ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಡಿತರ ಕೆವೈಸಿಗೆ ಮೊಬೈಲ್‌ App

ಮೊದಲ ಹಂತದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮೀಣ, ಉಡುಪಿ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಬೀದರ್ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಫಲಾನುಭವಿಗಳು ಅನ್ನ ಸೇವೆ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ತಾವೇ ಖುದ್ದಾಗಿ ಇ-ಕೆವೈಸಿ ಮಾಡಲು ಅವಕಾಶ ನೀಡಲಾಗಿದೆ. ಹೊಸ ಆಪ್‌ಗೆ ಆಹಾರ ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಅವರು ಗುರುವಾರ ಚಾಲನೆ ನೀಡಿದರು.

ಪಡಿತರ ಕೆವೈಸಿಗೆ ಮೊಬೈಲ್‌ App

-

Profile
Ashok Nayak Oct 2, 2026 11:31 AM

ಬೆಂಗಳೂರು: ಪಡಿತರ ಚೀಟಿ (ರೇಷನ್ ಕಾರ್ಡ್) ಇ ಕೆವೈಸಿ ಸಂಬಂಧಿಸಿದಂತೆ ಆಹಾರ ಇಲಾಖೆಯು ಅನ್ನ ಸೇವೆ ಆಪ್(Anna Seve App) ಬಿಡುಗಡೆ ಮಾಡಿದೆ. ಈ ಮೂಲಕ ಮೊಬೈಲ್ʼ ನಲ್ಲಿ ಮನೆಯಲ್ಲಿಯೇ ಕುಳಿತು ಪ್ರಕ್ರಿಯೆ ಮುಗಿಸಬಹುದು. ಪ್ರಯೋಗಿಕವಾಗಿ 8 ಜಿಲ್ಲೆಗಳ ಫಲಾನುಭವಿಗಳಿಗೆ ಈ ಸೌಲಭ್ಯ ಜಾರಿ ಮಾಡಲಾಗಿದೆ. ಗುರುವಾರ ಹೊಸ ಆಪ್‌ಗೆ ಆಹಾರ ಇಲಾಖೆ ಸಚಿವ ರಿಜ್ವಾನ್ ಅರ್ಷದ್(Rizwan Arshad) ಅವರು ಚಾಲನೆ ನೀಡಿದರು. ಆ ಬಳಿಕ ಮಾತನಾಡಿದ ಅವರು, ನೂತನ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಮೇಲೆ ತ್ವರಿತವಾಗಿ ಇ ಕೆವೈಸಿ (e kyc) ಸಮಸ್ಯೆಗೆ ಸ್ಪಂದನೆ ನೀಡುವ ನಿಟ್ಟಿನಲ್ಲಿ ಆಪ್ ಅಭಿವೃದ್ಧಿ ಪಡಿಸಲಾಗಿದೆ.

ಜನರು ನ್ಯಾಯಬೆಲೆ ಅಂಗಡಿ ಮುಂದೆ ಸರತಿ ನಿಲ್ಲುವುದು ತಪ್ಪಲಿದೆ. ಮನೆಯಿಂದಲೇ ಮೊಬೈಲ್‌ ನಲ್ಲಿ ಇ ಕೆವೈಸಿ ಪೂರ್ಣಗೊಳಿಸಿಕೊಳ್ಳಬಹುದು. ಆಪ್ ಪ್ರಯೋ ಗಿಕವಾಗಿ 8 ಜಿಲ್ಲೆಗೆ ಮಾತ್ರ ಅನ್ವಯ ವಾಗಲಿದೆ. ಆ ನಂತರದಲ್ಲಿ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: Kartavya App: ನೌಕರರಿಗೆ ತಲೆನೋವಾದ 'ಕರ್ತವ್ಯ App'

ಅನ್ನ ಸೇವೆ ಮೊಬೈಲ್ ಅಪ್ಲಿಕೇಶನ್ ಲಭ್ಯತೆ: ಮೊದಲ ಹಂತದಲ್ಲಿ ಇಲಾಖೆಯ ಎಲ್ಲಾ ಜಂಟಿ/ ಉಪ ನಿರ್ದೇಶಕರು, ಆಹಾರ ನಿರೀಕ್ಷಕರುಗಳಿಗೆ ಅನ್ನ ಸೇವೆ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಬೆಂಗಳೂರು, ಬೆಂಗಳೂರು ಗ್ರಾಮೀಣ, ಉಡುಪಿ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಬೀದರ್ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಫಲಾನುಭವಿ ಗಳು ಅನ್ನ ಸೇವೆ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ತಾವೇ ಖುದ್ದಾಗಿ ಇ-ಕೆವೈಸಿ ಮಾಡಬಹುದಾಗಿದೆ.

ಎರಡನೇ ಹಂತದಲ್ಲಿ ಅ.10ರಿಂದ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಫಲಾನುಭವಿಗಳು ಅನ್ನ ಸೇವೆ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ತಾವೇ ಖುದ್ದಾಗಿ ಇ-ಕೆವೈಸಿ ಮಾಡಬಹು ದಾಗಿದೆ.

ಅಪ್ಲಿಕೇಶನ್ ಮಾರ್ಗಸೂಚಿ: ಅನ್ನ ಸೇವೆ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಬಳಸುವ ಮೊದಲು, ಈ ಕೆಳಗಿನ ಸಹಾಯಕ ಮೊಬೈಲ್ ಅಪ್ಲಿಕೇಶನ್‌ಗಳನ್ನು ಫಲಾನುಭವಿಗಳು, ಇಲಾಖೆಯ ಜಂಟಿ/ಉಪ ನಿರ್ದೇಶಕರು, ಆಹಾರ ನಿರೀಕ್ಷಕರು ಮತ್ತು ನ್ಯಾಯಬೆಲೆ ಅಂಗಡಿಗಳ ಮಾಲೀಕರ ಮೊಬೈಲ್ ನಲ್ಲಿ ಕಡ್ಡಾಯವಾಗಿ ಡೌನ್ ಲೋಡ್ ಮಾಡಿಕೊಳ್ಳಬೇಕು. ಗುರುವಾರ ಬಿಡುಗಡೆಯಾದ ಹಿನ್ನೆಲೆ ಪ್ಲೇಸ್ಟೊರ್‌ಗೆ ಅಪ್ಡೇಟ್ ಆಗುವುದಕ್ಕೆ ಕೆಲ ಸಮಯ ಬೇಕಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ, ಶುಕ್ರವಾರ ಪ್ಲೇಸ್ಟೊರ್‌ನಲ್ಲಿ ಲಭ್ಯ ವಾಗಲಿದೆ.

ಇ ಕೆವೈಸಿ ಯಾಕೆ?

ಕೇಂದ್ರ ಸರಕಾರದ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯವತಿಯಿಂದ ಹೊರಡಿಸಲಾದ ಕಾನೂನಿನಂತೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪಡಿತರ ಚೀಟಿ ಫಲಾನುಭವಿಗಳು ಪ್ರತಿ ಐದು ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಇ-ಕೆವೈಸಿ ಮಾಡಬೇಕಾಗಿದೆ. ಕರ್ನಾಟಕದಲ್ಲಿ 5 ವರ್ಷ ಮೇಲ್ಪಟ್ಟು ಇ-ಕೆವೈಸಿ ಮಾಡಿದ ಒಟ್ಟು 2,67,64,276 Pಲಾನುಭವಿಗಳನ್ನು ಗುರುತಿಸಲಾಗಿದ್ದು, ಸೆಪ್ಟೆಂಬರ್ 20ಕ್ಕೆ ಒಟ್ಟು 1,56,21,608 ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋ ಮೆಟ್ರಿಕ್/ಐರಿಸ್ ದೃಢೀಕರಣವನ್ನು ಬಳಸಿಕೊಂಡು ಮರು-ಇ-ಕೆವೈಸಿ ಪೂರ್ಣಗೊಳಿಸಿದ್ದಾರೆ.

ರಾಜ್ಯದಲ್ಲಿ ಇವರೆಗೆ ಒಟ್ಟು 3,82,362 ಫಲಾನುಭವಿಗಳು ಒಂದು ಬಾರಿಯು ಇ-ಕೆವೈಸಿ ಮಾಡಿರುವುದಿಲ್ಲ. ಅಂತಹ ಫಲಾನುಭವಿಗಳು ಇ-ಕೆವೈಸಿ ಮಾಡಿಕೊಳ್ಳಬಹುದಾಗಿದೆ. ತಪ್ಪಿದಲ್ಲಿ ಮುಂದಿನ ಕ್ರಮ ಕೈಗೊಳಲಾಗುವುದು ಎಂದು ಆಹಾರ ಇಲಾಖೆ ತಿಳಿಸಿದೆ.