ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2027: ಎಲ್‌ಎಸ್‌ಜಿ ತೊರೆದು ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರಲು ಮುಂದಾದ ರಿಷಭ್‌ ಪಂತ್‌?

2025 ಹಾಗೂ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸತತ ವೈಫಲ್ಯ ಅನುಭವಿಸಿದ ಐಪಿಎಲ್‌ ಇತಿಹಾಸದ ಅತ್ಯಂತ ದುಬಾರಿ ಆಟಗಾರ ರಿಷಭ್‌ ಪಂತ್‌ ಅವರಿಗೆ ಮುಂದಿನ ಟೂರ್ನಿಯಲ್ಲಿ ಸಂಭಾವನೆಯಲ್ಲಿ ಕಡಿತವಾಗಲಿದೆ. ಅವರು ಲಖನೌ ಸೂಪರ್‌ ಜಯಂಟ್ಸ್‌ ತೊರೆದು ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರ್ಪಡೆಯಾಗಲು ಮುಂದಾಗಿದ್ದಾರೆ.

IPL 2027: ಎಲ್‌ಎಸ್‌ಜಿ ತೊರೆಯಲು ಮುಂದಾದ ರಿಷಭ್‌ ಪಂತ್‌?

2027ರ ಐಪಿಎಲ್‌ಗೆ ರಿಷಭ್‌ ಪಂತ್‌ ವೇತನಕ್ಕೆ ಕತ್ತರಿ? -

Profile
Ramesh Kote Jun 19, 2026 11:35 PM

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ರಿಷಭ್‌ ಪಂತ್‌ಗೆ (Rishabh Pant) ಮುಂದಿನ ಸೀಸನ್‌ನಲ್ಲಿ ವೇತನ ಕಡಿತವಾಗುವ ಸಾಧ್ಯತೆ ಇದೆ. 2025ರ ಐಪಿಎಲ್‌ ಮೆಗಾ ಹರಾಜಿನಲ್ಲಿ ಲಖನೌ ಸೂಪರ್‌ ಜಯಂಟ್ಸ್‌ (LSG) ತಂಡ, ಪಂತ್ ಅವರನ್ನು ದಾಖಲೆಯ 27 ಕೋಟಿ ರು ಗೆ ಖರೀದಿಸಿ ನಾಯಕತ್ವವನ್ನು ನೀಡಿತ್ತು. ಆದರೆ ಅವರು ನಾಯಕನಾಗಿ ಹಾಗೂ ಬ್ಯಾಟ್ಸ್‌ಮನ್‌ ಆಗಿ ಸತತ ಎರಡೂ ಸೀಸನ್‌ಗಳಲ್ಲಿ ವೈಫಲ್ಯತೆ ಅನುಭವಿಸಿದ್ದರು. ಇದೀಗ ಅವರು 2027ರ ಐಪಿಎಲ್‌ ಟೂರ್ನಿಗೂ ಮುನ್ನ ಎಲ್‌ಎಸ್‌ಜಿ ತಂಡವನ್ನು ತೊರೆಯಲು ಮುಂದಾಗಿದ್ದಾರೆ.

ಪಂತ್ ನಾಯಕತ್ವದಲ್ಲಿ ಲಖನೌ ತಂಡ 2025ರಲ್ಲಿ ಏಳನೇ ಸ್ಥಾನ ಹಾಗೂ 2026ರಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಈ ನಿರಾಶಾದಾಯಕ ಫಲಿತಾಂಶಗಳ ಬಳಿಕ ಪಂತ್ ಮತ್ತು ಫ್ರಾಂಚೈಸಿ ನಡುವಿನ ಸಂಬಂಧದ ಬಗ್ಗೆ ಹಲವು ಊಹಾಪೋಹಗಳು ಕೇಳಿಬರುತ್ತಿವೆ. ಪಂತ್ ಅವರು ಲಖನೌ ಸೂಪರ್ ಜಯಂಟ್ಸ್ ತೊರೆದು ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ವಿಶೇಷವೆಂದರೆ, ಅವರು ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿಯೂ ಕಾರ್ಯನಿರ್ವಹಿಸಿದ್ದರು.

2030ರವರೆಗೂ ವಿರಾಟ್‌ ಕೊಹ್ಲಿ ಆರ್‌ಸಿಬಿ ಪರ ಆಡಲಿದ್ದಾರೆಂದ ರಾಜೇಶ್‌ ಮೆನನ್‌!

“ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಲಖನೌ ಸೂಪರ್‌ ಜಯಂಟ್ಸ್‌ ತಂಡಗಳು ಆಟಗಾರರ ವಿನಿಮಯಕ್ಕಾಗಿ ಟ್ರೇಡ್ ಪ್ರಕ್ರಿಯೆ ಆರಂಭಿಸಿವೆ. ಈ ಒಪ್ಪಂದದ ಪ್ರಕಾರ ರಿಷಭ್‌ ಪಂತ್‌ ಅವರು ಮತ್ತೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಲಿದ್ದಾರೆ. ಅವರು 2025ರ ಐಪಿಎಲ್ ಹರಾಜಿಗೂ ಮುನ್ನ ಬಿಡುಗಡೆಗೊಳ್ಳುವ ಮೊದಲು ಒಂಬತ್ತು ಸೀಸನ್‌ಗಳ ಕಾಲ ಈ ತಂಡವನ್ನು ಪ್ರತಿನಿಧಿಸಿದ್ದರು."

"ಈ ಟ್ರೇಡ್‌ನಲ್ಲಿ ಕುಲ್ದೀಪ್‌ ಯಾದವ್‌ ಅವರು ಲಖನೌ ಸೂಪರ್ ಜಯಂಟ್ಸ್‌ಗೆ ಸೇರುವುದು ಒಳಗೊಂಡಿದೆ. ಈ ಆಟಗಾರರ ವಿನಿಮಯವು ಇಬ್ಬರಿಗೂ ತಮ್ಮ ತಮ್ಮ ಮೂಲ ರಾಜ್ಯಗಳ ಫ್ರಾಂಚೈಸಿಗಳಿಗೆ ಮರಳುವಂತಾಗಲಿದೆ. ಪಂತ್ ಡೆಲ್ಲಿ ಮತ್ತು ಕುಲ್ದೀಪ್ ಯಾದವ್ ಉತ್ತರ ಪ್ರದೇಶದಲ್ಲಿ ತಮ್ಮ ದೇಶಿ ಕ್ರಿಕೆಟ್ ಆಡುತ್ತಿದ್ದಾರೆ," ಎಂದು ಕ್ರಿಕ್‌ಬಝ್‌ ವರದಿ ಮಾಡಿದೆ.

IPL 2026: ʻನಾನು ಈ ರೀತಿಯ ನೋಡಿರಲಿಲ್ಲʼ-ವೈಭವ್‌ ಸೂರ್ಯವಂಶಿ ಬಗ್ಗೆ ಲಿವಿಂಗ್‌ಸ್ಟೋನ್‌ ದೊಡ್ಡ ಹೇಳಿಕೆ!

ರಿಷಭ್‌ ಪಂತ್‌ಗೆ ವೇತನ ಕಡಿತ

ವರದಿ ಪ್ರಕಾರ, ಈ ಒಪ್ಪಂದದ ಅತ್ಯಂತ ಕುತೂಹಲಕಾರಿ ಅಂಶವೆಂದರೆ ರಿಷಭ್‌ ಪಂತ್‌ ಅವರು ದೊಡ್ಡ ಮಟ್ಟದ ವೇತನ ಕಡಿತವನ್ನು ಸ್ವೀಕರಿಸಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ಗೆ ಅವರನ್ನು 27 ಕೋಟಿ ಮೊತ್ತಕ್ಕೆ ಮತ್ತೆ ಸೇರಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗಿದೆ.

“ಪಂತ್ ಅವರ ಪರಿಷ್ಕೃತ ಸಂಭಾವನೆ ಈಗಿನ ಸಂಬಳದ ಅರ್ಧಕ್ಕಿಂತ ಸ್ವಲ್ಪ ಹೆಚ್ಚು ಇರಲಿದೆ ಎಂಬುದು ತಿಳಿದುಬಂದಿದೆ. ಮೂಲಗಳು ಹೇಳುವಂತೆ ವಿಕೆಟ್‌ಕೀಪರ್-ಬ್ಯಾಟರ್ ಅವರು ಸುಮಾರು 15 ಕೋಟಿ ರು ಸಂಭಾವನೆಗೆ ಒಪ್ಪಿಕೊಂಡಿದ್ದಾರೆ. ಇನ್ನೊಂದೆಡೆ, ಕುಲ್ದೀಪ್‌ ಯಾದವ್ ಅವರ ಸಂಭಾವನೆ ಲಖನೌ ಸೂಪರ್ ಜಯಂಟ್ಸ್‌ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲದೆ 13.25 ಕೋಟಿ ರು ಗಳೊಂದಿಗೆ ಮುಂದುವರಿಯಲಿದೆ,” ಎಂದು ವರದಿ ತಿಳಿಸಿದೆ.

ಐಪಿಎಲ್​ ಕೋಚಿಂಗ್​ ನಡೆಸಲು ಮುಂದಾದ ಯುವರಾಜ್​ ಸಿಂಗ್; ಯಾವ ತಂಡ?

ಡೆಲ್ಲಿ ಕ್ಯಾಪಿಟಲ್ಸ್‌ಗೆ ಯುವರಾಜ್‌ ಸಿಂಗ್‌ ಹೆಡ್‌ ಕೋಚ್‌?

ಮಾಜಿ ವೈಟ್-ಬಾಲ್ ದಿಗ್ಗಜ ಯುವರಾಜ್‌ ಸಿಂಗ್‌ ಅವರು 2027ರ ಐಪಿಎಲ್ ಸೀಸನ್‌ಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಬ್ಯಾಟಿಂಗ್ ಕೋಚ್ ಆಗಿ ಸೇರಲಿದ್ದಾರೆ ಎಂದು ಐಪಿಎಲ್ ಮೂಲಗಳು ತಿಳಿಸಿವೆ. ಇತ್ತೀಚಿನ ವರ್ಷಗಳಲ್ಲಿ ಅವರು ಭಾರತದ ಪ್ರಮುಖ ಆಟಗಾರರಿಗೆ ಮೆಂಟರ್‌ ಆಗಿ ಕೆಲಸ ಮಾಡಿದ್ದು, ಭಾರತ ತಂಡದ ನಾಯಕ ಶುಭಮನ್‌ ಗಿಲ್‌ ಹಾಗೂ ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್‌ ಶರ್ಮಾ ಅವರಿಗೆ ಮೆಂಟರ್ ಆಗಿ ಸಹಾಯ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದೀಗ ಯುವರಾಜ್‌ ಕರೆಯಂತೆ ಪಂತ್‌ ಅವರನ್ನು ಡೆಲ್ಲಿ ಸೇರಿಸಿಕೊಳ್ಳುತ್ತಿರಬಹುದು.