ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಾಂಪತ್ಯ ಕಲಹವನ್ನು ಕ್ರಿಮಿನಲ್ ಕ್ರೌರ್ಯವೆಂದು ಪರಿಗಣಿಸಲಾಗದು; ಕರ್ನಾಟಕ ಹೈಕೋರ್ಟ್

ವೈವಾಹಿಕ ಹೊಂದಾಣಿಕೆಯ ಕೊರತೆ, ದಾಂಪತ್ಯ ಕಲಹ ಅಥವಾ ವಿವಾಹ ಸಂಬಂಧದ ಅನೈಕ್ಯತೆಯನ್ನು ಕ್ರೌರ್ಯದ ಆರೋಪದಡಿ ಕ್ರಿಮಿನಲ್ ಪ್ರಕರಣವಾಗಿ ಪರಿವರ್ತಿಸಲು ಕ್ರಿಮಿನಲ್ ಕಾನೂನನ್ನು ಬಳಸಲು ಅವಕಾಶ ನೀಡಲಾಗುವುದಿಲ್ಲ ಎಂದು ಕರ್ನಾಟಕ ಹೈ ಕೋರ್ಟ್‌ ಅಭಿಪ್ರಾಯಪಟ್ಟಿದೆ. ಅರ್ಜಿದಾರರು ಹಾಗೂ ದೂರುದಾರ ದಂಪತಿ ಇಬ್ಬರೂ ಪೊಲೀಸ್ ಅಧಿಕಾರಿಗಳಾಗಿದ್ದು, 2023ರಲ್ಲಿ ವಿವಾಹವಾಗಿದ್ದರು. ವಿವಾಹವಾದ ನಾಲ್ಕು ತಿಂಗಳೊಳಗೇ ಪತ್ನಿ ದೂರು ದಾಖಲಿಸಿ, ತಮ್ಮ ಮಧ್ಯೆ ಹೊಂದಾಣಿಕೆ ಬರುತ್ತಿಲ್ಲ ಎಂದು ಆರೋಪಿಸಿದ್ದರು.

ದಾಂಪತ್ಯ ಕಲಹವನ್ನು ಕ್ರಿಮಿನಲ್ ಕ್ರೌರ್ಯವೆಂದು ಪರಿಗಣಿಸಲಾಗದು;ಹೈಕೋರ್ಟ್

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Aug 9, 2026 9:20 AM

ಬೆಂಗಳೂರು: ವೈವಾಹಿಕ ಹೊಂದಾಣಿಕೆಯ ಕೊರತೆ, ದಾಂಪತ್ಯ ಕಲಹ ಅಥವಾ ವಿವಾಹ ಸಂಬಂಧದ ಅನೈಕ್ಯತೆಯನ್ನು ಕ್ರೌರ್ಯದ ಆರೋಪದಡಿ (Karnataka High Court) ಕ್ರಿಮಿನಲ್ ಪ್ರಕರಣವಾಗಿ ಪರಿವರ್ತಿಸಲು ಕ್ರಿಮಿನಲ್ ಕಾನೂನನ್ನು ಬಳಸಲು ಅವಕಾಶ ನೀಡಲಾಗುವುದಿಲ್ಲ ಎಂದು ಕರ್ನಾಟಕ ಹೈ ಕೋರ್ಟ್‌ ಅಭಿಪ್ರಾಯಪಟ್ಟಿದೆ. ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸುವ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅರ್ಜಿದಾರರು ಹಾಗೂ ದೂರುದಾರ ದಂಪತಿ ಇಬ್ಬರೂ ಪೊಲೀಸ್ ಅಧಿಕಾರಿಗಳಾಗಿದ್ದು, 2023ರಲ್ಲಿ ವಿವಾಹವಾಗಿದ್ದರು. ವಿವಾಹವಾದ ನಾಲ್ಕು ತಿಂಗಳೊಳಗೇ ಪತ್ನಿ ದೂರು ದಾಖಲಿಸಿ, ತಮ್ಮ ಮಧ್ಯೆ ಹೊಂದಾಣಿಕೆ ಬರುತ್ತಿಲ್ಲ ಎಂದು ಆರೋಪಿಸಿದ್ದರು. ವಿವಾಹ ಸಂಬಂಧ ಪೂರ್ಣಗೊಳ್ಳದಿರುವುದನ್ನು ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ಕ್ರೌರ್ಯದ ಅಂಶವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅರ್ಜಿದಾರರು ವಾದಿಸಿದರು. ಇತರ ಆರೋಪಗಳಿಗೆ ಸಂಬಂಧಿಸಿದಂತೆ, ದೂರುದಾರರು ಕೆಲವು ಹಲ್ಲೆಗಳ ಬಗ್ಗೆ ಅಸ್ಪಷ್ಟ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅವರು ಪ್ರತಿಪಾದಿಸಿದರು.

ಇದಕ್ಕೆ ಪ್ರತಿಯಾಗಿ, ಆರೋಪಪಟ್ಟಿಯ ಸಾರಾಂಶದಲ್ಲೇ ಅಪರಾಧಗಳು ಸಾಬೀತಾಗುವ ಅಂಶಗಳಿವೆ ಎಂದು ದೂರುದಾರ ಪತ್ನಿ ವಾದಿಸಿದರು. ಅರ್ಜಿದಾರರು ತಮ್ಮನ್ನು ವಿವಾಹವಾದ ಕ್ರಮವೇ ಕ್ರೌರ್ಯವಾಗುತ್ತದೆ. ಏಕೆಂದರೆ ಅವರು ದಾಂಪತ್ಯ ಸಂಬಂಧ ಹೊಂದದೆ, ನಾವು ಕೇವಲ ಸ್ನೇಹಿತರಾಗಿರೋಣ ಎಂದು ಹೇಳುತ್ತಿದ್ದರು ಎಂದು ಆರೋಪಿಸಿದರು. ಅರ್ಜಿದಾರರು ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದೂ ದೂರುದಾರರು ಆರೋಪಿಸಿದ್ದರು.

ಕರ್ನಾಟಕ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಕಾವೇರಿ ಸಮರಕ್ಕೆ ಇಳಿದ ತಮಿಳುನಾಡು ಸಿಎಂ ವಿಜಯ್

ದಾಖಲೆಗಳಲ್ಲಿರುವ ಸಾಕ್ಷ್ಯಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ, ಅಲ್ಪಾವಧಿಯ ದಾಂಪತ್ಯ ಜೀವನದ ಅವಧಿಯಲ್ಲಿ ಪತಿ ವೈವಾಹಿಕ ಸಂಬಂಧ ಹೊಂದಿಲ್ಲ ಎಂಬ ಒಂದೇ ಆರೋಪದ ಮೇಲೆ ಇಡೀ ಪ್ರಾಸಿಕ್ಯೂಷನ್ ಪ್ರಕರಣವನ್ನು ಕಟ್ಟಲಾಗಿದೆ ಎಂದರು. ವೈವಾಹಿಕ ಹೊಂದಾಣಿಕೆಯ ಕೊರತೆ, ದಾಂಪತ್ಯ ಕಲಹ ಅಥವಾ ವಿವಾಹ ಸಂಬಂಧದ ಅನೈಕ್ಯತೆಯನ್ನು ಕಾನೂನುಬದ್ಧ ಆಧಾರವಿಲ್ಲದ ಸೃಷ್ಟಿತ ಆರೋಪಗಳನ್ನು ಸೇರಿಸುವ ಸರಳ ತಂತ್ರದ ಮೂಲಕ ಕ್ರೌರ್ಯದ ಪ್ರಕರಣವಾಗಿ ಪರಿವರ್ತಿಸಲು ಕ್ರಿಮಿನಲ್ ಕಾನೂನನ್ನು ಬಳಸಲು ಅವಕಾಶ ನೀಡಲಾಗುವುದಿಲ್ಲ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಹೇಳಿದರು.