ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

K.J. George: ರಾಜ್ಯ ಕ್ರಿಕೆಟ್ ತಂಡಗಳಿಗೆ ಪ್ರವಾಸೋದ್ಯಮ ಇಲಾಖೆ, ಕೆಎಸ್‌ಟಿಡಿಸಿ-ಜೆಎಲ್‌ಆರ್ ಪ್ರಾಯೋಜಕತ್ವ: ಕ್ರಿಕೆಟ್ ಮೂಲಕ ರಾಜ್ಯ ಟೂರಿಸಂಗೆ ಪ್ರಚಾರ: ಜಾರ್ಜ್

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಹಯೋಗದಲ್ಲಿ ನಡೆದ ಪ್ರಾಯೋಜಕತ್ವ ಹಾಗೂ ಜೆರ್ಸಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಕ್ಟಿವ್ ಕರ್ನಾಟಕ ಪರಿಕಲ್ಪನೆಯಡಿ ಕ್ರೀಡೆ ಮತ್ತು ಪ್ರವಾಸೋದ್ಯಮವನ್ನು ಪರಸ್ಪರ ಜೋಡಿಸುವ ಉದ್ದೇಶ ಹೊಂದಲಾಗಿದೆ. ಕ್ರೀಡೆಯ ಮೂಲಕ ಪ್ರವಾಸೋದ್ಯಮ ಉತ್ತೇಜಿ ಸುವುದು ಹಾಗೂ ಪ್ರವಾಸೋದ್ಯಮದ ಮೂಲಕ ಕ್ರೀಡೆಗೆ ಹೊಸ ಅವಕಾಶ ಸೃಷ್ಟಿಸುವುದು ಸಹಭಾಗಿತ್ವದ ಉದ್ದೇಶವಾಗಿದೆ ಎಂದರು.

ಕ್ರಿಕೆಟ್ ಮೂಲಕ ರಾಜ್ಯ ಟೂರಿಸಂಗೆ ಪ್ರಚಾರ: ಜಾರ್ಜ್

-

Profile
Ashok Nayak Oct 2, 2026 11:22 AM

ಬೆಂಗಳೂರು: ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹಾಗೂ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ವತಿಯಿಂದ ಕರ್ನಾಟಕದ ಪುರುಷ, ಮಹಿಳಾ ಹಾಗೂ ವಿವಿಧ ವಯೋಮಾನದ ರಾಜ್ಯ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್(K.J. George) ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಹಯೋಗದಲ್ಲಿ ನಡೆದ ಪ್ರಾಯೋಜಕತ್ವ ಹಾಗೂ ಜೆರ್ಸಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಕ್ಟಿವ್ ಕರ್ನಾಟಕ ಪರಿಕಲ್ಪನೆಯಡಿ ಕ್ರೀಡೆ ಮತ್ತು ಪ್ರವಾಸೋದ್ಯಮವನ್ನು ಪರಸ್ಪರ ಜೋಡಿಸುವ ಉದ್ದೇಶ ಹೊಂದಲಾಗಿದೆ. ಕ್ರೀಡೆಯ ಮೂಲಕ ಪ್ರವಾಸೋದ್ಯಮ ಉತ್ತೇಜಿ ಸುವುದು ಹಾಗೂ ಪ್ರವಾಸೋದ್ಯಮದ ಮೂಲಕ ಕ್ರೀಡೆಗೆ ಹೊಸ ಅವಕಾಶ ಸೃಷ್ಟಿಸುವುದು ಸಹಭಾಗಿತ್ವದ ಉದ್ದೇಶವಾಗಿದೆ ಎಂದರು.

ಇದನ್ನೂ ಓದಿ: K.J. George: ಪ್ರವಾಸೋದ್ಯಮ ಹೂಡಿಕೆಗೆ ಉತ್ತೇಜನ: 1,080,97 ಕೋಟಿ ಮೊತ್ತದ 78 ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ: ಸಚಿವ ಕೆ.ಜೆ.ಜಾರ್ಜ್

ಕ್ರೀಡಾ ಪ್ರವಾಸೋದ್ಯಮಕ್ಕೆ ಉತ್ತೇಜನ: ರಾಜ್ಯ ಕ್ರಿಕೆಟ್ ತಂಡಗಳು ದೇಶದ ವಿವಿಧ ಭಾಗಗಳಲ್ಲಿ ಆಡುವ ಸಂದರ್ಭದಲ್ಲಿ ಕರ್ನಾಟಕದ ಹೆಸರು ವ್ಯಾಪಕವಾಗಿ ಪರಿಚಯವಾಗಲಿದ್ದು, ಇದೇ ವೇದಿಕೆ ಬಳಸಿಕೊಂಡು ರಾಜ್ಯದ ಪ್ರವಾಸಿ ತಾಣ, ಸಂಸ್ಕೃತಿ ಮತ್ತು ವಿಶಿಷ್ಟ ಅನುಭವ ಪರಿಚಯಿಸ ಲಾಗುವುದು. ಮುಂದಿನ ಹಂತದಲ್ಲಿ ಪಂದ್ಯಾಧಾರಿತ ಪ್ರವಾಸ ಪ್ಯಾಕೇಜ್‌ಗಳು, ಕ್ರೀಡಾ ಪ್ರವಾಸೋ ದ್ಯಮ ಹಾಗೂ ಪ್ರವಾಸಿ ತಾಣಗಳಲ್ಲಿ ಕ್ರೀಡಾ ಕಾರ್ಯಕ್ರಮ ಆಯೋಜಿಸುವ ಸಾಧ್ಯತೆ ಪರಿಶೀಲಿಸ ಲಾಗುವುದು ಎಂದರು.

ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ.ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಕ್ರಿಕೆಟ್ ಟಿವಿ, ಡಿಜಿಟಲ್ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಕೋಟ್ಯಂತರ ಜನರನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಆಕ್ಟಿವ್ ಕರ್ನಾಟಕದಡಿ ಈ ವ್ಯಾಪ್ತಿಯನ್ನು ಪ್ರವಾಸಿ ತಾಣಗಳ ಪ್ರಚಾರ ಮತ್ತು ಹೊಸ ಪ್ರವಾಸಿ ಅನುಭವಗಳೊಂದಿಗೆ ಜೋಡಿಸಲಾಗುವುದು ಎಂದರು.

ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮಾತನಾಡಿ, ರಾಜ್ಯದ ಕ್ರಿಕೆಟಿಗರ ಮೂಲಕ ಕರ್ನಾಟಕ ಪ್ರವಾ ಸೋದ್ಯಮವನ್ನು ದೇಶ- ವಿದೇಶಗಳಲ್ಲಿ ಪರಿಚ ಯಿಸುವುದು ಉತ್ತಮ ಪರಿಕಲ್ಪನೆ ಎಂದರು. ಕಾರ್ಯಕ್ರಮದಲ್ಲಿ ಕೆಎಸ್‌ಟಿಡಿಸಿ ಅಧ್ಯಕ್ಷ ಎಂ.ಶ್ರೀನಿವಾಸ್, ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಸೇರಿದಂತೆ ಹಲವರಿದ್ದರು.

ಕರ್ನಾಟಕವು ಭಾರತೀಯ ಕ್ರಿಕೆಟ್‌ಗೆ ಹಲವು ಪ್ರತಿಭಾವಂತ ಆಟಗಾರರನ್ನು ನೀಡಿದ್ದು, ಯುವ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶ ಮತ್ತು ಬೆಂಬಲ ಒದಗಿಸುವ ನಿಟ್ಟಿನಲ್ಲಿಯೂ ಪ್ರಾಯೋಜಕತ್ವ ಮಹತ್ವದ್ದಾಗಿದೆ. ಪಂದ್ಯಗಳ ಪ್ರಸಾರ, ಡಿಜಿಟಲ್ ಹಾಗೂ ಸಾಮಾಜಿಕ ಮಾಧ್ಯಮಗಳ ವ್ಯಾಪ್ತಿ ಪ್ರವಾಸೋದ್ಯಮ ಪ್ರಚಾರಕ್ಕೆ ಬಳಸಿಕೊಳ್ಳಲಾಗುವುದು. -ಕೆ.ಜೆ. ಜಾರ್ಜ್, ಪ್ರವಾಸೋದ್ಯಮ ಸಚಿವ