ಮಾಹೆ ಬೆಂಗಳೂರು ಓಪನ್ ಹೌಸ್ 3.0: ಪರಂಪರೆಯಿಂದ ಭವಿಷ್ಯದ ಕಲಿಕೆಯ ಕಡೆಗೆ
ದಿನಪೂರ್ತಿ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪೋಷ ಕರು ಪಾಲ್ಗೊಂಡಿದ್ದರು. ಸಂವಾದಾತ್ಮಕ ಕಾರ್ಯಾಗಾರಗಳು ಮತ್ತು ನೇರ ಸಂದರ್ಶನ, ಶಿಕ್ಷಕರ ಜೊತೆ ಮಾತುಕತೆ, ಸಮಾಲೋಚನೆ, ಕ್ಯಾಂಪಸ್ ಅನುಭವ ಪಡೆಯುವ ಮೂಲಕ ವಿದ್ಯಾರ್ಥಿ ಗಳು ತಮ್ಮ ಕಲಿಕೆಯ ಮಾರ್ಗವನ್ನು ನಿರ್ಧರಿಸಲು ಇದೊಂದು ಅದ್ಭುತ ವೇದಿಕೆಯಾಗಿತ್ತು
-
ಬೆಂಗಳೂರು: ಹದಿಹರೆಯದ ಭಾವೀ ವಿದ್ಯಾರ್ಥಿಗಳ ಚಟುವಟಿಕೆಗಳು, ಆಸಕ್ತಿದಾಯಕ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದ ಅನುಭವಿ ಅಧ್ಯಾಪಕರು, ಚೈತನ್ಯದ ಚಿಲುಮೆ ಯಾಗಿದ್ದ ಕಾರಿಡಾರ್‌ಗಳು, ಹೊಸ ಹೊಳಹು ನೀಡುತ್ತಿದ್ದ ಪ್ರಯೋಗಾಲಗಳು, -ಇವೆಲ್ಲವು ಗಳ ಮೂಲಕ ಭವಿಷ್ಯದ ಕನಸುಗಳ ಇಣುಕು ನೋಟಕ್ಕೆ ವೇದಿಕೆ ಒದಗಿಸಿದ್ದು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ ) ಬೆಂಗಳೂರು ಕ್ಯಾಂಪಸ್ಸಿನಲ್ಲಿ ಆಯೋಜಿಸಲಾಗಿದ್ದ ಓಪನ್ ಹೌಸ್ 3.0 ಕಾರ್ಯಕ್ರಮ.
ಈ ಬಾರಿ ಓಪನ್ ಹೌಸ್ ಕೇವಲ ವಿಶ್ವವಿದ್ಯಾಲಯವನ್ನು ಪರಿಚಯಿಸುವುದಕ್ಕಿಂತ ಮಿಗಿಲಾಗಿ ಹತ್ತು ಹಲವು ತಂತ್ರಜ್ಞಾನಗಳಿಂದ ಜಗತ್ತು ಬದಲಾಗುವ ಪರಿಯನ್ನು ಪರಿಚಯಿಸಿತು. ದಿನಪೂರ್ತಿ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪೋಷಕರು ಪಾಲ್ಗೊಂಡಿದ್ದರು. ಸಂವಾದಾತ್ಮಕ ಕಾರ್ಯಾಗಾರಗಳು ಮತ್ತು ನೇರ ಸಂದರ್ಶನ, ಶಿಕ್ಷಕರ ಜೊತೆ ಮಾತುಕತೆ, ಸಮಾಲೋಚನೆ, ಕ್ಯಾಂಪಸ್ ಅನುಭವ ಪಡೆಯುವ ಮೂಲಕ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಮಾರ್ಗವನ್ನು ನಿರ್ಧರಿಸಲು ಇದೊಂದು ಅದ್ಭುತ ವೇದಿಕೆಯಾಗಿತ್ತು.
ಇದನ್ನೂ ಓದಿ: Bangalore News: ಎರಡು ದಿನಗಳ ಉಪಕುಲಪತಿಗಳ ರಾಷ್ಟ್ರೀಯ ಸಮ್ಮೇಳನ: ಶಿಕ್ಷಣದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಗೆ ನಿರ್ಧಾರ
ಈ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಮಾತನಾಡಿದ ಮಾಹೆ ಬೆಂಗಳೂರಿನ ಸಹ ಕುಲಪತಿ ಡಾ.ಮಧು ವೀರರಾಘವನ್, ʼ ಇಂದು ನಾವು ಕಂಡ ಉತ್ಸಾಹ ಮತ್ತು ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವಿಕೆ, ನಾಳಿನ ಸವಾಲುಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಪರಿವರ್ತ ನಾತ್ಮಕ ಶಿಕ್ಷಣವನ್ನು ನೀಡುವ ಮಾಹೆ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಇಂದಿನ ಶಿಕ್ಷಣವು ಜ್ಞಾನವನ್ನು ವರ್ಗಾಯಿಸುವುದರ ಬಗ್ಗೆ ಅಲ್ಲ.
ಇದು ಕುತೂಹಲವನ್ನು ಸಾಮರ್ಥ್ಯವಾಗಿ ಪರಿವರ್ತಿಸುವುದರ ಬಗ್ಗೆ. ಓಪನ್ ಹೌಸ್ 3.0ನಲ್ಲಿ ಆ ರೂಪಾಂತರವು ಕಾಣಿಸಿದೆ. ನಮ್ಮ ವಿದ್ಯಾರ್ಥಿಗಳು ಹೇಗೆ ತೊಡಗಿಸಿಕೊಳ್ಳು ತ್ತಾರೆ, ಆಲೋಚನೆಗಳು ಹೇಗೆ ಜೀವಂತವಾಗಿಸುತ್ತಾರೆ ಮತ್ತು ತರಗತಿಯ ಆಚೆಗಿನ ಕಲಿಕೆಯ ಅನುಭವನ್ನು ಈ ಕಾರ್ಯಕ್ರಮದಲ್ಲಿ ಕಾಣಬಹುದುʼ ಎಂದು ಹೇಳಿದರು.
ಮಧ್ಯಾಹ್ನ ನಡೆದ ಸಹ ಕುಲಪತಿ ಪ್ರೊ.(ಡಾ.)ಮಧು ವೀರರಾಘವನ್, ಸಹ ಕುಲಸಚಿವ ರಾಘವೇಂದ್ರ ಪ್ರಭು ಸೇರಿದಂತೆ ಮಾಹೆಯ ವಿವಿಧ ಸಂಸ್ಥೆ ಮತ್ತು ವಿಭಾಗಗಳ ಮುಖ್ಯಸ್ಥರ ವಿಚಾರ ಮಂಡನೆ ಎಲ್ಲಾ ವಿದ್ಯಾರ್ಥಿಗಳ ಮತ್ತು ಪೋಷಕರ ಗಮನ ಸೆಳೆಯಿತು. ಭವಿಷ್ಯದ ಶಿಕ್ಷಣದ ದೃಷ್ಟಿಕೋನ, ಉದ್ಯೋಗ, ಮಾಹೆಯ ಕಲಿಕೆಯ ದೂರದೃಷ್ಟಿಯ, ಭವಿಷ್ಯದ ಅವಶ್ಯಕತೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಕುರಿತ ಒಳನೋಟಗಳನ್ನು ಇವರು ಹಂಚಿ ಕೊಂಡರು. ವಿದ್ಯಾರ್ಥಗಳು ಮತ್ತು ಪೋಷಕರು ಕಲಿಕೆಯ ಕುರಿತ ಅನೇಕ ಅನುಮಾನ ಗಳನ್ನು ಬಗೆಹರಿಸಿಕೊಳ್ಳಲು ಪ್ರಶ್ನೋತ್ತರ ಮಾಲಿಕೆಯು ನಡೆಯಿತು.
ಕುತೂಹಲ ಮತ್ತು ಸೃಜನಶೀಲತೆಯಿಂದ ಕಂಗೊಳಿಸಿದ ಕ್ಯಾಂಪಸ್
ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ (TAPMI-BLR) ನಲ್ಲಿ ಹಮ್ಮಿಕೊಂಡಿದ್ದ ಪರಂಪರಾನುಗತವಾಗಿ ವ್ಯಾಪಾರ-ವಾಣಿಜ್ಯದಲ್ಲಿ ತೊಡಗಿಸಿಕೊಂಡಿರುವ ಕುಟುಂಬಗಳ ವ್ಯವಹಾರ ನಿರ್ವಹಣೆ ಕುರಿತ ಕಾರ್ಯಾಗಾರ ವಿದ್ಯಾರ್ಥಿಗಳ ವಿಶೇಷ ಗಮನ ಸೆಳೆದಿತ್ತು.
ಇದರ ಜೊತೆಗೆ ಪತ್ರಿಕೋದ್ಯಮ, ಕಲೆ, ಸಾಹಿತ್ಯ ಬೋಧಿಸುವ ವಿಭಾಗವಾದ ಲಿಬರಲ್ ಆರ್ಟ್ಸ್, ಹ್ಯುಮಾನಿಟೀಸ್ & ಸೋಶಿಯಲ್ ಸೈನ್ಸಸ್ (ಡಿಎಲ್‌ಎಚ್‌ಎಸ್) ಸಹ ಆಕರ್ಷಣೆ ಯ ಕೇಂದ್ರಬಿಂದುವಾಗಿತ್ತು. ಈ ವಿಚಾರದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ವಿಭಾಗದ ಪ್ರತಿ ಪ್ರಾಧ್ಯಾಪಕರ ಜೊತೆ ಮಾತನಾಡಿ, ಅಲ್ಲಿನ ಪ್ರಯೋಗಾಲಯವನ್ನು ವೀಕ್ಷಿಸಿದರು.
ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿ (SMI) ಸ್ಕೂಲ್, ಡಿಸೈನಿಂಗ್ ವರ್ಕ್‌ಶಾಪ್‌ಗಳು ಮತ್ತು ಸ್ಕ್ರೀನ್ ಪ್ರಿಂಟಿಂಗ್ ಸ್ಟುಡಿಯೋಗಳ ಮೂಲಕ ಈ ಸೃಜನಶೀಲತೆ ಅನ್ನು ಅಭಿವ್ಯಕ್ತಿಸುವ ಮೂಲಕ ವಿದ್ಯಾರ್ಥಿಗಳನ್ನು ಆಕರ್ಷಿಸಿತು.
ಮಣಿಪಾಲ್ ಕಾನೂನು ಶಾಲೆ (MLS) ಉತ್ಸಾಹಭರಿತ ಮೂಟ್ ಕೋರ್ಟ್ (ಅಣಕು ನ್ಯಾಯಾ ಲಯ) ಮತ್ತು ಕಾನೂನು ಕುತೂಹಲಗಳ ಕುರಿತ ರಸಪ್ರಶ್ನೆ ಮೂಲಕ ವಿದ್ಯಾರ್ಥಿ ಗಳನ್ನು ಮತ್ತು ಅವರ ಪೋಷಕರನ್ನು ಸೆಳೆಯಿತು. ವಾಣಿಜ್ಯ ಇಲಾಖೆ (DOC) ಫಿನ್-ಅನಾ ಲಿಟಿಕ್ಸ್: ದಿ ಕೇಸ್ ಸ್ಟಡಿ ಚಾಲೆಂಜ್ ಮತ್ತು ಡಂಕ್ ಯುವರ್ ಇನ್ವೆಸ್ಟ್‌ಮೆಂಟ್ ಮೂಲಕ ಹಣ ಕಾಸನ್ನು ಆಟವಾಗಿ ಪರಿವರ್ತಿಸಿತು. ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT-BLR) ತನ್ನ ಸ್ವಾಯತ್ತ ಮೊಬಿಲಿಟಿ ಪ್ರದರ್ಶನ ಮತ್ತು ಸಂವಾದಾತ್ಮಕ AR/VR ಲ್ಯಾಬ್ ಗಳೊಂದಿಗೆ ಭವಿಷ್ಯದ ತಂತ್ರಜ್ಞಾನದ ಅನುಭವನ್ನು ನೀಡಿತು.
ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ರೀಜೆನೆರೇಟಿವ್ ಮೆಡಿಸಿನ್ (MIRM) ನಲ್ಲಿ ರಸಪ್ರಶ್ನೆ ಮತ್ತು ಸಂವಾದಾತ್ಮಕ ಪ್ರದರ್ಶನಗಳ ಮೂಲಕ ವಿಜ್ಞಾನವನ್ನು ಸುಲಭವಾಗಿ ಪರಿಚಯಿಸ ಲಾಯಿತು. ಈ ಮೂಲಕ ಮಾಹೆ ಬೆಂಗಳೂರಿನ ಓಪನ್ ಹೌಸ್ 3.0 ಕ್ಯಾಂಪಸ್‌ನ ಪ್ರತಿ ಯೊಂದು ಮೂಲೆಯಲ್ಲೂ ಕೌತುಕದ ವಾತವರಣವನ್ನು ಸೃಷ್ಟಿಸಿತ್ತು.
ಪರಂಪರೆಯ ಬೇರು ಭವಿಷ್ಯದ ಕನಸು
ಜ್ಞಾನ, ಸೃಜನಶೀಲತೆ ಮತ್ತು ಸಹಾನುಭೂತಿಯನ್ನು ಸಮಾನ ಪ್ರಮಾಣದಲ್ಲಿ ಪೋಷಿಸುವ ಅನುಭವ ಮತ್ತು ಅಂತರಶಿಸ್ತೀಯ ಕಲಿಕೆಗೆ ಮಾಹೆ ಬೆಂಗಳೂರಿನ ಬದ್ಧತೆಯನ್ನು ಈ ಕಾರ್ಯಕ್ರಮವು ಪುನರುಚ್ಚರಿಸಿತು.
ಜಾಗತಿಕವಾಗಿ ಮಾನ್ಯತೆ ಪಡೆದ ಮಾಹೆ ಮಣಿಪಾಲದ ಪರಂಪರೆಯನ್ನು ಆಧರಿಸಿ, ಮಾಹೆ ಬೆಂಗಳೂರು ಭವಿಷ್ಯಕ್ಕೆ ಸದಾ ಸನ್ನದ್ಧವಾಗಿರುವ ಕ್ಯಾಂಪಸ್‌ನ ಕಲ್ಪನೆಯನ್ನು ಸಾಕಾರ ಗೊಳಿಸುತ್ತಿದೆ. ಮುಂದಿನ ಪೀಳಿಗೆಯ ಚಿಂತಕರು ಮತ್ತು ನಾವೀನ್ಯಕಾರರನ್ನು ರೂಪಿಸು ವಲ್ಲಿ ಮುನ್ನಡೆಯಲ್ಲಿರುವ ಮಾಹೆಯ ಸ್ಥಾನವನ್ನು ಬಲಪಡಿಸುತ್ತಾ ಸಾಗುತ್ತಿದೆ.