ಹೊಟೇಲ್ ಗ್ರಾಹಕರಿಗೆ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಹೊರೆ; ಮತ್ತೆ ಹೆಚ್ಚಾಗುತ್ತ ತಿಂಡಿ ಬೆಲೆ?
ಊಟ, ತಿಂಡಿಗಾಗಿ ಹೊಟೇಲ್ ಅನ್ನೇ ನೆಚ್ಚಿಕೊಂಡಿದ್ದೀರಾ ? ಹಾಗಿದ್ದರೆ ಬೆಂಗಳೂರು ಹೊಟೇಲ್ ಗಳು ನಿಮಗೆ ಶಾಕ್ ಕೊಡುವುದು ಗ್ಯಾರಂಟಿ. ಬಹುತೇಕ ಎಲ್ಲಾ ಹೊಟೇಲ್ ಗಳಲ್ಲೂ ಚಹಾ, ಕಾಫಿ, ತಿಂಡಿ, ಊಟದ ಬೆಲೆಯನ್ನು ಹೆಚ್ಚಿಸಲಾಗಿದೆ. ಕನಿಷ್ಠ 5 ರೂ. ನಿಂದ 20 ರೂ. ವರೆಗೂ ದರ ಹೆಚ್ಚಳ ಮಾಡಲಾಗಿದ್ದು, ಇದು ಗ್ರಾಹಕರ ಜೇಬಿಗೆ ಕತ್ತರಿ ಹಾಕಲಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ (Commercial LPG cylinder) ಬೆಲೆ ಹೆಚ್ಚಳವಾದ ಬೆನ್ನಲ್ಲೇ ಬೆಂಗಳೂರಿನಲ್ಲಿ (Bengaluru) ಹೊಟೇಲ್ ತಿಂಡಿ, ತಿನಿಸುಗಳು (hotel food) ದುಬಾರಿಯಾಗಿವೆ. ಕೇಂದ್ರ ಸರ್ಕಾರವು ಇತ್ತೀಚೆಗೆ ಹೊಟೇಲ್, ರೆಸ್ಟೋರೆಂಟ್ ಗಳಲ್ಲಿ ಬಳಕೆ ಮಾಡಲಾಗುವ ವಾಣಿಜ್ಯ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಯನ್ನು ಬರೋಬ್ಬರಿ 993 ರೂ. ಹೆಚ್ಚಳ ಮಾಡಿತ್ತು. ಇದರಿಂದ 19 ಕೆಜಿ ತೂಕದ ಸಿಲಿಂಡರ್ ಬೆಲೆ 3,154 ರೂ. ತಲುಪಿದೆ. ಈ ಹೊರೆಯನ್ನು ಇದೀಗ ಹೊಟೇಲ್ ಮಾಲೀಕರು ಗ್ರಾಹಕರ ಮೇಲೆ ವಿಧಿಸಲು ಮುಂದಾಗಿದ್ದಾರೆ.
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಳದಿಂದ ಕಂಗಾಲಾಗಿರುವ ಹೊಟೇಲ್ ಮಾಲೀಕರು ಚಹಾ, ಕಾಫಿ, ಊಟ, ತಿಂಡಿ ಬೆಳೆಯನ್ನು ಶೇಕಡಾ 20ರಷ್ಟು ಹೆಚ್ಚಿಸಲು ಮುಂದಾಗಿದ್ದಾರೆ. ಇದರಿಂದ ಬೆಂಗಳೂರಿನ ಹೊಟೇಲ್‌ಗಳಲ್ಲಿ ಆಹಾರ ಪದಾರ್ಥಗಳ ದರ ಕನಿಷ್ಠ 5 ರೂ. ನಿಂದ 20 ರೂ. ವರೆಗೆ ಹೆಚ್ಚಳವಾಗಿದೆ.
Biocon successor: ಬಯೋಕಾನ್ ಮುಂದಿನ ಉತ್ತರಾಧಿಕಾರಿ ಘೋಷಿಸಿದ ಕಿರಣ್ ಮಜುಂದಾರ್ ಶಾ; ಯಾರು ಈ ಕ್ಲೇರ್ ಮಜುಂದಾರ್?
ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರು ನಗರ ಹೊಟೇಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಳವಾಗಿದೆ. ಇದನ್ನು ಹೊಟೇಲ್ ಮಾಲೀಕರು ಭರಿಸಬೇಕಿದೆ. ಆದ್ದರಿಂದ ಬೆಲೆ ಏರಿಕೆ ಮಾಡುವುದು ಆಯಾ ಹೊಟೇಲ್ ಮಾಲೀಕರಿಗೆ ಬಿಟ್ಟ ನಿರ್ಧಾರ ಎಂದು ಹೇಳಿದರು.
ಮಧ್ಯಪ್ರಾಚ್ಯ ಭಾಗದಲ್ಲಿ ಉಂಟಾಗಿರುವ ಸಂಘರ್ಷದ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆ ಮೇಲೆ ಬೀರಿದೆ. ಇದರಿಂದ ಉಂಟಾಗಿರುವ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಹೊರೆ ಹೊಟೇಲ್ ಆಹಾರ ಪದಾರ್ಥಗಳ ಮೇಲೆ ಬೀರಿದೆ. ಇದನ್ನು ಹೊಟೇಲ್ ಮಾಲೀಕರು ಗ್ರಾಹಕರಿಗೆ ಹೊರಿಸಿದ್ದಾರೆ.
Pravasi Prapancha: ಹಿತವಾದ ಮನಸಿಗೆ ಹದವಾದ ಕಾಫಿ; ನೆನಪಲ್ಲುಳಿಯುವ ಮಾತಾಸ್ ಘಮ
ಬೆಂಗಳೂರು ನಗರದ ಕೆಲವೊಂದು ಹೊಟೇಲ್ ಗಳಲ್ಲಿ ಊಟದ ದರದಲ್ಲಿ 20ರೂ. ವರೆಗೆ ಹೆಚ್ಚಿಸಲಾಗಿದ್ದರೆ, ಚಹಾದ ಬೆಳೆಯನ್ನು ಸುಮಾರು 5 ರೂ. ಏರಿಕೆ ಮಾಡಲಾಗಿದೆ. ಅದರಂತೆ ಉಳಿದ ತಿಂಡಿಗಳ ಬೆಲೆಯಲ್ಲೂ ಕನಿಷ್ಠ 5 ರೂ. ನಿಂದ 20 ರೂ. ವರೆಗೆ ಹೆಚ್ಚಿಸಲಾಗಿದೆ.