Power Tariff Hike: ರಾಜ್ಯದ ಜನರಿಗೆ ವಿದ್ಯುತ್ ದರ ಏರಿಕೆಯ ಶಾಕ್; ಪ್ರತಿ ಯೂನಿಟ್ಗೆ 40-50 ಪೈಸೆ ಹೆಚ್ಚಳ!
Electricity Bill: ಈ ವಿದ್ಯುತ್ ದರ ಏರಿಕೆಯು ‘ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ’ ನಿಯಮಾವಳಿಗಳ ಅಡಿಯಲ್ಲಿ ಬರಲಿದ್ದು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಅಂತಿಮ ಅನುಮೋದನೆಯೊಂದಿಗೆ ಜಾರಿಗೆ ಬರಲಿದೆ. ‘ಗೃಹ ಜ್ಯೋತಿ’ ಯೋಜನೆಯ ವ್ಯಾಪ್ತಿಗೆ ಬಾರದ ಗ್ರಾಹಕರಿಗೆ ಈ ಬೆಲೆ ಏರಿಕೆ ಬಿಸಿ ತಟ್ಟಲಿದೆ.
-
Prabhakara R
Oct 20, 2026 5:54 PM
ಬೆಂಗಳೂರು: ರಾಜ್ಯದಲ್ಲಿ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಉಂಟಾಗಿದ್ದ ತೀವ್ರ ವಿದ್ಯುತ್ ಬಿಕ್ಕಟ್ಟನ್ನು ನಿಭಾಯಿಸಲು ಉಂಟಾದ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು, ಅಕ್ಟೋಬರ್ ಮತ್ತು ನವೆಂಬರ್ ಅವಧಿಯಲ್ಲಿ ವಿದ್ಯುತ್ ದರವನ್ನು ಪ್ರತಿ ಯೂನಿಟ್ಗೆ 40 ರಿಂದ 50 ಪೈಸೆಯಷ್ಟು ಹೆಚ್ಚಿಸಲು ರಾಜ್ಯ ಇಂಧನ ಇಲಾಖೆ ಮುಂದಾಗಿದೆ ಎಂದು ತಿಳಿದುಬಂದಿದೆ.
ಈ ದರ ಏರಿಕೆಯು ‘ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ’ (FPPCA) ನಿಯಮಾವಳಿಗಳ ಅಡಿಯಲ್ಲಿ ಬರಲಿದ್ದು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಅಂತಿಮ ಅನುಮೋದನೆಯೊಂದಿಗೆ ಜಾರಿಗೆ ಬರಲಿದೆ.
ಉಚಿತ ವಿದ್ಯುತ್ ಒದಗಿಸುವ ‘ಗೃಹ ಜ್ಯೋತಿ’ ಯೋಜನೆಯ ವ್ಯಾಪ್ತಿಗೆ ಬಾರದ ಗ್ರಾಹಕರು ಮತ್ತು ವಾಣಿಜ್ಯ ಬಳಕೆಯ ಗ್ರಾಹಕರು ಈ ಹೆಚ್ಚುವರಿ ದರವನ್ನು ತಮ್ಮ ಮಾಸಿಕ ಬಿಲ್ನಲ್ಲಿ ಪಾವತಿಸಬೇಕಾಗುತ್ತದೆ.