ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕಾನೂನು ಬಾಹಿರವಾಗಿ 10 ಲಕ್ಷ ರೂ ಪಡೆದ ಮದರಸಾ ವಿರುದ್ಧ ಕ್ರಮ ಜರುಗಿಸದ ಅಲ್ಪ ಸಂಖ್ಯಾತ ಇಲಾಖೆ ಅಧಿಕಾರಿಗಳಿಗೆ ತರಾಟೆ

ನಾಯಂಡಹಳ್ಳಿ ನಿವಾಸಿ ಅಬ್ದುಲ್ ಹಮೀದ್ ಪಾಷ ನೇತೃತ್ವದ ಕನ್ನಡ ಮತ್ತು ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳು ಮಾತನಾಡಿ, ಜಾಮಿಯ ಮಹಮದ್ದೀಯ ಮನ್ಸೂರ, ಅಲ್ ಜಾಮಿಯ ಮಹಮ್ಮದೀಯ, ಸಾಮರ್ ಇಂಟರ್. ಇಸ್ಲಾಮಿಕ್ ನ್ಯಾಷನಲ್ ಮತ್ತಿತರೆ ಹೆಸರಿನಲ್ಲಿ ಶಾಲೆಗಳ ಜೊತೆಗೆ ಕಾನೂನು ಬಾಹಿರವಾಗಿ ಮದರಸ ನಡೆಸುತ್ತಿದ್ದಾರೆ.

ಮದರಸಾ ವಿರುದ್ಧ ಜರುಗಿಸದ ಕ್ರಮ: ತರಾಟೆ

-

Ashok Nayak
Ashok Nayak Feb 18, 2026 11:03 AM

ಬೆಂಗಳೂರು: ಜಾಮಿಯ ಮಹಮದ್ದೀಯ ಮನ್ಸೂರ ಶಿಕ್ಷಣ ಸಂಸ್ಥೆಯು ಅಕ್ರಮವಾಗಿ ನಡೆಸುತ್ತಿರುವ ಮದರಸಾಗೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ನೀಡಿರುವ 10 ಲಕ್ಷ ರೂಪಾಯಿ ಅನುದಾನ ವಾಪಸ್ ಪಡೆಯಲು ವಿಫಲವಾಗಿರುವ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಕಚೇರಿಯ ಮುಂಭಾಗ ಪ್ರಗತಿಪರ ಸಂಘಟನೆಗಳ ಮುಖಂಡರು ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.

ವಿಶ್ವೇಶ್ವರಯ್ಯ ಟವರ್ ನಲ್ಲಿರುವ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಕಚೇರಿಗೆ ತೆರಳಿ ಅಧಿಕಾರಿಗಳ ನಿಷ್ಕಾಳಜಿ ವಿರುದ್ಧ ಹೋರಾಟಗಾರರು. ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ಮಾನ್ಯತೆಯನ್ನು ಶಾಲಾ ಶಿಕ್ಷಣ ಇಲಾಖೆ ರದ್ದುಪಡಿಸಿದ್ದು, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ನೀಡಿರುವ 10 ಲಕ್ಷ ರೂಪಾಯಿ ಅನುದಾನ ವಾಪಸ್ ಪಡೆಯಬೇಕೆಂದು ಹೈಕೋರ್ಟ್, ಶಿಕ್ಷಣ ಇಲಾಖೆ ಆದೇಶ ನೀಡಿದೆ. ಆದೇಶಗಳನ್ನು ಪಾಲಿಸುತ್ತಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Bangalore News: ಡಾ.ವಿಷ್ಣು ಭರತ್ ಆಲಂಪಳ್ಳಿ ಅವರ ಲೈಫ್ ಟ್ವಿಸ್ಟ್ ಅಂಡ್ ಟರ್ನ್ ಎಂಬ ಪುಸ್ತಕ ಬಿಡುಗಡೆ

ತಕ್ಷಣವೇ ಕ್ರಮ ಆಗದಿದ್ದರೆ ಲೋಕಭವನಕ್ಕೆ ತೆರಳಿ ರಾಜ್ಯಪಾಲರಿಗೆ ದೂರು ನೀಡುವ ಜೊತೆಗೆ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಸಿದರು.

ನಾಯಂಡಹಳ್ಳಿ ನಿವಾಸಿ ಅಬ್ದುಲ್ ಹಮೀದ್ ಪಾಷ ನೇತೃತ್ವದ ಕನ್ನಡ ಮತ್ತು ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳು ಮಾತನಾಡಿ, ಜಾಮಿಯ ಮಹಮದ್ದೀಯ ಮನ್ಸೂರ, ಅಲ್ ಜಾಮಿಯ ಮಹಮ್ಮದೀಯ, ಸಾಮರ್ ಇಂಟರ್. ಇಸ್ಲಾಮಿಕ್ ನ್ಯಾಷನಲ್ ಮತ್ತಿತರೆ ಹೆಸರಿನಲ್ಲಿ ಶಾಲೆಗಳ ಜೊತೆಗೆ ಕಾನೂನು ಬಾಹಿರವಾಗಿ ಮದರಸ ನಡೆಸುತ್ತಿದ್ದಾರೆ.

2017 – 18 ರಲ್ಲಿ ಈ ಮದರಸಾಗೆ 10 ಲಕ್ಷ ರೂ ಮಂಜೂರಾಗಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳು ವಂತೆ ಹೈಕೋರ್ಟ್ ವಿಭಾಗೀಯ ಪೀಠ ನೀಡಿದ ಆದೇಶವನ್ನು ಪರಿಪಾಲಿಸಿಲ್ಲ. ಕಾನೂನಿ ಗೂ ಗೌರವ ನೀಡುತ್ತಿಲ್ಲ.ನಕಲಿ ದಾಖಲೆ ನೀಡಿದವರ ಮೇಲೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ಶಾಲೆಯ ಪ್ರಾಂಶುಪಾಲರಾದ ಖಾಲಿದ್ ಮುಷ್ರಫ್ ವಿರುದ್ಧ ಎಫ್.ಐ.ಆರ್ ಆಗಿದ್ದು, ಆತನನ್ನು ಇನ್ನೂ ಬಂಧಿಸಿಲ್ಲ. ಇದನ್ನು ನೋಡಿದರೆ ಅಧಿಕಾರಿಗಳು ಶಾಮೀಲಾಗಿರುವುದು ಕಂಡು ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.