಾಂಶಕ್ಕೆ ಪ್ರಾರ್ಥಿಸುತ್ತಿದ್ದರೆ... ಇದು ನಿಮಗಾಗಿ. ಎಂದಿಗೂ ಮುಗಿಯದ ಗ್ರೀನ್ ಕಾರ್ಡ್ ಕಾಯುವಿಕೆಯಲ್ಲಿ ಸಿಲುಕಿಕೊಂಡಿದ್ದರೆ... ಇದು ನಿಮಗಾಗಿ. ನಿಮಗೆ ಸಿಕ್ಕ ಸಾಮಾನ್ಯ ಜೀವನಕ್ಕಿಂತ ದೊಡ್ಡದಾದ ಕನಸನ್ನು ಕಾಣುವ ಧೈರ್ಯ ನಿಮಗಿದ್ದರೆ... ಇದು ಖಂಡಿತ ನಿಮಗಾಗಿ. ಮುಂದುವರಿದು, ನೀವು ಸಾಗುತ್ತಿರುವ ಅದೇ ಕಠಿಣ ಹಾದಿಯಲ್ಲಿ ನಾನೂ ನಡೆದು ಬಂದಿದ್ದೇನೆ. ಈ ಅನುಭವವು ವಲಸಿಗರ ಪರವಾಗಿ ನಿಲ್ಲುವ ನನ್ನ ಬದ್ಧತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ನನ್ನನ್ನು ಗಡೀಪಾರು ಮಾಡಬೇಕೆಂದು ಬಯಸಿದ್ದ ಟ್ರೋಲ್‌ಗಳ ಮಧ್ಯೆ, ನಾನು ಇವತ್ತು ಅಮೆರಿಕ ನ್ ಪೌರನಾಗಿದ್ದೇನೆ. ಆದರೆ ಮಾನಸಿಕವಾಗಿ ನಾನು ಇಂದಿಗೂ ವಲಸಿಗನೇ. ನಮಗಾಗಿ ನಾನು ಸದಾ ಹೋರಾಡುತ್ತೇನೆ. ಕಾನೂನನ್ನು ಗೌರವಿಸಿ, ಸರಿಯಾದ ಹಾದಿಯಲ್ಲಿ ಸಾಗಿ, ಕಷ್ಟಪಟ್ಟು ಕೆಲಸ ಮಾಡುತ್ತಿರಿ ಎಂದು ಕರೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರ: ಸೈಮನ್ ಶೆಟ್ಟಿ ಅವರ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅಭಿನಂದನೆ ಗಳು ಸೈಮನ್! ನಿಮ್ಮನ್ನು ಮೊದಲ ಬಾರಿಗೆ ಭೇಟಿಯಾದಾಗಿನಿಂದ ಇಲ್ಲಿಯವರೆಗೆ ನೀವು ಬೆಳೆದು ಬಂದ ಹಾದಿ ನೋಡಿ ಹೆಮ್ಮೆಯಾಗುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾ ರರು, ನಿಮಗೆ ಅಮೆರಿಕನ್ ಪೌರತ್ವ ಸಿಗಲು ಒಟ್ಟು ಎಷ್ಟು ವರ್ಷಗಳು ಬೇಕಾದವು? ಎಂದು ಕುತೂಹಲದಿಂದ ಪ್ರಶ್ನಿಸಿದ್ದಾರೆ. ಇನ್ನು ಹಲವರು ಇದು ನಿಜಕ್ಕೂ ಸ್ಪೂರ್ತಿದಾಯಕ ಸಾಹಸ, ಹಾಗೂ ನಿಮ್ಮ ಸಾಧನೆಗೆ ಶುಭಾಶಯಗಳು ಸಹೋದರ ಎಂದು ಅಭಿನಂದಿಸಿದ್ದಾರೆ.

ಯಾರೀ ಸೈಮನ್ ಶೆಟ್ಟಿ ?

ಸೈಮನ್ ಶೆಟ್ಟಿ ಅವರು ಕರ್ನಾಟಕದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಎಂಜಿನಿಯ ರಿಂಗ್ ಪದವಿ ಮುಗಿಸಿದ ನಂತರ, ಅಮೆರಿಕದ ಪ್ರತಿಷ್ಠಿತ ಅರಿಜೋನಾ ಸ್ಟೇಟ್ ವಿಶ್ವವಿದ್ಯಾಲಯ ದಿಂದ ಸ್ನಾತಕೋತ್ತರ ಪದವಿ ಪೂರೈಸಿದರು. ತಮ್ಮ ವೃತ್ತಿಜೀವನವನ್ನು ಬಿಎಸ್‌ಎನ್‌ಎಲ್ ಸಂಸ್ಥೆ ಯಲ್ಲಿ ಇಂಟರ್ನ್ ಆಗಿ ಪ್ರಾರಂಭಿಸಿದ ಅವರು, ನಂತರ ಅಮೆರಿಕದ ದೈತ್ಯ ಕಂಪನಿಗಳಾದ ಟೆಸ್ಲಾ ಮತ್ತು ಲಿಫ್ಟ್‌ʼನಂತಹ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದರು. ಬಳಿಕ 2023ರಲ್ಲಿ ತಮ್ಮದೇ ಆದ ಸ್ವಂತ ಟೆಕ್ ಕಂಪನಿಯನ್ನು ಪ್ರಾರಂಭಿಸಿ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.