ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎಂಟಿಆರ್‌ ಸಂಸ್ಥೆಯ ವಾರ್ಷಿಕ ಸಾಂಸ್ಕೃತಿಕ ಮತ್ತು ಆಹಾರ ಹಬ್ಬ ಎಂಟಿಆರ್ ಕರುನಾಡು ಸ್ವಾದ 2026 ಅದ್ದೂರಿ ಆರಂಭ

ಪಾಕವಿಧಾನದ ಹಿಂದಿನ ಕಥೆ ಎಂಬ ವಿಷಯದ ಸುತ್ತ ಈ ಬಾರಿಯ ಕರುನಾಡು ಸ್ವಾದ ಆಹಾರ ಮೇಳ ಆಯೋಜಿತವಾಗಿದೆ. ಈ ವರ್ಷದ ಎಂಟಿಆರ್ ಕರುನಾಡು ಸ್ವಾದವು ಕರ್ನಾಟಕದ ಸ್ಥಳೀಯ ಪದಾರ್ಥ ಗಳ ಮಹತ್ವವನ್ನು ಎತ್ತಿ ತೋರಿಸಲಿದೆ. ಉದ್ಘಾಟನಾ ದಿನದ ರಾತ್ರಿಯಂದು ಕರ್ನಾಟಕದ ಪ್ರಮುಖ ಆರು ಪ್ರದೇಶಗಳಾದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಹಳೇ ಮೈಸೂರು ಪ್ರಾಂತ್ಯಗಳ ವೈವಿಧ್ಯಮಯ ಆಹಾರ ಪದ್ಧತಿಯನ್ನು ಪ್ರದರ್ಶಿಸ ಲಾಯಿತು.

ಎಂಟಿಆರ್ ಕರುನಾಡು ಸ್ವಾದ 2026 ಅದ್ದೂರಿ ಆರಂಭ

-

Profile
Ashok Nayak Apr 25, 2026 8:09 PM

ಪ್ರಾದೇಶಿಕ ಫ್ಲೇವರ್ ಗಳು ಮತ್ತು ಸಾಂಸ್ಕೃತಿಕ ಅನುಭವಗಳ ಸಂಗಮ; ಖ್ಯಾತ ಸಂಗೀತಕಾರ ವಾಸು ದೀಕ್ಷಿತ್ ಅವರು ಸಂಗೀತ ಸಂಯೋಜಿಸಿರುವ ವಿನೂತನ ಸಾಂಬಾರ್ ಹಾಡು ಬಿಡುಗಡೆ

ಬೆಂಗಳೂರು: ಎಂಟಿಆರ್ ಸಂಸ್ಥೆಯು ಪ್ರತೀ ವರ್ಷ ಆಯೋಜಿಸುತ್ತಾ ಬಂದಿರುವ ತಮ್ಮ ಹೆಮ್ಮೆಯ ವಾರ್ಷಿಕ ಫುಡ್ ಫೆಸ್ಟಿವಲ್ ಆದ ಎಂಟಿಆರ್ ಕರುನಾಡು ಸ್ವಾದ ಕಾರ್ಯಕ್ರಮವನ್ನು ಬೆಂಗಳೂರಿನ ಜಯಮಹಲ್ ಪ್ಯಾಲೇಸ್‌ ನಲ್ಲಿ ಇಂದು ಯಶಸ್ವಿಯಾಗಿ ಆರಂಭಿಸಿದೆ. ಈ ಕಾರ್ಯಕ್ರಮವನ್ನು ಜಿಬಿಎ ಮುಖ್ಯ ಆಯುಕ್ತರು ಹಾಗೂ ಬೆಂಗಳೂರಿನ ಎಲ್ಲಾ ಮಹಾನಗರ ಪಾಲಿಕೆಗಳ ಆಡಳಿತಾಧಿ ಕಾರಿಗಳಾದ ಮಹೇಶ್ವರ್ ರಾವ್ ಎಂ, ಐ.ಎ.ಎಸ್. ಉದ್ಘಾಟಿಸಿದರು.

ಈ ವಿಶಿಷ್ಟ ಆಹಾರ ಮೇಳವು ಕರ್ನಾಟಕದ ಶ್ರೀಮಂತ ಆಹಾರ ಪರಂಪರೆಯ ವೈವಿಧ್ಯತೆ ಮತ್ತು ಸೊಗಸನ್ನು ಮರುಶೋಧಿಸಲು ಆಹಾರ ಪ್ರೇಮಿಗಳು, ಸಾಂಸ್ಕೃತಿಕ ಆಸಕ್ತರು ಮತ್ತು ಪಾಕ ಪ್ರವೀಣ ರನ್ನು ಒಂದೇ ವೇದಿಕೆಯಡಿಯಲ್ಲಿ ಒಗ್ಗೂಡಿಸಲಿದೆ.

ಇದನ್ನೂ ಓದಿ: Bangalore News: ಬೆಂಗಳೂರಿನ ಇಗ್ಗಲೂರಿನಲ್ಲಿ ಪೆಪ್ಸ್ ಮ್ಯಾಟ್ರೆಸ್‌ ನ 91ನೇ ‘ಗ್ರೇಟ್ ಸ್ಲೀಪ್ ಸ್ಟೋರ್’ ಉದ್ಘಾಟನೆ

ಪಾಕವಿಧಾನದ ಹಿಂದಿನ ಕಥೆ ಎಂಬ ವಿಷಯದ ಸುತ್ತ ಈ ಬಾರಿಯ ಕರುನಾಡು ಸ್ವಾದ ಆಹಾರ ಮೇಳ ಆಯೋಜಿತವಾಗಿದೆ. ಈ ವರ್ಷದ ಎಂಟಿಆರ್ ಕರುನಾಡು ಸ್ವಾದವು ಕರ್ನಾಟಕದ ಸ್ಥಳೀಯ ಪದಾರ್ಥಗಳ ಮಹತ್ವವನ್ನು ಎತ್ತಿ ತೋರಿಸಲಿದೆ. ಉದ್ಘಾಟನಾ ದಿನದ ರಾತ್ರಿಯಂದು ಕರ್ನಾಟಕದ ಪ್ರಮುಖ ಆರು ಪ್ರದೇಶಗಳಾದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಹಳೇ ಮೈಸೂರು ಪ್ರಾಂತ್ಯಗಳ ವೈವಿಧ್ಯಮಯ ಆಹಾರ ಪದ್ಧತಿಯನ್ನು ಪ್ರದರ್ಶಿಸ ಲಾಯಿತು.

75ಕ್ಕೂ ಹೆಚ್ಚು ಖಾದ್ಯಗಳ ಪ್ರದರ್ಶನದೊಂದಿಗೆ, ಅತ್ಯಂತ ಪ್ರಸಿದ್ಧ ಅಡುಗೆ ಕ್ರಮಗಳು ಹಾಗೂ ಮರೆಯಾಗುತ್ತಿರುವ ಅಪರೂಪದ ರುಚಿಗಳನ್ನು ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿದ್ದು, ಈ ಮೇಳವು ಒಂದು ಅಪೂರ್ವ ಆಹಾರ ಸಂಗ್ರಹಾಲಯದಂತೆ ಗಮನ ಸೆಳೆಯಿತು.

ಎಂಟಿಆರ್‌ ನ ಪಾಕಪ್ರವೀಣರು ಮತ್ತು ಗೃಹಿಣಿಯರು ಸೇರಿ ರೂಪಿಸಿರುವ ಈ ಹಬ್ಬದಲ್ಲಿ, ಕರ್ನಾಟಕದ ಅಡುಗೆಯ ಅಸಲಿತನ, ಸುಸ್ಥಿರತೆ ಮತ್ತು ಪ್ರಾದೇಶಿಕ ಹೆಮ್ಮೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಸ್ಥಳೀಯ ಮತ್ತು ಕಾಲೋಚಿತ ಪದಾರ್ಥಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಬಾರಿಯ ವಿಶೇಷ ಆಕರ್ಷಣೆಯೆಂದರೆ "ಒಂದು ಪ್ರಾಂತ್ಯ. ಒಂದು ವಿಶಿಷ್ಟ ಪದಾರ್ಥ. ಒಂದು ಮರೆಯಾದ ಪಾಕವಿಧಾನ" ಎಂಬ ಪರಿಕಲ್ಪನೆ. ಇದರೊಂದಿಗೆ ಪ್ರತಿಯೊಂದು ಪ್ರಾಂತ್ಯದ ಸ್ಥಳೀಯ ಜ್ಞಾನ ಮತ್ತು ಹವಾಮಾನಕ್ಕೆ ಪೂರಕವಾದ ಸಾಂಪ್ರದಾಯಿಕ ಬೇಸಿಗೆ ಪಾನೀಯಗಳನ್ನು ಇಲ್ಲಿ ಪರಿಚಯಿ ಸಲಾಗಿದೆ.

Launch of Coffee Table Book at MTR Karunadu Swada

ಕರುನಾಡ ಸ್ವಾದ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಎಂಟಿಆರ್ ಸಂಸ್ಥೆಯು ತನ್ನ ಮಹ್ವಾಕಾಂಕ್ಷೆಯ 'ಕಾಫಿ ಟೇಬಲ್ ಬುಕ್' ನ ಎರಡನೇ ಆವೃತ್ತಿಯನ್ನು ಅನಾವರಣಗೊಳಿಸಿತು. ಈ ಕಾಫಿ ಟೇಬಲ್ ಬುಕ್ ಎಂಟಿಆರ್ ಸಂಸ್ಥೆಯು ಕರ್ನಾಟಕದ ಪಾಕಪರಂಪರೆಗೆ ಸಲ್ಲಿಸಿರುವ ಗೌರವಾರ್ಪಣೆಯಾಗಿದೆ. ಪಾಕವಿಧಾನದ ಹಿಂದಿನ ಕಥೆ ಎಂಬ ಶೀರ್ಷಿಕೆಯ ಈ ಪುಸ್ತಕವು ಕರ್ನಾ ಟಕದ 6 ಪ್ರಾಂತ್ಯಗಳಲ್ಲಿ ಬೆಳೆಯುವ ಮತ್ತು ಇಲ್ಲಿನ ಶ್ರೀಮಂತ ಆಹಾರ ಸಂಪ್ರದಾಯವನ್ನು ರೂಪಿಸಿದ ಪದಾರ್ಥಗಳ ಮಾಹಿತಿ, ವಿವರವನ್ನು ಒಳಗೊಂಡಿದೆ.

ಈ ಕರುನಾಡ ಸ್ವಾದ ಸಂಭ್ರಮಕ್ಕೆ ಸಾಂಸ್ಕೃತಿಕ ಮೆರುಗು ನೀಡಲು ಖ್ಯಾತ ಸಂಗೀತಗಾರ ವಾಸು ದೀಕ್ಷಿತ್ ಅವರು ವಿಶೇಷವಾಗಿ ಸಾಂಬಾರ್ ಹಾಡು ಸಂಯೋಜಿಸಿದ್ದು, ಈ ಹಾಡನ್ನು ಆಹಾರ ಮೇಳದಲ್ಲಿ ನೇರವಾಗಿ ಪ್ರದರ್ಶಿಸುವ ಮೂಲಕ ಬಿಡುಗಡೆ ಮಾಡಲಾಯಿತು. ಈ ಹಾಡು ನಮ್ಮ ದೈನಂದಿನ ಜೀವನದ ಭಾಗವಾಗಿರುವ ಸಾಂಬಾರ್‌ ನ ಸುವಾಸನೆ, ನೆನಪುಗಳು ಮತ್ತು ಆತ್ಮೀಯತೆ ಯನ್ನು ಸಂಭ್ರಮಿಸುವ ಮೂಲಕ, ಸಾಂಬಾರ್ ಅನ್ನು ಕೇವಲ ಒಂದು ಸಾಂಬಾರ್ ಆಗಿ ನೋಡದೆ ಒಗ್ಗಟ್ಟಿನ ಸಂಕೇತವಾಗಿ ಬಿಂಬಿಸುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಎಂಟಿಆರ್‌ ನ ಸಿಇಓ ಶ್ರೀ ಸುನಯ್ ಭಸಿನ್ ಅವರು, "ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಎಂಟಿಆರ್ ಕರ್ನಾಟಕದ ಪಾಕಪರಂಪರೆಯ ಮಹತ್ವದ ಭಾಗವಾಗಿ ಬೆಳೆದು ಬಂದಿದೆ. ಪ್ರಾದೇಶಿಕ ಅಡುಗೆಯ ಅಸಲಿತನವನ್ನು ಸಂರಕ್ಷಿಸಲು ಮತ್ತು ಸಂಭ್ರಮಿಸಲು ನಾವು ಸದಾ ಬದ್ಧರಾಗಿದ್ದೇವೆ. 'ಎಂಟಿಆರ್ ಕರುನಾಡು ಸ್ವಾದ' ಕಾರ್ಯ ಕ್ರಮವು ಈಗ ಪ್ರತಿ ಆಹಾರ ಪ್ರೇಮಿಯ ಕ್ಯಾಲೆಂಡರ್‌ ನಲ್ಲಿ ವಾರ್ಷಿಕ ನಿಗದಿತ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ. ಇದು ಕರ್ನಾಟಕದ ಸ್ಥಳೀಯ ಪದಾರ್ಥಗಳನ್ನು ಗೌರವಿಸುವ, ಮರೆಯಾದ ಪಾಕವಿಧಾನಗಳನ್ನು ಪುನರುಜ್ಜೀವನಗೊಳಿಸುವ ಮತ್ತು ರಾಜ್ಯದ ಪ್ರಾದೇಶಿಕ ವೈವಿಧ್ಯತೆಯನ್ನು ಎತ್ತಿ ತೋರಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. ಆ ಮೂಲಕ ಜನರನ್ನು ಕರ್ನಾಟಕದ ಆಹಾರ ಸಂಪ್ರದಾಯಗಳಿಗೆ ಇನ್ನಷ್ಟು ಹತ್ತಿರ ತರುತ್ತಿದೆ," ಎಂದು ತಿಳಿಸಿದರು.

ಆಹಾರದ ಜೊತೆಗೆ, ಈ ಹಬ್ಬದಲ್ಲಿ ಜಾನಪದ ಮತ್ತು ಶಾಸ್ತ್ರೀಯ ಕಲಾ ಪ್ರದರ್ಶನಗಳ ಮೂಲಕ ಆಕರ್ಷಕ ಸಾಂಸ್ಕೃತಿಕ ಪ್ರದರ್ಶನ ನಡೆಯಲಿದೆ. ಸಂಗೀತ, ನೃತ್ಯ ಮತ್ತು ಕಲೆಯ ಮೂಲಕ ಕರ್ನಾಟಕದ ಚೇತನವನ್ನು ಜೀವಂತವಾಗಿರಿಸುವ ಈ ಆಹಾರ ಮೇಳವು, ಭೇಟಿ ನೀಡುವವರಿಗೆ ನಿಜವಾದ ಸಾಂಸ್ಕೃತಿಕ ಅನುಭವವನ್ನು ನೀಡುತ್ತಿದೆ.

ಮುಂದಿನ ಎರಡು ದಿನಗಳಲ್ಲಿ 3000ಕ್ಕೂ ಹೆಚ್ಚು ಆಹಾರ ಪ್ರೇಮಿಗಳು ಮತ್ತು ಸಂಸ್ಕೃತಿಯ ಹರಿಕಾರರು ಈ ಮೇಳಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಈ ಮೂಲಕ ಬೆಂಗಳೂರಿನ ಅತ್ಯಂತ ನಿರೀಕ್ಷಿತ ಆಹಾರ ಮತ್ತು ಸಾಂಸ್ಕೃತಿಕ ವೇದಿಕೆಗಳಲ್ಲಿ ಒಂದಾಗಿ ಈ ಮೇಳವು ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.