ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೊಣಕಾಲು ಮತ್ತು ಹೆಗಲಿನ ವಿಶೇಷ ಆರೈಕೆಗಾಗಿ 'ಸ್ಪೋರ್ಟ್ಸ್ ಇಂಜುರಿ ಕೇರ್ ಸೆಂಟರ್' ಆರಂಭ

ವೃತ್ತಿಪರ ಕ್ರೀಡಾಪಟುಗಳು ಮತ್ತು ಹವ್ಯಾಸಿ ಫಿಟ್‌ನೆಸ್ ಪ್ರೇಮಿಗಳಲ್ಲಿ ಕ್ರೀಡೆಗೆ ಸಂಬಂಧಿಸಿದ ಗಾಯಗಳು ಸಾಮಾನ್ಯವಾಗುತ್ತಿವೆ. ಈ ಬೆಳೆಯುತ್ತಿರುವ ಆರೋಗ್ಯ ರಕ್ಷಣೆಯ ಅಗತ್ಯವನ್ನು ಪೂರೈಸಲು, ಮಣಿಪಾಲ್ ಹಾಸ್ಪಿಟಲ್ ಮಿಲರ್ಸ್ ರೋಡ್ ತನ್ನದೇ ಆದ ಪ್ರತ್ಯೇಕ 'ಸ್ಪೋರ್ಟ್ಸ್ ಇಂಜುರಿ ಕೇರ್ ಸೆಂಟರ್' (ಕ್ರೀಡಾ ಗಾಯಗಳ ಆರೈಕೆ ಕೇಂದ್ರ) ಅನ್ನು ಪ್ರಾರಂಭಿಸಿದೆ.

ಹೆಗಲಿನ ವಿಶೇಷ ಆರೈಕೆಗಾಗಿ 'ಸ್ಪೋರ್ಟ್ಸ್ ಇಂಜುರಿ ಕೇರ್ ಸೆಂಟರ್' ಆರಂಭ

-

Profile
Ashok Nayak Jul 12, 2026 10:06 PM

ಬೆಂಗಳೂರು: ಭಾರತದಾದ್ಯಂತ ಕ್ರೀಡೆಗಳು ಮತ್ತು ಫಿಟ್‌ನೆಸ್ ಚಟುವಟಿಕೆಗಳಲ್ಲಿ ಜನರ ಪಾಲ್ಗೊಳ್ಳುವಿಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ವೃತ್ತಿಪರ ಕ್ರೀಡಾಪಟುಗಳು ಮತ್ತು ಹವ್ಯಾಸಿ ಫಿಟ್‌ನೆಸ್ ಪ್ರೇಮಿಗಳಲ್ಲಿ ಕ್ರೀಡೆಗೆ ಸಂಬಂಧಿಸಿದ ಗಾಯಗಳು ಸಾಮಾನ್ಯವಾಗುತ್ತಿವೆ. ಈ ಬೆಳೆಯುತ್ತಿರುವ ಆರೋಗ್ಯ ರಕ್ಷಣೆಯ ಅಗತ್ಯ ಪೂರೈಸಲು, ಮಣಿಪಾಲ್ ಹಾಸ್ಪಿಟಲ್ ಮಿಲರ್ಸ್ ರೋಡ್ ತನ್ನದೇ ಆದ ಪ್ರತ್ಯೇಕ 'ಸ್ಪೋರ್ಟ್ಸ್ ಇಂಜುರಿ ಕೇರ್ ಸೆಂಟರ್' (ಕ್ರೀಡಾ ಗಾಯಗಳ ಆರೈಕೆ ಕೇಂದ್ರ) ಅನ್ನು ಪ್ರಾರಂಭಿಸಿದೆ.

ಇದು ಸುಧಾರಿತ ಆರ್ತ್ರೋಸ್ಕೋಪಿಕ್ ಮತ್ತು ಸ್ಪೋರ್ಟ್ಸ್ ಸರ್ಜರಿ ಮೂಲಕ ಮೊಣಕಾಲು ಮತ್ತು ಹೆಗಲಿನ ಗಾಯಗಳಿಗೆ ವಿಶೇಷ ರೋಗನಿರ್ಣಯ ಹಾಗೂ ಚಿಕಿತ್ಸೆಯನ್ನು ನೀಡುತ್ತದೆ.

ಈ ವಿಶೇಷ ಕೇಂದ್ರ ಉದ್ಘಾಟನೆಯಲ್ಲಿ ಮಣಿಪಾಲ್ ಹಾಸ್ಪಿಟಲ್ ಮಿಲರ್ಸ್ ರೋಡ್‌ನ ಆರ್ತ್ರೋ ಸ್ಕೋಪಿ ಮತ್ತು ಸ್ಪೋರ್ಟ್ಸ್ ಸರ್ಜರಿ ತಜ್ಞರು ಹಾಗೂ ಹೆಗಲು ಮತ್ತು ಮೊಣಕಾಲು ಶಸ್ತ್ರಚಿಕಿತ್ಸಕ ರಾದ ಡಾ. ಚಿರಾಗ್ ಥೋನ್ಸೆ , ಮಣಿಪಾಲ್ ಆಸ್ಪತ್ರೆಗಳ ಜೋನಲ್ ನಿರ್ದೇಶಕ ಡಾ. ಮನೀಶ್ ರೈ, ಮಿಲ್ಲರ್ಸ್ ರಸ್ತೆ ಮಣಿಪಾಲ್ ಆಸ್ಪತ್ರೆಯ ನಿರ್ದೇಶಕ ಡಾ. ನಿರಂಜನ್ ರೈ, ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ​​(ಕೆಬಿಎ) ಅಧ್ಯಕ್ಷರಾದ ಶ್ರೀ ಕುಮಾರ್ ಬಂಗಾರಪ್ಪ, ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ​​(ಕೆಎಸ್ಎಫ್ಎ) ಉಪ ಕಾರ್ಯದರ್ಶಿ ಶ್ರೀ ಹನೀಫ್ ಮೊಹಮ್ಮದ್, ಬ್ಯಾಡ್ಮಿಂಟನ್ ಅಸೋಸಿಯೇಷನ್ ​​ಕಾರ್ಯದರ್ಶಿ ಶ್ರೀ ಮುರಳೀಧರ್, ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ​​(ಕೆಎಸ್ಸಿಎ) ಶ್ರೀ ಅರವಿಂದ್ ಗೌಡ ಮತ್ತು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ನ ಇಸಿ ಸದಸ್ಯ ಡಾ. ನಿಶಾಂತ್ ಉಪಸ್ಥಿತರಿದ್ದರು.

ಇದನ್ನೂ ಓದಿ: Bangalore News: ಹೊಸೂರಿನಲ್ಲಿ ಬೃಹತ್ 'ಏರೋಸ್ಪೇಸ್-ಡಿಫೆನ್ಸ್' ಘಟಕದ ನಿರ್ಮಾಣಕ್ಕೆ ಚಾಲನೆ ನೀಡಿದ ಬೆಂಗಳೂರಿನ 'ಹಿಕಲ್ ಟೆಕ್ನಾಲಜೀಸ್'

ಭಾರತದ ಯುವ ಜನಸಂಖ್ಯೆಯು ದೇಶದಲ್ಲಿ ಫಿಟ್‌ನೆಸ್ ಅಭಿಯಾನವನ್ನು ಮುನ್ನಡೆಸುತ್ತಿದ್ದು, ಶೇಕಡಾ 35 ಕ್ಕಿಂತ ಕಡಿಮೆ ವಯಸ್ಸಿನ ಸುಮಾರು ಶೇಕಡಾ 65 ರಷ್ಟು ಜನಸಂಖ್ಯೆಯು ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಸರಿಸುಮಾರು ಶೇಕಡ 23ರಷ್ಟು ಭಾರತೀಯರು ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದು, ಇದು ACL ಲಿಗಮೆಂಟ್ ಹರಿತ (ACL tears), ಮೆನಿಸ್ಕಸ್ ಗಾಯಗಳು (meniscus injuries), ಕಾರ್ಟಿಲೆಜ್ ಹಾನಿ, ರೋಟೇಟರ್ ಕಫ್ ಹರಿತ (rotator cuff tears) ಮತ್ತು ಹೆಗಲಿನ ಅಸ್ಥಿರತೆಯಂತಹ (shoulder instability) ಗಾಯಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಉತ್ತಮ ಚೇತರಿಕೆ ಮತ್ತು ದೀರ್ಘಕಾಲೀನ ಕೀಲು ಹಾನಿಯನ್ನು ತಡೆಗಟ್ಟಲು ಆರಂಭಿಕ ರೋಗ ನಿರ್ಣಯ ಮತ್ತು ಸಮಯೋಚಿತ ಚಿಕಿತ್ಸೆ ಅತ್ಯಗತ್ಯವಾಗಿದೆ.

ಈ ಸ್ಪೋರ್ಟ್ಸ್ ಇಂಜುರಿ ಕೇರ್ ಸೆಂಟರ್ ಸಮಗ್ರ ಕ್ಲಿನಿಕಲ್ ಮೌಲ್ಯಮಾಪನ ಮತ್ತು ಸುಧಾರಿತ ಇಮೇಜಿಂಗ್ (imaging) ಮೂಲಕ ಸಾಕ್ಷ್ಯಾಧಾರಿತ ಆರೈಕೆಯನ್ನು ಒದಗಿಸುತ್ತದೆ.

KMC 1

ಕ್ರೀಡಾ ಗಾಯ ಗಳಲ್ಲಿ ಹಲವನ್ನು ಔಷಧಿಗಳು, ಫಿಸಿಯೋಥೆರಪಿ ಮತ್ತು ಚಟುವಟಿಕೆಗಳ ಮಾರ್ಪಾ ಡುಗಳ ಮೂಲಕ ಸಂಪ್ರದಾಯಬದ್ಧವಾಗಿಯೇ ನಿರ್ವಹಿಸಬಹುದಾದರೂ, ಶಸ್ತ್ರಚಿಕಿತ್ಸೆಯ ಅಗತ್ಯ ವಿರುವ ರೋಗಿಗಳಿಗೆ ಕನಿಷ್ಠ ಆಕ್ರಮಣಕಾರಿ (minimally invasive) ಆರ್ತ್ರೋಸ್ಕೋಪಿಕ್ ಕಾರ್ಯ ವಿಧಾನಗಳ ಸೌಲಭ್ಯ ಇಲ್ಲಿದೆ. ಇದು ಕಡಿಮೆ ಶಸ್ತ್ರಚಿಕಿತ್ಸೆಯ ನಂತರದ ನೋವು, ಕಡಿಮೆ ದಿನಗಳ ಆಸ್ಪತ್ರೆ ವಾಸ ಮತ್ತು ತ್ವರಿತ ಚೇತರಿಕೆಯೊಂದಿಗೆ ನಿಖರವಾದ ಕೀಲು ದುರಸ್ತಿಯನ್ನು ಸಾಧ್ಯ ವಾಗಿಸುತ್ತದೆ.

ಮಣಿಪಾಲ್ ಹಾಸ್ಪಿಟಲ್ ಮಿಲರ್ಸ್ ರೋಡ್‌ನ ಆರ್ತ್ರೋಸ್ಕೋಪಿ ಮತ್ತು ಸ್ಪೋರ್ಟ್ಸ್ ಸರ್ಜರಿ ತಜ್ಞರು ಹಾಗೂ ಹೆಗಲು ಮತ್ತು ಮೊಣಕಾಲು ಶಸ್ತ್ರಚಿಕಿತ್ಸಕರಾದ ಡಾ.ಚಿರಾಗ್ ಥೋನ್ಸೆ ಅವರ ನೇತೃತ್ವ ದಲ್ಲಿ, ಈ ಕೇಂದ್ರವು ಮೆನಿಸ್ಕಸ್ ಕಸಿ (meniscus transplantation), ಶೋಲ್ಡರ್ ಪ್ಯಾಚ್ ಆಗ್ಮೆಂಟೇ ಶನ್, ಸುಧರಿತ ಲಿಗಮೆಂಟ್ ಪುನರ್ನಿರ್ಮಾಣ ಮತ್ತು ಕಾರ್ಟಿಲೆಜ್ ಮರುಸ್ಥಾಪನೆ ಶಸ್ತ್ರಚಿಕಿತ್ಸೆಗಳು ಸೇರಿದಂತೆ ಅತ್ಯಾಧುನಿಕ ಚಿಕಿತ್ಸೆಗಳನ್ನು ನೀಡುತ್ತದೆ. ಇಲ್ಲಿನ ಮೂಳೆಚಿಕಿತ್ಸಕ (ಆರ್ಥೋಪೆಡಿಕ್) ತಂಡವು ವಾರ್ಷಿಕವಾಗಿ ಸುಮಾರು 1,600 ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿದ್ದು, ಇದರಲ್ಲಿ ಸುಮಾರು 700 ಕ್ರೀಡೆಗೆ ಸಂಬಂಧಿಸಿದ ಕಾರ್ಯವಿಧಾನಗಳು ಸೇರಿವೆ. ಈ ತಂಡವು ಹವ್ಯಾಸಿ ಕ್ರೀಡಾಪಟುಗಳು ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಪಟುಗಳಿಗೂ ಅತ್ಯುತ್ತಮ ಆರೈಕೆ ಯನ್ನು ನೀಡುತ್ತಿದೆ.

ಈ ಸಂದರ್ಭದಲ್ಲಿ ಡಾ. ಚಿರಾಗ್ ಥೋನ್ಸೆ "ಕ್ರೀಡೆ ಮತ್ತು ಫಿಟ್‌ನೆಸ್ ಮೇಲಿನ ಹೆಚ್ಚುತ್ತಿರುವ ಉತ್ಸಾಹವು ಇಂದು ನಾವು ನೋಡುವ ಗಾಯಗಳ ಸ್ವರೂಪವನ್ನೇ ಬದಲಾಯಿಸಿದೆ. ಕ್ರೀಡಾ ಗಾಯಗಳು ಈಗ ಕೇವಲ ಸ್ಪರ್ಧಾತ್ಮಕ ಕ್ರೀಡಾಪಟುಗಳಿಗೆ ಮಾತ್ರ ಸೀಮಿತವಾಗಿಲ್ಲ; ಇದು ಸಕ್ರಿಯ ಜೀವನಶೈಲಿಯನ್ನು ಮುನ್ನಡೆಸುವ ಯಾರಿಗಾದರೂ ಸಂಭವಿಸಬಹುದು.

ಪ್ರತಿಯೊಂದು ಪ್ರಕರಣ ದಲ್ಲೂ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದಿಲ್ಲವಾದರೂ, ತ್ವರಿತ ಚೇತರಿಕೆ ಮತ್ತು ದೀರ್ಘಕಾಲದ ಕೀಲು ಹಾನಿಯನ್ನು ತಡೆಗಟ್ಟಲು ಆರಂಭಿಕ ರೋಗನಿರ್ಣಯ ಮತ್ತು ಸರಿಯಾದ ಚಿಕಿತ್ಸಾ ವಿಧಾನ ಅತ್ಯಗತ್ಯ. ರೋಗಿಗಳು ಗಾಯದ ಹಿಂದಿನ ತಮ್ಮ ಸಕ್ರಿಯ ಜೀವನಕ್ಕೆ ಸುರಕ್ಷಿತವಾಗಿ ಮರಳಲು ಅನುವು ಮಾಡಿಕೊಡುವ ವೈಯಕ್ತಿಕಗೊಳಿಸಿದ, ಸಾಕ್ಷ್ಯಾಧಾರಿತ ಆರೈಕೆ ನೀಡುವುದರ ಮೇಲೆ ನಮ್ಮ ಗಮನವಿದೆ" ಎಂದು ಹೇಳಿದರು.

ಈ ಕೇಂದ್ರದ ಪ್ರಾರಂಭದೊಂದಿಗೆ, ಮಣಿಪಾಲ್ ಹಾಸ್ಪಿಟಲ್ ಮಿಲರ್ಸ್ ರೋಡ್ ವೃತ್ತಿಪರ ಕ್ರೀಡಾಪಟುಗಳು ಮತ್ತು ಹವ್ಯಾಸಿ ಕ್ರೀಡಾಪಟುಗಳ ಕ್ರೀಡಾ ಸಂಬಂಧಿತ ಗಾಯಗಳ ಚಿಕಿತ್ಸೆಗಾಗಿ ಸ್ಪೋರ್ಟ್ಸ್ ಇಂಜುರಿ ಕೇರ್ ಸೆಂಟರ್ ಅನ್ನು ಪ್ರಮುಖ ಕೇಂದ್ರವನ್ನಾಗಿ ಸ್ಥಾಪಿಸುವ ಗುರಿಯನ್ನು ಹೊಂದಿದೆ. ಬಹುಶಿಸ್ತೀಯ ತಂಡ (multidisciplinary team) ಮತ್ತು ವೈಯಕ್ತಿಕಗೊಳಿಸಿದ ಚಿಕಿತ್ಸಾ ಯೋಜನೆಗಳ ಬೆಂಬಲದೊಂದಿಗೆ, ಈ ಕೇಂದ್ರವು ರೋಗಿಗಳಿಗೆ ಗಾಯದಿಂದ ಚೇತರಿಸಿಕೊಳ್ಳುವು ದರಿಂದ ಹಿಡಿದು ಸುರಕ್ಷಿತವಾಗಿ ತಮ್ಮ ಗರಿಷ್ಠ ಪ್ರದರ್ಶನ ಮಟ್ಟಕ್ಕೆ ಮರಳುವವರೆಗೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ.

image

ಕ್ರೀಡೆಯಲ್ಲಿ ಗಾಯವಾಗುವುದು ಸಾಮಾನ್ಯ. ಕ್ರೀಡಾಪಟುಗಳಿಗೆ ಗಾಯ ಎಂದರೆ ಭಯ, ಯಾಕೆಂದರೆ ಅವರ ವೃತ್ತಿ ಬದುಕಿನ ಯಶಸ್ಸಿಗೆ ಗಾಯದ ಆತಂಕ ಇರುತ್ತದೆ. ಗಾಯಕ್ಕೆ ಸೂಕ್ತ ಚಿಕಿತ್ಸೆ ಸಿಕ್ಕಾಗ ಮಾತ್ರ ಕ್ರೀಡಾಪಟು ಕ್ರೀಡೆಯಲ್ಲಿ ಮುಂದುವರಿಯಲು ಸಾಧ್ಯ. ಕ್ರೀಡಾ ಗಾಯಕ್ಕೆ ಸೂಕ್ತ ಚಿಕಿತ್ಸೆ ನೀಡುವುದಕ್ಕೆ ಮಣಿಪಾಲ್ ಆಸ್ಪತ್ರೆ ಪ್ರತ್ಯೇಕ ಕೇಂದ್ರ ಆರಂಭಿಸಿರುವುದು ರಾಜ್ಯದ ಕ್ರೀಡಾಪಟುಗಳಿಗೆ ಸಾಕಷ್ಟು ಅನುಕೂಲವಾಗಿದೆ.

ಕುಮಾರ್ ಬಂಗಾರಪ್ಪ, ಅಧ್ಯಕ್ಷರು, ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ.