ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

KPCC: ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ವಿಂಗಡಣೆ ಮಸೂದೆ ಲೋಪದೋಷಗಳ ವಿರುದ್ಧ ಕೆಪಿಸಿಸಿ ದಕ್ಷಿಣ ಜಿಲ್ಲಾ ಪ್ರಚಾರ ಸಮಿತಿಯಿಂದ ಆಕ್ರೋಶ

ಮಹಿಳಾ ಮೀಸಲಾತಿ ಜಾರಿಗೆ ಮುನ್ನ ಕ್ಷೇತ್ರ ವಿಂಗಡಣೆ ಪ್ರಕ್ರಿಯೆ ಕೈಗೊಳ್ಳುವುದಾಗಿ ಹೇಳಲಾಗು ತ್ತಿದ್ದು, ಇದರಿಂದ ಹಲವಾರು ಕ್ಷೇತ್ರಗಳ ಅಸ್ತಿತ್ವವೇ ಬದಲಾಗುವ ಆತಂಕ ನಿರ್ಮಾಣವಾಗಿದೆ. ವಿಶೇಷವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕ್ಷೇತ್ರಗಳಲ್ಲಿ ಜನಸಂಖ್ಯೆ ಆಧಾರಿತ ವಿಂಗಡಣೆ ನಡೆಸಿದರೆ ರಾಜಕೀಯ ಹಾಗೂ ಸಾಮಾಜಿಕ ಸಮತೋಲನ ಹದಗೆಡುವ ಸಾಧ್ಯತೆ ಇದೆ

ಮಸೂದೆ ಲೋಪದೋಷಗಳ ವಿರುದ್ಧ ಕೆಪಿಸಿಸಿ ಆಕ್ರೋಶ

-

Profile
Ashok Nayak May 8, 2026 8:40 AM

ಬೆಂಗಳೂರು: 2023ರಲ್ಲಿ ಮಹಿಳಾ ಮೀಸಲಾತಿ ವಿಧೇಯಕವನ್ನು ಸಂಸತ್ತಿನಲ್ಲಿ ಅಂಗೀಕರಿಸಿದರೂ, ಅದರ ಅನುಷ್ಠಾನದಲ್ಲಿ ಕೇಂದ್ರ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಮಹಿಳೆಯರಿಗೆ ನ್ಯಾಯ ಸಿಗದಂತಾಗಿದೆ ಎಂದು ಕೆಪಿಸಿಸಿ ದಕ್ಷಿಣ ಜಿಲ್ಲಾ ಪ್ರಚಾರ ಸಮಿತಿ ಸಂಚಾಲಕಿ ಶ್ರೀಮತಿ ಕೃಪಾ ಆಳ್ವ ಆರೋಪಿಸಿದರು.

ನಗರದ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ದಕ್ಷಿಣ ಜಿಲ್ಲೆ ವತಿಯಿಂದ ಆಯೋ ಜಿಸಿದ್ದ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ವಿಂಗಡಣೆ ಮಸೂದೆ ಲೋಪದೋಷಗಳ ಕುರಿತು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

2023ರಲ್ಲಿ ಅಂಗೀಕೃತವಾದ ಮಹಿಳಾ ಮೀಸಲಾತಿ ಮಸೂದೆ ಇನ್ನೂ ಜಾರಿಗೆ ಬರದಿರುವುದು ಮಹಿಳಾ ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ. ಮಹಿಳೆಯರ ರಾಜಕೀಯ ಸಬಲೀಕರಣದ ಹೆಸರಿನಲ್ಲಿ ಕೇಂದ್ರ ಸರ್ಕಾರ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: Bangalore News: ರಿಯಾ ಡೈಮಂಡ್ಸ್ ಬೆಂಗಳೂರಿನಲ್ಲಿ ಭಾರತದ ಮೊದಲ ಪ್ರಯೋಗಾಲಯದಲ್ಲಿ ಬೆಳೆದ ವಜ್ರ ನಿಶ್ಚಿತಾರ್ಥ ಉಂಗುರ ಸ್ಟುಡಿಯೋ ಪ್ರಾರಂಭ

ಮಹಿಳಾ ಮೀಸಲಾತಿ ಜಾರಿಗೆ ಮುನ್ನ ಕ್ಷೇತ್ರ ವಿಂಗಡಣೆ ಪ್ರಕ್ರಿಯೆ ಕೈಗೊಳ್ಳುವುದಾಗಿ ಹೇಳಲಾಗು ತ್ತಿದ್ದು, ಇದರಿಂದ ಹಲವಾರು ಕ್ಷೇತ್ರಗಳ ಅಸ್ತಿತ್ವವೇ ಬದಲಾಗುವ ಆತಂಕ ನಿರ್ಮಾಣವಾಗಿದೆ. ವಿಶೇಷವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕ್ಷೇತ್ರಗಳಲ್ಲಿ ಜನಸಂಖ್ಯೆ ಆಧಾರಿತ ವಿಂಗಡಣೆ ನಡೆಸಿದರೆ ರಾಜಕೀಯ ಹಾಗೂ ಸಾಮಾಜಿಕ ಸಮತೋಲನ ಹದಗೆಡುವ ಸಾಧ್ಯತೆ ಇದೆ ಎಂದು ಹೇಳಿದರು.

ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಮಹಿಳಾ ಮೀಸಲಾತಿಯನ್ನು ವಿಳಂಬಗೊಳಿಸಲಾಗುತ್ತಿದೆ. ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ಭರವಸೆಯನ್ನು ಕೇಂದ್ರ ಸರ್ಕಾರ ತಕ್ಷಣ ಈಡೇರಿಸ ಬೇಕು ಎಂದು ಆಗ್ರಹಿಸಿದರು.

ಮಾಧ್ಯಮಗೋಷ್ಠಿಯಲ್ಲಿ ದಕ್ಷಿಣ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಆರ್.ಅರುಣ್ ಕುಮಾರ್, ಸಂಚಾಲಕರಾದ ದಿನೇಶ್ ಪ್ರಸಾದ್, ಮಲ್ಲಿಕಾರ್ಜುನ್, ಸಂಚಾಲಕರಾದ ಅಮರನಾಥ ಮತ್ತು ನಾಗವೇಣಿ, ಕೃಷ್ಣಮೂರ್ತಿ ಹಾಗೂ ಭಾಗ್ಯ ಅವರು ಉಪಸ್ಥಿತರಿದ್ದರು.